ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಚೆಕ್ ಮಾಡುವುದು ಹೇಗೆ ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ ಯೋಜನೆಯ (PM Kisan Samman Nidhi Yojana) 19 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ರೈತರು ನಿರೀಕ್ಷೆಯಲ್ಲಿದ್ದಾರೆ.
Thank you for reading this post, don't forget to subscribe!ಆದರೆ ಇಲ್ಲಿಯವರೆಗೆ ಕೇಂದ್ರ ಸರ್ಕಾರ 2023-24 ನೇ ಸಾಲಿನಲ್ಲಿ ರಾಜ್ಯದ ಅರ್ಹ ರೈತರಿಗೆ 4781 ಕೋಟಿ ರೂಪಾಯಿಯನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಿದೆ.
ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಚೆಕ್ ಮಾಡುವುದು ಹೇಗೆ ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು know your status ಎಂದು ಕಾಣಿಸುವ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಪಿಎಂ ಕಿಸಾನ್ ರೆಜಿಸ್ಟರ್ ನಂಬರ್ ಹಾಕಿ ಕ್ಯಾಪ್ಚಾ ನಮೂದಿಸಿ Get OTP ಎಂದು ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.. ಒಂದು ವೇಳೆ ನಿಮ್ಮ ರಿಜಿಸ್ಟರ್ ನಂಬರ್ ಗೊತ್ತಿಲ್ಲದಿದ್ದರೆ ಮೇಲೆ ಕಾಣಿಸುವ Know Your Register Number ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ಹಾಕಿ ಕ್ಯಾಪ್ಚಾ ನಮೂದಿಸಿ Send Mobile OTP ಎಂದು ಕಾಣಿಸುವ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ,ಅದನ್ನು ಹಾಕಿದರೆ ನಿಮ್ಮ ಪಿಎಂ ಕಿಸಾನ್ ರಿಜಿಸ್ಟರ್ ನಂಬರ್ ಸಿಗುತ್ತದೆ.
ಹಂತ -4) ನಂತರ ಮೇಲೆ ಕಾಣಿಸುವ back ಬಟನ್ ಮೇಲೆ ಕ್ಲಿಕ್ ಮಾಡಿ ಹಂತ -2 ರಲ್ಲಿ ತೋರಿಸಿರುವ ಪೇಜ್ ಗೆ ಬನ್ನಿ . ನಂತರ ಅಲ್ಲಿ ಈಗ ನೀವು ನಿಮ್ಮ ರಿಜಿಸ್ಟರ್ ನಂಬರ್ ಅನ್ನು ಹಾಕಿ ಅಲ್ಲಿ ಕೊಟ್ಟಿರುವ ಕ್ಯಾಪ್ಚಾ ನಮೂದಿಸಿ Get OTP ಮೇಲೆ ಕ್ಲಿಕ್ ಮಾಡಿ.
ಹಂತ -5) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ.ಅದನ್ನು ಹಾಕಿ Get Data ಎಂದು ಕಾಣಿಸುವ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ ಎಂಬ ಮಾಹಿತಿ ಸಿಗುತ್ತದೆ.
ಈ ರೀತಿಯಾಗಿ ಸುಲಭವಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ನಿಮಗೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಬಹುದು.
ಪಿಎಂ ಕಿಸಾನ್ 19 ನೇ ಕಂತಿನ ಹಣ ಜಮಾ ಆಗಬೇಕಾದರೆ ನೀವು ನಿಮ್ಮ ಪಿಎಂ ಕಿಸಾನ್ ಖಾತೆಯನ್ನು ಇಕೆವೈಸಿ ಮಾಡಿಸುವುದು ಕಡ್ಡಾಯ.
ಮೊಬೈಲ್ ನಲ್ಲೇ ಸುಲಭವಾಗಿ ನಿಮ್ಮ ಪಿಎಂ ಕಿಸಾನ್ ಇಕೆವೈಸಿ ಮಾಡುವುದು ಹೇಗೆ ಎಂಬುದನ್ನು ಕೆಳಗೆ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಒಂದು ಹೊಸ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಆಧಾರ ಕಾರ್ಡ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ.
ಹಂತ -3) ಒಂದು ವೇಳೆ ನಿಮ್ಮ ಇಕೆವೈಸಿ ಆಗಿದ್ದರೆ, Your ekyc completed alredy ಅಂತ ತೋರಿಸುತ್ತದೆ. ಒಂದು ವೇಳೆ ಆಗಿರದಿದ್ದರೆ, ನಿಮ್ಮ ಮೊಬೈಲ್ ನಂಬರ್ ಹಾಕಿ ಇಕೆವೈಸಿ ಮಾಡಿ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…
ನಿಮ್ಮ ರೇಷನ್ ಕಾರ್ಡ್ ಬಿಪಿಎಲ್ (BPL Card) ಇದೆಯೋ ಅಥವಾ ಎಪಿಎಲ್ (APL Card) ಆಗಿ ಪರಿವರ್ತನೆ ಆಗಿದೆಯೋ ಎಂಬುದನ್ನು…