ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ನಿಮಗೆ ತಿಳಿದಿರುವಂತೆ ರಾಜ್ಯ ಸರ್ಕಾರವು ವೃದ್ಧರಿಗೆ,ವಿಕಲ ಚೇತನರಿಗೆ ಮತ್ತು ವಿಧವೆಯರಿಗೆ ಪ್ರತಿ ತಿಂಗಳು ಜೀವನೋಪಾಯಕ್ಕಾಗಿ ಪಿಂಚಣಿ ಹಣ ನೀಡುತ್ತಿದೆ.
Thank you for reading this post, don't forget to subscribe!ಆದರೆ ಹಲವರಿಗೆ ತಮ್ಮ ಪಿಂಚಣಿ ಖಾತೆ ಆಕ್ಟೀವ್ ಇದೆಯೋ ಅಥವಾ ಇಲ್ಲವೋ ಎಂಬುದು ತಿಳಿದಿರುವುದಿಲ್ಲ. ಒಂದು ವೇಳೆ ನಿಮ್ಮ ಪಿಂಚಣಿ ಖಾತೆ ಆಕ್ಟೀವ್ ಇಲ್ಲದಿದ್ದರೆ ನಿಮಗೆ ಪೆನ್ಷನ್ ಹಣ ಬರುವುದಿಲ್ಲ.
ಈ ಕಾರಣದಿಂದ ಸರ್ಕಾರವು ಮನೆಯಲ್ಲಿ ಕುಳಿತುಕೊಂಡೆ ಸುಲಭವಾಗಿ ನಮ್ಮ ಮೊಬೈಲ್ ನಲ್ಲಿ ನಮ್ಮ ಪಿಂಚಣಿ ಖಾತೆ ಆಕ್ಟೀವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದಾಗಿದೆ. ಅಲ್ಲದೇ ಪಿಂಚಣಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂಬುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
ಹೌದು ಸ್ನೇಹಿತರೆ, ರಾಜ್ಯ ಸರ್ಕಾರವು ಮೊಬೈಲ್ ನಲ್ಲಿ ಪಿಂಚಣಿ ಖಾತೆಯ ಸ್ಟೇಟಸ್ ಚೆಕ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದ್ದು, ಇದೀಗ ನೀವು ಮನೆಯಲ್ಲಿ ಕುಳಿತುಕೊಂಡೆ ನಿಮ್ಮ ಪಿಂಚಣಿ ಖಾತೆ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ಹೇಗೆ ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಪಿಂಚಣಿ ಖಾತೆಯ ಸ್ಟೇಟಸ್ ಚೆಕ್ ಮಾಡುವುದು ಮತ್ತು ಪಿಂಚಣಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವುದು ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಪಿಂಚಣಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಹೀಗೆ ಚೆಕ್ ಮಾಡಿ:-
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ಗ್ರಾಮೀಣ ಪ್ರದೇಶದವರಾಗಿದ್ದರೆ, ಗ್ರಾಮೀಣ ಎಂದು ಆಯ್ಕೆ ಮಾಡಿ. ಒಂದು ವೇಳೆ ನೀವು ನಗರವಾಸಿಗಳಾಗಿದ್ದರೆ, ನಗರ ಎಂದು ಆಯ್ಕೆ ಮಾಡಿ. ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮದ ಹೆಸರನ್ನು ನಮೂದಿಸಿ ಸಲ್ಲಿಸು ಮೇಲೆ ಕ್ಲಿಕ್ ಮಾಡಿ.

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನಿಮಗೆ ನಿಮ್ಮ ಗ್ರಾಮದಲ್ಲಿ ಪಿಂಚಣಿ ಪಡೆಯುವವರ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನೀವು ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ.

ಹಂತ -4) ನಂತರ ನಿಮಗೆ ನಿಮ್ಮ ಹೆಸರಿನ ಮುಂದೆ ನಿಮಗೆ ಎಷ್ಟು ಪಿಂಚಣಿ ಹಣ ಬರುತ್ತದೆ, ಹೇಗೆ ಜಮಾ ಆಗುತ್ತದೆ ಮತ್ತು ಯಾವ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂಬ ಮಾಹಿತಿ ಸಿಗುತ್ತದೆ. ನಂತರ ನಿಮ್ಮ ಹೆಸರಿನ ಮುಂದೆ ಪಿಂಚಣಿ ವಿವರಗಳು ಎಂದು ಕಾಣಿಸುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿ.

ಹಂತ -5) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಪಿಂಚಣಿ ಖಾತೆಯ ವಿವರಗಳನ್ನು ಕಾಣಬಹುದು. ನಿಮಗೆ ಯಾವ ಯೋಜನೆ ಅಡಿಯಲ್ಲಿ ಪಿಂಚಣಿ ಹಣ ಬರುತ್ತಿವೆ ಹಾಗೂ ನಿಮ್ಮ ಪಿಂಚಣಿ ಖಾತೆ ಆಕ್ಟೀವ್ ಇದೆಯೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ.

ಈ ರೀತಿಯಾಗಿ ನೀವು ನಿಮ್ಮ ಮನೆಯಲ್ಲಿ ಕುಳಿತುಕೊಂಡೆ ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ನಿಮ್ಮ ಪಿಂಚಣಿ ಖಾತೆಯ ಸ್ಟೇಟಸ್ ಚೆಕ್ ಮಾಡಬಹುದು.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇
https://chat.whatsapp.com/FM1qVgdNtJm5m1M9SL0BHc?mode=ac_t