ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನಿಮ್ಮ ಜಮೀನಿನ ಪಹಣಿ ಪತ್ರದಲ್ಲಿ ನಿಮ್ಮ ಸರ್ವೇ ನಂಬರ್ ನಲ್ಲಿ ನಿಮ್ಮ ಹೆಸರಿನೊಂದಿಗೆ ಬೇರೆ ಯಾರ ಹೆಸರಿದೆ ಎಂಬುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. Pahani download
Thank you for reading this post, don't forget to subscribe!ಹೌದು ರೈತ ಮಿತ್ರರೇ, ಇದೀಗ ನೀವು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಸರ್ವೇ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಮತ್ತು ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಮತ್ತು ಯಾರ ಹೆಸರಿಗೆ ಎಷ್ಟು ಸಾಲವಿದೆ ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದು. Pahani rtc
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ ! ಯಾರು ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಅದಕ್ಕಾಗಿ ನೀವು ಯಾವ ಹಣವನ್ನೂ ನೀಡಬೇಕಾಗಿಲ್ಲ. ಕೇವಲ ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಇದ್ದರೆ ಸಾಕು. ಅಲ್ಲದೇ ನೀವು ತಹಶೀಲ್ದಾರ್ ಕಚೇರಿಗೆ ಅಥವಾ ನಾಡ ಕಚೇರಿಗೆ ಹೋಗಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ. Pahani online
ಇದನ್ನೂ ಓದಿ: ಪಿಎಂ ಕಿಸಾನ್ ಹಣ ಜಮಾ ಆಗಿಲ್ಲವೇ ? ಹಾಗಾದರೆ ಈ ನಂಬರಿಗೆ ಕರೆ ಮಾಡಿ! ನಿಮ್ಮ ಹಣ ಜಮಾ ಆಗುತ್ತದೆ !
ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಸರ್ವೇ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಸುಲಭವಾಗಿ ಚೆಕ್ ಮಾಡುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಸರ್ವೇ ನಂಬರ್ ನಲ್ಲಿ ಯಾರ ಹೆಸರಿದೆ ಎಂದು ಹೀಗೆ ಚೆಕ್ ಮಾಡಿ:-
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://landrecords.karnataka.gov.in/Service2/https://landrecords.karnataka.gov.in/Service2/
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮದ ಹೆಸರನ್ನು ನಮೂದಿಸಿ,ನಿಮ್ಮ ಜಮೀನಿನ ಸರ್ವೇ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು surnoc ಇದ್ದಲ್ಲಿ ಸ್ಟಾರ್ ಮೇಲೆ ಕ್ಲಿಕ್ ಮಾಡಿ. ಹಿಸ್ಸಾ ನಂಬರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹಿಸ್ಸಾ ನಂಬರ್ ಹಾಕಿದಾಗ period ಆಟೋಮ್ಯಾಟಿಕ್ ಆಗಿ ತೆಗೆದುಕೊಳ್ಳುತ್ತದೆ. ನಂತರ fetch details ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನಿಮ್ಮ ಹೊಲದ ಸರ್ವೇ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಎಂಬುದು ಕಾಣಿಸುತ್ತದೆ.

ಹಂತ -5) ನಂತರ ನೀವು view ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಸಂಪೂರ್ಣ ಮಾಹಿತಿ ಸಿಗುತ್ತದೆ. ಅಲ್ಲಿ ನೀವು ನಿಮ್ಮ ಜಮೀನು ಯಾರ ಹೆಸರಿಗೆ ಎಷ್ಟಿದೆ ಮತ್ತು ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ತಿಳಿಯಬಹುದು.


ಈ ರೀತಿಯಾಗಿ ನೀವು ಮನೆಯಲ್ಲೇ ಕುಳಿತು ಯಾವ ಖರ್ಚಿಲ್ಲದೆ ನಿಮ್ಮ ಜಮೀನಿನ ಸರ್ವೇ ನಂಬರ್ ನಲ್ಲಿ ಯಾರ ಹೆಸರಿದೆ ಮತ್ತು ಯಾರ ಹೆಸರಿಗೆ ಎಷ್ಟು ಸಾಲವಿದೆ ಎಂಬುದನ್ನು ಚೆಕ್ ಮಾಡಬಹುದು.
ಓದುಗರಲ್ಲಿ ವಿನಂತಿ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
https://whatsapp.com/channel/0029VaDOwCTKQuJKSwo7D63M