ಸ್ನೇಹಿತರೆ ಇಂದಿನ ಕಾಲದಲ್ಲಿ ಯಾವುದಾದರೂ ಒಂದು ಹೊಸ ಅನ್ವೇಷಣೆಯಾದರೆ ಸಾಕು ಅದಕ್ಕೊಂದು ಪೇಟೆಂಟ್ ಮಾಡಿಸಿ ಅದರಿಂದ ಹಣ ಗಳಿಸಲು ಹಾತೊರೆಯುವ ಅನೇಕ ವಿಜ್ಞಾನಿಗಳು ಬಿಸ್ನೆಸ್ ಮ್ಯಾನ್ ಗಳು ನಮ್ಮ ನಡುವೆ ಇದ್ದಾರೆ. ಆದರೆ ಅಲ್ಲೊಬ್ಬ ವಿಜ್ಞಾನಿ ಮಾತ್ರ ತನ್ನ ಬಳಿ 300 ಅನ್ವೇಷಗಳ ಪೇಟೆಂಟುಗಳು ಇದ್ದರೂ ಆತ ತನ್ನ ಕೊನೆಯ ದಿನಗಳನ್ನು ಕೇವಲ ಹೋಟೆಲ್ ಬಿಲ್ ಕಟ್ಟಲಾಗದೆ ಅನಾಥನಂತೆ ಸತ್ತು ಹೋಗಿದ್ದ. ಆತ ಮನಸ್ಸು ಮಾಡಿದರೆ ಅಂದಿಗೆ ಜಗತ್ತಿನ ನಂಬರ್ ಒನ್ ಶ್ರೀಮಂತ ವ್ಯಕ್ತಿಯಾಗಿ ಮೆರೆಯಬಹುದಿತ್ತು ಆತ ಕಂಡು ಹಿಡಿದಿದ್ದ ಅನ್ವೇಷಣೆಗಳಿಗೆ ಅಂದು ವಿಶ್ವವೇ ನಿಬ್ಬೆರಗಾಗಿತ್ತು. ಆದರೆ ಈ ಪಾಪಿ ಪ್ರಪಂಚ ಆತನ ಬುದ್ಧಿವಂತಿಕೆಯನ್ನ ದುರುಪಯೋಗ ಮಾಡಿಕೊಂಡು ಆತ ಕಂಡು ಹಿಡಿದಿದ್ದ ಅದೆಷ್ಟೋ ಅನ್ವೇಷಣೆಗಳಿಗೆ ತಮ್ಮ ಹೆಸರು ಹಾಕಿಕೊಂಡು ಅದನ್ನು ತಾವೇ ಕಂಡು ಹಿಡಿದದ್ದು ಎಂದು ಜಂಬ ಕೊಚ್ಚಿಕೊಂಡ ಅನೇಕ ಡೋಂಗಿ ವಿಜ್ಞಾನಿಗಳ ಕುರಿತು ಈ ಆರ್ಟಿಕಲ್ ನಲ್ಲಿ ವಿವರವಾಗಿ ಹೇಳುತ್ತೇನೆ. ಆದರೆ ಅದಕ್ಕೂ ಮುಂಚೆ ಈ ಆರ್ಟಿಕಲ್ ನ ಕೊನೆತನಕ ಓದಿ ಎಂದಷ್ಟೇ ಕೇಳುತ್ತೇನೆ.
ಸ್ನೇಹಿತರೆ ಇವತ್ತು ನಾನು ನಿಮಗೆ ಹೇಳ ಹೊರಟಿರುವ ಕಥೆ ಜಗತ್ತಿನ ಅತಿ ಬುದ್ಧಿವಂತ ವಿಜ್ಞಾನಿಯಾದ ನಿಕೋಲ ಟೆಸ್ಲಾ ಕತೆ. ಸ್ನೇಹಿತರೆ ಇವತ್ತು ಜಗತ್ತಿನ ತುಂಬಾ ಇರುವ ಫ್ಯಾಕ್ಟರಿಗಳು ಕೆಲಸ ಮಾಡುತ್ತಿರುವುದು ಈತ ಕಂಡುಹಿಡಿದ ಇಂಡಕ್ಷನ್ ಕಾಯಿಲ್ನಿಂದ. ನಾವು ನಮ್ಮ ಮನೆಯಲ್ಲಿ ಪ್ರತಿನಿತ್ಯ ಬಳಸುವ ಎ ಸಿ ಕರೆಂಟ್ ಕೂಡ ಕಂಡುಹಿಡಿದವನು ಇದೇ ವಿಜ್ಞಾನಿ. ಇದಷ್ಟೇ ಅಲ್ಲ ಸ್ನೇಹಿತರೆ ಈತನ ಹೆಸರಿನಲ್ಲಿ 300 ಅನ್ವೇಷಣಗಳ 300 ಪೇಟೆಂಟುಗಳು ಇದ್ದವು ಮತ್ತು ಈತ 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ ಬಹು ಭಾಷಾ ಪಂಡಿತನಾಗಿದ್ದ. ಇಷ್ಟು ಬುದ್ಧಿವಂತನಾಗಿದ್ದ ಈತ ತನ್ನ ಅಂತಿಮ ದಿನಗಳಲ್ಲಿ ಹೋಟೆಲ್ ಒಂದರಲ್ಲಿ ರಹಸ್ಯವಾಗಿ ಅನಾಥನಂತೆ ಸತ್ತು ಹೋಗಿದ್ದ. ಆತನ ಈ ರಹಸ್ಯ ಸಾವಿಗೆ ಕಾರಣವೇನು ಮತ್ತು ಒಂದು ವೇಳೆ ಆತ ಬದುಕಿದ್ದರೆ ಇಂದು ಜಗತ್ತು ಏನಾಗಿರುತ್ತಿತ್ತು ಎಂಬುದನ್ನ ತಿಳಿದುಕೊಳ್ಳುವ ಮುಂಚೆ ಅವನ ಬಾಲ್ಯವನ್ನು ತಿಳಿಯೋಣ ಬನ್ನಿ.
ಸ್ನೇಹಿತರೆ ನಿಕೋಲಾ ಟೆಸ್ಲಾ ಜುಲೈ 10 1856 ರಲ್ಲಿ ಕ್ರೊಯೇಷ್ಯಾದ ಸ್ಮಿಲ್ ಜಾನ್ ಎಂಬ ಸ್ಥಳದಲ್ಲಿ ಜನಿಸುತ್ತಾನೆ. ಈತನ ತಂದೆ ಚರ್ಚ್ ಒಂದರಲ್ಲಿ ಫಾದರ್ ಆಗಿದ್ದರು ಮತ್ತು ಇವನ ತಾಯಿ ತಮ್ಮ ಹೊಲವನ್ನು ನೋಡಿಕೊಳ್ಳುತ್ತಿದ್ದರು. ಈತನಿಗೆ 3 ಜನ ಅಕ್ಕ-ತಂಗಿಯರು ಮತ್ತು ಒಬ್ಬ ಅಣ್ಣನಿದ್ದ. ಅವನು ತನ್ನ ಅಣ್ಣನೊಂದಿಗೆ ಬಹಳ ಅನ್ಯೋನ್ಯವಾಗಿದ್ದ. ಬೆಸ್ಲಾನೋ ಏಳು ವರ್ಷದ ಬಾಲಕನಾಗಿದ್ದಾಗ ಅವನ ಅಣ್ಣ ಡೇನ್ ಟೆಸ್ಲಾ ಕುದುರೆ ಮೇಲೆ ಆಟವಾಡುವ ಸಂದರ್ಭದಲ್ಲಿ ಕುದುರೆಯ ಮೇಲಿಂದ ಬಿದ್ದು ಸತ್ತು ಹೋಗುತ್ತಾನೆ. ಈ ಘಟನೆಯನ್ನು ಆತನಿಗೆ ಎಂದು ಮರೆಯಲಾಗಲಿಲ್ಲ ಎಂದು ಆತ ತನ್ನ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾನೆ. ಟೆಸ್ಲಾ ನ ತಂದೆ ತಾಯಿಗಳು ಅವನಿಗಿಂತ ಹೆಚ್ಚು ಆತನ ಅಣ್ಣನಾದ ಡೆನ್ ಟೆಸ್ಲಾನನ್ನು ಹೆಚ್ಚು ಪ್ರೀತಿಸುತ್ತಿದ್ದರು ಎಂಬುದನ್ನು ಆತ ತನ್ನ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾನೆ.
ಮುಂದೆ ಅವನ ತಂದೆಗೆ ಸಿಟಿ ಆಫ್ ಗಾಸ್ಪಿಕ್ ಎಂಬ ನಗರಕ್ಕೆ ವರ್ಗಾವಣೆ ಆದ ಬಳಿಕ ಟೆಸ್ಲಾ ನ ಶಿಕ್ಷಣವು ಅಲ್ಲಿಯೇ ಆರಂಭವಾಗುತ್ತದೆ. ಟೆಸ್ಲಾ ಶಾಲೆಯಲ್ಲಿ ಬಹಳ ಚುರುಕಾದ ವಿದ್ಯಾರ್ಥಿಯಾಗಿದ್ದ. ಎಲ್ಲ ವಿಷಯಗಳಲ್ಲು ಆತ ಫಸ್ಟ್ ಬರುತ್ತಿದ್ದನು ಆದ್ದರಿಂದ ಎಲ್ಲಾ ಶಿಕ್ಷಕರು ಅವನನ್ನ ಬಹಳ ಇಷ್ಟಪಡುತ್ತಿದ್ದರು. ಅವನು ತನ್ನ ನಾಲ್ಕು ವರ್ಷದ ಶಿಕ್ಷಣವನ್ನು ಕೇವಲ ಮೂರು ವರ್ಷದಲ್ಲಿ ಪೂರ್ಣಗೊಳಿಸಿದ್ದನು ಅವನ ತಂದೆಗೆ ಅವನನ್ನು ಚರ್ಚಿನ ಫಾದರ್ ಅನ್ನಾಗಿ ಮಾಡಬೇಕೆಂಬ ಆಸೆ ಇರುತ್ತದೆ ಆದರೆ ಟೆಸ್ಲಾ ಗೆ ಮಾತ್ರ ತಾನು ಕಾಲೇಜಿಗೆ ಸೇರಬೇಕೆಂಬ ಕನಸು ಇರುತ್ತದೆ. ಆದರೆ ಟೆಸ್ಲಾ ನ ಈ ಕನಸಿಗೆ ಅವನ ತಂದೆ ಅವನಿಗೆ ಅನುಮತಿ ನೀಡುವುದಿಲ್ಲ. ಈ ನಡುವೆ ಅವನು ಕಾಲರಾ ರೋಗಕ್ಕೆ ತುತ್ತಾಗಿ ಇನ್ನೇನು ಸತ್ತು ಹೋಗುವ ಸ್ಥಿತಿಗೆ ಬಂದಾಗ ಅವನ ತಂದೆ ಅವನಿಗೆ ಕಾಲೇಜ ಸೇರಲು ಅನುಮತಿ ನೀಡುತ್ತಾನೆ. ಅವನ ತಂದೆ ಅನುಮತಿ ನೀಡುತ್ತಿದ್ದಂತೆ ಆತ ಪವಾಡ ಎಂಬಂತೆ ಕಾಲರಾ ರೋಗದಿಂದ ಮುಕ್ತಿ ಹೊಂದಿ ಆರೋಗ್ಯವಂತನು ಆಗುತ್ತಾನೆ.
ಆತ್ಮೀಯ ಓದುಗ ಮಿತ್ರರೇ…ವೇಗವಾಗಿ ಬೆಳೆಯುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಮಾಹಿತಿಯೇ ಸಂಪತ್ತಾಗಿ ಮಾರ್ಪಾಡಾಗಿದೆ. ಗಲ್ಲಿಯಿಂದ ದಿಲ್ಲಿವರೆಗೆ, ಹಳ್ಳಿಯಿಂದ ಹಿಡಿದು ವಿದೇಶದ ಸುದ್ದಿಯನ್ನು ತ್ವರಿತವಾಗಿ ನಮ್ಮ ಪ್ರಬುದ್ಧ ಓದುಗ ವರ್ಗಕ್ಕೆ ಮಾಹಿತಿಯನ್ನು ಒದಗಿಸುವುದೇ MEDIA CHANAKYA ಉದ್ದೇಶವಾಗಿದೆ. ಆಟ, ಮನರಂಜನೆ ಜೊತೆಗೆ ಅಂತರರಾಷ್ಟ್ರೀಯ ಸುದ್ದಿಗಳ ಕುರಿತು ವಿಶೇಷ ಮಾಹಿತಿಯನ್ನು ನೀಡಲು MEDIA CHANAKYA ಸದಾ ಮುಂಚೂಣಿ ಸ್ಥಾನದಲ್ಲಿದೆ. ಆರೋಗ್ಯ, ಅದ್ಭುತ ಮಾಹಿತಿ, ವಿಶೇಷ ಮಾಹಿತಿ ನಿಮ್ಮ ಬೆರಳ ತುದಿಗೆ ತಂದು ತಲುಪಿಸುವ ಪ್ರಾಮಾಣಿಕ ಕೆಲಸವನ್ನು Media Chanakya ಮನಸಾರೆ ಮಾಡುತ್ತಿದೆ.ಹಾಗಾಗಿ ಉತ್ಕೃಷ್ಟ ಮಾಹಿತಿ ಹಾಗೂ ಸರಳ ಮಾಹಿತಿಗಾಗಿ ನಮ್ಮ ವೆಬ್ಸೈಟ್ಗೆ ಸಬ್ಸ್ಕ್ರೈಬ್ ಮಾಡಿ.
Draupadi Murmu: ದ್ರೌಪದಿ ಮುರ್ಮು ಅವರ ಜೀವನದ ಸಂಪೂರ್ಣ ಕತೆ ಇಲ್ಲಿದೆ ನೋಡಿ!
ದೇಶದ 15ನೇ ರಾಷ್ಟ್ರಪತಿಯಾಗಿ ನಡೆದ ಚುನಾವಣೆಯಲ್ಲಿ ಎನ್ ಡಿ ಎ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ದ್ರೌಪದಿ ಮುರುಮು ಅವರು ಐತಿಹಾಸಿಕ ಜಯವನ್ನು ಗಳಿಸಿ ದೇಶದ 15ನೇ ರಾಷ್ಟ್ರಪತಿ ಹಾಗೂ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಮತ್ತು ಆದಿವಾಸಿ ಬುಡಕಟ್ಟು ಜನಾಂಗದಿಂದ ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿಯ ಸ್ಥಾನಕ್ಕೆ ಆಯ್ಕೆಯಾದ ಪ್ರಥಮ ಮಹಿಳೆ ಆಗಿದ್ದಾರೆ. ವಿಪಕ್ಷದ ರಾಷ್ಟ್ರಪತಿ ಆಕಾಂಕ್ಷಿಯಾಗಿದ್ದ ಯಶವಂತ ಸಿನ್ಹಾ ಅವರನ್ನು ಭಾರೀ ಅಂತರದಿಂದ ಸೋಲಿಸಿ ಗೆಲುವು ಸಾಧಿಸುವುದರ ಮೂಲಕ ದೇಶದ 15ನೆಯ ರಾಷ್ಟ್ರಪತಿ ಆಗಿ ಆಯ್ಕೆ ಆಗಿದ್ದಾರೆ.
ಇವರ ಇತಿಹಾಸವನ್ನು ಕೆದಕುತ್ತಾ ಹೋದರೆ, ದ್ರೌಪದಿ ಮುರುಮು ಅವರ ಜನ್ಮವು 20 ಜೂನ್ 1958 ರಲ್ಲಿ ಒಡಿಸ್ಸಾದ ಮಯೂರ್ ಗಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಆದಿವಾಸಿ ಬುಡಕಟ್ಟು ಜನಾಂಗದಲ್ಲಿ ಆಯಿತು. ಇವರ ತಂದೆ ಬಿರಂಜಿ ನಾರಾಯಣ ಗ್ರಾಮದ ಪಂಚಾಯತಿಯ ಅಧ್ಯಕ್ಷರು ಆಗಿದ್ದರು.
ದ್ರೌಪದಿ ಮುರುಮು ಅವರು ಜಾರ್ಖಂಡ್ ರಾಜ್ಯದ ಪ್ರಥಮ ಮಹಿಳಾ ಮತ್ತು ಆದಿವಾಸಿ ರಾಜ್ಯಪಾಲೆ ಆಗಿದ್ದರು. ಅವರು ಜಾರ್ಖಂಡದಲ್ಲಿ ಆರು ವರ್ಷಕ್ಕಿಂತ ಹೆಚ್ಚು ದಿನಗಳ ಕಾಲ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸೇವಾ ಅವಧಿ ಮುಗಿದ ನಂತರ ಅವರು ತಮ್ಮ ತವರು ರಾಜ್ಯವಾದ ಒಡಿಶಾದ ಮಯೂರ್ ಗಂಜಿ ಜಿಲ್ಲೆಯ ರಾಯರಂಗಪುರದಲ್ಲಿ ಬಂದು ನೆಲೆಸುತ್ತಾರೆ. 1979ರಲ್ಲಿ ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ತಮ್ಮ ಬಿಎ ಪದವಿ ಪಡೆದ ಮುರ್ಮು ಅವರು ತಮ್ಮ ವೃತ್ತಿ ಜೀವನವನ್ನು ಒಡಿಶಾ ಸರ್ಕಾರಕ್ಕೆ ಸೇವೆ ಸಲ್ಲಿಸುವ ಮೂಲಕ ಆರಂಭಿಸಿದರು. ಆ ಸಂದರ್ಭದಲ್ಲಿ ಅವರು ವಿದ್ಯುತ್ ಮತ್ತು ನೀರಾವರಿ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮುಂದೆ ಕೆಲ ದಿನಗಳ ಕಾಲ ಶಿಕ್ಷಕಿ ಆಗಿಯೂ ಕಾರ್ಯನಿರ್ವಹಿಸಿದರು. ಇನ್ನು ಇವರ ರಾಜಕೀಯ ಜೀವನವನ್ನ ನೋಡುವುದಾದರೆ 1997 ರಲ್ಲಿ ಬಿಜೆಪಿ ಪಕ್ಷ ಸೇರುವ ಮೂಲಕ ರಾಜಕೀಯ ಜೀವನ ಆರಂಭಿಸುತ್ತಾರೆ. ಅದೇ ಸಮಯದಲ್ಲಿ ಅವರು ರಾಯರಂಗಪುರ ಪಂಚಾಯತಿ ಅಧ್ಯಕ್ಷರು ಆಗುತ್ತಾರೆ. ಮುಂದೆ 2018 ಇಸ್ವಿಯಲ್ಲಿ ರಾಯರಂಗಪುರದ ಶಾಸಕಿಯಾಗಿ ಪ್ರಥಮ ಬಾರಿ ಆಯ್ಕೆ ಆಗುತ್ತಾರೆ. 2004ರಲ್ಲಿ ಎರಡನೇ ಬಾರಿ ಅದೇ ಸ್ಥಳದಿಂದ ಮತ್ತೊಮ್ಮೆ ಶಾಸಕಿ ಆಗಿ ಆಯ್ಕೆ ಆಗುತ್ತಾರೆ. 2007ರಲ್ಲಿ ಒಡಿಸ್ಸಾ ವಿಧಾನಸಭೆಯಿಂದ ಅತ್ಯುತ್ತಮ ಶಾಸಕಿಯಾಗಿ ನೀಲಕಂಠ ಪ್ರಶಸ್ತಿಯನ್ನು ಪಡೆಯುತ್ತಾರೆ. ಮುಂದೆ 2018 ರಿಂದ 2021 ರವರೆಗೆ ಜಾರ್ಖಂಡ್ ರಾಜ್ಯದ ಪ್ರಥಮ ಮಹಿಳಾ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಾರೆ.
ದ್ರೌಪದಿ ಮುರುಮು ಅವರ ವಿವಾಹವು ಶ್ಯಾಮ್ ಚರಣ್ ಮುರ್ಮು ಅವರ ಜೊತೆ ಆಗುತ್ತದೆ. ಆದರೆ ದುರಾದೃಷ್ಟವಶಾತ್ ಅವರು ಚಿಕ್ಕ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದುತ್ತಾರೆ. ಅವರಿಗೆ ಮೂರು ಮಕ್ಕಳಿದ್ದರೂ ಆದರೆ ಮತ್ತೊಮ್ಮೆ ವಿಧಿ ಅವರ ಜೀವನದಲ್ಲಿ ಆಟವಾಡಿತ್ತು. ಅವರು ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಳ್ಳಬೇಕಾಯಿತು. ಅವರ ಏಕೈಕ ಪುತ್ರಿ ಯಾದ ಇತಿಶ್ರೀ ಮುರ್ಮು ಅವರು ಪ್ರಸ್ತುತ ರಾಂಚಿಯಲ್ಲಿ ವಾಸವಾಗಿದ್ದಾರೆ.
ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡ ಮೇಲೆ ದ್ರೌಪದಿ ಮುರುಮು ಅವರು ಈ ಹಂತಕ್ಕೆ ತಲುಪಿದ್ದಾರೆ 2010 ರಿಂದ 2014ರ ನಾಲ್ಕು ವರ್ಷಗಳ ಅಂತರದಲ್ಲಿ ತನ್ನ ಕುಟುಂಬದ ಹದಿಮೂರು ಜನ ಸದಸ್ಯರನ್ನ ಅವರು ಕಳೆದುಕೊಂಡರು ಹಿರಿಯ ಮಗಳಾದ ಲಕ್ಷ್ಮಣ ಮೂರ್ಮು ಅವರು ನಿಗೂಢವಾಗಿ ಸಾವಣ್ಣಪ್ಪಿದರೆ ಕಿರಿಯ ಮಗಳಾದ ಬಿರಂಜಿ ಮುರುಮು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮುಂದೆ ಅಕ್ಟೋಬರ್ ಒಂದು 2014ರಲ್ಲಿ ಅವರ ಪತಿಯು ಇಹಲೋಕವನ್ನ ತ್ಯಜಿಸಿದರು. ಪ್ರಸ್ತುತ ಮೂರು ಅವರ ಏಕೈಕ ಪುತ್ರಿ ಯಾದ ಇತಿಶ್ರೀ ಮುರ್ಮೋ ಅವರು ರಾಂಚಿಯಲ್ಲಿ ವಾಸವಾಗಿದ್ದಾರೆ.
ಜೀವನದಲ್ಲಿ ಸಾಕಷ್ಟು ಏಳು ಬೀಳುಗಳು ಬಂದರೂ ಅವುಗಳಿಗೆ ಕುಗ್ಗದೆ ಸಿಡಿಲಿನಂತೆ ಬಂದ ಸಮಸ್ಯೆಗಳನ್ನ ಮೆಟ್ಟಿನಿಂತು ಗಟ್ಟಿ ಆಗಿ ನಿಂತು ಮುರ್ಮುರವರು ಈ ಹಂತಕ್ಕೆ ತಲುಪಿದ್ದಾರೆ.
ಅವರ ಧೈರ್ಯ ಆತ್ಮವಿಶ್ವಾಸಕ್ಕೆ ನಮ್ಮದೊಂದು ದೊಡ್ಡ ಸಲಾಂ. ಬದುಕಿನಲ್ಲಿ ಎಂತದ್ದೇ ಕಷ್ಟ ಎದುರಾದರೂ ಅದನ್ನು ಮೆಟ್ಟಿ ನಿಲ್ಲಬಲ್ಲೆ ಎಂಬ ಆತ್ಮ ವಿಶ್ವಾಸ್ ನಿಮ್ಮಲ್ಲಿ ಯಾವಾಗ ಮೂಡುತ್ತದೋ ಅಂದೇ ನಿಮಗೆ ಯಶಸ್ಸು ದೊರಕುತ್ತದೆ ಮತ್ತು ಆಗ ನೀವು ಅಂಷ್ಟೋಪ್ಪಬಲ್ ಆಗುತ್ತೀರಿ. ಹೆಣ್ಣು ಎಂದರೆ ದೌರ್ಬಲ್ಯ ಅಲ್ಲ. ಹೆಣ್ಣು ಅಂದರೆ ಹೊರೆ ಅಲ್ಲ. ಹೆಣ್ಣು ಅಂದರೆ ಅದೊಂದು ಅದಮ್ಯ ಶಕ್ತಿಯ ಸಂಕೇತ. ಹೆಣ್ಣು ಅಂದರೆ ಅದೊಂದು ಸ್ಫೂರ್ತಿಯ ಚಿಲುಮೆಯ ಸಂಕೇತ. ಹೆಣ್ಣು ಅಂದರೆ ಬಾಳಿನ ಆಶಾಕಿರಣದ ಸಂಕೇತ ಆಗಿರುವಾಗ ನನ್ನಿಂದ ಏನೂ ಆಗಲ್ಲ ಎಂದು ಕೈ ಕಟ್ಟಿ ಕುಳಿತರೆ ನಿಮ್ಮಿಂದ ನಿಜವಾಗಿಯೂ ಏನೂ ಸಾಧಿಸಲು ಆಗದು. ಅದೇನೇ ಆಗಲಿ ಬಂದಿದ್ದನ್ನ ನೋಡಿಕೊಳ್ಳುತ್ತೇನೆ ಎಂದು ಒಮ್ಮೆ ಗಂಡುಗಚ್ಚೆಯನ್ನು ಹಾಕಿ ನಿಂತಾಗಲೇ ಎಲ್ಲವೂ ನಾವಂದು ಕೊಂಡಂತೆ ಆಗುವುದು. ಹಾಗಾಗಿ ಬದುಕಿನಲ್ಲಿ ಬರುವ ಎಲ್ಲ ಏಳುಬಿಳುಗಳನ್ನ ಸಮಾನವಾಗಿ ಸ್ವೀಕರಿಸಿ ಮುಂದೆ ಸಾಗಿ ಎಂದು ಹೇಳುತ್ತಾ ಈ ಆರ್ಟಿಕಲ್ ಅನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ. ನಮಸ್ಕಾರ.