Categories: information

ಒಂದು ವೇಳೆ ಸುಭಾಶ್ಚಂದ್ರ ಭೋಸ್ ಭಾರತದ ಪ್ರಥಮ ಪ್ರಧಾನಿಯಾಗಿದ್ದರೆ ಭಾರತ ಈಗ ಏನಾಗಿರುತ್ತಿತ್ತು ಗೊತ್ತಾ…?!

Spread the love

ಸ್ವಾತಂತ್ರ್ಯದ 9 ವರ್ಷಗಳ ನಂತರ, ಅಂದರೆ 1956 ರಲ್ಲಿ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಆಯಾಟ್ಲಿ ಭಾರತಕ್ಕೆ ಬಂದಾಗ, ಕೊಲ್ಕತ್ತಾದ ಅಂದಿನ ಗವರ್ನರ್ ಆಗಿದ್ದ ಪಿ.ವಿ.ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯಲ್ಲಿ ಅವರು ಭಾರತದ ಸ್ವತಂತ್ರ್ಯದ ಬಗ್ಗೆ ಚರ್ಚಿಸಿದ್ದರು. ಚಕ್ರವರ್ತಿ ಅವರು ಬಹಳ ಉತ್ಸುಕತೆಯಿಂದ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ನಿಜವಾದ ಕಾರಣವೇನೆಂದು ಕೇಳಿದಾಗ, ಇದಕ್ಕೆ ಕ್ಲೆಮೆಂಟ್ ಆಯಾಟ್ಲೀ ಕೇವಲ ಮೂರು ಶಬ್ದಗಳಲ್ಲಿ ಉತ್ತರಿಸಿದ್ದರು. ‘ಅಜಾದ್ ಹಿಂದ್ ಫೌಜ್ ‘ಅಂದರೆ ನೇತಾಜಿ ಸುಭಾಶ್ಚ೦ದ್ರ ಬೋಸರ ‘INDIAN NATIONAL ARAMY’. ಇವರಿಂದಾಗಿ ಅಂದು ಭಾರತದಲ್ಲಿ ಅನೇಕ ದಂಗೆಗಳು ಶುರುವಾಗಿದ್ದವೆಂದು ಆಯಟ್ಲೀ ಉತ್ತರಿಸಿದ್ದನು. ಮುಂದುವರೆದು ಚಕ್ರವರ್ತಿಯವರು,” ಭಾರತದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಪಾತ್ರ ಎಂಥದ್ದು” ಎಂದು ಕೇಳಿದಾಗ ಆಯಾಟ್ಲಿ ನಗುತ್ತ ಉತ್ತರಿಸಿದ್ದ ,”ತೀರಾ ಕನಿಷ್ಠ”.
ಈ ಘಟನೆಯ ಕುರಿತು ಮೇಜರ್ ಜನರಲ್ ಡಾ|| ಜಿ.ಡಿ. ಭಕ್ಷಿಯವರು ತಮ್ಮ ‘BOSE AN INDIAN SAMURAI’ ಎಂಬ ಕೃತಿಯಲ್ಲಿ ತಿಳಿಸಿದ್ದಾರೆ. ಆದರೆ ಸ್ನೇಹಿತರೆ ಇದನ್ನು ಕೇಳಿದ ನಂತರ ನಮ್ಮನ್ನು ಕಾಡುವ ಒಂದು ಪ್ರಶ್ನೆವೆನೆಂದರೆ, ಸ್ವತಂತ್ರ್ಯ ಹೋರಾಟದಲ್ಲಿ ನಿಜವಾಗಿಯೂ ಗಾಂಧೀಜಿಯವರಿಗಿಂತಾ ನೇತಾಜಿಯವರ ಪಾತ್ರ ದೊಡ್ಡದಿತ್ತಾ… ಒಂದು ವೇಳೆ ಇದು ನಿಜವಾಗಿದ್ದರೆ ಭಾರತದ ಮೊದಲ ಪ್ರಧಾನಿ ನೇತಾಜಿ ಸುಭಾಶ್ಚ೦ದ್ರ ಬೋಸ್ ಆಗಬೇಕಿತ್ತಾ ಎಂಬುದು .. ಹಾಗೆ ನೋಡಿದರೆ ನೇತಾಜಿಯೇ ಸ್ವಾ೦ತತ್ರ್ಯ ಮತ್ತು ಅವಿಭಾಜ್ಯ ಭಾರತದ ಪ್ರಥಮ ಪ್ರಧಾನಿಯಾಗಿದ್ದರು. ಆದರೆ ಇಲ್ಲಿಯವರೆಗೂ ಇದೊಂದು ಬಗೆಹರಿಯದ ಚರ್ಚೆಯಾಗಿಯೇ ಉಳಿದುಕೊಂಡಿದೆ. ಈ ಪ್ರಶ್ನೆಗೆ ನಿಜವಾದ ಉತ್ತರವನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ… ಅದಕ್ಕಿಂತಲೂ ಮುಖ್ಯವಾದ ಪ್ರಶ್ನೆವೆನೆಂದರೆ, ಒಂದು ವೇಳೆ ನೇತಾಜಿಯು ಭಾರತದ ಪ್ರಥಮ ಪ್ರಧಾನಿಯಾಗಿದ್ದರೆ, ಇಂದು ನಮ್ಮ ದೇಶ ಯಾವ ಹಂತದಲ್ಲಿ ಇರುತ್ತಿತ್ತು ಎಂಬುದು ಯೋಚಿಸಬೇಕಾದ ಸಂಗತಿಯಲ್ಲವೆ… ಹೌದು ಸ್ನೇಹಿತರೆ ಇವತ್ತು ಈ ಪ್ರಶ್ನೆನಿಟ್ಟುಕೊಂಡೆ ಇತಿಹಾಸದಲ್ಲಿ ಹುದುಗಿ ಹೋಗಿದ್ದ,ನಮ್ಮ ಪಠ್ಯಪುಸ್ತಕಗಳು ಮುಚ್ಚಿಟ್ಟ ಸತ್ಯವನ್ನು ತಿಳಿದುಕೊಳ್ಳೋಣ.

Thank you for reading this post, don't forget to subscribe!

ಮೊದಲಿಗೆ ಜಗತ್ತಿನ ಖ್ಯಾತ ಇತಿಹಾಸಕಾರರ ನಡುವೆ ಅನೇಕ ದಶಕಗಳಿಂದಲೂ ಬಗೆಹರಿಸಲಾಗದೆ ಉಳಿದಿರುವ ಥಿಯರಿ ಬಗ್ಗೆ ನೋಡೋಣ. ಅದೇನೆಂದರೆ ನೇತಾಜಿಯವರೇ ಸ್ವಾತಂತ್ರ್ಯ ಭಾರತದ ಮತ್ತು ಅವಿಭಾಜ್ಯ ಭಾರತದ ಪ್ರಧಾನಿಯಾಗಿದ್ದರು ಎಂಬುದು. ಅದು 1942ರ ಸಮಯ, ಜಪಾನಿನ ಸಹಾಯ ಪಡೆದು ನೀತಾಜಿಯು ಸಿಂಗಾಪುರ್ ನಲ್ಲಿ ‘ಆಜಾದ್ ಹಿಂದ್ ಫೌಜ್ ‘ ಅನ್ನು ಸ್ಥಾಪಿಸಿದರು. ಈ ಸೈನ್ಯದಲ್ಲಿದ್ದ ಬಹುತೇಕ ಸೈನಿಕರೆಲ್ಲರೂ 2ನೇ ವಿಶ್ವಯುದ್ಧದಲ್ಲಿ ಬ್ರಿಟಿಷ್ ಇಂಡಿಯಾ ಪರವಾಗಿ ಹೋರಾಡಿ ಸೆರೆಸಿಕ್ಕ ಯುದ್ಧ ಖೈದಿಗಳಾಗಿದ್ದರು. ಆ ಸಂದರ್ಭದಲ್ಲಿ ನೇತಾಜಿಯು ಹಲವು ದೇಶಗಳನ್ನು ಸುತ್ತಿ ಅಲ್ಲಿರುವ ಭಾರತೀಯರಲ್ಲಿ ಸ್ವಾತಂತ್ರ್ಯಕ್ರಾಂತಿಯ ಕಿಚ್ಚನ್ನು ಹಚ್ಚಿದರು .ಅವರ ಮಾತು ಮತ್ತು ಭಾಷಣ ಅಲ್ಲಿನ ಜನರಲ್ಲಿ ದೇಶಭಕ್ತಿಯ ಹುಚ್ಚು ಹಿಡಿಸಿತ್ತು. ಈ ಹುಚ್ಚು ಅವರ ‘ಆಜಾದ್ ಹಿಂದ್ ಫೌಜ್’ ಗೆ ಸೈನಿಕರನ್ನು ಕರೆತರಲು ಸಾಕಷ್ಟು ಕೆಲಸ ಮಾಡಿತ್ತು. ಅವರು ತಮ್ಮ ಸೈನಿಕರಿಗೆ ಕೇವಲ ಒಂದು ವರ್ಷದ ಅವಧಿಯಲ್ಲಿಯೇ ಸ್ವಾತಂತ್ರ್ಯದ ಭಾರತದ ನೆಲದಲ್ಲಿ ಕಾಲಿಡುತ್ತೇವೆಂದು ಶಪಥವನ್ನು ಮಾಡಿದ್ದರು.
ಆದರೆ ಅದಕ್ಕೂ ಮುಂಚೆ ಅವರು ಜಪಾನ್ ಸೈನೈದೊಂದಿಗೆ ಸೇರಿ ಬ್ರಿಷರ ವಿರುದ್ಧ ಎರಡು ಯುದ್ಧಗಳನ್ನು ಮಾಡಿದ್ದರು. ಈ ಯುದ್ಧಗಳಲ್ಲಿ ಜಪಾನ್ ಜಯಭೇರಿ ಬಾರಿಸಿತ್ತು. ಈ ಯುದ್ಧಗಳಲ್ಲಿ ನೇತಾಜಿಯು ಪ್ರಮುಖ ಪಾತ್ರವನ್ನು ವಹಿಸಿದ್ದರಿಂದ ಜಪಾನ್ ಬ್ರಿಟಿಷರಿಂದ ಗೆದ್ದುಕೊಂಡಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನೇತಾಜಿಗೆ ಕೊಡುಗೆಯಾಗಿ ನೀಡಿತ್ತು.ಕಾರಣ ನೇತಾಜಿಯ ತಮ್ಮ ಆಜಾದ್ ಹಿಂದ್ ಫೌಜ್ ಅನ್ನು ಅಂಡಮಾನ್ ಮತ್ತು ನಿಕೋಬಾರಗಳಲ್ಲಿ ಯುದ್ಧ ತರಬೇತಿಗೊಳಿಸಿ ಭಾರತಕ್ಕೆ ಕಾಲಿಡಲು ಸಹಾಯಕವಾಗಲೆಂದು ಜಪಾನ್ ಅಂಥದ್ದೊಂದು ಕಾಣಿಕೆಯನ್ನು ನೇತಾಜಿಗೆ
ನೀಡಿತ್ತು. ಅಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಂಗಳದಲ್ಲಿ ವಿಶಾಲವಾದ ಆಗಸದ ಶುಭ್ರಪ್ರಕಾಶದಲ್ಲಿ ಸ್ವಾತಂತ್ರ್ಯವಾಗಿ ಹಾರಾಡಿತ್ತು ಭಾರತದ ತಿರಂಗಾ, ಮತ್ತು ಅಂದು ಸ್ಥಾಪನೆಯಾಗಿದ್ದೇ ಭಾರತದ ಪ್ರಥಮ ಸರ್ಕಾರ, ಆಜಾದ್ ಹಿಂದ್ ಸರ್ಕಾರ್.
ಈ ಸರ್ಕಾರದ ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ವಿದೇಶಾಂಗ ಮಂತ್ರಿ ಸ್ವತಃ ನೇತಾಜಿಯವರೇ ಆಗಿದ್ದರು. ನೇತಾಜಿಯವರ ಸರ್ಕಾರದಲ್ಲಿ ತನ್ನದೇ ಆದ ಸ್ವಂತ ಕರೆನ್ಸಿ ಇತ್ತು, ಬ್ಯಾಂಕ್ ಇತ್ತು, ರೇಡಿಯೋ ಸ್ಟೇಷನ್ ಇತ್ತು, ಸ್ಟ್ಯಾಂಪ್ಸ್ ಇತ್ತು, ಕೋರ್ಟ ಕೂಡಾ ಇತ್ತು.
ನೇತಾಜಿಯವರ ಈ ಸರ್ಕಾರಕ್ಕೆ ಜಪಾನ್, ಜರ್ಮನಿ, ಇಟಲಿ, ಕ್ರಿಯಸಿಯಾ, ಮಂಚೂರಿಯಾ,ಬರ್ಮಾ, ಫಿಲಿಪ್ಪೀನ್ಸ್, ಚೀನಾದಂಥ 9ದೊಡ್ಡ ದೊಡ್ಡ ದೇಶಗಳು ಮಾನ್ಯತೆಯನ್ನು ನೀಡಿದ್ದವು. ಈ ಕಾರಣದಿಂದ ಹಲವರು ನೇತಾಜಿಯವರ ಭಾರತದ ಪ್ರಥಮ ಪ್ರಧಾನಿ ಎಂದು ನಂಬುತ್ತಾರೆ. ಇದಕ್ಕೆ ನಿಮ್ಮ ಅಭಿಪ್ರಾಯವನ್ನು comment box ನಲ್ಲಿ ತಿಳಿಸಿ.

ಒಂದು ವೇಳೆ ನೇತಾಜಿಯವರು ನಿಜವಾಗಿಯೂ ಭಾರತದ ಪ್ರಥಮ ಪ್ರಧಾನಿಯಾಗಿದ್ದರೆ ಏನೇನು ಬದಲಾವಣೆಗಳಾಗುತ್ತಿದ್ದವು ಎಂಬುದದನ್ನು ನೋಡೋಣ ಬನ್ನಿ…..
ಮೊಟ್ಟ ಮೊದಲನೇಯದಾಗಿ ನಮಗೂ ಮತ್ತು ಚೀನಾಕ್ಕೆ ಇರುವ ವೈಷಮ್ಯತೆ ಇರುತ್ತಲೇ ಇರಲಿಲ್ಲ. ಇದನ್ನ ನಿಮಗೆ ನಂಬಲಿಕ್ಕಾಗದಿದ್ದರು ಇದು ನಿಜವೇ.ಏಕೆಂದರೆ ,1938 ರಲ್ಲಿ 2 ನೇ ವಿಶ್ವಯುದ್ಧದ ಸಂದರ್ಭದಲ್ಲಿ ಚೀನಾ ಭಾರಿ ನಷ್ಟವನ್ನು ಅನುಭವಿಸಿತ್ತು. ಆ ಸಮಯದಲ್ಲಿ ಚೀನಾ ಭಾರತಕ್ಕೆ ಅಂದರೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಗೆ ಸಹಾಯ ಮಾಡುವಂತೆ ಬೇಡಿಕೊಂಡಿತ್ತು . ಆ ಸಮಯದಲ್ಲಿ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು ನೇತಾಜಿ ಸುಭಾಶ್ಚಂದ್ರ ಬೋಸ್.ಅವರು ಚೀನಾದ ಬೇಡಿಕೆಗೆ ಒಪ್ಪಿ 9ನೇ ಜೂನ್ 1938ರಂದು ALL INDIA CHINA DAY ಎಂದು ಘೋಷಿಸಿದರು. ಚೀನಾಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಜನರಿಂದ ಫಂಡ್ ನ್ನು ಸಂಗ್ರಹಿಸಲು ಶುರುಮಾಡಿದರು, ನಂತರ ಆ ಹಣವನ್ನೆಲ್ಲಾ ಆಂಬುಲೆನ್ಸ್ ಮತ್ತು ಡಾಕ್ಟರ್ ಗಳ ಮೂಲಕ ಚೀನಾಗೆ ಕಳುಹಿಸಿದರು. ಇಲ್ಲಿಂದ ಶುರುವಾಯಿತು ನೇತಾಜಿ ಮತ್ತು ಚೀನಾ ನಡುವೆ ಗಾಢವಾದ ಸಂಬಂಧ. ಈ ಕಾರಣದಿಂದಲೇ ನೇತಾಜಿಯ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಮ್ಮ ಸ್ವಂತ ಸರ್ಕಾರ ಸ್ಥಾಪಿಸಿದಾಗ ಅದಕ್ಕೆ ಮಾನ್ಯತೆ ನೀಡಿದ 9ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದಾಗಿತ್ತು. ಈ ಎಲ್ಲಾ ಕಾರಣಗಳಿಂದ ಒಂದು ವೇಳೆ ನೇತಾಜಿಯವರು ಭಾರತದ ಪ್ರಥಮ ಪ್ರಧಾನಿಯಾಗಿದ್ದರೆ ಚೀನಾದೊಂದಿಗೆ ನಮ್ಮ ಸಂಬಂಧ ಆತ್ಮೀಯವಾಗಿರುತ್ತಿತ್ತು. ಮತ್ತು 1962ರ ಭಾರತ ಮತ್ತು ಚೀನಾ ಯುದ್ಧವೇ ನಡೆಯುತ್ತಿರಲಿಲ್ಲ . ಅದಲ್ಲದೆ ಭಾರತ ಮತ್ತು ಚೀನಾ ಗಡಿಯಲ್ಲಿ ಇಂದಿಗೂ ಮುಂದುವರೆದ ತಕರಾರು ಇರುತ್ತಲೆ ಇರಲಿಲ್ಲ.

ಎರಡನೇಯ ಬದಲಾವಣೆ ಏನೆಂದರೆ. ಒಂದು ವೇಳೆ ನೇತಾಜಿಯವರು ಭಾರತದ ಪ್ರಧಾನಿಯಾಗಿದ್ದರೆ ಭಾರತ ಮತ್ತು ಪಾಕಿಸ್ತಾನ ವಿಭಜನೆ ಆಗುತ್ತಲೇ ಇರಲಿಲ್ಲ. ಆಜಾದ್ ಹಿಂದ್ ಫೌಜ್ ನ ಕ್ಯಾಪ್ಟನ್ ಆಗಿದ್ದ ಸೆಹಗಲ್ ಅವರು ಹೇಳುವಂತೆ ನೇತಾಜಿಯು ಯಾವಾಗಲೂ ಭಾರತ -ಪಾಕಿಸ್ತಾನ ದ ವಿಭಜನೆಗೆ ವಿರುದ್ಧವಾಗಿದ್ದರು. ಈ ಕುರಿತು ಅವರು ಜವಾಹರಲಾಲ್ ನೆಹರೂ ಮತ್ತು ಗಾಂಧೀಜಿಯವರೊಂದಿಗೆ ಮಾತನಾಡಿದ್ದರು. ಆ ಊಹೆ ನಿಜವೂ ಆಯಿತು. ಹಾಗೆ ನೋಡಿದರೆ ಇಂದು ಕೂಡಾ ನಾವು ಅನೇಕ saparatist ಚಳುವಳಿಗಳನ್ನು ನೋಡಬಹುದು. ಉದಾಹರಣೆಗೆ ನಾಗಲ್ಯಾಂಡ ನಲ್ಲಿ ಪಂಜಾಬಿನ ಖಲಿಸ್ತನ್ ಚಳುವಳಿ ಪಶ್ಚಿಮ ಬಂಗಾಳದಲ್ಲಿ ಜನಾಂಗೀಯ ಮತ್ತು ನಕ್ಸಲಿಸಂ,ಇವೆಲ್ಲ ನೋಡಿದಾಗ ಒಂದುವೇಳೆ ನೇತಾಜಿಯು ಬದುಕಿದ್ದರೆ ಪಾಕಿಸ್ತಾನವನ್ನು ಬೇಡುತ್ತಿದ್ದ ಮುಸ್ಲಿಂರು ಬೇಡಿಕೆಯನ್ನೆ ಇಡುತ್ತಿರಲಿಲ್ಲ. ಏಕೆಂದರೆ ಆಗಿನ ಮುಸ್ಲಿಂ ಸಮಾಜದಲ್ಲಿ ಬೇರಾವ ಕಾಂಗ್ರೆಸ್ ನಾಯಕರಿಗೆ ಇರದಷ್ಟು ಲೋಕಪ್ರಿಯತೆ ನೇತಾಜಿಯವರಿಗಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಅವರು ಹುಟ್ಟಿ ಬೆಳೆದದ್ದೆಲ್ಲ ಕೋಲ್ಕತೆಯ ಬಹುಸಂಖ್ಯಾತದ್ದ ಪ್ರದೇಶದಲ್ಲಿ, ಅವರು ಎಂದು ಹಿಂದೂಗಳಲ್ಲಿ ಮತ್ತು ಮುಸ್ಲಿಂಗಳಲ್ಲಿ ಬೇದ ಭಾವ ಮಾಡಿರಲಿಲ್ಲ. ಹಾಗೆ ನೋಡಿದರೆ 1937ರಲ್ಲಿ ಕಾಂಗ್ರೆಸ್ ನಲ್ಲಿ 10% ಗಿಂತ ಕಡಿಮೆ ಮುಸ್ಲಿಂ ನಾಯಕರಿದ್ದರು. ಅದೇ ನೇತಾಜಿಯವರ ‘ಅಜಾದ್ ಹಿಂದ್ ಫೌಸ್’ ನ ಸೇನೆಯಲ್ಲಿ 30 ರಿಂದ 40 ರಷ್ಟು ಸೈನಿಕರು ಮುಸ್ಲಿಂರಾಗಿದ್ದರು. ಇವರೆಲ್ಲ ನೇತಾಜಿಯವರ ಭಾಷಣಕ್ಕೆ ಮೆಚ್ಚಿ ಸ್ವಂತ ಕ್ರಾಂತಿಕಾರಿಗಳಾಗಿ ಅವರ ಸೇನೆ ಸೇರಿದ್ದರು. ಈ ಎಲ್ಲಾ ಕಾರಣಗಳಿಂದ ಒಂದು ವೇಳೆ ನೇತಾಜಿ ಅವರು ಭಾರತದ ಪ್ರಧಾನಿಯಾಗಿದ್ದರೆ ಭಾರತ ಮತ್ತು ಪಾಕಿಸ್ತಾನ ವಿಭಜನೆ ಆಗುತ್ತಿರಲಿಲ್ಲ. ವಿಭಜನೆಯ ಸಂದರ್ಭದಲ್ಲಿ ಆದ ಲಕ್ಷಾನುಗಟ್ಟಲೆ ಸಾವು ನೋವುಗಳು ಸಂಭವಿಸುತ್ತಿರಲಿಲ್ಲ. ಮತ್ತು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಳೆರಡು ಅಖಂಡ ಭಾರತದ ಭಾಗಗಳಾಗಿರುತ್ತಿದ್ದವು. ಮೂರನೇ ಬದಲಾವಣೆಯೇನೆಂದರೆ ಇದು ಎಲ್ಲಾ ಬದಲಾವಣೆಗಳಲ್ಲಿಯೆ ಅತಿ ಮುಖ್ಯವಾದದ್ದು, ಅದೇನೆಂದರೆ ಒಂದು ವೇಳೆ ನೇತಾಜಿಯವರು ಭಾರತದ ಪ್ರಥಮ ಪ್ರಧಾನಿಯಾಗಿದ್ದರೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗುತ್ತಿರಲಿಲ್ಲ, ಬದಲಿಗೆ ಕಮಿನಿಸ್ಟ್ ಅಥವಾ ಸಮಾಜವಾದಿ ಸಿದ್ದಾಂತದ ಮೇಲೆ ನಡೆಯುತ್ತಿತ್ತು. ಇದೇ ಕಮ್ಯೂನಿಸ್ಟ್‌ ಸಿದ್ಧಾಂತ ಅಂದು ಚೀನಾ,ರಷ್ಯಾ ಮತ್ತು ಹಿಟ್ಲರ್‌ನ ಜರ್ಮನಿ ಸರ್ಕಾರಗಳಲ್ಲಿ ಇತ್ತು. ನೇತಾಜಿ ಅವರು ಸ್ವತಃ ತಾವೊಂದು ‘ಸಾಮ್ಯವಾದಿ ಸಂಘ’ ಎಂಬ ಪಕ್ಷವೊಂದನ್ನು ಸ್ಥಾಪಿಸುವುದಾಗಿ ತಮ್ಮ ಪುಸ್ತಕದಲ್ಲಿ ಬರೆದಿದ್ದರು. ಇದರ ಅರ್ಥ ಕಮ್ಯುನಿಸ್ಟ್‌ಗಳ ಒಕ್ಕೂಟ. ಎರಡನೇ ವಿಶ್ವಯುದ್ಧದಲ್ಲಿ ಚೀನಾ,ರಷ್ಯಾ, ಜರ್ಮನಿಗಳಂತಹ ಕಮ್ಯುನಿಸ್ಟ್ ಒಕ್ಕೂಟಗಳು ವಿಜಯ ಸಾಧಿಸಿದ್ದರಿಂದ ಅವರಲ್ಲಿ ಈ ರೀತಿ ವಿಚಾರಗಳು ಬಂದಿರಬಹುದು. ಈ ಕಾರಣದಿಂದಾಗಿಯೇ ಅವರಿಗೆ ಪ್ರಜಾಪ್ರಭುತ್ವಕ್ಕಿಂತ ಸಾಮ್ಯವಾದ ಹೆಚ್ಚು ಇಷ್ಟವಾಗಿತ್ತು. ಅರೇ ಒಂದು ನಿಮಿಷ ! ಹಾಗಂತ ನೇತಾಜಿಯವರಿಗೆ ಹಿಟ್ಲರ್ ಮತ್ತು ಸ್ಟಾಲಿನ್‌ರ ರೀತಿ ಸರ್ವಾಧಿಕಾರಿ ಆಗುವ ಆಸೆಯಿತ್ತೆ ? ಒಂದು ವೇಳೆ ಅವರು ಪ್ರಥಮ ಪ್ರಧಾನಿಯಾಗಿದ್ದರೆ ನಾವು ಕೂಡ ಚೀನಿಯರಂತೆ ಸ್ವಾತಂತ್ರ್ಯ ಇಲ್ಲದೇ ಬಂಧನದಲ್ಲಿ ಇರಬೇಕಾಗುತ್ತಿತ್ತೇ? ಎಂಬಂತಹ ಪ್ರಶ್ನೆಗಳು ನಿಮ್ಮಲ್ಲಿ ಬಂದಿರಬಹುದು. ಆದರೆ ನಿಮ್ಮ ಈ ಊಹೆ ತಪ್ಪಾಗಿದೆ. ಏಕೆಂದರೆ ನೇತಾಜಿ ಅವರು ತಮ್ಮ ವಿದೇಶಿ ಕಮ್ಯುನಿಸ್ಟ್ ಸ್ನೇಹಿತರಿಂದ ಪ್ರೇರಣೆಗೊಂಡಿದ್ದರು. ಆದರೆ ಅವರಂತೆ ಎಂದಿಗೂ ಸರ್ವಾಧಿಕಾರಿ ಆಗಬೇಕೆಂದು ಬಯಸಿರಲಿಲ್ಲ. ಅವರು ಯಾವಾಗಲೂ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ರಾಜಕೀಯ, ಆರ್ಥಿಕ, ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಧಿಕಾರ ಸಿಗಬೇಕು ಎಂದು ಬಯಸಿದ್ದರು. ಪ್ರತಿಯೊಬ್ಬರೂ ತಮಗೆ ಇಷ್ಟವಾದ ಧರ್ಮವನ್ನು ಪಾಲಿಸಬೇಕು ಎಂದು ಅವರು ಬಯಸಿದ್ದರು. ಭಾರತ ಒಂದು ಧರ್ಮ ನಿರಪೇಕ್ಷ ರಾಷ್ಟ್ರವಾಗಬೇಕು ಮತ್ತು ಅಲ್ಪಸಂಖ್ಯಾತರಿಗೆ ದ್ವಿತೀಯ ದರ್ಜೆ ನಾಗರಿಕತೆ ಸಿಗದೇ ಎಲ್ಲರೂ ಸಮನ್ವಯ ಭಾವದೊಂದಿಗೆ ದೇಶದ ಪ್ರಗತಿಗೆ ಕಾರಣರಾಗಬೇಕೆಂದು ತಮ್ಮ ‘THE INDIAN STRUGGLE’ ಎಂಬ ಕೃತಿಯಲ್ಲಿ ಹೇಳಿದ್ದಾರೆ.

ಸ್ನೇಹಿತರೆ ಹೇಗೆ ಒಂದು ಮುಖಕ್ಕೆ ಎರಡು ನಾಣ್ಯಗಳಿರುತ್ತವೆಯೋ ಅದೇ ರೀತಿ ನಮ್ಮ ಇಂದಿನ ಈ ವಿಡಿಯೋದ ಇನ್ನೊಂದು ಆಯಾಮವನ್ನು ನೋಡೋಣ. ಮೊದಲನೆಯದಾಗಿ ನೇತಾಜಿಯು ಒಂದು ವೇಳೆ ಪ್ರಧಾನಮಂತ್ರಿಯಾದ ಮೇಲೆ ಸಮ್ಯಾವಾದ ಜಾರಿಗೆ ತಂದಿದ್ದರೆ ಇಂದು ನಮ್ಮ ದೇಶದಲ್ಲಿ ಏಕಪಕ್ಷ ಆಡಳಿತವಾಗುವ ಸಂಭವವಿತ್ತು. ಮತ್ತು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ವಿರೋಧ ಪಕ್ಷ ಇರುತ್ತಲೆ ಇರಲಿಲ್ಲ. ನೇತಾಜಿ ಅವರ ಮಿಲಿಟರಿ ಶಿಸ್ತನ್ನು ಗಮನಿಸಿದರೆ, ಭಾರತದಲ್ಲಿ ಸಂಸತ್ತಿಗಿಂತ ಮಿಲಿಟರಿ ಆಡಳಿತವೇ ನಡೆಯುತ್ತಿತ್ತು. ಅದು ಸ್ಟಾಲಿನ್, ಹಿಟ್ಲರ್ ನ ಮಿಲಿಟರಿಯಂತೆ. ಸ್ನೇಹಿತರೆ ನಾನು ಒಂದು ಮಾತನ್ನು ಸ್ಪಷ್ಟವಾಗಿ ಹೇಳಬಲ್ಲೆ, ಅದೇನೆಂದರೆ ನೇತಾಜಿ ಒಬ್ಬ ದಕ್ಷ, ನಿಪುಣ ಮತ್ತು ಶಿಸ್ತುಬದ್ಧ ಆಡಳಿತಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಬದುಕಿರುವವರೆಗೂ ಇದ್ಯಾವುದಕ್ಕೂ ಅವಕಾಶ ಕೊಡುತ್ತಿರಲಿಲ್ಲ. ಆದರೆ ಅವರ ನಂತರ ಯಾರೇ ಪ್ರಧಾನಮಂತ್ರಿಯಾಗಿದ್ದರು ನೇತಾಜಿ ಅವರ ಸಿದ್ಧಾಂತವನ್ನು ಪಾಲಿಸುತ್ತಿದ್ದರಾ ಎಂದು ಗ್ಯಾರಂಟಿ ಕೊಡಲು ಸಾಧ್ಯವೇ? ನೇತಾಜಿ ಅವರ ನಂತರ ಬಂದ ಪ್ರಧಾನಿಯು ಭ್ರಷ್ಟರಾಗಬಹುದು. ತನ್ನ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದಕ್ಕಾಗಿ, ನೇತಾಜಿಯ ಸಿದ್ಧಾಂತವನ್ನು ಧಿಕ್ಕರಿಸಿ ONE PARTY RULE ಜಾರಿಗೆ ತರಬಹುದಿತ್ತು. ಒಂದು ವೇಳೆ ಹಾಗಾಗಿದ್ದರೆ ನೇತಾಜಿ ಕಂಡ ಸರ್ವಧರ್ಮ ಸಮನ್ವಯ ಕನಸು ನುಚ್ಚು ನೂರಾಗಿ ಭಾರತದಲ್ಲಿ ಒಬ್ಬ ಹಿಟ್ಲರ್ ಹುಟ್ಟಿಕೊಳ್ಳಬಹುದಿತ್ತು. ಸ್ನೇಹಿತರೆ ಈ ಎಲ್ಲಾ ಸಂಭವಗಳು ಒಂದು ವೇಳೆ ನೇತಾಜಿಯು ಪ್ರಧಾನಿಯಾಗಿದ್ದರೆ ಸಂಭವಿಸಬಹುದಾದ ಘಟನೆಗಳಾಗಿದ್ದವು. ಆದರೆ ಸ್ನೇಹಿತರೆ ನಿಮಗೆ ನೆನಪಿರಲಿ ಇಂದಿನ ಈ ವಿಡಿಯೋದ ಪ್ರಾರಂಭದಲ್ಲಿ clamment atley ಹೇಳಿದ ಹಾಗೆ ಭಾರತದಿಂದ ಬ್ರಿಟಿಷರು ಕಾಲ್ಕಿತ್ತಲು ಪ್ರಮುಖ ಕಾರಣವೇ ನೇತಾಜಿ ಸುಭಾಶ್ಚ೦ದ್ರ ಬೋಸ್. ಇಂತಹ ಮಹಾನ್ ಹೋರಾಟಗಾರನಿಗೆ ನಮದೊಂದು ಸಲಾಂ.


ಸ್ನೇಹಿತರೆ ಇದಾಗಿತ್ತು ಇವತ್ತಿನ ವಿಶೇಷ…ಆರ್ಟಿಕಲ್ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ನಮ್ಮ ವೆಬ್ ಸೈಟ್‌ಗೆ ಹೊಸಬರಾಗಿದ್ದರೆ ಈ ಕೂಡಲೇ ಸಬ್ಸ್ಕ್ರೈಬ್ ಮಾಡಿ ಮತ್ತೊಂದು ವಿಶೇಷ ಸುದ್ದಿಯೊಂದಿಗೆ ನಾನು ನಿಮಗೆ ಮುಂದಿನ ಆರ್ಟಿಕಲ್‌ನಲ್ಲಿ ಸಿಗುತ್ತೇನೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ….

View Comments

Recent Posts

ಆಧಾರ್ ಕಾರ್ಡ್ ಹೊಂದಿದವರಿಗೆ ಮಹತ್ವದ ಮಾಹಿತಿ! ಈಗಲೇ ಈ ಕೆಲಸ ಮಾಡಿ!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…

55 years ago

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ಕೊಡಲಿದೆ 20 ಕೋಳಿ ಮರಿ ಉಚಿತ ! ಈಗಲೇ ಅರ್ಜಿ ಸಲ್ಲಿಸಿ

ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…

55 years ago

Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ

ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…

55 years ago

PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ ! ಈಗಲೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…

55 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

55 years ago

ರೇಷನ್ ಕಾರ್ಡ್: ಈ ತಪ್ಪು ಮಾಡಿದ್ರೆ ನಿಮಗೆ ಸರಕಾರದಿಂದ ದಂಡ ಬೀಳುವುದು ಗ್ಯಾರಂಟಿ! ಈಗಲೇ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿ

ನಿಮ್ಮ ರೇಷನ್ ಕಾರ್ಡ್ ಬಿಪಿಎಲ್ (BPL Card) ಇದೆಯೋ ಅಥವಾ ಎಪಿಎಲ್ (APL Card) ಆಗಿ ಪರಿವರ್ತನೆ ಆಗಿದೆಯೋ ಎಂಬುದನ್ನು…

55 years ago