ಸ್ನೇಹಿತರೇ ನಳಂದ ವಿಶ್ವವಿದ್ಯಾಲಯ ಇವತ್ತು ಜಗತ್ತಿನ ಟಾಪ್ 1 ವಿಶ್ವವಿದ್ಯಾಲಯಕ್ಕೂ ಸೆಡ್ಡು ಹೊಡೆದು ನಿಲ್ಲುತ್ತಿತ್ತು ಎಂದರೆ ತಪ್ಪಾಗಲಾರದು. ಅದು ನಮ್ಮ ಭಾರತಾಂಬೆಯ ಮಡಿಲಲ್ಲಿ ಹುಟ್ಟಿ ದಶದಿಕ್ಕು ಪರಿಮಳವನ್ನು ಹರಡುವಾಗ ಆ ಭಕ್ತಿಯಾರ್ ಗೆ ಅರಗಿಸಿಕೊಳ್ಳಲಾಗದೆ ದ್ವಂಸ ಮಾಡಿದನೆಂದರೇ ನಿಜಕ್ಕೂ ರಕ್ತ ಕುದಿಯುತ್ತದೆ ಮತ್ತು ಅಷ್ಟೇ ದುಃಖವೆನಿಸುತ್ತದೆ.
ಸ್ನೇಹಿತರೇ ನಳಂದ ವಿಶ್ವವಿದ್ಯಾಲಯ ಇವತ್ತು ಜಗತ್ತಿನ ಟಾಪ್ 1 ವಿಶ್ವವಿದ್ಯಾಲಯಕ್ಕೂ ಸೆಡ್ಡು ಹೊಡೆದು ನಿಲ್ಲುತ್ತಿತ್ತು ಎಂದರೆ ತಪ್ಪಾಗಲಾರದು. ಅದು ನಮ್ಮ ಭಾರತಾಂಬೆಯ ಮಡಿಲಲ್ಲಿ ಹುಟ್ಟಿ ದಶದಿಕ್ಕು ಪರಿಮಳವನ್ನು ಹರಡುವಾಗ ಆ ಭಕ್ತಿಯಾರ್ ಗೆ ಅರಗಿಸಿಕೊಳ್ಳಲಾಗದೆ ದ್ವಂಸ ಮಾಡಿದನೆಂದರೇ ನಿಜಕ್ಕೂ ರಕ್ತ ಕುದಿಯುತ್ತದೆ ಮತ್ತು ಅಷ್ಟೇ ದುಃಖವೆನಿಸುತ್ತದೆ. ಇನ್ನೊಂದು ಕುತೂಹಲಕಾರಿ ಪ್ರಶ್ನೆ ಒಂದುವೇಳೆ ನಳಂದ ಇದ್ದಿದ್ದರೆ ವಿಶ್ವವು ಹೇಗಿರುತ್ತಿತ್ತು ಎಂದು…ಹಾಗಾದರೆ ಬನ್ನಿ ಸ್ನೇಹಿತರೆ ಈ ಆರ್ಟಿಕಲ್ ನಲ್ಲಿ ನಳಂದಾ ವಿಶ್ವವಿದ್ಯಾಲಯ ಇದ್ದಿದ್ದರೆ ಹೇಗಿರುತ್ತಿತ್ತು ಎಂಬುದನ್ನ ತಿಳಿದುಕೊಳ್ಳೋಣ..
ನಳಂದ ಕೇವಲ ಒಂದೇ ವಿಷಯದಲ್ಲಿ ಪಾಂಡಿತ್ಯವನ್ನು ಹೊಂದಿರಲಿಲ್ಲ ಬಾಹ್ಯಾಕಾಶದಿಂದ ಹಿಡಿದು ಔಷಧಿ ಮತ್ತು ರಾಜಕೀಯದಿಂದ ಹಿಡಿದು ಮನಶಾಸ್ತ್ರದವರೆಗೂ ತನ್ನ ಒಡಲಲ್ಲಿ ಜ್ಞಾನವನ್ನು ತುಂಬಿಕೊಂಡಿತ್ತು. ಸಂಶೋಧನೆಯಲ್ಲಿ ಆಳವಾದ ಬೇರುಗಳನ್ನು ಹೊಂದಿತ್ತು. ನಾವು ಇವತ್ತು ಗಣಿತವೆಂದರೆ ಕಬ್ಬಿಣದ ಕಡಲೆ ಎನ್ನುತ್ತೇವೆ. ಆದರೆ ಜಗತ್ತು ABCD ಎಂದರೆ ಏನು ಅಂತ ಗೊತ್ತಿಲ್ಲದ ಕಾಲದಲ್ಲಿ ಭಾರತೀಯರು trigonometry and algebra ದಲ್ಲಿ ಪರಿಣಿತರಾಗಿದ್ದರು. ಆರ್ಯಭಟನಿಂದ ಹಿಡಿದು ಬ್ರಹ್ಮಗುಪ್ತನವರೆಗೆ ಸಾಕಷ್ಟು ಭಾರತೀಯರು ಸೊನ್ನೆ ,geometry ಯ ಪೈ ಬೆಲೆ ಹಾಗೂ ಅನೇಕ ಗಣಿತ ಸೂತ್ರಗಳನ್ನು ಕಂಡುಹಿಡಿದಿದ್ದಾರೆ. ಜಗತ್ತಿಗೆ ಮೊದಲು ಸೊನ್ನೆಯ ಪರಿಚಯ ಮಾಡಿದ್ದು ಭಾರತೀಯರೇ ಅದು ನಳಂದದ ಪುಸ್ತಕಗಳ ಜ್ಞಾನದಿಂದ. ಇವತ್ತು ಕಂಪ್ಯೂಟರ್ ಅರ್ಥಮಾಡಿಕೊಳ್ಳುವ ಮಷೀನ್ ಲಾಂಗ್ವೇಜ್ ಕೂಡ 0,1 ಬಳಸಕೊಂಡು ಬರೆಯಲಾಗಿದೆ. ಅನೇಕ programming ಲೆಕ್ಕಗಳನ್ನು ಅನೇಕ ಸೂತ್ರಗಳು, ಲಾಜಿಕ್ಗಳು ಸೊನ್ನೆಯ ಬಳಕೆಯಿಂದ ಮಾಡಲಾಗುತ್ತದೆ. ಇವೆಲ್ಲ ನಮ್ಮ ಭಾರತೀಯರು ಆಗಿನ ಕಾಲದಲ್ಲಿಯೇ ಕಂಡುಹಿಡಿದಿದ್ದು ನಾವು ಇವತ್ತು ಸ್ಕ್ರೀನ್ ಟಚ್ ಮೊಬೈಲ್ ನಲ್ಲಿ ನಮ್ಮ ಬೆರಳಿನ ಸ್ಪರ್ಶದಿಂದ ನಮ್ ಫೋನ್ ಕೆಲಸ ಮಾಡುವುದು ಎಲ್ಲರಿಗೂ ಗೊತ್ತಿದೆ . ಆದರೆ ನಿಮಗೆ ಗೊತ್ತಿರಲಿ ಸ್ನೇಹಿತರೇ ಈ ತಂತ್ರಜ್ಞಾನದ ಕುರಿತು ಆವಾಗ್ಲೇ ಭಾರತೀಯರು ನಳಂದಾ ವಿಶ್ವವಿದ್ಯಾಲಯದಲ್ಲಿರುವ ಪುಸ್ತಕದಲ್ಲಿ ಪ್ರಕಟಿಸಿದ್ದರು.
ಇನ್ನು ಬಾಹ್ಯಾಕಾಶಕ್ಕೆ ಬಂದರೆ 1632 ರಲ್ಲಿ ಗೆಲಿಲಿಯೋ ತನ್ನ ಭೂಸಿದ್ಧಾಂತದ ಮೂಲಕ ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮಂಡಿಸಿದ. ಆದರೆ ಇಂಟರೆಸ್ಟಿಂಗ್ ಏನೆಂದರೆ 9 ನೆ ಶತಮಾನದಲ್ಲಿಯೆ ಯಜ್ಞವಾಲ್ಕ್ಯನು ಸೂರ್ಯನೂ ಸೌರವ್ಯೂಹದ ಕೇಂದ್ರಬಿಂದು ಅದರ ಸುತ್ತ ಭೂಮಿಯು ಸುತ್ತುತ್ತದೆ ಎಂದು ಹೇಳಿದನು ಮತ್ತು ಭಾಸ್ಕರಚಾರ್ಯ-II ಗುರುತ್ವಕರ್ಷನ ಬಲವನ್ನು Newton ಗಿಂತ 1100 ವರ್ಷಗಳ ಹಿಂದೆಯೇ ಕಂಡುಹಿಡಿದಿದ್ದರು. ಇದು ಅಷ್ಟೇ ಅಲ್ಲದೆ ಭೂಮಿಯ ತೂಕ, ಗಾತ್ರ, ಸೂರ್ಯ ಚಂದ್ರ ಮತ್ತು ಭೂಮಿಯ ನಡುವಿನ ಅಂತರವನ್ನು 1000 ವರ್ಷಗಳ ಹಿಂದೆಯೇ ಭಾರತೀಯರು ಲೆಕ್ಕ ಹಾಕಿದ್ದರು. ಭಾರತೀಯರು ಯಾವುದೇ ಕೆಲಸವನ್ನು ಪ್ರಾರಂಭಿಸಲು ಜ್ಯೋತಿಷ್ಯವನ್ನು ಕೆಳುದುವುಂಟು. ಜ್ಯೋತಿಷ್ಯದಲ್ಲಿನ ಬರಹಗಳನ್ನು1000 ವರ್ಷಗಳ ಹಿಂದೆಯೇ ಕಂಡುಹಿಡಿದ ಸೌರವ್ಯುಹದ ಆಧಾರದ ಮೇಲೆ ಬರೆಯಲಾಗಿದೆ.ಇಂದಿನ ಎಂಜಿನಿಯರಿಂಗ್ ಕಟ್ಟಡಗಳು 50-80 ವರ್ಷಗಳವರೆಗೆ ತಾಳಿಕೆ ಬರಬಹುದು ಆದರೆ ಪ್ರಾಚೀನ ಕಟ್ಟಡಗಳ ದೇವಾಲಯಗಳು ಪ್ರಕೃತಿ ವಿಕೋಪಗಳಾದರೂ ಇನ್ನೂ ಜೀವಂತವಾಗಿವೆ. ಇದು ನಮ್ಮ ಪ್ರಾಚೀನರು ಸಾಧಿಸಿದ ಅದ್ಭುತ ತಾಂತ್ರಿಕ ನೈಪುಣ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಪಾಲಿಟಿಕ್ಸ್ ಗೆ ಬಂದ್ರೆ ದೇಶವು ರಾಜಕಾರಣಿಗಳಿಂದ ಅಳಲ್ಪಡುತ್ತದೆ ಎಂದು ಹಿಂದೆ ಚಾಣಕ್ಯನೀತಿಯು ಮತ್ತು ಬೇರೆ ರಾಜಕೀಯ ಮೌಲ್ಯಗಳು ರಾಷ್ಟ್ರದ ಅಭಿವೃದ್ಧಿಗೆ ನಾಂದಿಯಾಗಿದ್ದವು. ಇವತ್ತು ರಾಜಕೀಯ ಎಂದರೆ ಕೇವಲ ಚುನಾವಣೆಯನ್ನು ಗೆಲ್ಲುವುದಾಗಿದೆ ಆದರೆ ನಳಂದ ಇದ್ದರೆ ಇವತ್ತು ಎಲ್ಲದರಲ್ಲಿಯೂ ಅಭಿವೃದ್ಧಿಯಲ್ಲಿ ಒಂದು ಹೆಜ್ಜೆ ಮುಂದೆ ಇರುತಿತ್ತು. ನಳಂದ ಶಿಕ್ಷಣವು ಜಾಸ್ತಿ ಪ್ರಾಯೋಗಿಕವಾಗಿತ್ತು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆಯಲು ಪ್ರತಿ ವಿಷಯದಲ್ಲೂ debate ಗಳನ್ನು ಮಾಡ್ತಾ ಇದ್ರು. ಇನ್ನು ಔಷದ ಶಾಸ್ತ್ರ ಮತ್ತು ರೋಗದ ಪರಿಹಾರ ಬಂದರೆ ಭಾರತ ಒಂದು ಹೆಜ್ಜೆ ಮುಂದಿತ್ತು. ಹಲವಾರು ಕೃತಿಗಳಲ್ಲಿ ಎಲ್ಲಾ ರೋಗಗಳಿಗೆ ಔಷದಿ ನಿಸರ್ಗದಲ್ಲಿ ಸಿಗುತ್ತದೆ ಎಂದು ಪ್ರಕಟಿಸಲಾಗಿದೆ. ಮಾನವನ ಸಂತಾನೋತ್ಪತ್ತಿ ಮತ್ತು ವೀರ್ಯ ಫಲವತ್ತತೆ (sperm fertility) ಕುರಿತು ಪ್ರಾಚೀನ ಕಟ್ಟಡದಲ್ಲಿ ಯಾವುದೇ ಮೈಕ್ರೋಸ್ಕೋಪ್ ಮತ್ತು ಸ್ಕ್ಯಾನರ್ ಗಳಿಲ್ಲದೆ ಕೆತ್ತಲಾಗಿದೆ. ಪ್ಲಾಸ್ಟಿಕ್ ಸರ್ಜರಿಯ ಕುರಿತ ಜ್ಞಾನ ಜಗತ್ತಿಗಿಂತ ಮುಂಚೆ ಭಾರತಿಯರಿಗೆ ಇತ್ತು. ಮತ್ತು ವಿಶೇಷವೆಂದರೆ ಯಾವ ಭಕ್ತಿಯಾರ್ ಖಿಲ್ಜಿಯು ನಳಂದಾ ವಿಶ್ವವಿದ್ಯಾಲಯ ನಾಶ ಮಾಡಿದ್ದನೋ ಕೊನೆಗಾದಲ್ಲಿ ಅವನೇ ರೋಗದಿಂದ ಬಳುತ್ತಿರುವಾಗ ರಾಹುಲ್ ಶ್ರೀಭದ್ರ ಎಂಬ ಪಂಡಿತರ ಚಿಕಿತ್ಸೆಯಿಂದ ಗುಣಮುಖನಾದನು. ಇವ್ರು ನಳಂದದಲ್ಲಿ ಆಯುರ್ವೇದದ ಮುಖ್ಯಸ್ಥರಾಗಿದ್ದರು. ಇತ್ತೀಚೆಗೆ ಜಗತ್ತು ಕೋರೋಣ ಪಿಡುಗಿನಿಂದ ಬಳಲಿತು ಅದಕ್ಕೆ ವೈದ್ಯರು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಕಷಾಯ ಮದ್ದು ಎನ್ನುವುದು ಆವಾಗ್ಲೇ ಪ್ರಾಚೀನ ಬರಹಗಳಲ್ಲಿ ಪ್ರಕಟಿಸಲಾಗಿದೆ.ಹೀಗೆ ಇನ್ನೂ ಹಲವಾರು ರೀತಿಯ ಜ್ಞಾನಕ್ಕೆ ಸಾಕ್ಷಿಯಾದ ನಳಂದ ಮಿಂಚಿ ಮರೆಯಾದ ರೀತಿಯು ದುಃಖಕ್ಕೆ ಈಡು ಮಾಡುತ್ತದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…