Categories: information

ಯಾರಿಗೂ ಗೊತ್ತಿಲ್ಲದ ನಳಂದ ವಿಶ್ವವಿದ್ಯಾಲಯದ ವೈಭವದ ಕಥೆ ಇದು ! ಅಷ್ಟಕ್ಕೂ ಚೀನೀ ಯಾತ್ರಿಕ ಅದರ ಬಗ್ಗೆ ಹೇಳಿದ್ದೇನು?

ಒಂಬತ್ತು ಮಹಡಿಯ ಆ ವಿದ್ಯಾಲಯ "ಮೋಡಗಳನ್ನು ಆಲಂಗಿಸಿ ಮುಗಿಲಿಗೆ ಮುತ್ತಿಡುತಿತ್ತು" . ಅಲ್ಲಿ ಹತ್ತುಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳು, ಎರಡು ಸಾವಿರ ಮೇಧಾವಿ ಪ್ರಾಧ್ಯಾಪಕರು, ಇಡೀ ಜಗತ್ತನ್ನು ಶಾಂತಿಯ ಸನ್ಮಾರ್ಗದಲ್ಲಿ ನಡೆಸುವ ಸನ್ಯಾಸಿಗಳಿದ್ದರು. ಖಗೋಳದ ಚಲನ-ವಲನ ತಿಳಿಸುವ ಖಗೋಳ ಶಾಸ್ತ್ರಜ್ಞರಿದ್ದರು. ಜಗತ್ತಿಗೆ ಸೊನ್ನೆಯ ಸಂಪತ್ತು ಕೊಟ್ಟ ತಜ್ಞರಿದ್ದರು. ಅಲ್ಲಿ ಆಧ್ಯಾತ್ಮ, ಔಷಧ, ತರ್ಕ,  ಗಣಿತ ಆತ್ಮ ರಕ್ಷಣೆ, ಖಗೋಳದ ಜ್ಞಾನ ಅಲ್ಲಿ ಬೆಳಕಿನಂತೆ ಚೆಲ್ಲಿತ್ತು .

Spread the love

ಸ್ನೇಹಿತರೇ ಈಗೆಲ್ಲ ನಾವು ಹೊರದೇಶದಲ್ಲಿ ಆಕ್ಸ್ಫರ್ಡ್ ಹಾರ್ವರ್ಡ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಗಳಲ್ಲಿ ಶಿಕ್ಷಣ ಪಡೆದರೆ, ಅದೊಂದು ಉನ್ನತ ಶಿಕ್ಷಣ, ನಮ್ಮ ದೇಶಕ್ಕಿಂತ ಸ್ಟ್ಯಾಂಡರ್ಡ್ ಎಂದು ಭಾವಿಸುತ್ತಾರೆ. ಆದರೆ ಇದಕ್ಕಿಂತ ಸ್ಟ್ಯಾಂಡರ್ಡ್ 15 ಶತಮಾನಗಳ ಹಿಂದೆಯೇ ತಲೆ ಎತ್ತಿ ನಿಂತಿತ್ತು. ಆಗಿನ್ನೂ ಆಕ್ಸ್ಫರ್ಡ್ ಕಣ್ಣು ಸಹ ತೆರೆದಿರಲಿಲ್ಲ. ಕೇಂಬ್ರಿಡ್ಜ್ ಇನ್ನೂ ಅಂಬೆಗಾಲು ಇಟ್ಟಿರಲಿಲ್ಲ. ಹಾರ್ವರ್ಡ್ ಹುಟ್ಟೋಕೆ ಇನ್ನೂ ಹನ್ನೊಂದು ಶತಮಾನಗಳು ಬಾಕಿ ಇತ್ತು. ಆಗಲೇ ಆ ಶಿಕ್ಷಣ ತಾರೆ ಅದರಲ್ಲೂ ಭಾರತಮಾತೆಯ ಮಡಿಲಲ್ಲಿ ಮಿಂಚುತ್ತಿದ್ದಳು ಎಂದರೆ ನಿಜವಾಗ್ಲೂ ಒಂದು ಅತಿ ಸಂತಸದ ಹೆಮ್ಮೆಯ ಅಚ್ಚರಿಯ ವಿಷಯವೇ ಸರಿ. ಆ ತಾರೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ವಿಷಯ ಹಂಚಿಕೊಳ್ಳುತ್ತೇನೆ. ಕೊನೆಯವರೆಗೂ ತಪ್ಪದೇ ಓದಿ.

Thank you for reading this post, don't forget to subscribe!

ಒಂಬತ್ತು ಮಹಡಿಯ ಆ ವಿದ್ಯಾಲಯ “ಮೋಡಗಳನ್ನು ಆಲಂಗಿಸಿ ಮುಗಿಲಿಗೆ ಮುತ್ತಿಡುತಿತ್ತು” . ಅಲ್ಲಿ ಹತ್ತುಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳು, ಎರಡು ಸಾವಿರ ಮೇಧಾವಿ ಪ್ರಾಧ್ಯಾಪಕರು, ಇಡೀ ಜಗತ್ತನ್ನು ಶಾಂತಿಯ ಸನ್ಮಾರ್ಗದಲ್ಲಿ ನಡೆಸುವ ಸನ್ಯಾಸಿಗಳಿದ್ದರು. ಖಗೋಳದ ಚಲನ-ವಲನ ತಿಳಿಸುವ ಖಗೋಳ ಶಾಸ್ತ್ರಜ್ಞರಿದ್ದರು. ಜಗತ್ತಿಗೆ ಸೊನ್ನೆಯ ಸಂಪತ್ತು ಕೊಟ್ಟ ತಜ್ಞರಿದ್ದರು. ಅಲ್ಲಿ ಆಧ್ಯಾತ್ಮ, ಔಷಧ, ತರ್ಕ, ಗಣಿತ ಆತ್ಮ ರಕ್ಷಣೆ, ಖಗೋಳದ ಜ್ಞಾನ ಅಲ್ಲಿ ಬೆಳಕಿನಂತೆ ಚೆಲ್ಲಿತ್ತು .ತೊಂಬತ್ತು ಲಕ್ಷ ಪುಸ್ತಕದ ಒಂಬತ್ತು ಮಹಡಿಯ ಗ್ರಂಥಾಲಯಗಳಿದ್ದವು. ಅಲ್ಲಿ ಪಾಂಡಿತ್ಯ ಪಡೆದ ವಿದ್ಯಾರ್ಥಿಗಳು ಜಗತ್ತನ್ನೇ ಬದಲಿಸಿ ಬಿಟ್ಟರು. ಅದು ಜಗತ್ತನ್ನೇ ಬದಲಿಸಿದ ವಿದ್ಯಾಕೇಂದ್ರವಾಗಿತ್ತು. ಅದು ಜಗತ್ತಿನ ಮೊಟ್ಟ ಮೊದಲ ವಸತಿ ವಿದ್ಯಾಕೇಂದ್ರವೂ ಹೌದು. ಆದರೆ ಇದು ಆಕ್ಸ್ಫರ್ಡ್ ಆ? ಕೇಂಬ್ರಿಡ್ಜ್ ಆ? ಅಲ್ಲವೇ ಅಲ್ಲ, ಇದು ಸುಮಾರು 800 ವರ್ಷಗಳ ಹಿಂದೆಯೇ ಮಿರಮಿರನೆ ಮಿನುಗಿ ಮರೆಯಾದ ಶಿಕ್ಷಣ ತಾರೆ ನಳಂದಾ!!!!

ನಳಂದಾ ಎಂದರೆ “ನಾ ಆಲಂದಾ” “ತಡೆಹಿಡಿಯಲಾಗದ ಜ್ಞಾನ ಪ್ರವಾಹ” ಎಂದರ್ಥ.ಬಿಹಾರದ ಪಾಟ್ನಾದ ಆಗ್ನೇಯ ಭಾಗದಿಂದ 88 ಕಿ.ಮೀ ದೂರದಲ್ಲಿದ್ದು ಆಗಿನ ಕಾಲದಲ್ಲಿ ವಿಜ್ಞಾನ, ತಂತ್ರಜ್ಞಾನ, ಗಣಿತ, ತರ್ಕ, ಖಗೋಳ, ಸಾಹಿತ್ಯ, ಔಷಧ, ಇತಿಹಾಸ ಹೀಗೆ ಎಲ್ಲ ವಿಭಾಗದ ಜ್ಞಾನವನ್ನು ತನ್ನ ಒಡಲಲ್ಲಿ ತುಂಬಿಕೊಂಡಿತ್ತು. ಇದೇ ಕಾರಣಕ್ಕೆ ಇಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳು ಸಂಶೋಧನೆ ನಡೆಸುತ್ತಿದ್ದರು. ಹತ್ತು ದೇವಾಲಯಗಳು, ಜ್ಞಾನದ ಹಜಾರಗಳಿದ್ದವು ನೂರಾರು ಪಾಠದ ಕೋಣೆಗಳಿದ್ದವು, ಮೈದಾನಗಳು ವಿದ್ಯಾರ್ಥಿಗಳಿಗೆ, ಭಿಕ್ಕುಗಳಿಗೆ ಧ್ಯಾನದ ಕೇಂದ್ರವಾಗಿತ್ತು. ಸುಮಾರು 90 ಲಕ್ಷ ಗ್ರಂಥಗಳನ್ನೊಳಗೊಂಡ ರತ್ನಸಾಗರ, ರತ್ನವೊಡತಿ,ರತ್ನರಂಜಕ ಎಂಬ ಕಟ್ಟಡಗಳನ್ನೊಳಗೊಂಡ ಗ್ರಂಥಾಲಯವಿತ್ತು. ಬೌದ್ಧರ ಪ್ರಾಬಲ್ಯವಿದ್ದ ವಿದ್ಯಾಲಯಕ್ಕೆ ಗೌತಮ ಬುದ್ಧರು ಭೇಟಿ ನೀಡುತ್ತಿದ್ದರು ಎಂದು ಹೇಳಲಾಗುತ್ತದೆ. ಜೈನ ತೀರ್ಥಂಕರ ಮಹಾವೀರ ಇಲ್ಲಿ ಹದಿನಾಲ್ಕು ಋತುಗಳನ್ನು ಕಳೆದಿದ್ದರು ಎಂದು ಉಲ್ಲೇಖವಿದೆ. ಹಾಗೇ ಗೌತಮ ಬುದ್ಧರು ಹಲವು ವರ್ಷಗಳ ಕಾಲ ಧ್ಯಾನಸ್ಥರಾಗಿ ಕುಳಿತಿದ್ದರ ಉಲ್ಲೇಖವಿದೆ.
ನಳಂದ ವಿಶ್ವವಿದ್ಯಾಲಯ ಕ್ರಿ.ಶ.453 ರಲ್ಲಿ ಕುಮಾರಗುಪ್ತ ಸ್ಥಾಪಿಸಿದರೆಂದು ಐತಿಹಾಸಿಕ ಅಧ್ಯಯನ ತಿಳಿಸುತ್ತವೆ. ಅಶೋಕ ಕ್ರಿ.ಪೂ.250 ರಲ್ಲಿ ಸ್ತೂಪವೊಂದನ್ನು ನಿರ್ಮಿಸಿದ್ದರು. ಹಲವು ವಿಹಾರಗಳನ್ನು ನಿರ್ಮಿಸಿದ್ದನು ಎಂದು ಉಲ್ಲೇಖಗಳು ಹೇಳುತ್ತವೆ. ಪಾಲ ವಂಶದ ಆಳ್ವಿಕೆಯಲ್ಲಿ ಇದು ಪ್ರವರ್ಧಮಾನಕ್ಕೆ ಏರಿತ್ತು ಎಂದು ಹೇಳಲಾಗುತ್ತದೆ. ಗುಪ್ತರ ಕಾಲದಲ್ಲಿ ವಿದೇಶಿ ಪ್ರವಾಸಿ ಫಾಹಿಯಾನ್ ಭೇಟಿ ನೀಡಿದ್ದ. ಅವನು ತನ್ನ ಗ್ರಂಥದಲ್ಲಿ ನಳಂದ ವಿದ್ಯಾಲಯದ ಬಗ್ಗೆ ಹೊಗಳಿದ್ದಾನೆ.

ಹರ್ಷನ ಕಾಲದಲ್ಲಿ ಚೀನಾ ವಿದೇಶಿಗ ಹುಯೆನ್ ತ್ಸಾಂಗ್ ಇಲ್ಲಿ ಬೇಟಿ ನೀಡಿ ಸುಮಾರು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿದ್ದರು. ಅವನಿಗೆ ಮೊಕ್ಷದೇವನೆಂದು ಹೆಸರು ಕೊಡಲಾಗಿತ್ತು. ಶೀಲಭದ್ರ ಎಂಬ ಗುರುವಿನ ಮೂಲಕ ವಿದ್ಯಾಭ್ಯಾಸ ಕೊಡಲಾಗಿತ್ತು “ಬೆಳಗಿನ ಜಾವದ ಹೊತ್ತಿಗೆ ನಳಂದಾದಲ್ಲಿದ್ದ ವಿಹಾರದ ಮೇಲ್ಛಾವಣಿ ಮೇಲೆ ಕೂತುಬಿಟ್ಟರೆ ಮೋಡದೊಳಗೆ ಕುತಿದಿವೇನೋ ಅಂತ ಅನುಭವ ಆಗುತ್ತೆ” ಅಂತ ದಾಖಲಿಸುತ್ತಾರೆ. ಅಂದರೆ ಊಹೇಮಾಡಿಕೊಳ್ಳಿ ಅಲ್ಲಿ ಎಷ್ಟು ಎತ್ತರದ ಕಟ್ಟಡಗಳಿದ್ದವು ಅಂತ. ಹೀಗೆ ಕಾಲಾನಂತರ ನಳಂದ ಚೀನಾ ಯಾತ್ರಿಕರ ನೆಚ್ಚಿನ ಸ್ಥಳವಾಗಿ ಬಿಟ್ಟಿತು ಅವ್ರು ಇಲ್ಲಿ ಸಂಸ್ಕೃತ ಕಲಿತು ಗ್ರಂಥಗಳನ್ನು ತಮ್ಮ ಭಾಷೆಗೆ ಭಾಷಾಂತರಿಸುವುದು ಸರ್ವೇಸಾಮಾನ್ಯವಾಯಿತು. ಹೀಗೆ ಹನ್ನೆರಡನೇ ಶತಮಾನದಲ್ಲಿ ನಳಂದಾ ತನ್ನ ಜ್ಞಾನವನ್ನು ಇಡೀ ಏಷ್ಯಾಕ್ಕೆ ಹಂಚಿತು. ಇಲ್ಲಿ ಶೈವ ವೈಷ್ಣವ ಪಂಥಗಳಿಗೆ ರಾಜಾಶ್ರಯ ಸಿಕ್ಕ ನಂತರ ಕೂಡ ನಳಂದದ ವೈಭವಕ್ಕೆ, ಖ್ಯಾತಿಗೆ ಚ್ಯುತಿ ಬರಲಿಲ್ಲ. ಆದರೆ ಭಕ್ತಿಯಾರ್ ಖಿಲ್ಜಿ ಎಂಬ ಅನಾಗರಿಕ ದಾಳಿಕೋರ ನಳಂದಾ ಮೇಲೆ 1193 ರಲ್ಲಿ ದಾಳಿ ಮಾಡಿದನು. ಅಲ್ಲಿದ್ದ ಹಲವು ಬೌದ್ಧ ಭಿಕ್ಕುಗಳ, ವಿದ್ಯಾರ್ಥಿಗಳ ಮಾರಣಹೋಮವಾಯಿತು. ಅಲ್ಲಿದ್ದ ಗ್ರಂಥಗಳು ಸುಮಾರು 6 ತಿಂಗಳುಗಳ ಕಾಲ ಹೊತ್ತಿ ಉರಿದವು ಎಂದು ಹೇಳಲಾಗುತ್ತದೆ. 12 ನೇ ಶತಮಾನದ ನಂತರ ನಳಂದ ಸೊಬಗು ಕಳಚುತ್ತ ಹೋಯಿತು. ಅದರಲ್ಲಿ ಕೆಲವೊಂದಿಷ್ಟು ಗ್ರಂಥಗಳನ್ನು ಶಾಕ್ಯ ಶ್ರೀಭದ್ರ ರಕ್ಷಣೆ ಮಾಡುತ್ತಾರೆ. ಅವ್ರು ಕೊನೆಗೆ ಟಿಬೇಟನ್ನು ಸೇರಿಕೊಳ್ಳುತ್ತಾರೆ. ನಾವು ಇವತ್ತು ಟಿಬೇಟಲ್ಲಿ ನೋಡ್ತಾ ಇರುವ ಬೌದ್ಧ ಧರ್ಮದ ತಾಂತ್ರಿಕ ಮಾರ್ಗಗಳ ಹಿಂದಿರೋದು ಟಿಬೇಟನ್ ಬೌದ್ಧರಲ್ಲ, ಆ ಜ್ಞಾನ ಅಲ್ಲಿಗೆ ಸೇರಿದ್ದು ನಳಂದ ವಿಶ್ವವಿದ್ಯಾಲಯದಿಂದ.

ನಾವು ನಳಂದ ವಿಶ್ವ ವಿದ್ಯಾಲಯ ಭಾರತದಲ್ಲಿ ಇತ್ತು ಅನ್ನೋದು ಮರೆತು ಹೋಗುತ್ತೆ ಅನ್ನೋ ಸಂದರ್ಭದಲ್ಲಿ ಮತ್ತೆ ಅದರ ಗತವೈಭವ ಮರುಕಳಿಸುತ್ತಿದೆ. ಬಿಹಾರದ ರಾಜಗಿರ್ ಪಕ್ಕದಲ್ಲಿ ನಳಂದವನ್ನೇ ಹೋಲುವ ಹೊಸ ವಿಶ್ವವಿದ್ಯಾಲಯ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೀವು ನಮ್ಮ ವೆಬ್ಸೈಟ್ ಗೆ ಹೊಸಬರಾಗಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ಗಳನ್ನು “allow” ಮಾಡಿಕೊಳ್ಳಿ

Recent Posts

Rain Update: ಇಂದಿನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ! ನಿಮ್ಮ ಜಿಲ್ಲೆಯಲ್ಲಿಯೂ ಆಗಲಿದೆಯಾ ಚೆಕ್ ಮಾಡಿ!

. ರೈತರೇ ಪ್ರಸಕ್ತ 2025ನೇ ಸಾಲಿನಲ್ಲಿ ಹಿಂದಿನ ವರ್ಷದ ವಾದಿಕೆಗಿಂತಲೂ ಈ ವರ್ಷ ಅತಿ ಹೆಚ್ಚು ಮಳೆ ಆಗುತ್ತಿದೆ ಹಾಗೂ…

56 years ago

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago