ಡಾಕ್ಟರ್ ಅಬ್ದುಲ್ ಕಲಾಂ ಅವರು ಒಂದು ಮಾತನ್ನು ಹೇಳುತ್ತಾರೆ “ನೀವು ನಿಮ್ಮ ಭವಿಷ್ಯವನ್ನು ಬದಲಿಸಲು ಸಾಧ್ಯವಿಲ್ಲ ಆದರೆ ನೀವು ನಿಮ್ಮ ಅಭ್ಯಾಸಗಳನ್ನು ಬದಲಿಸಬಹುದು ನಿಸ್ಸಂಶಯವಾಗಿ ಈ ನಿಮ್ಮ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಿಸಬಲ್ಲವು”. ಕಲಾಂ ಅವರ ಈ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ. ಏಕೆಂದರೆ ಇಂದು ನಮ್ಮೊಂದಿಗೆ ಘಟಿಸುತ್ತಿರುವ ಪ್ರತಿ ಘಟನೆಯು ನಮ್ಮ ಕರ್ಮದ ಪ್ರತಿಫಲ, ಅಂದರೆ ನಮ್ಮ ಕೆಲಸದ ಪ್ರತಿಫಲ.
ನಾವು ಕೇವಲ ಅಂತಹ ಕೆಲಸಗಳನ್ನ ಅಷ್ಟೇ ಮಾಡುತ್ತೇವೆ ಯಾವ ಕೆಲಸಗಳನ್ನು ನಾವು ದಿನನಿತ್ಯದ ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿರುತ್ತೇವೆ ಅಂತಹುಗಳನ್ನ ಅಷ್ಟೇ. ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ನೋಡೋಣ ಪ್ರತಿ ಯಶಸ್ವಿ ಸಾಧಕನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಅಂತಹ ನಾಲ್ಕು ದಿನನಿತ್ಯದ ಕೆಲಸಗಳ ಬಗ್ಗೆ. ಈ ನಾಲ್ಕು ಕೆಲಸಗಳನ್ನು ನೀವು ದಿನನಿತ್ಯದ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆ ಆದಲ್ಲಿ ಯಶಸ್ಸಿನಿಂದ ನಿಮ್ಮನ್ನು ತಡೆಯಲು ಆ ಬ್ರಹ್ಮನಿಗೂ ಸಾಧ್ಯವಿಲ್ಲ. ಹಾಗಾದರೆ ಬನ್ನಿ ಸ್ನೇಹಿತರೆ ಯಾವವು ಆ ನಾಲ್ಕು ಅಭ್ಯಾಸ ಕ್ರಮಗಳು ಎಂಬುದನ್ನ ತಿಳಿದುಕೊಳ್ಳೋಣ.
1. Do More Talk Less- ಅಂದರೆ ಕಡಿಮೆ ಮಾತಾಡಿ ಹೆಚ್ಚು ಕೆಲಸ ಮಾಡಿ ಇಂಗ್ಲೀಷ್ ನಲ್ಲಿ ಒಂದು ನಾಣ್ಣುಡಿ ಇದೆ, work hard in silence let your success make noise. ಅಂದರೆ ನೀವು ಮಾಡುವ ಕೆಲಸ ಗುಪ್ತವಾಗಿರಲಿ ಅದರ ಯಶಸ್ಸು ಮಾತ್ರ ಜಗತ್ತಿನ ತುಂಬಾ ಅನುರಣಿಸಲಿ. ನೀವು ಮಾಡುವ ಕೆಲಸವನ್ನು ಯಾರಿಗೂ ಹೇಳಬೇಕಾದ ಅವಶ್ಯಕತೆ ಇಲ್ಲ. ಮುಂದೊಂದು ದಿನ ನಿಮ್ಮ ಯಶಸ್ಸೆ ಜಗತ್ತಿಗೆ ಸಾರಿ ಹೇಳುತ್ತದೆ ನೀವು ಏಕಾಂಗಿಯಾಗಿ ಮಾಡಿದ ಆ ಕೆಲಸವನ್ನು. ನೀವು ಯಾವುದೇ ಯಶಸ್ವಿ ಸಾಧಕರನ್ನು ನೋಡಿ ಅವರು ಎಂದಿಗೂ ತಾವು ಮಾಡುವ ಕೆಲಸವನ್ನು ತಾನು ಹಾಗೆ ಮಾಡಿದೆ ಹೀಗೆ ಮಾಡಿದೆ ಎಂದು ಯಾರ ಮುಂದೆಯೂ ಎಂದಿಗೂ ಹೇಳಿಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ಎಂದು ಹಾಗೆ ಹೇಳುವ ಅವಶ್ಯಕತೆಯೇ ಬಂದಿರುವುದಿಲ್ಲ ಆದರೆ ಅವರ ಯಶಸ್ಸು ಮಾತ್ರ ಅವರ ಕೆಲಸವನ್ನ ಜಗತ್ತನ್ನು ತುಂಬಾ ಡಂಗುರ ಸಾರಿರುತ್ತದೆ. ಹೀಗಾಗಿ ನೀವು ಮಾಡುವ ಕೆಲಸವನ್ನ ಏಕಾಗ್ರತೆಯಿಂದ ಮತ್ತು ಗುಪ್ತವಾಗಿ ಮಾಡಿ. ನೀವು ಮಾತನ್ನು ಕಡಿಮೆ ಮಾಡಿ ನಿಮ್ಮ ಯಶಸ್ವಿಗೆ ಮಾತನಾಡಲು ಬಿಡಿ.
2. ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು:
ಸ್ನೇಹಿತರೆ ನೀವು ಮಾರ್ಕ್ ಜುಕರ್ ಬರ್ಗ್ ಹೆಸರನ್ನ ಕೇಳಿರಬಹುದು. ಅವರು ಪ್ರತಿನಿತ್ಯವೂ ಒಂದೇ ತರನಾದ ಭಟ್ಗಳನ್ನ ಧರಿಸುತ್ತಾರೆ ಆತ ಮನಸ್ಸು ಮಾಡಿದರೆ ಜಗತ್ತಿನ ಅಷ್ಟು ಟೆಕ್ಸ್ಟೈಲ್ ಇಂಡಸ್ಟ್ರಿಗಳನ್ನೇ ಕೊಂಡುಕೊಳ್ಳಬಹುದು. ಯಾಕೆ ನೀವು ಯಾವಾಗಲೂ ಒಂದೇ ರೀತಿಯ ಬಟ್ಟೆ ಹಾಕಿಕೊಳ್ಳುತ್ತೀರಿ ಎಂದು ಅವರನ್ನು ಕೇಳಿದಾಗ “ನನ್ನ ಬಳಿ ಲಕ್ಷ ಕೋಟಿ ಗಟ್ಟಲೆ ಹಣವಿದೆ. ಆದರೆ ಅದಕ್ಕಿಂತಲೂ ಮುಖ್ಯವಾದ ನನ್ನ ಸಮಯವನ್ನು ನಾನೇಕೆ ಈ ಪಾಲ್ತು ವಸ್ತುಗಳಿಗಾಗಿ ಹಾಳು ಮಾಡಲಿ” ಎಂದು ಹೇಳಿದರಂತೆ. ಇವತ್ತು ಯಾವ ಡ್ರೆಸ್ ಹಾಕಿಕೊಳ್ಳಲಿ ನಾಳೆ ಯಾವ ಡ್ರೆಸ್ ಹಾಕಿಕೊಂಡರೆ ಚೆನ್ನಾಗಿ ಕಾಣುತ್ತೇನೆ ಎಂದು ಆಲೋಚಿಸುತ್ತಾ ಕುಳಿತರೆ ಸಮಯ ಸುಖ ಸುಮ್ಮನೆ ಕಳೆದು ಹೋಗುತ್ತದೆ. ಈ ಈ ಸಮಯವನ್ನು ಸೇವ್ ಮಾಡಲು ತನ್ನ ಜೀವನದ ಪೂರ್ತಿ ಒಂದೇ ರೀತಿಯ ಬಟ್ಟೆಗಳನ್ನು ಧರಿಸುವುದಾಗಿ ಆತ ಸಂಕಲ್ಪ ಮಾಡಿದ್ದಾನೆಂದರೆ ನಿಮಗೆ ಸಮಯದ ಬೆಲೆ ಏನೆಂಬುದು ಅರ್ಥವಾದೀತು. ಆತ ಪ್ರತಿ ನಿಮಿಷವನ್ನು ಹೇಗೆ ತನ್ನ ಏಳಿಗೆಗೆ ಬಳಸಿಕೊಳ್ಳಬೇಕು ಎಂದು ಯೋಚಿಸುತ್ತಾನೆ. ಆದರೆ ನಾವು ಹರಟೆಯಲ್ಲಿಯೇ ಗಂಟೆಗಟ್ಟಲೆ ಕಾಲಹರಣ ಮಾಡುತ್ತೇವೆ. ಇನ್ನು ಕೆಲವರು ತಮ್ಮ ಜೀವನದ ಉದ್ದಕ್ಕೂ ಇನ್ನೊಬ್ಬರ ಬಗ್ಗೆ ಮಾತನಾಡುತ್ತಾ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ ಮತ್ತು ಈ ಬಗ್ಗೆ ಅವರಿಗೆ ಯಾವುದೇ ಪಶ್ಚಾತಾಪವು ಇರುವುದಿಲ್ಲ. ಅದನ್ನು ಅವರು ಇನ್ನೊಬ್ಬರ ಮೇಲೆ ಆಪಾದನೆ ಹೊರೆಸುತ್ತಾರೆ. ಸ್ನೇಹಿತರೆ ನಿಮಗೆ ನನ್ನದೊಂದು ಕಿವಿಮಾತು ನಿಮಗೆ ಹರಟೆ ಹೊಡೆಯಲು ಸಾಕಷ್ಟು ಪುರುಸೊತ್ತಿರಬಹುದು, ಆದರೆ ಸಮಯಕ್ಕೆ ಪುರುಸೊತ್ತಿಲ್ಲ ಸಮಯಕ್ಕೆ ನಮಗೆ ಮತ್ತೊಮ್ಮೆ ಸಮಯ ಕೊಡುವಷ್ಟು ಸಮಯವಿಲ್ಲ. ಹೀಗಾಗಿ ನೀವು ನಿಮ್ಮ ಜೀವನದ ಅಮೂಲ್ಯವಾದ ಪ್ರತಿ ನಿಮಿಷವನ್ನು ಪ್ರತಿ ಗಂಟೆಯನ್ನು ನಿಮ್ಮ ಏಳಿಗೆಗಾಗಿಯೇ ಉಪಯೋಗಿಸಿಕೊಳ್ಳಿ. ಸಮಯ ನಿರ್ವಹಣೆಯನ್ನು ನೀವು ಒಮ್ಮೆ ಮೈಗೂಡಿಸಿಕೊಂಡು ಬಿಟ್ಟರೆ ನಿಮ್ಮ ಗುರಿಯನ್ನು ನೀವು ನೂರಕ್ಕೆ ನೂರರಷ್ಟು ಭೇದಿಸಿದಂತೆ.
3. ಪ್ರತಿದಿನವೂ ಹೊಸತನ್ನ ಕಲಿಯುವುದು :
ಸ್ನೇಹಿತರೆ ನೀವು ಜಗತ್ತಿನ ಯಾವುದೇ ಸಾಧಕರನ್ನು ನೋಡಿ, ಅವರೆಲ್ಲರೂ ಜೀವನದ ಉದ್ದಕ್ಕೂ ವಿದ್ಯಾರ್ಥಿಗಳಾಗಿಯೇ ಇರುತ್ತಾರೆ. ಡಾ. ಎಪಿಜೆ ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ, ಜೆಫ್ ಬೇಜೊಸ್, ಮಾರ್ಕ್ ಝುಕರ್ಬರ್ಗ್, ಬಿಲ್ ಗೇಟ್ಸ್ ಯಾವುದೇ ಸಕ್ಸಸ್ ಫುಲ್ ಲೀಡರ್ ಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ, ಅವರೆಲ್ಲರೂ ಬದುಕಿನ ಉದ್ದಕ್ಕೂ ಹೊಸತನ್ನ ಕಲಿಯಲು ಹಂಬಲಿಸುತ್ತಿರುತ್ತಾರೆ.” ಯಾವ ವ್ಯಕ್ತಿ ಹೊಸ ತನ್ನ ಕಲಿಯಲು ಹಂಬಲಿಸುವುದಿಲ್ಲವೋ ಅಂತಹ ವ್ಯಕ್ತಿಯನ್ನು ಶವಕ್ಕೆ ಹೋಲಿಸಲಾಗುತ್ತದೆ “. 64 ವರ್ಷದ ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಅವರು ಪ್ರತಿವಾರವೂ ಒಂದು ಹೊಸ ಪುಸ್ತಕವನ್ನು ಓದುತ್ತಾರೆ. ಮತ್ತೋರ್ವ ಜಗತ್ತಿನ ಶ್ರೀಮಂತರದ 89 ವಯಸ್ಸಿನ ವಾರನ್ ಬಫೆಟ್ ಅವರು ತಮ್ಮ ಇಳಿ ವಯಸ್ಸಿನಲ್ಲೂ ಪ್ರತಿದಿನ ಐದು ಗಂಟೆಯಷ್ಟು ಪುಸ್ತಕ ಓದುತ್ತಾರೆ. ಹೊಸತನ ಕಲಿಯಲು ವಯಸ್ಸಿನ ಹಂಗಿಲ್ಲ ಎಂಬುದನ್ನ ಸಾಬೀತುಪಡಿಸಿದ್ದಾರೆ. ಅಷ್ಟೇ ಏಕೆ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿಯೂ ಬಿಟ್ಟಿದ್ದಾರೆ “ಕಲಿಕೆಯೇ ಸೃಜನಶೀಲತೆಯ ತಾಯಿ” ಎಂದು. ನೀವು ಎಷ್ಟು ಕಲಿಯುತ್ತಿರೋ ಅಷ್ಟು ಎತ್ತರಕ್ಕೆ ಬೆಳೆಯುತ್ತಿರಿ. ನಿಮ್ಮ ವ್ಯಕ್ತಿತ್ವಕ್ಕೆ ಮತ್ತಷ್ಟು ತೂಕ ಬರುತ್ತದೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಎಂತದ್ದೆ ಸಂದಿದ್ದ ಸನ್ನಿವೇಶ ಎದುರಾದರು ಕಲಿಯುವುದನ್ನು ಬಿಡಬೇಡಿ, ಏಕೆಂದರೆ ಜೀವನ ಎಂದಿಗೂ ಕಲಿಸುವುದನ್ನ ನಿಲ್ಲಿಸುವುದಿಲ್ಲ.
4. ನಿಮ್ಮಷ್ಟಕ್ಕೆ ನೀವೇ ಮಾತನಾಡುವುದು :
ಇಂಗ್ಲೀಷಿನಲ್ಲಿ ಹೇಳುವುದಾದರೆ ಸೆಲ್ಫ್ ಟಾಕ್. ಪ್ರತಿದಿನವೂ ನೀವು ನಿಮ್ಮೊಂದಿಗೆ ಮಾತಾಡುವುದು ಬಹಳ ಅವಶ್ಯಕವಾಗಿದೆ. ದಿನಕ್ಕೆ ಐದು ನಿಮಿಷಗಳ ಮಟ್ಟಿಗೆ ಆದರೂ ನಿಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಿಮ್ಮ ಜೊತೆ ನೀವೇ ಮಾತಾಡಿ. ಏಕೆಂದರೆ ಹೆಚ್ಚಿನ ಜನ ತಮ್ಮ ಸೆಲೆಬ್ರಿಟಿಗಳ ಜೀವನದಲ್ಲಿ ಏನೇನಾಗುತ್ತಿದೆ ಎಂಬುದನ್ನು ಗಮನಿಸುತ್ತಿರುತ್ತಾರೆ, ಆದರೆ ತಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ವಿಫಲರಾಗುತ್ತಾರೆ. ಹೀಗಾಗಿ ಇಂತಹ ಜನರು ತಮ್ಮ ಗುರಿಯನ್ನು ಮುಟ್ಟಲಾಗುವುದಿಲ್ಲ. ಯಾವ ವ್ಯಕ್ತಿಯು ತನ್ನ ಜೊತೆಗೆ ಮಾತಾಡುತ್ತಾನೋ ಅಂತಹ ವ್ಯಕ್ತಿಗೆ ತನ್ನ ಜೀವನದಲ್ಲಿ ಏನಾಗುತ್ತಿದೆ ಎಂಬುದು ತಿಳಿಯುತ್ತದೆ ಮತ್ತು ತಾನು ಏನು ಮಾಡಬೇಕಾಗಿದೆ ಎಂಬುದು ಮನವರಿಕೆ ಆಗುತ್ತದೆ ಮತ್ತು ಆತನ ತಲೆಯಲ್ಲಿ ಇದು ಪ್ರತಿಕ್ಷಣ ಓಡಾಡುತ್ತಿರುತ್ತದೆ ತಾನು ಮಾಡುತ್ತಿರುವುದು ಸರಿಯೋ ತಪ್ಪೋ ಒಂದು ವೇಳೆ ಅದು ತಪ್ಪಾಗಿದ್ದರೆ ಮುಂದಿನ ಸಲ ಅದು ಮತ್ತೊಮ್ಮೆ ಮರುಕಳಿಸದಂತೆ ಎಚ್ಚರ ವಹಿಸುತ್ತದೆ. ಹಾಗಾಗಿ ಪ್ರತಿದಿನ ನೀವು ನಿಮ್ಮೊಂದಿಗೆ ಅವಶ್ಯವಾಗಿ ಮಾತಾಡಿ. ಯಾವ ವ್ಯಕ್ತಿ ತನ್ನಷ್ಟಕ್ಕೆ ತಾನೇ ಪ್ರಶ್ನಿಸಿಕೊಳ್ಳುವುದನ್ನ ರೂಢಿಸಿಕೊಳ್ಳುತ್ತಾನೋ ಅಂತಹ ವ್ಯಕ್ತಿ ಹೆಚ್ಚು ಬುದ್ಧಿವಂತನಾಗುತ್ತಾನೆ ಎಂದು ಮನಶಾಸ್ತ್ರ ಹೇಳುತ್ತದೆ ಹಾಗಾಗಿ ನಿಮ್ಮಷ್ಟಕ್ಕೆ ನೀವೇ ಪ್ರಶ್ನಿಸಿಕೊಳ್ಳುವುದನ್ನ ಮೈಗೂಡಿಸಿಕೊಳ್ಳಿ ಎಂದು ಹೇಳುತ್ತಾ ಆರ್ಟಿಕಲ್ ಅಣ್ಣ ಮುಗಿಸುವುದಕ್ಕೂ ಮುಂಚೆ ಆ ನಾಲ್ಕು ಹವ್ಯಾಸಗಳು ಯಾವುವು ಎಂಬುದನ್ನು ಮತ್ತೊಮ್ಮೆ ನೋಡೋಣ..
1. ಕಡಿಮೆ ಮಾತನಾಡುವುದು ಹೆಚ್ಚು ಕೆಲಸ ಮಾಡುವುದು
2. ಸಮಯವನ್ನ ಸುದುಪಯೋಗ ಪಡಿಸಿಕೊಳ್ಳುವುದು.
3. ಪ್ರತಿದಿನವೂ ಹೊಸತನ ಕಲಿಯುವುದು.
4. ನಿಮ್ಮಷ್ಟಕ್ಕೆ ನೀವೇ ಮಾತನಾಡುವುದು.
ಸ್ನೇಹಿತರೆ ಇದು ಇವತ್ತಿನ ಆರ್ಟಿಕಲಿನ ವಿಶೇಷ. ಮತ್ತೊಂದು ಹೊಸ ವಿಷಯದೊಂದಿಗೆ ನಾನು ನಿಮ್ಮೊಂದಿಗೆ ಮುಂದಿನ ಆರ್ಟಿಕಲ್ ನಲ್ಲಿ ಸಿಗುತ್ತೇನೆ, ನಮಸ್ಕಾರ…
ಪ್ರತಿಯೊಬ್ಬರೂ ಓದಲೇಬೇಕಾದ ಗುರು ಶಿಷ್ಯರ ಅದ್ಭುತ ಕಥೆ!!
ಅದೊಂದು ಸಲ ಓರ್ವ ಗುರು ಮತ್ತು ಅವನ ಶಿಷ್ಯ ಅರಣ್ಯ ಮಾರ್ಗದಿಂದ ತಮ್ಮ ಹಳ್ಳಿಗೆ ಮರಳುತ್ತಿದ್ದರು. ಸುತ್ತಲೂ ಗಾಢವಾದ ಕತ್ತಲು ಆವರಿಸಿತ್ತು. ಆ ಸಮಯದಲ್ಲಿ ಶಿಷ್ಯನು ಗುರುವಿಗೆ ಹೇಳುತ್ತಾನೆ “ಗುರೂಜಿ ಇದೀಗ ಸೂರ್ಯಸ್ತವಾಗಿ ಘಾಢವಾದ ಅಮಾವಾಸ್ಯೆಯ ಕತ್ತಲು ಆವರಿಸಿಕೊಂಡಿದೆ. ಆದ್ದರಿಂದ ನಾವು ಈ ರಾತ್ರಿಯನ್ನು ಇಲ್ಲಿಯೇ ಆಸು ಪಾಸಿನಲ್ಲಿ ಕಳೆಯುವುದು ಕ್ಷೇಮಕರ” ಎಂದನು. ಅದಕ್ಕೆ ಗುರೂಜಿಯು ಸಮ್ಮತಿಸಿದರು. ಅವರು ಸಮೀಪದಲ್ಲಿಯೇ ಇದ್ದ ಚಿಕ್ಕ ಹಳ್ಳಿ ಒಂದರ ಮನೆಯ ಹತ್ತಿರ ಬಂದರು. ಗುರೂಜಿಯು ಆ ಮನೆಯ ಬಾಗಿಲನ್ನು ತಟ್ಟಿದಾಗ ಒಳಗಿನಿಂದ ಬಡ ವ್ಯಕ್ತಿ ಒಬ್ಬ ಬಂದು ಬಾಗಿಲು ತೆಗೆದನು. ಬಡ ವ್ಯಕ್ತಿಯನ್ನು ಕಂಡು ಗುರೂಜಿ ಹೇಳುತ್ತಾರೆ “ನಾವು ನಮ್ಮ ಹಳ್ಳಿಗೆ ಮರಳುತ್ತಿದ್ದೇವೆ. ಗಾಢವಾದ ಕತ್ತಲೆ ಆವರಿಸಿ ಕೊಂಡಿರುವುದರಿಂದ ಈ ರಾತ್ರಿ ಇಲ್ಲಿಯೇ ಕಳೆಯಬೇಕೆಂದು ನಿರ್ಧರಿಸಿದ್ದೇವೆ. ಇದೊಂದು ರಾತ್ರಿ ನಾವು ಇಲ್ಲಿ ಉಳಿದುಕೊಳ್ಳಬಹುದೇ?” ಎಂದು ಕೇಳಿದಾಗ ಆ ಬಡ ವ್ಯಕ್ತಿಯು ಅದಕ್ಕೆ ಸಮ್ಮತಿಯನ್ನು ನೀಡಿ ಅವರನ್ನ ಒಳಗೆ ಬರಮಾಡಿಕೊಂಡನು. ಗುರೂಜಿಯು ಒಳಗೆ ಬರುತ್ತಿದ್ದಂತೆ ಆ ಮನೆಯ ಪರಿಸ್ಥಿತಿಯನ್ನು ಕಂಡು ಈತ ಕಡುಬಡವನೆ ಇದ್ದಾನೆ ಎಂದು ಮನಗಂಡರು. ಅದಕ್ಕೆ ಗುರೂಜಿಯು ಆ ಕಡು ಬಡವನಿಗೆ “ನೀನು ಏನು ಕೆಲಸ ಮಾಡುತ್ತೀಯಾ” ಎಂದು ಕೇಳಿದರು. ಅದಕ್ಕೆ ಆ ವ್ಯಕ್ತಿಯು “ನನ್ನ ಬಳಿ ಸಾಕಷ್ಟು ಜಮೀನಿದೆ ಗುರೂಜಿ” ಎಂದನು. ಅದಕ್ಕೆ ಗುರೂಜಿಯು “ಅಷ್ಟು ಜಮೀನು ಇದ್ದಮೇಲೆ ನೀನ್ಯಾಕೆ ಹೀಗೆ ಬದುಕುತ್ತಿದ್ದೀಯಾ?” ಎಂದು ಕೇಳಿದರು. ಅದಕ್ಕೆ ಆತ “ನನ್ನ ಬಳಿ ಇರುವ ಅಷ್ಟು ಭೂಮಿಯು ಯಾವುದಕ್ಕೂ ಪ್ರಯೋಜನವಿಲ್ಲ. ಊರಿನ ಜನರೆಲ್ಲರೂ ಅದನ್ನು ಬರಡು ಭೂಮಿ ಎಂದು ಕರೆಯುತ್ತಾರೆ ಮತ್ತು ಅಲ್ಲಿ ಬೆಳೆಯನ್ನ ಬೆಳೆಯುವುದು ಮೂರ್ಖತನದ ಕೆಲಸ ಎಂದು ಆಡಿಕೊಳ್ಳುತ್ತಾರೆ” ಎಂದನು. ಅದಕ್ಕೆ ಗುರೂಜಿಯು “ಹಾಗಿದ್ದರೆ ನಿನ್ನ ಜೀವನೋಪಾಯಕ್ಕೆ ಏನು ಮಾಡುತ್ತಿದ್ದೀಯಾ?” ಎಂದು ಕೇಳಿದಾಗ ಆ ವ್ಯಕ್ತಿ ” ನನ್ನ ಬಳಿ ಒಂದು ಎಮ್ಮೆ ಇದೆ. ಅದರ ಮೇಲೆಯೇ ನನ್ನ ಇಡೀ ಮನೆ ನಡೆಯುತ್ತಿದೆ” ಎಂದನು ಇದೆಲ್ಲ ಸಂಭಾಷಣೆಯ ನಂತರ ಅವರೆಲ್ಲ ಮಲಗುತ್ತಾರೆ. ಮಧ್ಯರಾತ್ರಿಯ ಹೊತ್ತಿನಲ್ಲಿ ಗುರೂಜಿಯು ತನ್ನ ಶಿಷ್ಯನನ್ನು ಎಬ್ಬಿಸಿ ಹೇಳುತ್ತಾರೆ, ” ನಾವು ಸೂರ್ಯೋದಯಕ್ಕೂ ಮುಂಚೆ ಈ ಎಮ್ಮೆಯನ್ನು ಹೊಡೆದುಕೊಂಡು ನಮ್ಮ ಹಳ್ಳಿಗೆ ಹೋಗೋಣ” ಎಂದಾಗ, ಶಿಷ್ಯನು “ಗುರೂಜಿ ನೀವು ಮಾಡುತ್ತಿರುವುದು ಸರಿಯೇ? ಆ ಬಡ ವ್ಯಕ್ತಿಯ ಒಂದು ಹೊತ್ತಿನ ಊಟ ಈ ಎಮ್ಮೆಯ ಮೇಲೆ ನಿಂತಿದೆ ” ಎಂದಾಗ ಗುರೂಜಿಯು ಶಿಷ್ಯನ ಕಡೆಗೆ ಮುಗುಳ್ನಗೆಯಿಂದ ನೋಡಿ ಮುಂದೆ ಸಾಗಿದರು. ಮುಂದೆ 10 ವರ್ಷಗಳ ನಂತರ ಅದೇ ಗುರೂಜಿಯ ಶಿಷ್ಯನು ಈಗ ಬೆಳೆದು ದೊಡ್ಡ ಗುರೂಜಿಯಾಗಿದ್ದ ಅವನಿಗೆ ತನ್ನ ಗುರೂಜಿಯು ಹತ್ತು ವರ್ಷದ ಹಿಂದೆ ಮಾಡಿದ್ದ ಘಟನೆ ನೆನಪಾಗುತ್ತದೆ. ಆತ ಬಡ ವ್ಯಕ್ತಿ ಈಗ ಹೇಗಿದ್ದಾನೆ, ಅವನ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಆ ಹಳ್ಳಿಗೆ ಹೋದ. ಅವನು ಆ ಹಳ್ಳಿ ತಲುಪುತ್ತಿದ್ದಂತೆ ಈ ಹಿಂದೆ ಗುಡಿಸಲು ಇದ್ದ ಜಾಗದಲ್ಲಿ ಈಗ ಬೃಹತ್ ಐಶಾರಾಮಿ ಬಂಗಲೆಯೊಂದು ತಲೆಯೆತ್ತಿ ನಿಂತಿತ್ತು. ಆ ಬಂಗಲೆಯ ಮುಂದೆ ಇದ್ದ ಬರಡು ಭೂಮಿ ಈಗ ಹೂವು ಹಣ್ಣುಗಳಿಂದ ತುಂಬಿತ್ತು. ಅದೇ ಸಮಯದಲ್ಲಿ ಆ ಮನೆಯ ಮಾಲೀಕ ಹೊರ ಬರುತ್ತಾನೆ. ಈ ಶಿಷ್ಯನು ಆ ವ್ಯಕ್ತಿಯನ್ನು ದೂರಿನಿಂದಲೇ ಆತ ಬಡ ವ್ಯಕ್ತಿ ಎಂದು ಗುರುತಿಸಿ ಹೇಳುತ್ತಾನೆ ನಾನು ಯಾರೆಂದು ನಿನಗೆ ಗುರುತು ಸಿಕ್ಕಿದೆ ಈ ಹಿಂದೆ ನಾನು ಮತ್ತು ನನ್ನ ಗುರೂಜಿ ಒಂದು ರಾತ್ರಿ ಇಲ್ಲಿ ವಸತಿ ಇದ್ದುದ್ದು ನಿನಗೆ ನೆನಪಿದೆಯೇ ಎಂದಾಗ ಆ ವ್ಯಕ್ತಿ ಶಿಷ್ಯನನ್ನು ಗುರುತು ಹಿಡಿದು ಕೇಳುತ್ತಾನೆ, ” ಆ ರಾತ್ರಿ ನೀವೆಲ್ಲಿ ಹೋದಿರಿ? ಅದೇ ರಾತ್ರಿ ನನ್ನ ಎಮ್ಮೆ ಕಳೆದು ಹೋಯಿತು. ಹಾಗಾಗಿ ನನ್ನ ಬಳಿ ಬೇರೆ ದಾರಿ ಇರಲಿಲ್ಲ. ನಾನು ನನ್ನ ಬರಡು ಭೂಮಿಯಲ್ಲಿ ಮೈಮುರಿದು ದುಡಿಯಲು ಆರಂಭಿಸಿದೆ. ಸಾಕಷ್ಟು ಪರಿಶ್ರಮದ ನಂತರ ಅದರಲ್ಲಿ ಒಳ್ಳೆಯ ಇಳುವರಿ ಬರಲಾರಂಬಿಸಿತು. ಈಗ ನಾನು ಈ ಗ್ರಾಮದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದೇನೆ”. ಇದನ್ನು ಕೇಳಿದ ಶಿಷ್ಯನಿಗೆ ತನ್ನ ಗುರೂಜಿ ನೆನಪಾಗಿ ಕಣ್ಣು ತುಂಬಿ ಬಂದವು. ಶಿಷ್ಯನಿಗೆ ತನ್ನ ಗುರೂಜಿಯ ಮಾತು ಈಗ ಮನವರಿಕೆಯಾಗಿತ್ತು.
ಸ್ನೇಹಿತರೆ ಈ ಕಥೆಯ ಮೂಲಕ ನಮಗೆ ತಿಳಿದುಬರುವುದು ಏನೆಂದರೆ ನಮ್ಮಲ್ಲಿಯೂ ಅಗಾಧವಾದ ಸಾಮರ್ಥ್ಯ ಇದೆ. ಆದರೆ ಅದನ್ನು ಯಾವುದೋ ಒಂದು ಶಕ್ತಿ ಹಿಡಿದಿಟ್ಟುಕೊಂಡಿದೆ. ಆ ಶಕ್ತಿ ನಿಮ್ಮ ದುಶ್ಚಟ ಆಗಿರಬಹುದು. ನಿಮ್ಮ ನಿರ್ಲಕ್ಷತನ ಆಗಿರಬಹುದು, ಅಥವಾ ನಿಮ್ಮ ಸೋಮಾರಿತನವೇ ಆಗಿರಬಹುದು. ಆ ದುಷ್ಟ ಶಕ್ತಿಯನ್ನು ಕೊಡವಿಕೊಂಡು ಬಂದಾಗಲೇ ಯಶಸ್ಸಿನ ಶಿಖರ ನಿಮ್ಮ ಕಾಲಡಿ ಇರುತ್ತದೆ. ನಮಸ್ಕಾರ..