ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಭಾರತದ ಶೇಕಡಾ 60 ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿದೆ. ಅಲ್ಲದೇ ಕೃಷಿಯು ಗ್ರಾಮೀಣ ಭಾಗದ ಜನರ ಜೀವನಾಡಿ ಆಗಿದೆ. ಭಾರತ ಹಳ್ಳಿಗಳ ದೇಶ ಆದ್ದರಿಂದ, ಕೃಷಿಗೆ ಇಲ್ಲಿ ಪ್ರಾಚೀನ ಕಾಲದಿಂದಲೂ ಬಹಳ ಮಹತ್ವ ಇದೆ.
Thank you for reading this post, don't forget to subscribe!ಇದನ್ನೂ ಓದಿ: ಬೆಳೆ ಪರಿಹಾರ: ನಿಮ್ಮ ಪಹಣಿ ಪತ್ರ (ಉತಾರಿ) ಕ್ಕೆ ಮೊಬೈಲ್ ನಲ್ಲೇ ಆಧಾರ್ ಲಿಂಕ್ ಮಾಡಿ! ಲಿಂಕ್ ಮಾಡಲು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಇಷ್ಟು ಮಹತ್ವ ಹೊಂದಿರುವ ಭಾರತದ ಕೃಷಿ ಕ್ಷೇತ್ರವು ನೀರಾವರಿಗಾಗಿ ಮಳೆಯನ್ನು ಅತಿಯಾಗಿ ಅವಲಂಬಿಸಿದೆ. ಅದರಲ್ಲೂ ಜೂನ್ ತಿಂಗಳ ಮೊದಲ ವಾರದಲ್ಲಿ ಹಿಂದೂ ಮಹಾ ಸಾಗರದಿಂದ ಬೀಸುವ ಮುಂಗಾರು ಮಳೆ ಭಾರತದ ಪಾಲಿಗೆ ವರದಾನವೇ ಆಗಿದೆ.
ಇದನ್ನೂ ಓದಿ: ಬೆಳೆ ಪರಿಹಾರ ಹಣ : ಮೊಬೈಲ್ ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಚೆಕ್ ಮಾಡಿ !
ಆದರೆ ಇತ್ತಿಚೆಗೆ ಜಾಗತಿಕ ತಾಪಮಾನ ಹೆಚ್ಚಿದ್ದು, ಇದು ಮುಂಗಾರು ಮಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರ ಸಲುವಾಗಿ ಮುಂಗಾರು ಕೆಲವೊಮ್ಮೆ ತಡವಾಗಿ ಪ್ರವೇಶವಾದರೆ, ಇನ್ನೂ ಕೆಲವೊಮ್ಮೆ ಅಂದುಕೊಂಡದ್ದಕ್ಕಿಂತ ಮುಂಚೆಯೇ ಪ್ರವೇಶವಾಗುತ್ತಿದೆ. ಇದು ಬಿತ್ತನೆ ಕಾರ್ಯಕ್ಕೆ ಮತ್ತು ಬೆಳೆಯ ಬೆಳವಣಿಗೆಗೆ ತುಂಬಾ ಅಪಾಯಕಾರಿ ಆಗಿ ಪರಿಣಮಿಸಿದೆ. ಏಕೆಂದರೆ ಇದರಿಂದ ಬೆಳೆ ಹಾನಿಯಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಇದನ್ನೂ ಓದಿ: ಬೆಳೆ ಪರಿಹಾರ: 2ನೇ ಕಂತು ಹಣ ಜಮಾ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!
ಹಾಗಾಗಿ ಮುಂಗಾರು ಯಾವಾಗ ಬರುತ್ತದೆ ಎಂಬ ಮಾಹಿತಿ ರೈತರಿಗೆ ತಿಳಿದಿರುವುದು ಬಹಳ ಮುಖ್ಯ. ಅದಕ್ಕೆ ಅನುಗುಣವಾಗಿ ಬಿತ್ತನೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಹಾಯಕವಾಗಿ ಬೆಳೆಹಾನಿ ಆಗುವುದನ್ನು ತಡೆಯಬಹುದಾಗಿದೆ. ಈ ಅಂಕಣದಲ್ಲಿ ಈ ವರ್ಷದ ಮುಂಗಾರು ಪ್ರವೇಶದ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಇದನ್ನೂ ಓದಿ: ಬರ ಪರಿಹಾರ: ಗ್ರಾಮ ಪಂಚಾಯತಿ ಪ್ರಕಟಿಸಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ !
ಕರ್ನಾಟಕಕ್ಕೆ ಯಾವಾಗ ಪ್ರವೇಶಿಸಲಿದೆ ಮುಂಗಾರು?
ಭಾರತಿಯ ಹವಾಮಾನ ಇಲಾಖೆಯು ಈ ಬಾರಿಯ ಮುಂಗಾರು ಜೂನ್ 5 ಕ್ಕೆ ಕರ್ನಾಟಕಕ್ಕೆ ಪ್ರವೇಶ ಮಾಡಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಹಾಗಾಗಿ ಬಿತ್ತನೆ ಕಾರ್ಯಕ್ಕೆಮುಂದಾಗುತ್ತಿರುವ ರೈತರು ಜೂನ್ 5 ನೇ ತಾರೀಖಿನ ಒಳಗಾಗಿ ನಿಮ್ಮ ಹೊಲದ ನೆಲವನ್ನು ಹದ ಮಾಡಿಕೊಂಡು ಬಿತ್ತನೆಗೆ ತಯಾರಾಗಿ. ಯಾವ ರಾಜ್ಯಕ್ಕೆ ಯಾವ ದಿನಾಂಕದಂದು ಮುಂಗಾರು ಪ್ರವೇಶಿಸಲಿದೆ ಎಂಬುದರ ಬಗ್ಗೆ ಕೆಳಗೆ ನೀಡಲಾಗಿರುವ ಚಿತ್ರದಲ್ಲಿ ಮಾಹಿತಿ ಇದೆ, ನೋಡಿ.
ಇದನ್ನೂ ಓದಿ: ಬೆಳೆ ಪರಿಹಾರ ಹಣ : ಸರ್ವೇ ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಚೆಕ್ ಮಾಡಿ !
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M