WhatsApp Group                             Join Now            
   
                    Telegram Group                             Join Now            
Spread the love

ಆತ್ಮೀಯ ಸ್ನೇಹಿತರೇ ನಿಮಗೆಲ್ಲಾ ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಸ್ವಾಗತ,Krishimela four days in GKVK : ರೈತರಿಗೆ ಗುಡ್ ನ್ಯೂಸ್. ಹೌದು ಬೆಂಗಳೂರಿನ ಜಿಕೆವಿಕೆಯಲ್ಲಿ ಇದೇ ನವೆಂಬರ್ 13 ರಿಂದ 16 ರವರೆಗೆ ಕೃಷಿಮೇಳ ನಡೆಯಲಿದೆ. ಕೃಷಿಮೇಳದಲ್ಲಿ ಏನೇನು ಇರಲಿದೆ ರೈತರಿಗೆ ಏನೇನು ಮಾಹಿತಿ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನವೆಂಬರ್ 13 ರಿಂದ 16 ರವರೆಗೆ  ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಸಮೃದ್ಧ ಕೃಷಿ ವಿಕಸಿತ ಭಾರತ –ನೆಲ-ಜಲ,-ಬೆಳೆ ಎಂಬ ಘೋಷ ವಾಕ್ಯದಡಿ ಕೃಷಿ ಮೇಳ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಪ್ರವಾಸೋದ್ಯಮ ಎಂಬ ಹೊಸ ಪರಿಕಲ್ಪನೆಯೊಂದಿಗೆ ಈ ಬಾರಿಯ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಪಾರಂಪರಿಕ ಕೃಷಿ ಪದ್ಧತಿ, ದೈನಂದಿನ ಕೃಷಿ ಚಟುವಟಿಕೆಗಳು, ಗ್ರಾಮೀಣ ಕಲೆ ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ ತೊಡುಗೆ ಮುಂತಾದವುಗಳನ್ನು ನಗರವಾಸಿಗಳಿಗೆ ಪರಿಚಯಿಸಲಾಗುವುದು ಎಂದರು.

ಪ್ರವಾಸಿಗರನ್ನು ಕೃಷಿ ಜಮೀನಿಗೆ ಕರೆತರುವುದು ಮತ್ತು ಅವರಿಗೆ ಕೃಷಿ ಆಧಾರಿತ ಚಟುವಟಿಕೆಗಳನ್ನು ತೋರಿಸುವುದು ಮತ್ತು ಭಾಗವಹಿಸಲು ಅವಕಾಶ ನೀಡುವುದು. ಆಸಕ್ತರಿಗೆ ಪರಿಚಯಿಸುವ ಮೂಲಕ ಆದಾಯವನ್ನು ಕಂಡುಕೊಳ್ಳುವುದು ಕೃಷಿ ಪ್ರವಾಸೋದ್ಯಮದ ಉದ್ದೇಶವಾಗಿದೆ ಎಂದು ತಿಳಿಸಿದರು.

Krishimela four days in GKVK  ಕೃಷಿ ಮೇಳದಲ್ಲಿ ಏನೇನಿರಲಿದೆ

ಕೃಷಿ ಮೇಳದಲ್ಲಿ ಮೊದಲ ಬಾರಿಗೆ ಕೀಟ ವಿಸ್ಮಯ ವಿಶೇಷ ಪ್ರದರ್ಶನವನ್ನು ಆಯೋಸಿದ್ದು, ಮಕ್ಕಳಿಗೆ ಮತ್ತು ಕೃಷಿ ಆಸಕ್ತರಿಗೆ ಆಕರ್ಷಣೆ ಆಗಲಿದೆ. ಭಾರತೀಯ ಸ್ಥಳೀಯ ಅಲಂಕಾರಿಕ ಮೀನುಗಳು, ಸಿಹಿನೀರು ಮುತ್ತಿನ ಕೃಷಿ ಹಾಗೂ ಸುಧಾರಿತ ತಳಿಗಳ ಪ್ರದರ್ಶನ ಮತ್ತು ಮಾರಾಟವನ್ನು ಒಳಗೊಂಡಿರುವ  ಮತ್ಸ್ಯ ಲೋಕ ಅನಾವರಣಗೊಳಿಸಲಾಗುತ್ತದೆ.

ಮೇಳದಲ್ಲಿ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ನಾಲ್ಕು ಹೊಸ ತಳಿಗಳಾದ ಧಾನ್ಯ ಜೋಳ, ಕಪ್ಪು ಅರಿಶಿನ ಮತ್ತ ಅರಿಶಿನ, ಸೂರ್ಯಕಾಂತಿ ಮತ್ತು ಹರಳು ಬೆಳೆಯಲ್ಲಿ ತಲಾ ಒಂದರಂತೆ ಎರಡು ಸಂಕರಣ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಬಹುಪಯೋಗಿ ಆಕರ್ಶಕ ಮತ್ತು ದುಬಾರಿ ಬೆಲೆಯ ಜಾನುವಾರುಗಳು, ವಿನೂತನ ತಳಿಗಳು, ಸಣ್ಣ ಮತ್ತು ಬೃಹತ್ ಯಂತ್ರೋಪಕರಣಗಳು ಮೇಳಕ್ಕೆ ಬರಲು ಸಜ್ಜಾಗಿವೆ.

ಈ ಬಾರಿ ಸೂರ್ಯಕಾಂತಿ, ಮೇವಿನ ಜೋಳ, ಅರಿಶಿಣ, ಹರಳು ಸೇರಿದಂತೆ ಐದು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಬೆಳೆಗಳನ್ನು ತಾಕುಗಳಲ್ಲಿ ಬೆಳೆಸಲಾಗಿದೆ. ಜತೆಗೆ ಹಲವು ಕೃಷಿಬೆಳೆಗಳು, ಹೂ ಕಾಯಿ, ತೆನೆಗಳಿಂದ ನಳನಳಿಸುತ್ತಿವೆ. ಹೆಚ್ಚೆಳ್ಳು, ಸಿರಿಧಾನ್ಯಗಳು, ಏರೋಬಿಕ್ ಭತ್ತ, ಅವರೆ, ಮುಸುಕಿನ ಜೋಳ, ಹರಳು, ತರಕಾರಿ ಸೊಪ್ಪು ಹೀಗೆ ಹಲವು ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಕಣ್ತುಂಬಿಕೊಳ್ಳಬಹುದು.

ಸುಧಾರಿತ ಕೃಷಿ ಪದ್ಧತಿಗಳು, ನೂತನ ತಳಿಗಳು, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ಮಣ್ಣುರಹಿತ ಕೃ ಷಿ, ಔ ಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ, ಸಮಗ್ರ ಬೇಸಾಯ ಪದ್ಧತಿಗಳು, ತೋಟಗಾರಿಕೆ ಬೆಳೆಗಳು, ಸಿರಿಧಾನ್ಯಗಳು, ಕೀಟ ಹತೋಟಿ, ಮಾರುಕಟ್ಟೆ ನೈಪುಣ್ಯತೆ, ಮಣ್ಣು ಪರೀಕ್ಷೆ, ಹನಿ ಮತ್ತು ತುಂತುರು ನೀರಾವರಿ, ಮಳೆ ನೀರಿನ ಕೊಯ್ಲು, ಕೃಷಿ ಯಂತ್ರೋಪಕರಣಗಳು, ಪಶು ಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ, ರೈತರಿಗಾಗಿ ರೈತರಿಂದ ಚರ್ಚೆ ಹಾಗೂ ರೈತರಿಗೆ ತಜ್ಞರಿಂದ ಸಲಹೆಯಂತಹ ಹಲವು ಬಗೆಯ ಆಕರ್ಶಣೆಗಳು, ಪ್ರಾತ್ಯಕ್ಷಿಗಳು ಹಾಗೂ ಮಾಹಿತಿಯು ಕೃಷಿ ಮೇಳದಲ್ಲಿ ಲಭ್ಯವಿರಲಿದೆ.

ಹೊಸ ತಳಿಗಳು

ಒಣ ಬೇಸಾಯಕ್ಕ ಸೂಕ್ತವಾದ ಅಧಿಕ ಇಳುವರಿ ನೀಡುವ ಬಿಸಿಎಚ್ -162 ಹರಳು ತಳಿಯನ್ನೂ ವಿವಿ ಸಂಶೋಧಿಸಿದೆ. ಹೆಕ್ಟೇರ್ ಗೆ 15 ರಿಂದ 20 ಕ್ವಿಂಟಾಲ್ ಇಳುವರಿ ನೀಡಲಿದ್ದು, ಶೇ. 47 ರಿಂದ 48 ರಷ್ಟು ಎಣ್ಣೆ ಅಂಶ ಹೊಂದಿದೆ. ಪ್ರಥಮ ಗೊಂಚಲು ಮಾಗಲು ಸುಮಾರು 95 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಹಿಂದಿನ ಐಸಿಎಚ್ 66 ತಳಿಯು ಎಕರೆಗೆ 5 ರಿಂದ 6 ಕ್ವಿಂಟಾಲ್ ಇಳುವರಿ ನೀಡುತ್ತಿತ್ತು. ಆದರೆ ಬಿಸಿಎಚ್ 162 ಹರಳು ತಳಿಯು ಎಕರೆಗೆ 6 ರಿಂದ 8 ಕ್ವಿಂಟಾಲ್ ಇಳುವರಿ ನೀಡಲಿದೆ. ಹೀಗಾಗಿ ನೀರಾವರಿ ವ್ಯವಸ್ಥೆಯಿಲ್ಲದೆ ರೈತರು ಹರಳು ಬೆಳೆಯಬಹುದು

ಓದುಗರಲ್ಲಿ ವಿನಂತಿ,

      
                    WhatsApp Group                             Join Now            
   
                    Telegram Group                             Join Now            

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t

By

Leave a Reply

Your email address will not be published. Required fields are marked *