WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೇ 2022 ಕನ್ನಡದ ಸ್ಯಾಂಡಲ್ವುಡ್ ಮಟ್ಟಿಗೆ ಯಶಸ್ಸನ್ನ ತಂದುಕೊಟ್ಟ ವರ್ಷ. ಏಕೆಂದರೆ ಕಳೆದ ವರ್ಷದಲ್ಲಿ ಕನ್ನಡದ KGF-2, ಕಾಂತಾರ, ಚಾರ್ಲಿ 777 ನಂತಹ ಮುಂತಾದ ಕನ್ನಡದ ಸಿನೆಮಾಗಳು ಇಡಿ ಭಾರತದ್ಯಾದಂತ ಅಷ್ಟೇ ಅಲ್ಲದೇ ಜಗತ್ತಿನ ಗಮನವನ್ನು ಸೆಳೆದವು. ಹಾಗಾದರೆ ಇವತ್ತಿನ ಈ ಅರ್ಟಿಕಲ್ ನಲ್ಲಿ ನಾವು ಮುಂಬರಲಿರುವ ಕನ್ನಡದ ಟಾಪ್ 10 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನೋಡೋಣ ಬನ್ನಿ..

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

1. ಮಾರ್ಟೀನ್ : ಧ್ರುವ ಸರ್ಜಾ ನಟನೆಯ ಆಕ್ಷನ್ ಥ್ರಿಲ್ಲರ್ ಮೂವಿ ಇದಾಗಿದ್ದು ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಗುವ ಸಂಭವ ಇದೆ.

2. ಘೋಷ್ಟ (Ghost): ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಮೊಟ್ಟಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ಇದು ಕೂಡ ವರ್ಷದ ಅಂತ್ಯದಲ್ಲಿ ತೆರೆಕಾಣುವ ಸಂಭವ ಇದೆ.

3. ಬಘಿರ : ಪ್ರಶಾಂತ್ ನೀಲ್ ನಿರ್ದೇಶನದ ಶ್ರೀಮುರುಳಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ಇದು ಕೂಡ ವರ್ಷಾಂತ್ಯದಲ್ಲಿ ತೆರೆಕಾಣಲಿದೆ.

4. ರಿಚರ್ಡ್ ಅಂತೋನಿ : ರಕ್ಷಿತ್ ಶೆಟ್ಟಿ ಅವರ ಅಭಿನಯದ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಇದು ಕೂಡ ವರ್ಷದ ಅಂತ್ಯದಲ್ಲಿ ತೆರೆಕಾಣುವ ಸಂಭವ ಇದೆ.

5. ಯು ಐ : ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಮತ್ತು ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ಇದು ಕೂಡ ವರ್ಷದ ಅಂತ್ಯದಲ್ಲಿ ತೆರೆಕಾಣುವ ಸಂಭವ ಇದೆ.

      
                    WhatsApp Group                             Join Now            
   
                    Telegram Group                             Join Now            

6. ಸಲಾರ್ : ಪ್ರಶಾಂತ್ ನೀಲ್ ನಿರ್ದೇಶನದ ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು ಸೆಪ್ಟೆಂಬರ್ ನಲ್ಲಿ ಚಿತ್ರ ತೆರೆಕಾಣಲಿದೆ.

7. ಕೇಡಿ : ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ನಟನೆಯ ಆಕ್ಷನ್ ಥ್ರಿಲರ್ ಸಿನಿಮಾ ಇದಾಗಿದ್ದು ಇದು ಕೂಡ ವರ್ಷದ ಅಂತ್ಯದಲ್ಲಿ ತೆರೆಕಾಣುವ ಸಂಭವ ಇದೆ.

8. AA04: ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹಾಲಿವುಡ್ ರೀತಿಯ ಚಿತ್ರ ಇದಾಗಿದ್ದು ಇದು ಕೂಡ ವರ್ಷದ ಅಂತ್ಯದಲ್ಲಿ ತೆರೆಕಾಣುವ ಸಂಭವ ಇದೆ.

9. ಕಾಂತಾರ-2 : ರಿಷಬ್ ಶೆಟ್ಟಿ ಅಭಿನಯದ ಹಾಗೂ ನಿರ್ದೇಶನದ ಈ ಸಿನಿಮಾ ಕಾಂತರದ ಮುಂದುವರೆದ ಭಾಗವಾಗಿದೆ. ಇದು ಕೂಡ ವರ್ಷದ ಅಂತ್ಯದಲ್ಲಿ ತೆರೆಕಾಣುವ ಸಂಭವ ಇದೆ.

10. KGF-3: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಇದಾಗಿದ್ದು 2025 ಕ್ಕೆ ತೆರೆಕಾಣುವ ಸಂಭವ ಇದೆ.

11.ಕಾಟೇರಾ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಇದಾಗಿದ್ದು,ಇದು ಕೂಡ ವರ್ಷಂತ್ಯಕ್ಕೆ ತೆರೆಕಾಣುವ ಸಂಭವವಿದೆ.

12. ಮ್ಯಾಕ್ಸ್ : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಈ ಸಿನಿಮಾ ಆಕ್ಷನ್ ಥ್ರಿಲರ್ ಆಗಿದ್ದು ಇದು ಕೂಡ ವರ್ಷದ ಅಂತ್ಯದಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ….

ಸಮುದ್ರದಲ್ಲಿ ಹೇಗೆ ಸೇತುವೆಯನ್ನು ನಿರ್ಮಿಸುತ್ತಾರೆ ಗೊತ್ತಾ?……ತಪ್ಪದೇ ಓದಿ !

ಸ್ನೇಹಿತರೆ, ನೀವು ಯಾವುದಾದರೂ ನದಿಯ ಮಾರ್ಗವಾಗಿ ಅಥವಾ ಸಮುದ್ರ ಮಾರ್ಗವಾಗಿ ಪ್ರಯಾಣ ಮಾಡುವ ಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಕಾಡಿರಬಹುದು ಅದು ಏನೆಂದರೆ ಹೇಗೆ ಇಂಜಿನಿಯರ್ ಗಳು ಇಷ್ಟು ಆಳವಾದ ನೀರಿನಲ್ಲಿ ಸೇತುವೆಯನ್ನು ನಿರ್ಮಿಸುತ್ತಾರೆ ಎಂದು ಮತ್ತು ಸುತ್ತಲೂ ನೀರಿದ್ದರೂ ಹೇಗೆ ನೀರಿನ ಮಧ್ಯೆ ಸಿಮೆಂಟ್ ಪಿಲ್ಲರ್ ಗಳನ್ನು ನಿರ್ಮಿಸುತ್ತಾರೆ ಎಂದು. ಹಾಗಾದರೆ ಬನ್ನಿ ಸ್ನೇಹಿತರೆ ಇವತ್ತಿನ ಈ ಆರ್ಟಿಕಲ್ ನಲ್ಲಿ ಸಮುದ್ರ ಅಥವಾ ನದಿ ಮಧ್ಯದಲ್ಲಿ ಸೇತುವೆ ಹೇಗೆ ನಿರ್ಮಿಸುತ್ತಾರೆ ಎಂಬುದನ್ನ ತಿಳಿದುಕೊಳ್ಳೋಣ.
ಸ್ನೇಹಿತರೆ ಯಾವುದೇ ಒಂದು ಬ್ರಿಡ್ಜ್ ಕಟ್ಟಬೇಕಾದರೆ ಅದಕ್ಕೆ ಪ್ರಮುಖವಾಗಿ ಬೇಕಾಗುವುದು ಅದರ ಆಧಾರ ಸ್ತಂಭಗಳು. ಏಕೆಂದರೆ ಭಾರಿ ಗಾತ್ರದ ವಾಹನಗಳು ಬ್ರಿಜ್ ಮೇಲೆ ಚಲಿಸುವಾಗ ಅದರ ಭಾರವೆಲ್ಲ ಈ ಆಧಾರ ಸ್ತಂಭಗಳ ಮೇಲೆಯೇ ಬೀಳುತ್ತದೆ. ಹಾಗಾಗಿ ಈ ಆಧಾರ ಸ್ಥಂಭಗಳು ಮಜಬೂತಾಗಿದ್ದಷ್ಟು ಬ್ರಿಜ್ನ ಆಯಸ್ಸು ಹೆಚ್ಚಾಗುತ್ತೆ. ಹಾಗಾಗಿ ಯಾವುದೇ ಬ್ರಿಡ್ ನಿರ್ಮಿಸಬೇಕಾದರೆ ಇಂಜಿನಿಯರ್ ಗಳು ಎದುರಿಸುವ ಅತಿ ದೊಡ್ಡ ಚಾಲೆಂಜ್ ಎಂದರೆ ಹೇಗೆ ಬ್ರಿಡ್ಜ್ ನ ಆಧಾರ ಸ್ಥಂಭಗಳನ್ನು ಸಮುದ್ರ ಮಧ್ಯದಲ್ಲಿ ನಿಲ್ಲಿಸುವುದು ಎಂಬುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಇಂಜಿನಿಯರ್ ಗಳು ವಿವಿಧ ರೀತಿಯ ತಾಂತ್ರಿಕತೆಯನ್ನು ಕಂಡುಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು ಅಂದ್ರೆ ಕಾಪರ್ ಡ್ಯಾಮ್.
ಕಾಪರ್ ಡ್ಯಾಮ್ ಎಂಬುದು ಹಲವು ಸ್ಟೀಲ್ ಪ್ಲೇಟ್ ಗಳಿಂದ ಮಾಡಲ್ಪಟ್ಟ ವೃತ್ತಾಕಾರದ ರಚನೆಯಾಗಿರುತ್ತದೆ ಉದಾಹರಣೆಗೆ ನಾವು ಮನೆ ಕಟ್ಟುವಾಗ ಕಾಂಕ್ರೀಟ್ ಹಾಕಲು ಅಥವಾ ಸ್ಲಾಬ್ ಹಾಕಲು ಬಳಸುತ್ತೆವಲ್ಲ ಅದೇ ಸ್ಟೀಲ್ ಪ್ಲೇಟ್ ಗಳನ್ನು ಜೋಡಿಸಿ ಕಾಪರ್ ಡ್ಯಾಮ್ ಅನ್ನು ನಿರ್ಮಿಸುತ್ತಾರೆ. ನೀರಿನ ಆಳ ಮತ್ತು ಕಂಬದ ಗಾತ್ರದ ಮೇಲೆ ವಿವಿಧ ರೀತಿಯ ಕಾಪರ್ ಡ್ಯಾಮ್ಗಳನ್ನು ಮಾಡುತ್ತಾರೆ. ಅವುಗಳನ್ನ ಅವಶ್ಯಕತೆಗೆ ತಕ್ಕಂತೆ ವೃತ್ತಾಕಾರ ಅಥವಾ ಆಯತಾಕಾರದಲ್ಲಿ ರಚನೆ ಮಾಡಲಾಗಿರುತ್ತದೆ. ದೊಡ್ಡ ಕ್ರೇನ್ ಗಳ ಸಹಾಯದಿಂದ ಈ ಕಾಪರ್ ಡ್ಯಾಮ್ ಅನ್ನು ನೀರಿನಲ್ಲಿ ಹಡಗುಗಳ ಸಹಾಯದಿಂದ ನಿಧಾನವಾಗಿ ಕೆಳಗೆ ಬಿಡಲಾಗುತ್ತದೆ. ನಂತರ ದೊಡ್ಡ ಮಷೀನ್ ಸಹಾಯದಿಂದ ಕಾಪರ್ ಡ್ಯಾಮ್ ಅನ್ನು ಬಲವಾಗಿ ಬಡಿದು ನೀರಿನ ಅಲೆಗಳಿಗೆ ಅಲುಗಾಡದ ಹಾಗೆ ಸೆಟ್ ಮಾಡಲಾಗುತ್ತದೆ.
ಇದಾದ ನಂತರ ಮೋಟಾರ್ ಮತ್ತು ಪಂಪನ ಸಹಾಯದಿಂದ ಕಾಪರ್ ಡ್ಯಾಮ್ ನ ಒಳಗಡೆ ಇರುವ ನೀರನ್ನು ಹೊರಗೆ ತೆಗೆಯಲಾಗುತ್ತದೆ. ಇದರಿಂದಾಗಿ ಇದರ ಒಳಭಾಗ ಖಾಲಿ ಆಗುವುದರ ಜೊತೆಗೆ ಒಣ ನೆಲ ನಮಗೆ ಸಿಗುತ್ತದೆ. ಹೀಗೆ ಖಾಲಿಯಾದ ಜಾಗದಲ್ಲಿ ಕಾಂಕ್ರೀಟ್ ಮತ್ತು ಸ್ಟೀಲ್ ಬಳಸಿ ಪಿಲ್ಲರ್ ಗಳನ್ನು ನಿರ್ಮಿಸಲಾಗುತ್ತದೆ. ನಂತರ ಈ ಪಿಲ್ಲರ್ ಗಳು ಒಣಗಿದ ಮೇಲೆ ಈ ಕಾಪರ್ ಡ್ಯಾಮನ್ನು ತೆಗೆಯಲಾಗುತ್ತದೆ. ಹೀಗೆ ನದಿಗಳಲ್ಲಿ ಪಿಲ್ಲರ್ ಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲೂ ಕಾಪರ್ ಡ್ಯಾಮ್ ಅನ್ನು ಬಳಸಲಾಗುವುದಿಲ್ಲ. ಉದಾಹರಣೆಗೆ ಆಳವಾದ ಸಮುದ್ರಗಳಲ್ಲಿ ಬ್ರಿಜ್ ಅನ್ನು ನಿರ್ಮಿಸಲು ಬೇರೊಂದು ವಿಧಾನವನ್ನ ಬಳಸಲಾಗುತ್ತದೆ, ಅದರ ಹೆಸರು ಬ್ಯಾಟರಡ್ ಫೈಲ್ (Battered Piles).
ಈ ವಿಧಾನದಲ್ಲಿ ದೊಡ್ಡ ದೊಡ್ಡ ವಿಶಾಲವಾದ ಪೈಪುಗಳನ್ನ ಬಳಸಲಾಗುತ್ತದೆ. ನೀರಿನ ಆಳದ ಮೇಲೆ ಈ ಪೈಪುಗಳ ಎತ್ತರ ಅವಲಂಬಿತ ಆಗಿರುತ್ತದೆ. ಇಂತಹ ವಿಶಾಲವಾದ ಪೈಪುಗಳನ್ನು ದೊಡ್ಡ ಹಡಗುಗಳ ಮೂಲಕ ಬ್ರಿಡ್ಜ್ ನಿರ್ಮಿಸಬೇಕಾದ ಸ್ಥಳಕ್ಕೆ ಸಾಗಿಸಲಾಗುತ್ತದೆ. ನಂತರ ಮಶೀನ ಸಹಾಯದಿಂದ ಇದನ್ನು ನೇರವಾಗಿಸಿ ನಿಧಾನವಾಗಿ ಸಮುದ್ರದ ಆಳಕ್ಕೆ ಬಿಡಲಾಗುತ್ತದೆ. ನಂತರ ದೊಡ್ಡ ಮಶೀನನಿಂದ ಬಡಿದು ಕಾಂಕ್ರೀಟ್ ಹಾಕಿ ಬಂದೋಬಸ್ತ್ ಮಾಡಲಾಗುತ್ತದೆ. ಹೀಗೆ ಬಂದೋಬಸ್ತ್ ಮಾಡಲಾದ ಈ ಪೈಪು ಯಾವ ಚಂಡಮಾರುತದ ಅಲೆಗೂ ಮಿಸುಕುವುದಿಲ್ಲ. ಹೀಗೆ ಸಮುದ್ರದ ಆಳದಲ್ಲಿ ಬಲಿಷ್ಠವಾದ ಬ್ರಿಡ್ಜ್ ನ ಕಂಬಗಳು ತಯಾರಾಗುತ್ತವೆ. ಹೀಗೆ ನಿರ್ಮಾಣಗೊಂಡ ಬಲಿಷ್ಠವಾದ ಪಿಲ್ಲರ್ ಗಳ ಮೇಲೆ ರಸ್ತೆ ನಿರ್ಮಾಣ ಕಾರ್ಯ ಶುರು ಮಾಡಲಾಗುತ್ತದೆ. ರಸ್ತೆ ನಿರ್ಮಿಸಲು ದೊಡ್ಡ ದೊಡ್ಡ ಬ್ಲಾಕ್ ಗಳನ್ನು ಪರಸ್ಪರ ಸ್ಟೀಲಿನೊಂದಿಗೆ ಜೋಡಿಸಲಾಗುತ್ತದೆ. ಹೀಗೆ ಜೋಡಿಸಲಾದ ಬ್ಲಾಕ್ ಗಳ ಮೇಲೆ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಈ ರೀತಿಯಾಗಿ ಅದ್ಭುತವಾದ ಸೇತುವೆ ಒಂದು ಜನ ಸಂಪರ್ಕಕ್ಕಾಗಿ ತೆರೆದುಕೊಳ್ಳುತ್ತದೆ.

By

Leave a Reply

Your email address will not be published. Required fields are marked *