WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೇ ಇಸ್ರೋ ಚಂದ್ರನ ಅಂಗಳಕ್ಕೆ ಕಾಲಿಟ್ಟು ಯಾರು ಇಳಿಯದ ದಕ್ಷಿಣ ಧ್ರುವದಲ್ಲಿ ಇಳಿದು ಅಲ್ಲಿರುವ ಖನಿಜಗಳ ಕುರಿತು ಮಾಹಿತಿಯನ್ನು ಜಗತ್ತಿಗೆ ನೀಡಿದ್ದು ನಿಮಗೆಲ್ಲ ಗೊತ್ತಿರುವಂತದ್ದೇ.. ಆದರೆ ನಿಮಗೆ ಗೊತ್ತಾ 2035 ರ ವೇಳೆಗೆ ಇಸ್ರೋ ಕೂಡ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಜೊತೆ ಸೇರಿ ಅಂತರಿಕ್ಷದಲ್ಲಿ ಭಾರತದ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಹಾಗದರೆ ಏನಿದು ಅಂತರಿಕ್ಷ ಬಾಹ್ಯಾಕಾಶ ಕೇಂದ್ರ? ಇದರಿಂದ ಇಸ್ರೋಗೆ ಆಗಲಿರುವ ಲಾಭಗಳೇನು? ಮುಂತಾದ ಪ್ರಶ್ನೆಗಳಿಗೆ ಈ ಆರ್ಟಿಕಲ್ ನಲ್ಲಿ ಉತ್ತರ ತಿಳಿದುಕೊಳ್ಳೋಣ ಬನ್ನಿ..

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಏನಿದು ಅಂತರಿಕ್ಷ ಬಾಹ್ಯಾಕಾಶ ಕೇಂದ್ರ ?

ಸ್ನೇಹಿತರೇ ಇದೊಂದು ವಿಜ್ಞಾನ ಪ್ರಯೋಗ ಶಾಲೆಯಾಗಿದ್ದು, ಇದನ್ನು ಅಂತರಿಕ್ಷದ ನಿರ್ವಾತದಲ್ಲಿ ಸ್ಥಾಪಿಸಲಾಗುತ್ತದೆ. ಇದು ಕೂಡ ಭೂಮಿಯ ಸುತ್ತ ಉಪಗ್ರಹಗಳಂತೆ ಸುತ್ತುತ್ತಿರುತ್ತದೆ. ಇಲ್ಲಿಗೆ ವಿಜ್ಞಾನಿಗಳನ್ನು ಕಳುಹಿಸಿ ಬಾಹ್ಯಾಕಾಶದ ಕುರಿತು ಅಧ್ಯಯನ ಮಾಡಲಾಗುತ್ತದೆ. ಪ್ರಸ್ತುತ ನಾಸಾ ಮತ್ತು ಯುರೋಪಿಯನ್ ಒಕ್ಕೂಟಗಳು ಸಹಯೋಗದಲ್ಲಿ ಸ್ಥಾಪಿಸಲಾಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (International Space Station) ಮಾತ್ರ ಅಂತರಿಕ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಯಾಕೆ ಇದು ಸುದ್ದಿಯಲ್ಲಿದೆ?

ಇತ್ತಿಚೆಗೆ ನಾಸದ ಅಧ್ಯಕ್ಷರಾದ ಬಿಲ್ ನೆಲ್ಸನ್ ಅವರು ಭಾರತಿಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಆಯ್ಕೆ ಮಾಡುವ ಒಬ್ಬ ಭಾರತಿಯ ವಿಜ್ಞಾನಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸುವುದಾಗಿ ಘೋಷಿಸಿದ್ದಾರೆ. ಇಸ್ರೋ ಮುಂದಿನ ವರ್ಷ ಕೈಗೊಳ್ಳಲಿರುವ ಗಗನಯಾನ ದೃಷ್ಟಿಯಿಂದ ಈ ಘೋಷಣೆ ಮಹತ್ವದ್ದಾಗಿದ್ದು, ಭಾರತ ಕೂಡ 2035 ರ ವೇಳೆಗೆ ತನ್ನದೇ ಆದ ಸ್ವಂತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಲು ಈ ಅನುಭವ ಸಹಕಾರಿ ಆಗಲಿದೆ. ಇಷ್ಟೇ ಅಲ್ಲದೆ ನಾಸಾ ಇಸ್ರೋಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲು ಎಲ್ಲಾ ರೀತಿಯ ತಂತ್ರಜ್ಞಾನ ಸಹಕಾರವನ್ನು ನೀಡಲು ತಯಾರಿದೆ ಎಂದು ಕೂಡ ನಾಸಾ ಹೇಳಿದೆ.

ಸ್ನೇಹಿತರೇ ಅಂದು ಕೊಂಡಂತೆ ಎಲ್ಲಾ ನಡೆದರೆ ಭಾರತವು 2035 ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಹೊಂದಲಿದ್ದು ಇದರ ಸಹಾಯದಿಂದ ಮತ್ತಷ್ಟು ಬಾಹ್ಯಾಕಾಶದ ಅಧ್ಯಯನಕ್ಕೆ ಇಂಬು ಸಿಗಲಿದೆ. ಅಲ್ಲದೆ ಮುಂದೆ ಬಾಹ್ಯಾಕಾಶ ಪ್ರವಾಸಕ್ಕೂ ಇದು ನಿಲ್ದಾಣವಾಗಿ ಕೆಲಸ ಮಾಡಲಿದೆ.

      
                    WhatsApp Group                             Join Now            
   
                    Telegram Group                             Join Now            

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *