ಸ್ನೇಹಿತರೇ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಖ್ಯಾತಿ ಹೊಂದಿರುವ ಭಾರತದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಬರೋಬ್ಬರಿ 24 ಕೋಟಿ ರೂಪಾಯಿಯ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಆ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿಯೇ ಯಾರು ಪಡೆಯದ ಅತೀ ಹೆಚ್ಚು ಸಂಭಾವನೆಯನ್ನು ಪಡೆದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಜಿದ್ದಿಗೆ ಬಿದ್ದಂತೆ ಒಟ್ಟು 24 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ.
Thank you for reading this post, don't forget to subscribe!ಇನ್ನು ಸ್ಟಾರ್ಕ್ ಖರೀದಿಸುವುದಕ್ಕಿಂತ ಮುಂಚೆ ಇನ್ನೋರ್ವ ಆಸ್ಟ್ರೇಲಿಯಾದ ಆಲ್ರೌಂಡರ್ ಆದ ಪ್ಯಾಟ್ ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಬಾದ್ ತಂಡವು 20.4 ಕೋಟಿ ರೂಪಾಯಿ ಕೊಟ್ಟು ಖರೀದಿಸಿತ್ತು. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನ್ಯೂಜಿಲೆಂಡ್ ಆಟಗಾರ ಡೇರಿಲ್ ಮಿಚೆಲ್ ಅವರನ್ನು 14 ಕೋಟಿ ಕೊಟ್ಟು ಖರಿದೀಸಿತ್ತು. ಒಟ್ಟಾರೆ ವಿಶ್ವದ ಚಿನ್ನದ ಮೊಟ್ಟೆ ಇಡುವ ಕ್ರಿಕೆಟ್ ಲೀಗ್ ಎಂದೇ ಖ್ಯಾತಿ ಹೊಂದಿರುವ ಭಾರತದ ಐಪಿಎಲ್ ಸ್ಟಾರ್ ಆಟಗಾರರ ಮೇಲೆ ಹಣದ ಮಳೆ ಸುರಿಸಿ ಅದರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.