ಸ್ನೇಹಿತರೆ ಜಗತ್ತಿನ ಅತಿ ಶ್ರೀಮಂತ ಎರಡನೇ ಕ್ರೀಡೆಯಾದ ಐಪಿಎಲ್, ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಶುರುವಾಗಿದ್ದು ಮತ್ತೆ ತನ್ನ ಭರ್ಜರಿ ಆಟದಿಂದ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ವರ್ಷದ ಐಪಿಎಲ್ ನ ಒಟ್ಟು ಮೌಲ್ಯ 10 ಮಿಲಿಯನ್ ಡಾಲರ್ ಆಗಿದೆ ಅಂದರೆ ಬರೋಬ್ಬರಿ 80,000 ಕೋಟಿ ರೂಪಾಯಿ. ಇನ್ನು ಪ್ರಥಮ ಸ್ಥಾನದಲ್ಲಿ 16 ಬಿಲಿಯನ್ ಡಾಲರ್ ನೊಂದಿಗೆ ನ್ಯಾಷನಲ್ ಫುಟ್ಬಾಲ್ ಲೀಗ್ ಇದೆ. ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೆ ಇದ್ದು ಇದರಿಂದಾಗಿ ಐಪಿಎಲ್ ಗಳಿಕೆಯಲ್ಲಿ ತನ್ನ ಹಿಂದಿನ ದಾಖಲೆಗಳನ್ನು ಎಲ್ಲಾ ಮುರಿದು ಚಿನ್ನದ ಮೊಟ್ಟೆ ಇಡುವ ವಿಶ್ವದ ಶ್ರೀಮಂತ ಲೀಗ್ ಎಂಬ ಹೆಗ್ಗಳಿಕೆಯೊಂದಿಗೆ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದೆ. ಸ್ನೇಹಿತರೆ ಇವತ್ತಿನ ಈ ಆರ್ಟಿಕಲ್ ನಲ್ಲಿ ಐಪಿಎಲ್ ನ ಎಲ್ಲಾ ತಂಡಗಳ ಮಾಲೀಕರು ಯಾರು ಮತ್ತು ತಂಡದಲ್ಲಿ ಅವರ ಪಾಲು ಎಷ್ಟು ಉಳಿದವರ ಪಾಲು ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.
1. Chennai Super Kings:
ಸ್ನೇಹಿತರೆ ಇಡೀ ಐಪಿಎಲ್ ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಒಡೆತನದಲ್ಲಿದೆ. ಇದರ ಮಾಲಿಕತ್ವವು ಭಾರತದ ಪ್ರಮುಖ ಸಿಮೆಂಟ್ ತಯಾರಕರಲ್ಲಿ ಒಬ್ಬರಾದ ಇಂಡಿಯಾ ಸಿಮೆಂಟ್ಸ್ ಅವರ ಬಳಿ ಇದೆ. ಐಪಿಎಲ್ ಆರಂಭದಿಂದಲೂ ಸಿಎಸ್‌ಕೆಯ ಮಾಲಿಕತ್ವವು ಇಂಡಿಯಾ ಸಿಮೆಂಟ್ಸ್ ಬಳಿ ಇದೆ. ಪ್ರಸ್ತುತ ಈ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಎನ್ ಶ್ರೀನಿವಾಸನ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಐಸಿಸಿ ಯ ಚೇರ್ಮನ್ನರಾಗಿ ಮತ್ತು ಬಿಸಿಸಿಐನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಇವರು ಸಿಎಸ್‌ಕೆ ನ ಮ್ಯಾನೇಜಿಂಗ್ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಇವರ ತವರು ಮೈದಾನ ಎಂ ಎ ಚಿದಂಬರಂ ಸ್ಟೇಡಿಯಂ ಆಗಿದೆ.
2.Royal Challengers Bengaluru:
ವರ್ಷ 2008ರಲ್ಲಿ ವಿಜಯಮಲ್ಯ ಅವರು ಈ ತಂಡವನ್ನು 89 ಕೋಟಿ ರೂಪಾಯಿ ಕೊಟ್ಟು ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಿದರು. ಈ ಮೊತ್ತ ಅಂದಿನ ಎರಡನೇ ಅತಿ ದೊಡ್ಡ ಬಿಡ್ ಆಗಿತ್ತು ಐಪಿಎಲ್ ಇತಿಹಾಸದಲ್ಲಿ ಒಂದು ಬಾರಿಯೂ ಟ್ರೋಫಿ ಗೆಲ್ಲದೆ ಇದ್ದರೂ, ವರ್ಷದಿಂದ ವರ್ಷಕ್ಕೆ ಮಾತ್ರ ಈ ತಂಡದ ಫ್ಯಾನ್ ಫಾಲ್ಲೋವಿಂಗ್ ಹೆಚ್ಚುತ್ತಲೆ ಇದೆ. ಸದ್ಯ ಆರ್‌ಸಿಬಿಯ ಮಾಲಿಕತ್ವವು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಕಂಪನಿಯು ಹೊಂದಿದೆ ಸದ್ಯ ಇದರ ಕಾರ್ಯದರ್ಶಿಯಾಗಿ ಆನಂದ ಕೃಪಾಲು ಕಾರ್ಯನಿರ್ವಹಿಸುತ್ತಿದ್ದಾರೆ. ಆರ್‌ಸಿಬಿ ಯು ನಮ್ಮ ರಾಜ್ಯವಾದ ಕರ್ನಾಟಕವನ್ನ ಪ್ರತಿನಿಧಿಸುತ್ತದೆ ಮತ್ತು ಇದರ ತವರು ಮೈದಾನ ಬೆಂಗಳೂರಿನಲ್ಲಿರುವ ಎಂ ಚೆನ್ನಸ್ವಾಮಿ ಕ್ರೀಡಾಂಗಣವಾಗಿದೆ. 2009,2011, 2016ರ ಐಪಿಎಲ್ ನ ರನ್ನರ್ ಅಪ್ ಆಗಿರುವ ಆರ್ಸಿಬಿ ಈ ಬಾರಿಯಾದರೂ ಚಾಂಪಿಯನ್ ಆಗುತ್ತಾ ಎಂಬುದನ್ನ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
3. Mumbai Indians:
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಚಾಂಪಿಯನ್ ಅಂದರೆ ಐದು ಬಾರಿ ಚಾಂಪಿಯನ್ ಆದ ಮತ್ತು ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವವು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅವರ ಬಳಿ ಇದೆ. 2008ರ ಐಪಿಎಲ್ ಆರಂಭದಲ್ಲಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು 821 ಕೋಟಿ ರೂಪಾಯಿ ಖರ್ಚು ಮಾಡಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವವನ್ನು ಪಡೆದುಕೊಂಡಿತ್ತು. ಈ ಮೊತ್ತದೊಂದಿಗೆ ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ದುಬಾರಿಯಾಗಿ ಮಾರಾಟವಾದ ಫ್ರ್ಯಾಂಚಾಯ್ಸ್ ಗಳಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿತು. ಮುಂಬೈ ಇಂಡಿಯನ್ ತಂಡದ ಮ್ಯಾನೇಜಿಂಗ್ ಕೆಲಸವನ್ನೆಲ್ಲ ಮುಕೇಶ್ ಅಂಬಾನಿ ಪತ್ನಿಯವರಾದ ನಿತಾ ಅಂಬಾನಿ ಮತ್ತು ಅವರ ಮಗನಾದ ಆಕಾಶ ಅಂಬಾನಿಯವರೇ ನೋಡಿಕೊಳ್ಳುತ್ತಾರೆ ಮತ್ತು ಇದರ ತವರು ಮೈದಾನ ಮುಂಬೈನ ವಾಂಖೆಡೆ ಕ್ರೀಡಾಂಗಣ ಆಗಿದೆ.
4. Kolkata Knight Riders:
ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ನ ಮಾಲಿಕತ್ವವು ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಮತ್ತು ನಟಿ ಜೋಹಿ ಚಾವ್ಲಾ ಅವರ ಬಳಿ ಇದೆ. ಕೆಕೆಆರ್ ತಂಡದ 55% ನಷ್ಟು ಶೇರನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಹೊಂದಿದ್ದು, ಉಳಿದ 45% ನಷ್ಟು ಷೇರು ಜೋಹಿ ಚಾವ್ಲಾ ಅವರ ಪತಿಯವರ ಮೆಹತಾ ಗ್ರೂಪ್ ಕಂಪನಿ ಬಳಿ ಇದೆ. ಕೆಕೆಆರ್ ತಂಡವು ಪಶ್ಚಿಮ ಬಂಗಾಳ ರಾಜ್ಯವನ್ನ ಪ್ರತಿನಿಧಿಸುತ್ತದೆ ಮತ್ತು ಇದರ ತವರು ಮೈದಾನ ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣ ಆಗಿದೆ.
5. Gujarat Titans:
ಕಳೆದ ವರ್ಷ ಅಂದ್ರೆ 2022 ರಲ್ಲಿ ಆಧಾರ್ಪಣೆ ಮಾಡಿದ ವರ್ಷದಲ್ಲಿಯೇ ಚಾಂಪಿಯನ್ ಪಟ್ಟ ಅಲಂಕರಿಸಿದ ಗುಜರಾತ್ ಟೈಟನ್ ತಂಡದ ಮಾಲೀಕತ್ವವು ಸಿವಿಸಿ ಕ್ಯಾಪಿಟಲ್ ಪಾರ್ಟ್ನರ್ಸ್ ಕಂಪನಿ ಹೊಂದಿದೆ. ಈ ಕಂಪನಿಯು ಗುಜರಾತ್ ಟೈಟನ್ಸ್ ತಂಡವನ್ನು ಬರೋಬ್ಬರಿ 5,625 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ. ಅಂದ್ರೆ ಇದು ಬಿಸಿಸಿಐನ ಬೇಸ್ ಪ್ರೈಜ್ ಗಿಂತಲೂ 160 ಶೇಕಡ ಹೆಚ್ಚು. ಗುಜರಾತ್ ಟೈಟನ್ಸ್ ತಂಡ ಗುಜರಾತ್ ರಾಜ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಇದರ ತವರು ಮೈದಾನ ನರೇಂದ್ರ ಮೋದಿ ಕ್ರೀಡಾಂಗಣ ಆಗಿದೆ.
6.Delhi Capitals:
ಸ್ನೇಹಿತರೆ ಡೆಲ್ಲಿ ಕ್ಯಾಪಿಟಲ್ ತಂಡದ ಮಾಲೀಕತ್ವವು ಸದ್ಯ 2 ಕಂಪನಿಗಳ ಬಳಿ ಇದೆ ಒಂದು ಜೆ ಎಸ್ ಡಬ್ಲ್ಯೂ ಕಂಪನಿ ಮತ್ತೊಂದು ಜಿಎಂಆರ್ ಕಂಪನಿ. 2008ರಲ್ಲಿ ಜಿಎಂಆರ್ ಕಂಪನಿ ಒಂದೇ ದೆಹಲಿ ತಂಡವನ್ನು ಖರೀದಿಸಿತ್ತು. ಆಗ ಇದರ ಹೆಸರು ಡೆಲ್ಲಿ ಡೇರ್ ಡೇವಿಲ್ಸ್ ಎಂದಿತ್ತು ಮುಂದೆ 2018 ರಲ್ಲಿ ಜೆ ಎಸ್ ಡಬ್ಲ್ಯೂ ಗ್ರೂಪ್ ಕಂಪನಿಯು 550 ಕೋಟಿ ರೂಪಾಯಿ ಕೊಟ್ಟು ದೆಹಲಿ ತಂಡದ 50 ಪರ್ಸೆಂಟ್ ಶೇರನ್ನು ಖರೀದಿಸಿತ್ತು ಮತ್ತು ಡೆಲ್ಲಿ ಡೇರ್ ಡೇವಿಲ್ಸ್ ಎಂಬ ಹೆಸರನ್ನ ಡೆಲ್ಲಿ ಕ್ಯಾಪಿಟಲ್ಸ್ ಎಂದು ಬದಲಿಸಿತು. ಜೆ ಎಸ್ ಡಬ್ಲ್ಯೂ ಕಂಪನಿಯ ಮಾಲೀಕರಾದ ಪಾರ್ಥ ಜಿಂದಾಲ್ ಅವರೇ ಡೆಲ್ಲಿ ತಂಡದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡವು ದೇಶದ ರಾಜಧಾನಿ ದೆಹಲಿಯನ್ನು ಪ್ರತಿನಿಧಿಸುತ್ತದೆ ಮತ್ತು ಇದರ ತವರು ಮೈದಾನ ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣ ಆಗಿದೆ.
7. Rajasthan Royals:
ಐಪಿಎಲ್ ನ ಚೊಚ್ಚಲ ಚಾಂಪಿಯನ್ ತಂಡವಾದ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕತ್ವವು ಬಹು ಪಾಲು ಶೇರು ಮನೋಜ್ ಬಡಾಲೆ ಹತ್ತಿರ ಇದೆ. ಇವರ ಬಳಿ ರಾಜಸ್ಥಾನ ತಂಡದ 65 ಪರ್ಸೆಂಟ್ ಶೇರು ಇದೆ. ರೆಡ್ ಬರ್ಡ್ ಕ್ಯಾಪಿಟಲ್ ಪಾರ್ಟ್ನರ್ಸ್ ಬಳಿ 15 ಪರ್ಸೆಂಟ್ ಶೇರು ಇದೆ. ಲ್ಯಾಷನ್ ಮೊರ್ಡಸ್ ಬಳಿ 13% ಶೇರು ಇದ್ದರೆ ಇನ್ನು ಮೂರು ಪರ್ಸೆಂಟ್ ಶೇರು ಶೇನ್ ವಾರ್ನ್ ಅವರ ಬಳಿ ಇದೆ. ರಾಜಸ್ಥಾನ್ ರಾಯಲ್ಸ್ ತಂಡವು ರಾಜಸ್ಥಾನ ರಾಜ್ಯವನ್ನ ಪ್ರತಿನಿಧಿಸುತ್ತದೆ ಮತ್ತು ಇದರ ತವರು ಮೈದಾನ ಜೈಪುರ್ ನಲ್ಲಿರುವ ಸವಾಯಿ ಮಾನ್ಸಿಂಗ್ ಕ್ರೀಡಾಂಗಣ ಆಗಿದೆ.
8. Sunrisers Hyderabad:
ವರ್ಷ 2012ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಮಾಲೀಕತ್ವ ಕಂಪನಿಯಾದ ಡೆಕ್ಕನ್ ಕ್ರೋನಿಕಲ್ ಕಂಪನಿಯು ದಿವಾಳಿಯಾದಾಗ ಸನ್ ಟಿವಿ ನೆಟ್ವರ್ಕ್ ನ ಮಾಲಿಕರಾದ ಕಲಾ ನಿಧಿ ಮಾರನ್ ಅವರು ಡೆಕ್ಕನ್ ಚಾರ್ಜರ್ಸ್ ತಂಡದ ಮಾಲೀಕತ್ವವನ್ನು ಪಡೆದುಕೊಂಡರು ಮತ್ತು ಡೆಕ್ಕನ್ ಚಾರ್ಜರ್ಸ್ ಎಂಬ ಹೆಸರನ್ನು ಸನ್ ರೈಸರ್ಸ್ ಹೈದರಾಬಾದ್ ಎಂದು ಮರು ನಾಮಕರಣ ಮಾಡಿದರು. ಈ ತಂಡವು 2016ರಲ್ಲಿ ಚಾಂಪಿಯನ್ ಆಗುವಲ್ಲಿ ಯಶಸ್ವಿ ಆಯಿತು. ಈ ತಂಡವು ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಇದರ ತವರು ಮೈದಾನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ ಆಗಿದೆ.
9. Lukhnow Super Giants:
ಕಳೆದ ವರ್ಷವೇ ಗುಜರಾತ್ ಐಟಂಸ್ ತಂಡದೊಂದಿಗೆ ಪಾದಾರ್ಪಣೆ ಮಾಡಿದ ಲಖನ್ ಸೂಪರ್ ಜಯಂಟ್ಸ್ ತಂಡದ ಮಾಲೀಕತ್ವವನ್ನು ಆರ್‌ಪಿಎಸ್‌ಜಿ ಎಂಬ ಕಂಪನಿಯು 7090 ಕೋಟಿ ಕೊಟ್ಟು ಇದರ ಒಡೆತನವನ್ನು ಹೊಂದಿದೆ. ಈ ತಂಡದಲ್ಲಿ ಕೆಎಲ್ ರಾಹುಲ್ ಅವರದ್ದು ಕೂಡ 17 ಕೋಟಿ ರೂಪಾಯಿನಷ್ಟು ಪಾಲಿದೆ. ಈ ತಂಡವು ಉತ್ತರ ಪ್ರದೇಶ ರಾಜ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಇದರ ತವರು ಮೈದಾನ ಬಿ ಆರ್ ಎಸ್ ಎ ಬಿವಿ ಏಕಾನ ಕ್ರಿಕೆಟ್ ಕ್ರೀಡಾಂಗಣ ಆಗಿದೆ.
10. Punjab Kings:
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಫಲಗೊಂಡ ತಂಡವಾದ ಪಂಜಾಬ್ ಕಿಂಗ್ಸ್ ತಂಡದ ಮಾಲೀಕತ್ವವನ್ನು ನಾಲ್ಕು ಜನರು ಹೊಂದಿದ್ದಾರೆ. ಡಾಬರ್ ಕಂಪನಿಯ ಮಾಲೀಕರಾದ ಮೋಹಿತ್ ಬರ್ಮನ್ ಅವರು 46 ಪರ್ಸೆಂಟ್ ಹೊಂದಿದ್ದರೆ, ಪ್ರಸಿದ್ಧ ಬ್ರಿಟಿಷ್ ಇಂಡಿಯನ್ ಬಿಸಿನೆಸ್ ಮ್ಯಾನ್ ಆದ ನೆಸ್ ಒಡಿಯಾ ಅವರು 23% ಶೇರನ್ನು ಖರೀದಿಸಿದ್ದಾರೆ. ಇನ್ನು ಬಾಲಿವುಡ್ ಖ್ಯಾತ ನಟಿಯಾದ ಪ್ರೀತಿ ಜಿಂಟಾ ಅವರು 23 ಪರ್ಸೆಂಟ್ ನಷ್ಟು ಶೇರನ್ನು ಖರೀದಿಸಿದ್ದಾರೆ. ಇನ್ನು Day & Dey ಕಂಪನಿಯ ಸಪ್ತರ್ಷಿ ದೇ ಅವರು 18 ಪರ್ಸೆಂಟ್ ಶೇರನ್ನು ಖರೀದಿಸಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಪಂಜಾಬ್ ರಾಜ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಇದರ ತವರು ಮೈದಾನ ಇಂದ್ರಜಿತ್ ಸಿಂಗ್ ಬಿಂದ್ರ ಕ್ರಿಕೆಟ್ ಸ್ಟೇಡಿಯಂ ಆಗಿದೆ.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಮತ್ತೊಂದು ಹೊಸ ಆರ್ಟಿಕಲ್ ನೊಂದಿಗೆ ನಾನು ನಿಮ್ಮೊಂದಿಗೆ ಭೇಟಿ ಆಗುತ್ತೇನೆ. ಅಲ್ಲಿಯವರೆಗೆ ನಮಸ್ಕಾರ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…