Categories: Best Health Tips

ಐಸ್ ಕ್ರೀಮ್ ಯಾಕೆ ತಿನ್ನಬೇಕು ಗೊತ್ತಾ? ಐಸ್ ಕ್ರೀಮ್ ತಿನ್ನುವುದರ ಬಗ್ಗೆ ಡಾಕ್ಟರ್ ಏನು ಹೇಳುತ್ತಾರೆ?

ಸ್ನೇಹಿತರೇ ಐಸ್ ಕ್ರೀಮ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ.ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಐಸ್ ಕ್ರೀಮ್ ಇಷ್ಟಪಡದವರೇ ಇಲ್ಲ. ಮಕ್ಕಳು ಎಷ್ಟೇ ಐಸ್ ಕ್ರೀಮ್ ಬೇಕು ಎಂದು ಹಠ ಹಿಡಿದರು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಬಹುತೇಕ ಪೋಷಕರು ಹೇಳುತ್ತಾರೆ. ಆದರೆ ಐಸ್ ಕ್ರೀಮ್ ತಿನ್ನುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತೇ?

Spread the love

ಸ್ನೇಹಿತರೇ ಐಸ್ ಕ್ರೀಮ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ.ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಐಸ್ ಕ್ರೀಮ್ ಇಷ್ಟಪಡದವರೇ ಇಲ್ಲ. ಮಕ್ಕಳು ಎಷ್ಟೇ ಐಸ್ ಕ್ರೀಮ್ ಬೇಕು ಎಂದು ಹಠ ಹಿಡಿದರು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಬಹುತೇಕ ಪೋಷಕರು ಹೇಳುತ್ತಾರೆ. ಆದರೆ ಐಸ್ ಕ್ರೀಮ್ ತಿನ್ನುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತೇ?

Thank you for reading this post, don't forget to subscribe!

ಐಸ್ ಕ್ರೀಮ್ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಇಷ್ಟಪಡುವ ಪದಾರ್ಥಗಳಲ್ಲಿ ಇದು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಕೆಲವು ಜನರು ಐಸ್ ಕ್ರೀಮ್‌ ಅನ್ನು ‘ಸ್ಟ್ರೆಸ್ ಬಸ್ಟರ್’ ಎಂದು ಕರೆಯುತ್ತಾರೆ. ಅಂದರೆ ನೀವು ಆತಂಕಕ್ಕೆ ಒತ್ತಡಕ್ಕೆ ಒಳಗಾದ ಸಂದರ್ಭದಲ್ಲಿ ಐಸ್ ಕ್ರೀಮ್ ಅನ್ನ ತಿನ್ನುವುದರಿಂದ ಮನಸ್ಸು ಹಗುರವಾಗುತ್ತದೆ. ನೀವು ಹೆಚ್ಚು ಐಸ್ ಕ್ರೀಮ್ ತಿಂದರೆ ಕೆಮ್ಮು ವಕ್ಕರಿಸುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಸಾಮಾನ್ಯವಾಗಿ ಎಲ್ಲರೂ ನಂಬಿರುವಂತೆ ಹೆಚ್ಚು ಐಸ್ ಕ್ರೀಮ್ ತಿಂದರೆ ರೋಗಗಳು ಬರುತ್ತವೆ ಎಂಬುದು ಸತ್ಯವಾದರೂ ಅದರಿಂದ ಹಲವು ಪ್ರಯೋಜನಗಳು ಇವೆ. ಅವು ಯಾವುವು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

ಐಸ್ ಕ್ರೀಮ್ ಕೇವಲ ರುಚಿಯನ್ನು ಮಾತ್ರವಲ್ಲದೆ ಕೆಲವು ಪೌಷ್ಟಿಕಾಂಶದ ಮೌಲ್ಯವನ್ನೂ ಹೊಂದಿದೆ. ಐಸ್ ಕ್ರೀಮ್ ಸಂಪೂರ್ಣ ಪೌಷ್ಟಿಕಾಂಶದ ಆಹಾರವಲ್ಲದಿದ್ದರೂ, ಪ್ರಸಿದ್ಧ ಪೌಷ್ಟಿಕತಜ್ಞ ಲಾರಾ ಎಂ. ಅಲ್ಲೆ ಅವರು ಐಸ್ ಕ್ರೀಮ್ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳುತ್ತಾರೆ.ಐಸ್ ಕ್ರೀಮ್ ಉತ್ತಮ ಗುಣಮಟ್ಟದ್ದಾಗಿದ್ದರೆ ಮತ್ತು ಅದರ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕಗಳನ್ನು ಸೇರಿಸದಿದ್ದರೆ, ಖಂಡಿತವಾಗಿಯೂ ಐಸ್ ಕ್ರೀಮ್ ನಮ್ಮ ದೇಹಕ್ಕೆ ಉಪಯುಕ್ತ ಪೋಷಕಾಂಶಗಳನ್ನು ಹೊಂದಿರುತ್ತದೆ ಎಂದು ಅವರು ಭಾವಿಸುತ್ತಾರೆ.ಐಸ್ ಕ್ರೀಮ್ ತಿನ್ನುವುದರಿಂದ ನಮ್ಮ ದೇಹದಲ್ಲಿ ಎಂಡಾರ್ಫಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸು ಮುದಗೊಳ್ಳುತ್ತದೆ. ನಮಗೆ ಗೊತ್ತಿಲ್ಲದೆಯೇ ಸಂತೋಷ ನಮ್ಮೊಳಗೆ ಬರುತ್ತದೆ.ನಾವು ದಿನಪೂರ್ತಿ ಚೈತನ್ಯ ಭರಿತರಾಗಿ ಇರಲು ಇದು ಸಹಾಯಮಾಡುತ್ತದೆ. ಈ ಕಾರಣದಿಂದ ಐಸ್ ಕ್ರೀಮ್ ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದು.

ಅಷ್ಟೇ ಅಲ್ಲದೆ ಐಸ್ ಕ್ರೀಮ್ ತಿನ್ನುವುದರಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಪೂರೈಕೆ ಹೆಚ್ಚಾಗುತ್ತದೆ. ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದು ಹಲ್ಲುಗಳನ್ನು ಮತ್ತು ಮೂಳೆಗಳನ್ನ ಸುದೀರ್ಘಕಾಲ ಗಟ್ಟಿಮುಟ್ಟಾಗಿ ಇರಲು ಸಹಜವಾಗಿ ವೃದ್ಧಾಪ್ಯದಲ್ಲಿ ಕಂಡುಬರುವ ಮೂಳೆ ಸವತಕ್ಕೆ ಐಸ್ ಕ್ರೀಮ್ ಒಂದು ಮದ್ದು ಎನ್ನಬಹುದು. ಐಸ್ ಕ್ರೀಮ್ ತಿನ್ನುವುದರಿಂದ ನಮ್ಮ ದೇಹದಲ್ಲಿ ಶಕ್ತಿಯು ಬಹುಬೇಗ ಹೆಚ್ಚುತ್ತದೆ. ಸಾಮಾನ್ಯ ಆಹಾರಕ್ಕೆ ಹೋಲಿಸಿದರೆ ಐಸ್ ಕ್ರೀಮ್ ನಮಗೆ ಬೇಗನೆ ಶಕ್ತಿಯನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ರಾಸಾಯನಿಕ ಮುಕ್ತವಾದ ಐಸ್ ಕ್ರೀಮ್ ದೇಹಕ್ಕೆ ಮತ್ತಷ್ಟು ಹೆಚ್ಚು ಶಕ್ತಿಯನ್ನು ಒದಗಿಸುತ್ತದೆ. ಹಲ್ಲಿನ ಸಮಸ್ಯೆಗಳ ಸಮಯದಲ್ಲಿ ಐಸ್ ಕ್ರೀಮ್ ನಮಗೆ ತುಂಬಾ ಉಪಯುಕ್ತವಾಗಿದೆ. ಹಲ್ಲು ತೆಗೆದ ನಂತರ ಐಸ್ ಕ್ರೀಂ ತಿಂದರೆ ಗಾಯ ಬಹುಬೇಗ ವಾಸಿಯಾಗುತ್ತದೆ ಎಂದು ವೈದ್ಯರೂ ಒಪ್ಪುತ್ತಾರೆ. ಆ ಸಮಯದಲ್ಲಿ ಐಸ್ ಕ್ರೀಮ್ ತಿಂದರೆ ತುಂಬಾ ಒಳ್ಳೆಯದು ಎಂದೂ ಹೇಳಲಾಗುತ್ತದೆ. ಹೀಗೆ ಐಸ್ ಕ್ರೀಮ್ ನಿಂದ ನಮ್ಮ ದೇಹಕ್ಕೆ ಹತ್ತು ಹಲವು ಪ್ರಯೋಜನಗಳು ಇದ್ದರೂ ಅದರ ಬಗ್ಗೆ ನಮ್ಮ ಪೋಷಕರು ತಮ್ಮ ಮಕ್ಕಳಿಗೆ ಎಚ್ಚರಿಕೆಯನ್ನು ಉಂಟುಮಾಡುತ್ತಾರೆ. ಎಚ್ಚರಿಕೆ ಮಾಡುವುದು ತಪ್ಪಲ್ಲ, ಅದರ ಜೊತೆಗೆ ಅದರಿಂದಾಗುವ ಹಾನಿಗಳನ್ನು ತಪ್ಪಿಸುವುದು ಕೂಡ ಅಷ್ಟೇ ಮಹತ್ವದ್ದಾಗಿದೆ.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ಸೈಟ್ ಗೆ ಹೊಸಬರಾಗಿದ್ದರೆ ನಮ್ಮ ವೆಬ್ಸೈಟ್ ನೋಟಿಫಿಕೇಶನ್ ಗಳನ್ನು “allow” ಮಾಡಿಕೊಳ್ಳಿ.

Recent Posts

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

56 years ago