ಎಲ್ಲ ರೈತ ಬಾಂಧವರಿಗೂ ಅಧಿಕೃತ ವೆಬ್ಸೈಟ್ ಮೀಡಿಯಾ ಚಾಣಕ್ಯ ಮಾಡುವ ನಮಸ್ಕಾರಗಳು , ಎಲ್ಲರಿಗೂ ತಿಳಿದಿರುವ ಹಾಗೆ , ಹೊಲದ ಯಾವುದೇ ರೀತಿಯಾದ ಮಾಹಿತಿಯನ್ನು ತಿಳಿಯಲು, ಸರ್ಕಾರದ ಪ್ರತಿಯೊಂದು ಯೋಜನೆ, ಆನ್ಲೈನ್ ಅಪ್ಲಿಕೇಶನ್ ಹಾಕಲು, ಮತ್ತು ಇತರೆ ನಿಮ್ಮ ಹೊಲಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ಹೊಲದ ಉತಾರ ಅಥವಾ ಪಹಣಿ ಬೇಕೇ ಬೇಕು.
ರೈತರಿಗೆ ಸರಕಾರದ ಎಲ್ಲಾ ಆ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದರೆ ಈ ಭೂ ಪತ್ರಿಕೆಯು ಮಹತ್ವದ ಪಾತ್ರವನ್ನು ಹೊಂದಿರುತ್ತದೆ. ಇದು ಆ ಹೊಲದ ಅಸಲಿ ಮಾಲಿಕನ ವಿವರವನ್ನು ತೋರಿಸುತ್ತದೆ, ಈ ಭೂ ಪತ್ರಿಕೆಯು ಪ್ರತಿಯೊಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗೆ ಕಡ್ಡಾಯವಾಗಿ ಬೇಕಾದ ಪತ್ರಿಕೆ.
ಈ ಹಿಂದೆ ಈ ಹೊಲದ ಉತಾರ ಅಥವಾ ಪಹಣಿಯನ್ನು ತೆಗೆಯಲು ರೈತ ನಾಡಕಚೇರಿಗೆ , ಅಥವಾ ಇತರೆ ಕಂಪ್ಯೂಟರ್ ಸೆಂಟರ್ ಗಳಿಗೆ ಹೋಗಿ ಸರದಿ ಹಚ್ಚಿ ಉತಾರವನ್ನು ಪ್ರಿಂಟ್ ಹಾಕಿಸಬೇಕಾಗಿತ್ತು, ಆದರೆ ಈಗ ಸರಕಾರವು ತನ್ನದೇ ಆದಂತಹ ಅಧಿಕೃತ ವೆಬ್ಸೈಟ್ನಲ್ಲಿ , ರೈತ ಕೇವಲ ತನ್ನ ಊರು ತನ್ನ ಹೊಲದ ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು ತನ್ನ ಮೊಬೈಲ್ ನಲ್ಲಿಯೇ ತನ್ನ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.
ಹಾಗಾದರೆ ಈ ಪಹಣಿ ಎಂದರೇನು — ಪಹಣಿಯು ಸರಕಾರ ಆದೇಶ ಪಡಿಸಿದ ಹಾಗೆ , ಒಂದು ಬಹು ಮುಖ್ಯವಾದ ದಾಖಲಾತಿಯಾಗಿದೆ . ಈ ಪಹಣಿಯಲ್ಲಿ ಹೊಲದ ಮಾಲೀಕನ ಸಂಪೂರ್ಣ ಮಾಹಿತಿ , ಅವನ ಆಸ್ತಿಯ ಸಂಪೂರ್ಣ ಮಾಹಿತಿ , ಹೊಲದ ಸುತ್ತಮುತ್ತಲಿನ ಆಸ್ತಿಯ ವಿವರವನ್ನು ಇದು ಹೊಂದಿರುತ್ತದೆ.
ಹಾಗಾದರೆ ಈ ಪಹಣಿ ಏಕೆ ಬೇಕು ?? ಪಹಣಿ ಎಲ್ಲಿ ಉಪಯೋಗವಾಗುತ್ತದೆ?? ಸಂಪೂರ್ಣ ಮಾಹಿತಿ ತಿಳಿಯಿರಿ .
ಯಾವುದೇ ರೈತ ಹೊಲವನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಈ ಭೂ ದಾಖಲೆಯೂ ಕಡ್ಡಾಯವಾಗಿ ಬೇಕೇ ಬೇಕು.
ರೈತನು ತನ್ನ ಹೊಲದ ಮೇಲೆ ಯಾವುದೇ ರೀತಿಯಾದಂತಹ ಸಾಲವನ್ನು ಪಡೆಯಲು ಈ ದಾಖಲಾತಿಯು ಮುಖ್ಯ ಪಾತ್ರವನ್ನು ನೆರವೇರಿಸುತ್ತದೆ.
ಇದು ನಿಮ್ಮ ಹೊಲದ ಮಾಲೀಕತ್ವವನ್ನು ಸ್ಪಷ್ಟಪಡಿಸುವ ಭೂ ದಾಖಲೆಯಾಗಿದೆ.
ಪಹಣಿಯಲ್ಲಿ ಏನೆಲ್ಲ ಮಾಹಿತಿ ಇರುತ್ತದೆ ??
ಈ ಕಂದಾಯ ಭೂಮಿ ಪತ್ರದಲ್ಲಿ ರೈತನ ಹೊಲದ ಸರ್ವೇ ನಂಬರ್ , ಹಿಸ್ಸಾ ನಂಬರ್ ಮತ್ತು ರೈತನಿಗೆ ಸಂಬಂಧಪಟ್ಟಂತ ಎಲ್ಲಾ ಭೂಕಂದಾಯದ ವಿವರವನ್ನು ಹೊಂದಿರುತ್ತದೆ.
ನಿಮ್ಮ ಹೊಲದ ಸಂಪೂರ್ಣ ಉದ್ದಗಲವನ್ನು, ವಿಸ್ತೀರ್ಣವನ್ನು ಈ ದಾಖಲಾತಿ ಹೊಂದಿರುತ್ತದೆ.
ಇದಲ್ಲದೆ ನಿಮ್ಮ ಹೊಲದಲ್ಲಿರುವ ಮರಗಳ ಸಂಖ್ಯೆ, ಮಣ್ಣಿನ ವರ್ಗಿಕರಣ ಮತ್ತು ಮಿಶ್ರ ಬೆಳೆಗಳ ವಿವರಗಳನ್ನು ಕೂಡ ಹೊಂದಿರುತ್ತದೆ.
ಭೂಮಿಯ ಮೇಲಿನ ಸರಕಾರ ಹಾಗೂ ಮಾಲೀಕನ ಹಕ್ಕುಗಳೇನು ಎಂದು ತಿಳಿಸುತ್ತದೆ.
ಪಹಣಿ ಹೇಗೆ ಪಡೆಯುವುದು ??
ರೈತನು ತನಗೆ ಬೇಕಾದಾಗ ತನ್ನ ಹತ್ತಿರ ಇರುವ ಯಾವುದೇ ಕಂಪ್ಯೂಟರ್ ಸೆಂಟರ್ನಿಂದ, ಕೇವಲ 15 ರೂಪಾಯಿ ಕೊಟ್ಟು ತನ್ನ ಹೊಲದ ಉದ್ಧಾರವನ್ನು ಪ್ರಿಂಟ್ ತೆಗೆದುಕೊಳ್ಳಬಹುದು. ಕೇವಲ ತನ್ನ ಊರು ತನ್ನ ಗ್ರಾಮ ಹಾಗೂ ಸರ್ವೇ ನಂಬರ್ ಮೂಲಕ ಯಾವುದೇ ಕಂಪ್ಯೂಟರ್ ಸೆಂಟರ್ ನಿಂದ ಈ ಭೂ ದಾಖಲಾತಿಯನ್ನು ಪಡೆದುಕೊಳ್ಳಬಹುದು.
ಇದಲ್ಲದೆ ಎಲ್ಲ ರೈತರು ಈಗ ತಮ್ಮ ಮೊಬೈಲ್ ನಲ್ಲಿ ಕ್ಷಣ ಮಾತ್ರದಲ್ಲಿ ತಮ್ಮ ಹೊಲದ ಉತಾರವನ್ನು ತೆಗೆದುಕೊಳ್ಳಬಹುದು. ಇದಕ್ಕೆ ರೈತರು ನಾವು ಹೇಳುವ ಪ್ರತಿ ಹಂತವನ್ನು ಅನುಸರಿಸುತ್ತಾ ಹೋಗಬೇಕು, ಇದರಿಂದ ನೀವು ಯಾವುದೇ ಕಂಪ್ಯೂಟರ್ ಸೆಂಟರ್ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
ಹಾಗಾದರೆ ಬನ್ನಿ ಈ ಲೇಖನದಲ್ಲಿ ನಿಮ್ಮೆಲ್ಲರಿಗೂ ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಹೊಲದ ಉತಾರವನ್ನು , ನಿಮ್ಮ ಮೊಬೈಲಿನಲ್ಲಿ ಹೇಗೆ ಡೌನ್ಲೋಡ್ ಮಾಡಬೇಕೆಂಬುದನ್ನು ತಿಳಿಸಿಕೊಡುತ್ತೇವೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಿಮ್ಮ ಹೊಲದ ಉತಾರವನ್ನು ನಿಮ್ಮ ಮೊಬೈಲ್ ನಲ್ಲಿ ತೆಗೆಯಲು ನೀವು ಮೊದಲು ಭಾರತ ಸರ್ಕಾರ ನಿರ್ಮಿಸಿದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
https://rtc.karnataka.gov.in/Service78/
ಈ ಮೇಲ್ಕಂಡ ಅಧಿಕೃತ ವೆಬ್ಸೈಟ್ ಅನ್ನು ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರವು ಜಂಟಿಯಾಗಿ ನಿರ್ಮಾಣ ಮಾಡಿದ್ದು , ರೈತನಿಗೆ ಯಾವುದೇ ತರಹದ ಪಹಣಿಯನ್ನು ತೆಗೆಯಲು ತೊಂದರೆ ಆಗುವುದಿಲ್ಲ.
ನಂತರ ರೈತ ಈ ಮೇಲ್ಕಂಡ ವೆಬ್ಸೈಟ್ನಲ್ಲಿ ಲಾಗಿನ್ ಆಗಿ, ತನ್ನ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು , ನಂತರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು , ನಂತರ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ರೈತ ತನ್ನ ಸರ್ವೇ ನಂಬರ್ ಹಾಗೂ ಹಿಸ್ಸಾ ನಂಬರ್ ಮುಖಾಂತರ ತನ್ನ ಪಹಣಿಯನ್ನು ತನ್ನ ಮೊಬೈಲ್ ನಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಕೊಳ್ಳಬಹುದು.
ಮಾಹಿತಿ ಉಪಯೋಗ ಅನಿಸಿದ್ದಲ್ಲಿ ಈ ಲೇಖನವನ್ನು ತಪ್ಪದೇ ಶೇರ್ ಮಾಡಿ , ಹಾಗೂ ದಿನನಿತ್ಯ ಇದೇ ರೀತಿ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಎಲ್ಲ ರೈತ ಬಾಂಧವರಿಗೂ ಅಧಿಕೃತ ವೆಬ್ಸೈಟ್ ಭೂಮಿ ಮಾಹಿತಿಯಿಂದ ನಮಸ್ಕಾರಗಳು, ಭಾರತ ಒಂದು ಕೃಷಿ ಆಧರಿತ ದೇಶವಾಗಿದ್ದು , ರೈತನ ಬೆಳವಣಿಗೆಯೇ ದೇಶದ ಬೆಳವಣಿಗೆ ಎಂದರೆ ತಪ್ಪಾಗಲಾರದು. ಆದರೆ ರೈತ ಸಮಾಜದಲ್ಲಿ ಅನೇಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾನೆ , ಅತಿವೃಷ್ಟಿ ಅನಾವೃಷ್ಟಿ , ಮಾರುಕಟ್ಟೆಯಲ್ಲಿ ಉತ್ತಮವಾದ ಬೆಳೆ ಸಿಗಲಾರದ್ದು ಹೀಗೆ ನಾನ ಕಾರಣಗಳಿಂದ ರೈತ ಸಂಕಷ್ಟಕ್ಕೆ ಅನುಭವಿಸುತ್ತಿದ್ದಾನೆ .
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…