Categories: Agripedia

ರೈತರಿಗೆ ಗುಡ್ ನ್ಯೂಸ್: ತೆಂಗಿನ ಕಾಯಿಯ ನುಸಿಪೀಡೆ ರೋಗವನ್ನು ತಡೆಗಟ್ಟುವ ವಿಧಾನ ಇಲ್ಲಿದೆ ನೋಡಿ!

ಸ್ನೇಹಿತರೆ ತೆಂಗಿನಕಾಯಿಯನ್ನು ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಕಡೆಯಲ್ಲೂ ಬೆಳೆಯುತ್ತಿದ್ದು ಈ ನುಸಿ ಪೀಡೆ ರೋಗವು ಇಳುವರಿಗೆ ತುಂಬಾ ದಕ್ಕೆ ಉಂಟು ಮಾಡುತ್ತಿದ್ದು ರೈತರು ತುಂಬಾ ನಷ್ಟಕ್ಕೆ ಈಡಾಗುತ್ತಿದ್ದಾರೆ. ಈ ರೋಗವು Eriophid mite ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ ಇದನ್ನು ನುಸಿ ರೋಗ ಎಂದು ಕರೆಯುತ್ತಾರೆ.

Spread the love

ಸ್ನೇಹಿತರೆ ತೆಂಗಿನಕಾಯಿಯನ್ನು ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಕಡೆಯಲ್ಲೂ ಬೆಳೆಯುತ್ತಿದ್ದು ಈ ನುಸಿ ಪೀಡೆ ರೋಗವು ಇಳುವರಿಗೆ ತುಂಬಾ ದಕ್ಕೆ ಉಂಟು ಮಾಡುತ್ತಿದ್ದು ರೈತರು ತುಂಬಾ ನಷ್ಟಕ್ಕೆ ಈಡಾಗುತ್ತಿದ್ದಾರೆ. ಈ ರೋಗವು Eriophid mite ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ ಇದನ್ನು ನುಸಿ ರೋಗ ಎಂದು ಕರೆಯುತ್ತಾರೆ. ತೆಂಗಿನಕಾಯಿಯಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ರೋಗ ಮತ್ತು ಅತಿ ನಷ್ಟವನ್ನು ಉಂಟು ಮಾಡುತ್ತದೆ. ಹಾಗಾದರೆ ಈ ಆರ್ಟಿಕಲ್ ಮುಖಾಂತರ ಇದಕ್ಕೆ ಪರಿಹಾರವನ್ನು ತಿಳಿದುಕೊಳ್ಳೋಣ ಬನ್ನಿ.
ರೋಗದ ಲಕ್ಷಣಗಳನ್ನು ನೋಡುವುದಾದರೆ ತೆಂಗಿನ ಕಾಯಿಯು ಒಣಗಿದಂತೆ ಮತ್ತು ಕಾಯಿಯ ಸುತ್ತಲೂ ಅಂಟು ಅಂಟಿಕೊಂಡಿರುತ್ತದೆ ಕೆಲವೊಂದು ಸಾರಿ ತೆಂಗಿನ ಒಳಭಾಗದಲ್ಲಿ ಕೊಬ್ಬರಿ ಮತ್ತು ಎಳೆ ನೀರಿನ ಬದಲಾಗಿ ದ್ರವರೂಪದ ಅಂಟು ಬೆಳೆದುಕೊಂಡಿರುತ್ತದೆ.

Thank you for reading this post, don't forget to subscribe!

ಇದನ್ನೂ ಓದಿ: ರೈತರೆ ನಿಮ್ಮ ಮೊಬೈಲಿನಲ್ಲಿ ಸೋಲಾರ್ ಪಂಪ್ ಸೆಟ್ಟಿಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ
 

ಪರಿಹಾರಗಳು : ಕೀಟನಾಶಕ ಸಿಂಪಡಣೆ
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಸಿಂಪಡನೆ ಮಾಡಬೇಕು
ಮೊನೊ ಕ್ರೊಟೋಫಾಸ್
ಟ್ರೈಜೋಫಾಸ್
ಎಥಿಯೊನ್
ಕಾರ್ಬೋಸಲ್ಫಾನ್
ತೆಂಗಿನ ಮರಗಳು ತುಂಬಾ ಎತ್ತರ ಇರುವುದರಿಂದ ಇವುಗಳನ್ನು ಸಿಂಪಡಣೆ ಮಾಡಲು ತುಂಬಾ ತೊಂದರೆ ಆಗುತ್ತೆ ಅದರಿಂದ ಕೆಲವು ರೈತರು ಹಾಗೆ ಬಿಡುತ್ತಾರೆ ಅದಕ್ಕೆ ಇನ್ನೊಂದು ಪರಿಹಾರ ಎಂದರೆ ಕೀಟನಾಶಕವನ್ನು ಕಲ್ಲು ಉಪ್ಪಿನ ಜೊತೆಗೆ ಮಿಶ್ರಣ ಮಾಡಿ ಒಂದು ಹತ್ತಿ ಬಟ್ಟೆಯಲ್ಲಿ ಕಟ್ಟಿ ಹೂ ಬಿಡುವ ಅಥವಾ ಕಾಯಿ ಬಿಡುವ ಸಂದರ್ಭದಲ್ಲಿ ಸುಳಿಯಲ್ಲಿ ಇಡಬೇಕು ಆ ಉಪ್ಪು ಹನಿ ಹನಿಯಾಗಿ ಕರಗಿ ಈ ರೋಗ ಹರಡುವುದನ್ನು ತಡೆಗಟ್ಟುತ್ತದೆ.

ಇನ್ನೊಂದು ಪರಿಹಾರವೆಂದರೆ ಸೀಮೆಎಣ್ಣೆಯನ್ನು  ಒಂದು ಬಾಟಲಿನಲ್ಲಿ ಹಾಕಿ ಮೇಲ್ಭಾಗದಲ್ಲಿ ಒಂದು ರಂದ್ರವನ್ನು ಮಾಡಿ ಅದಕ್ಕೆ ದಾರವನ್ನು ಕಟ್ಟಿ ತೆಂಗಿನಕಾಯಿ ಗೊನೆಗೆ ನೇತು ಹಾಕಿದರೆ ಸೀಮೆಎಣ್ಣೆ ಗಾಳಿಯಲ್ಲಿ ಎಲ್ಲ ಕಡೆ ಹರಡಿ ನುಸಿ ಕೀಟವನ್ನು ನಿಯಂತ್ರಣ ಮಾಡುತ್ತದೆ.

ಇದನ್ನೂ ಓದಿ: SUBSIDY FOR AGRICULTURAL EQUIPMENT – ವ್ಯವಸಾಯ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ ಪಡೆಯಲು ತಕ್ಷಣ ಅರ್ಜಿ ಸಲ್ಲಿಸಿ

ಮತ್ತೊಂದು ಪರಿಹಾರ ನೋಡುವುದಾದರೆ ಸಾಮಾನ್ಯವಾಗಿ ಹೊಲದಲ್ಲಿ ಬೇವಿನ ಮರಗಳು ಇದ್ದೇ ಇರುತ್ತವೆ. ಆ ಬೇವಿನ ಮರದ ಬೀಜವನ್ನು ಪುಡಿ ಮಾಡಿ ವರ್ಷದಲ್ಲಿ ಎರಡು ಬಾರಿ ತೆಂಗಿನ ಬೇರಿಗೆ ಹಾಕಬೇಕು ಇದನ್ನು ಯಾವುದೇ ಖರ್ಚಿಲ್ಲದೆ ಜೀರೋ ಬಜೆಟ್ ನಿಂದ ಪರಿಹಾರ ಮಾಡಿಕೊಳ್ಳಬಹುದು ಅದರ ಜೊತೆಗೆ ಕಲ್ಲುಪ್ಪು ಮಿಶ್ರಣ ಮಾಡಬೇಕು. ಹೀಗೆ ಮಾಡಿದರೆ ತೆಂಗಿನಕಾಯಿಯ ನುಶಿ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M

Recent Posts

SSLC ವಿದ್ಯಾರ್ಥಿಗಳೇ ಗಮನಿಸಿ: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ

"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…

56 years ago

ರಾಜ್ಯದಲ್ಲಿ ನಡುಗುವ ಚಳಿ! ಈ 7 ಜಿಲ್ಲೆಗಳಲ್ಲಿ ‘ಶೀತ ಗಾಳಿ’ಯ ಅಲರ್ಟ್. ಜನವರಿ 10 ರವರೆಗೆ ಈ ಜಿಲ್ಲೆಯವರಿಗೆ ಎಚ್ಚರಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…

56 years ago

BBK 12 Finale: ಬಿಗ್‌ಬಾಸ್‌ ಘೋಷಣೆಗೂ ಮುನ್ನವೇ ವಿನ್ನರ್ ಹೆಸರು ಲೀಕ್ ಮಾಡಿದ ವಿಕಿಪೀಡಿಯಾ

BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…

56 years ago

ನೀವು ಖರೀದಿಸುವ ಜಮೀನಿನಹೆಸರು ಯಾರುದು? ಆ ಜಮೀನಿನ ಅಕ್ಕಪಕ್ಕ ಮಾಲಿಕರ ಹೆಸರು ಇಲ್ಲಿ ಚೆಕ್ ಮಾಡಿ.

ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…

56 years ago

ಗೃಹಲಕ್ಷ್ಮಿ ಯೋಜನೆಯ ಬಾಕಿ ₹4000 ಹಣ ಒಟ್ಟಿಗೆ ಜಮಾ? ಖಾತೆಗೆ ಹಣ ಬರುವುದು ಯಾವಾಗ?  ಸಂಕ್ರಾಂತಿಗೆ ಸರ್ಕಾರದಿಂದ ಸಿಕ್ತು ಸ್ಪಷ್ಟನೆ. ಇಲ್ಲಿದೆ ಡಿಟೇಲ್ಸ್!

ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…

56 years ago

ಶೇ. 90 ರಷ್ಚು ಸಬ್ಸಿಡಿಯಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳು ಇಲ್ಲಿದೆ ಮಾಹಿತಿ

ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…

56 years ago