Categories: information

ಚಂಡಮಾರುತ ಅಥವಾ ಸೈಕ್ಲೋನ್ ಹೇಗೆ ಹುಟ್ಟುತ್ತವೆ ಗೊತ್ತಾ? ಇವುಗಳಿಗೆ ಹೇಗೆ ಹೆಸರಿಡಲಾಗುತ್ತದೆ? ಇವುಗಳನ್ನು ತಡೆಯಲು ಸಾಧ್ಯವಿಲ್ಲವೇ?

ಸ್ನೇಹಿತರೆ ಸೈಕ್ಲೋನ್ ಅಥವಾ ಚಂಡಮಾರುತ ಎನ್ನುವುದು ತುಂಬಾ ಸಣ್ಣ ಶಬ್ದವಾದರೂ, ಅದರ ಪರಿಣಾಮ ತುಂಬಾ ದೊಡ್ಡದು ಇದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ದೊಡ್ಡ ವಿಚಾರ. ಚಂಡಮಾರುತ  ಆಗಾಗ ಪ್ರವೇಶ ಮಾಡಿ ದೊಡ್ಡ ಕೋಲಾಹಲವನ್ನು ಸೃಷ್ಟಿ ಮಾಡುತ್ತದೆ. ಕೆಲವು ಕಡೆ ಮೋಡ ಮಳೆಗೆ ಸೀಮಿತವಾದರೆ, ಕೆಲವೊಂದು ಕಡೆ  ಮಳೆ ಸಹಿತ ಬಿರುಗಾಳಿ ಸೃಷ್ಟಿಯಾಗಿ ದೊಡ್ಡಮಟ್ಟದ ಹಾನಿಯನ್ನು ಉಂಟು ಮಾಡುತ್ತದೆ . ಹಾಗಾದರೆ ಚಂಡಮಾರುತ ಎಂದರೇನು ಅದು ಹೇಗೆ ಹುಟ್ಟುತ್ತದೆ. ಮತ್ತು ಪ್ರತಿ ಸಾರಿ ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ಹೇಗೆ ಇಡಲಾಗುತ್ತದೆ  ಎಲ್ಲವನ್ನು ತಿಳಿಯೋಣ ಬನ್ನಿ.

Spread the love

ಸ್ನೇಹಿತರೆ ಸೈಕ್ಲೋನ್ ಅಥವಾ ಚಂಡಮಾರುತ ಎನ್ನುವುದು ತುಂಬಾ ಸಣ್ಣ ಶಬ್ದವಾದರೂ, ಅದರ ಪರಿಣಾಮ ತುಂಬಾ ದೊಡ್ಡದು ಇದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ದೊಡ್ಡ ವಿಚಾರ. ಚಂಡಮಾರುತ ಆಗಾಗ ಪ್ರವೇಶ ಮಾಡಿ ದೊಡ್ಡ ಕೋಲಾಹಲವನ್ನು ಸೃಷ್ಟಿ ಮಾಡುತ್ತದೆ. ಕೆಲವು ಕಡೆ ಮೋಡ ಮಳೆಗೆ ಸೀಮಿತವಾದರೆ, ಕೆಲವೊಂದು ಕಡೆ ಮಳೆ ಸಹಿತ ಬಿರುಗಾಳಿ ಸೃಷ್ಟಿಯಾಗಿ ದೊಡ್ಡಮಟ್ಟದ ಹಾನಿಯನ್ನು ಉಂಟು ಮಾಡುತ್ತದೆ . ಹಾಗಾದರೆ ಚಂಡಮಾರುತ ಎಂದರೇನು ಅದು ಹೇಗೆ ಹುಟ್ಟುತ್ತದೆ. ಮತ್ತು ಪ್ರತಿ ಸಾರಿ ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ಹೇಗೆ ಇಡಲಾಗುತ್ತದೆ ಎಲ್ಲವನ್ನು ತಿಳಿಯೋಣ ಬನ್ನಿ.

Thank you for reading this post, don't forget to subscribe!
How cyclones are formed

ಸ್ನೇಹಿತರೆ ಸೈಕ್ಲೋನ್ ಹೇಗೆ ಸೃಷ್ಟಿಯಾಗುತ್ತೆ ಎಂದರೆ, ಭೂಮಿಯ ಸುತ್ತಲಿನ ವಾತಾವರಣದ ಒತ್ತಡ ಕಮ್ಮಿಯಾದಾಗ ಮತ್ತು ಸಮುದ್ರದ ನೀರಿನ ತಾಪಮಾನ 26.5 ಡಿಗ್ರಿ ಸೆಲ್ಸಿಯಸ್ ನಷ್ಟು ಇದ್ದಾಗ ಸೈಕ್ಲೋನ್ ಸೃಷ್ಟಿಯಾಗುತ್ತದೆ. ವಾತಾವರಣದ ಒತ್ತಡ ಎಂದರೆ ಭೂಮಿ ಮೇಲೆ ಗಾಳಿಯು ಒಂದೇ ರೀತಿ ಇರುವುದಿಲ್ಲ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಗಾಳಿ ಗುರುತ್ವಾಕರ್ಷಣೆಯ ಬಲ ದಿಂದ ಭೂಮಿ ಕಡೆ ಚಲಿಸುತ್ತಿರುತ್ತದೆ, ಇದನ್ನು ವಾತಾವರಣದ ಒತ್ತಡ (atmospheric pressure) ಎಂದು ಕರೆಯುತ್ತಾರೆ. ತಾಪಮಾನ ಹೆಚ್ಚಾದಂತೆ ಗಾಳಿಯು ಭೂಮಿ ಕಡೆ ಚಲಿಸುವ ಬದಲಾಗಿ ಮೇಲ್ಮುಖವಾಗಿ ಚಲಿಸುತ್ತದೆ. ಹಾಗಾಗಿ ಭೂಮಿಯ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಇದನ್ನು ವಾಯು ಭಾರ ಕುಸಿತ ಎನ್ನುತ್ತೇವೆ. ವಾಯುಭಾರ ಕುಸಿತ ಆದಾಗ ಮೇಲ್ಮುಖವಾಗಿ ಚಲಿಸುವ ಬಿಸಿ ಗಾಳಿಯ ತಾಪಮಾನ ಇನ್ನಷ್ಟು ಬಿಸಿಯಾಗಿ ಇನ್ನಷ್ಟು ವೇಗವಾಗಿ ಚಲಿಸುತ್ತದೆ. ಹೀಗೆ ಸಮುದ್ರದ ಮೇಲೆ ಖಾಲಿಯಾದ ಜಾಗವು ಸುತ್ತಮುತ್ತಲಿನ ಗಾಳಿಯಿಂದ
ಭರ್ತಿಯಾಗಲು ಪ್ರಾರಂಭಿಸುತ್ತದೆ. ಹೀಗೆ ದೂರದಿಂದ ಬಂದ ಗಾಳಿಯು ಭರ್ತಿಯಾಗುವ ಬದಲು ಸುತ್ತಿಕೊಳ್ಳಲು ಪ್ರಾರಂಭಿಸುತ್ತದೆ. ಈ ರೀತಿ ಸುತ್ತುತ್ತಿರುವ ಗಾಳಿ ಅಂದರೆ ಚಂಡಮಾರುತ ಮೋಡದೊಳಗೆ ಹೋಗಿ ಮಳೆಯನ್ನು ಸುರಿಸುತ್ತದೆ. ಚಂಡಮಾರುತಕ್ಕೆ ಮೂಲ ಕಾರಣ ತಾಪಮಾನ. ಹೀಗಾಗಿ ಚಂಡಮಾರುತ ಭೂಮಿಯನ್ನು ದಾಟಿ ಹೋಗುವಾಗ ಅಲ್ಲಿ ತಂಪು ವಾತಾವರಣವಿದ್ದಲ್ಲಿ ಚಂಡಮಾರುತ ಸಾಯುತ್ತದೆ ಅಥವಾ ಚಂಡಮಾರುತದ ತೀವ್ರತೆ ಕಡಿಮೆ ಆಗುತ್ತದೆ.

ಸಾಮಾನ್ಯವಾಗಿ ಚಂಡಮಾರುತ ಮೊಟ್ಟೆ ಆಕಾರ ಅಥವಾ V ಆಕಾರದಲ್ಲಿ ಇರುತ್ತದೆ. ಉತ್ತರ ದ್ರುವದಲ್ಲಿ ಇದು ಗಡಿಯಾರಕ್ಕೆ ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ದಕ್ಷಿಣ ಧ್ರುವದಲ್ಲಿ ಗಡಿಯಾರದ ದಿಕ್ಕಿನಲ್ಲಿ ಚಲಿಸುತ್ತದೆ.
ಚಂಡ ಮಾರುತಗಳ ಸ್ವರೂಪ ಒಂದೇ ಆಗಿದ್ದರೂ ಸ್ಥಳಗಳ ಆಧಾರದ ಮೇಲೆ ಬೇರೆ ಬೇರೆ ರೀತಿಯಲ್ಲಿ ಕರೆಯಲಾಗುತ್ತದೆ. ಅಟ್ಲಾಂಟಿಕ್ ಸಾಗರದ ಚಂಡಮಾರುತಕ್ಕೆ ಹರಿಕೇನ್ ಎಂದೂ, ಹಿಂದೂ ಮಹಾಸಾಗರ ಚಂಡಮಾರುತಕ್ಕೆ ಸೈಕ್ಲೋನ್ ಮತ್ತು ಫಿಲಿಪೈನ್ಸ್ ಮತ್ತು ಫೆಸಿಫಿಕ್ ಸಾಗರದ ಚಂಡಮಾರುತಕ್ಕೆ ಟೈಫೋನ್ ಎಂದು ಕರೆಯಲಾಗುತ್ತದೆ.

ಚಂಡ ಮಾರುತಗಳಿಗೆ ಹೇಗೆ ಹೆಸರಿಡಲಾಗುತ್ತದೆ ?

ಕ್ರಿಸ್ತ ಶಕ 1800 ರ ಆಸು ಪಾಸಿಗೆ ಕ್ಯಾಥೋಲಿಕ್ ಸಂತರು, ಚಂಡಮಾರುತಗಳಿಗೆ ಹೆಸರನ್ನು ಇಡುತ್ತಿದ್ದರು. ಹಡಗುಗಳಿಗೆ ಹೆಚ್ಚಾಗಿ ಮಹಿಳೆಯರ ಹೆಸರನ್ನು ಇಡುವುದರಿಂದ 1953ರ ನಂತರ ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನು ಇಡಲು ಆರಂಭಿಸಿದರು. 1979ರ ನಂತರ ಪುರುಷರ ಹೆಸರನ್ನು ಇಡಲು ಶುರು ಮಾಡಿದರು. ಆದರೆ 2000 ನಂತರ ಚಂಡ ಮಾರುತಕ್ಕೆ ವ್ಯವಸ್ಥಿತವಾಗಿ ಹೆಸರು ನೀಡಲು ಪ್ರಾರಂಭವಾಯಿತು. ಏಷ್ಯಾ ಸ್ಪೆಸಿಫಿಕ್ ನಲ್ಲಿ ವರ್ಲ್ಡ್ ಮೆಟ್ರೋಲಜಿಕಲ್ ಆರ್ಗನೈಜೇಷನ್( ಯುನೈಟೆಡ್ ನೇಶನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಅಂಡ್ ಫೆಸಿಫಿಕ್) ಚಂಡಮಾರುತಗಳಿಗೆ ಹೆಸರು ಇಡುತ್ತಾ ಬಂದಿದೆ. ಆದರೆ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸೇರಿದಂತೆ Indian Ocean ಅಂದ್ರೆ ಹಿಂದೂ ಮಹಾಸಾಗರದಲ್ಲಿ ಉಂಟಾಗುವ ಚಂಡಮಾರುತಗಳಿಗೆ ಭಾರತದ ಹವಾಮಾನ ಇಲಾಖೆ ಹೆಸರಿಡುತ್ತದೆ ಮತ್ತು 12 ದೇಶಗಳಿಗೆ ಸಲಹೆ ನೀಡುತ್ತದೆ. 2020ರಲ್ಲಿ ಭಾರತ169 ಹೆಸರುಗಳನ್ನು ಕೊಟ್ಟಿದ್ದು ಉಳಿದ ಸದಸ್ಯ ದೇಶಗಳು 13 ಹೆಸರುಗಳನ್ನು ಕೊಟ್ಟಿವೆ. ಹೀಗೆ ರೊಟೇಶನ್ ರೀತಿಯಲ್ಲಿ ಚಂಡ ಮಾರುತಗಳಿಗೆ ಬೇರೆ ಬೇರೆ ಹೆಸರನ್ನು ಇಡಲಾಗುತ್ತದೆ. ಸದ್ಯ ಈಗ ಸದ್ದು ಮಾಡುತ್ತಿರುವ ‘ಮೈಚಾಂಗ್’ ಚಂಡಮಾರುತದ ಹೆಸರನ್ನು ಮಯನ್ಮಾರ್ ದೇಶದ ಸಲಹೆ ಮೇರೆಗೆ ಇಡಲಾಗಿದೆ. ಮೈಚಾಂಗ್ ಪದದ ಅರ್ಥ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ . ಮೈಚಾಂಗ್ ಚಂಡಮಾರುತ ಡಿಸೆಂಬರ್ 3 ರಂದು ಬಂಗಾಳ ಕೊಲ್ಲಿ ತಲುಪಿದ್ದು, ಇದು ಈ ವರ್ಷದ ಬಂಗಾಳ ಕೊಲ್ಲಿಯ ನ 4ನೇ ಮತ್ತು ಹಿಂದೂ ಮಹಾಸಾಗರದ 6 ನೆ ಚಂಡಮಾರುತವಾಗಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

55 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

55 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

55 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

55 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

55 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

55 years ago