ಸ್ನೇಹಿತರೆ ಬಹು ನಿರೀಕ್ಷಿತ ಭಾರತದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಭರ್ಜರಿ ಆರಂಭ ಕಂಡಿದ್ದು, ಎಲ್ಲ ತಂಡಗಳು ಜಿದ್ದಾ ಜಿದ್ದಿನ ಪೈಪೋಟಿಗೆ ಇಳಿದಿದ್ದು ಐಪಿಎಲ್ ರಂಗು ಮತ್ತಷ್ಟು ಹೆಚ್ಚಿದೆ. ಇದಕ್ಕೆ ಮತ್ತಷ್ಟು ಕಳೆ ತಂದಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ದಾಖಲೆಗಳ ಸರಮಾಲೆ. ಅಷ್ಟಕ್ಕೂ ಕಿಂಗ್ ಕೊಹ್ಲಿ ಮಾಡಿದ್ದು ಅದೆಂಥಾ ಸಾಧನೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ…
Thank you for reading this post, don't forget to subscribe!ಸ್ನೇಹಿತರೆ ದಾಖಲೆಗಳ ಸರದಾರ ಎಂದೇ ಖ್ಯಾತಿ ಹೊಂದಿರುವ ವಿರಾಟ ಕೊಹ್ಲಿ ಮೈದಾನಕ್ಕೆ ಇಳಿದರೆ ಸಾಕು ದಾಖಲೆಗಳು ಹುಟ್ಟಿಕೊಳ್ಳುತ್ತವೆ. ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 31 ರನ್ ಬಾರಿಸುವ ಮೂಲಕ T-20 ಕ್ರಿಕೆಟ್ ನಲ್ಲಿ 12,000 ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್ ಮನ್ ಎಂಬ ದಾಖಲೆ ಬರೆದಿದ್ದರು. ಇದೀಗ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ 77 ರನ್ ಸಿಡಿಸುವ ಮೂಲಕ T-20 ಇತಿಹಾಸದಲ್ಲಿ ಅರ್ಧ ಶತಕಗಳ ಶತಕ ಸಿಡಿಸಿದ ವಿಶ್ವದ & ಭಾರತದ ಪ್ರಥಮ ಬ್ಯಾಟ್ಸ್ ಮ್ಯಾನ್ ಎಂಬ ದಾಖಲೆಗೆ ಪಾತ್ರರಾದರು. ಈ ದಾಖಲೆಯ ಮೂಲಕ ಅವರು ತಾವು ಮತ್ತೊಮ್ಮೆ ಕಿಂಗ್ ಕೊಹ್ಲಿ ಎಂದು ಸಾಬೀತು ಪಡಿಸಿದ್ದಾರೆ.
ಇದೇ ರೀತಿಯ ವಿಶೇಷ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಗ್ರೂಪ್ ಗೆ ಸೇರಿಕೊಳ್ಳಿ……https://whatsapp.com/channel/0029VaDOwCTKQuJKSwo7D63M