ಸ್ನೇಹಿತರೆ ಮುಂಬರುವ ಐಪಿಎಲ್ 2024ರಲ್ಲಿ ರ್‌ಸಿಬಿ ತಂಡದ ಪರವಾಗಿ ಆಡಲಿರುವ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್ಮನ್ ಮತ್ತು ಬೌಲರ್ ಆದ ಕ್ಯಾಮರೂನ್ ಗ್ರೀನ್ ಆರ್ ಸಿ ಬಿ ಅಭಿಮಾನಿಗಳಿಗೆ ಭರ್ಜರಿ ಸಂದೇಶವೊಂದನ್ನು ಕಳಿಸಿದ್ದಾರೆ. ಏನದು ಆ ಸಂದೇಶ? ಅಷ್ಟಕ್ಕೂ ಗ್ರೀನ್ ಅದರಲ್ಲಿ ಏನು ಹೇಳಿದ್ದಾರೆ ನೋಡೋಣ ಬನ್ನಿ..
Thank you for reading this post, don't forget to subscribe!ಕಳೆದ ವರ್ಷ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಗ್ರೀನ್ ಮುಂಬರಲಿರುವ ಐಪಿಎಲ್ ನಲ್ಲಿ ಆರ್ ಸಿ ಬಿ ಪರವಾಗಿ ಆಡಲಿದ್ದಾರೆ. ಬ್ಯಾಟಿಂಗ್ ದೈತ್ಯ ಎಂತಲೇ ಹೆಸರುವಾಸಿಯಾಗಿರುವ ಅವರು ವೇಗದ ಬೌಲರ್ ಕೂಡಾ ಹೌದು. ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಲು ಅವರು ಸಂತೋಷವನ್ನು ವ್ಯಕ್ತ ಪಡಿಸಿದ್ದು,ಅಭಿಮಾನಿಗಳಿಗೆ ವಿಡಿಯೋ ಸಂದೇಶವೊಂದನ್ನು ಕಳಿಸಿದ್ದಾರೆ.
ಈ ವಿಡಿಯೋ ಸಂದೇಶದಲ್ಲಿ ಗ್ರೀನ್ ಅವರು, “ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಮ್ಮೆಲ್ಲರನ್ನು ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ. ಆರ್ ಸಿ ಬಿ ಕೋಚ್ ಆಂಡಿ ಫ್ಲಾವರ್ ಮತ್ತು ಆರ್ ಸಿ ಬಿ ತಂಡವನ್ನು ಕೂಡಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ” ಎಂದು ತಮ್ಮ ಹರ್ಷವನ್ನು ಹಂಚಿಕೊಂಡಿದ್ದಾರೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.