ಇದೀಗ ರಾಜ್ಯ ಸರ್ಕಾರವು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ SC ಮತ್ತು ST ನಿಗಮದ ಅಡಿಯಲ್ಲಿ ಆಯಾ ವರ್ಗಕ್ಕೆ ಸೇರಿದ ಅರ್ಹ ರೈತರಿಗೆ ಬೋರ್ ವೆಲ್ ಕೊರೆಸಲು ಸಹಾಯಧನವನ್ನು ನೀಡುತ್ತಿದೆ. ಹಾಗಾಗಿ ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. Ganga Kalyan Yojana
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧೀಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ರೈತರ ಇಳುವರಿ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಹಲವಾರು ಯೋಜನೆಗಳ ಮೂಲಕ ಸಬ್ಸಿಡಿ ಹಾಗೂ ಸಹಾಯಧನವನ್ನು ನೀಡುತ್ತಿವೆ.
Thank you for reading this post, don't forget to subscribe!ಇದೀಗ ರಾಜ್ಯ ಸರ್ಕಾರವು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ SC ಮತ್ತು ST ನಿಗಮದ ಅಡಿಯಲ್ಲಿ ಆಯಾ ವರ್ಗಕ್ಕೆ ಸೇರಿದ ಅರ್ಹ ರೈತರಿಗೆ ಬೋರ್ ವೆಲ್ ಕೊರೆಸಲು ಸಹಾಯಧನವನ್ನು ನೀಡುತ್ತಿದೆ. ಹಾಗಾಗಿ ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. Ganga Kalyan Yojana
ಹಾಗಾದರೆ ಹೇಗೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು , ಅರ್ಜಿ ಸಲ್ಲಿಸಲು ಅರ್ಹತೆಗಳೇನು,ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ. Ganga Kalyan Yojana Apply
ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ಹಿಂದುಳಿದ ವರ್ಗದ ರೈತರಿಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ಗಂಗಾ ಕಲ್ಯಾಣ ಯೋಜನೆ ಒಂದು. ಈ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಬೋರ್ ವೆಲ್ ಕೊರೀಸಲು ಸಹಾಯಧನವನ್ನು ನೀಡಲಾಗುತ್ತದೆ.
ಆಯಾ ವರ್ಗದ ಹಿಂದುಳಿದ ರೈತರಿಗೆ ತಮ್ಮ ಜಮೀನಿನಲ್ಲಿ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಆಯಾ ವರ್ಗದ ಅಭಿವೃದ್ಧಿ ನಿಗಮಗಳ ವತಿಯಿಂದ ಈ ಯೋಜನೆ ಅಡಿಯಲ್ಲಿ ಸಹಾಯಧನವನ್ನು ನೀಡಲಾಗುತ್ತದೆ. Ganga Kalyan Yojana Karnataka
ಪ್ರಸ್ತುತ ಈ ಯೋಜನೆ ಅಡಿಯಲ್ಲಿ ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ,ರಾಮನಗರ, ಕೋಲಾರ, ಚಿಕ್ಕ ಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಅರ್ಜಿ ಸಲ್ಲಿಸುವ ರೈತರಿಗೆ 4.75 ಲಕ್ಷ ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ. ಈ ಹಣದಲ್ಲಿ 75,000 ರೂಪಾಯಿ ಬೋರ್ ವೆಲ್ ವಿದ್ಯುದ್ದಿಕರಣ ಮಾಡಲು ಉಪಯೋಗಿಸಬೇಕು.
ಇನ್ನು ಉಳಿದ ಜಿಲ್ಲೆಯಿಂದ ಅರ್ಜಿ ಸಲ್ಲಿಸುವ ರೈತರಿಗೆ ಈ ಯೋಜನೆ ಅಡಿಯಲ್ಲಿ 3.75 ಲಕ್ಷ ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ. ಈ ಹಣದಲ್ಲಿ 75,000 ರೂಪಾಯಿಯನ್ನು ಬೋರ್ ವೆಲ್ ವಿದ್ಯುದ್ದಿಕರಣ ಮಾಡಲು ಉಪಯೋಗಿಸಬೇಕು. Ganga Kalyan Yojana 2025
https://landrecords.karnataka.gov.in/Service2/https://landrecords.karnataka.gov.in/Service2/
ಒಂದು ವೇಳೆ ಈ ಸಹಾಯಧನದಲ್ಲಿ ಬೋರ್ ವೆಲ್ ಘಟಕ ನಿರ್ಮಾಣ ಮಾಡಲು ಆಗದೆ ಇದ್ದಲ್ಲಿ ಶೇಕಡಾ 4 ರ ಬಡ್ಡಿಯಂತೆ 50,000 ರೂಪಾಯಿ ಸಾಲವನ್ನು ನೀಡಲಾಗುತ್ತದೆ.
ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ರೈತರು 1.20 ರಿಂದ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ಇನ್ನು ಈ ಯೋಜನೆ ಅಡಿಯಲ್ಲಿ ಲಾಭ ಪಡೆಯಲು ಬಯಸುವ ರೈತರ ಕುಟುಂಬಗಳಿಂದ ಯಾವ ಸದಸ್ಯನೂ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿರಬಾರದು.
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ರೈತರು ಕೆಳಗೆ ನೀಡಲಾಗಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹೀಗಿವೆ:-
*ಜಾತಿ ಮತ್ತು ಆದಾಯ ಪ್ರಮಾಣ ಪತ್ರ
*ಆಧಾರ್ ಕಾರ್ಡ್
*ಹೊಲದ ಪಹಣಿ ಪತ್ರ
*ರೇಷನ್ ಕಾರ್ಡ್
*ಬ್ಯಾಂಕ್ ಪಾಸ್ಬೂಕ್ ಜೆರಾಕ್ಸ್
*ಸಣ್ಣ ಹಿಡುವಳಿ ಪ್ರಮಾಣ ಪತ್ರ
*ಕೊಳವೆ ಬಾವಿ ಇಲ್ಲದಿರುವ ಪ್ರಮಾಣ ಪತ್ರ
*ಮೊಬೈಲ್ ನಂಬರ್
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ರೈತರು ಸೆಪ್ಟೆಂಬರ್ 10 ರ ಒಳಗಾಗಿ ಎಲ್ಲಾ ದಾಖಲೆಗಳ ಸಹಿತ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
ಈ ಯೋಜನೆ ಅಡಿಯಲ್ಲಿ ಲಾಭ ಪಡೆಯಲು ಬಯಸುವ ರೈತರು ತಮ್ಮ ಸಮೀಪದ ಗ್ರಾಮ್ ಒನ್ ಅಥವಾ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಇನ್ನು ಈ ಯೋಜನೆಗೆ ನೀವು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲೇ ಕೆಳಗೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬುದು.
https://sevasindhu.karnataka.gov.in/Sevasindhu/Kannada?ReturnUrl=%2F.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇
ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಆಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಇವತ್ತು ನೀವು ಸರ್ಕಾರದ ಯಾವುದೇ…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನಿಮಗೆ ನಿಮ್ಮ ಜಮೀನಿನ ನಕ್ಷೆ…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…
ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತ ಮಿತ್ರರೇ,ಒಂದು ಕಡೆ ಕರ್ನಾಟಕಕ್ಕೆ ಈಗಾಗಲೇ…
ಹೌದು ರೈತ ಮಿತ್ರರೇ, ರಾಜ್ಯ ಸರಕಾರದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಕುರಿ ಮತ್ತು ಉಣ್ಣೆ ಸಾಕಾಣಿಕೆ…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ರಾಜ್ಯ ಸರ್ಕಾರವು ಆರ್ಥಿಕವಾಗಿ ಬಡತನದಲ್ಲಿರುವ…