2020 ರ ಆರಂಭದಲ್ಲಿ ಜೇಪ್ ಬೇಜೊಸ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು ಆ ಸಮಯದಲ್ಲಿ ಅವರ ಒಟ್ಟು ನೆಟ್ವರ್ತ್ 113 ಬಿಲಿಯನ್ ಡಾಲರ್ ಆಗಿತ್ತು. ಅದೇ ಸಮಯದಲ್ಲಿ ಎಲಾನ್ ಮಸ್ಕ್ ಒಟ್ಟು ಆಸ್ತಿ 27 ಬಿಲಿಯನ್ ಡಾಲರ್ ಆಗಿತ್ತು. ಜುಲೈ 2020ರಲ್ಲಿ ವಾರನ್ ಬಫೆಟ್ ರನ್ನ ಹಿಂದಿಕ್ಕಿ ಜಗತ್ತಿನ ಏಳನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ. ನವಂಬರ್ 2020ರಲ್ಲಿ ಬಿಲ್ ಗೇಟ್ಸ್ ಬಿಲ್ ಗೇಟ್ ತರನ ಹಿಂದಿಕ್ಕಿ ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಎಂದು ಹೊರಹೊಮ್ಮಿದ. ಕೊನೆಗೆ 2021ರ ಜನವರಿ 7 ರಂದು ಸತತ ಮೂರು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಜೆಫ್ ಬೆಜೋಸ್ ರನ್ನ ಹಿಂದಕ್ಕಿ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ. ಕರುಣದಿಂದಾಗಿ ವ್ಯಾಪಾರದಲ್ಲಿ ಏರುಪೇರಾಗಿ ಒಂದೆರಡು ಬಾರಿ ಎರಡನೇ ಸ್ಥಾನಕ್ಕೆ ಬಂದದ್ದು ಬಿಟ್ಟರೆ ಈಗಲೂ ಒಟ್ಟು 211 ಬಿಲಿಯನ್ ಡಾಲರ್ ನೊಂದಿಗೆ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾನೆ. 2020ರಲ್ಲಿ ಕಷ್ಟಪಟ್ಟುವ ಟಾಪ್ ಫಿಫ್ಟಿ ಎಲ್ಲಿ ಕಾಣಿಸಿಕೊಳ್ಳುತ್ತಿದ್ದ ಈತ ಈಗ ನಂಬರ್ ಒನ್ ಸ್ಥಾನದ ಕಿರೀಟ ಅವನ ತಲೆ ಮೇಲಿದೆ.
ಕಳೆದ ಒಂದು ವರ್ಷದಲ್ಲಿ ಎಲಾನ್ ಮಸ್ಕ್ ಗಳಿಸಿದ ಲಾಭದಷ್ಟೂ ಬಿಲ್ ಗೇಟ್ಸ್ ಅವರ ಒಟ್ಟು ಆಸ್ತಿ ಕೂಡ ಇಲ್ಲ. ಜಗತ್ತಿನ ನಂಬರ್ ಒನ್ ಶ್ರೀಮಂತನಾದ ಎಲಾನ್ ಮಸ್ಕ್ ಇತಿಹಾಸವನ್ನ ನೋಡುವುದಾದರೆ 12ನೇ ವರ್ಷದಲ್ಲಿಯೇ ಅಂದ್ರೆ ನಾವು ನೀವೆಲ್ಲ ಟಿವಿನಲ್ಲಿ ಕಾರ್ಟೂನ್ ಅಥವಾ ವಿಡಿಯೋ ಗೇಮ್ ಆಡ್ತಿರೋ ವಯಸ್ಸಿನಲ್ಲೇ ಒಂದು ವಿಡಿಯೋ ಗೇಮ್ ಅನ್ನು ತಯಾರಿಸಿದ್ದ. ಅದೇ ವಿಡಿಯೋ ಗೇಮ್ ಅಣ್ಣ 500 ಡಾಲರ್ ಗೆ ಮಾರಿಯೂ ಬಿಟ್ಟಿದ್ದ. ಎಲಾನ್ ಮಸ್ಕ್ ಬಾಲ್ಯದಿಂದಲೇ ಉಳಿದ ಮಕ್ಕಳಿಗಿಂತ ವೇಗ ಮತ್ತು ಬುದ್ಧಿವಂತನಾಗಿದ್ದ. ಆದ್ದರಿಂದ ಉಳಿದ ಮಕ್ಕಳು ಅವನೊಂದಿಗೆ ಜಗಳವಾಡುತ್ತಿದ್ದರು. ಒಂದು ಸಂದರ್ಶನದಲ್ಲಿ ಎಲ್ಲಾನು ಮಸ್ಕ್ ಹೇಳುತ್ತಾನೆ ಬಾಲ್ಯದಲ್ಲಿ ಅವನಿಗೆ ಯಾವುದೇ ಗೆಳೆಯರು ಇಲ್ಲವಾದ್ದರಿಂದ ಅವನು ಪುಸ್ತಕಗಳನ್ನೇ ತನ್ನ ಬೆಸ್ಟ್ ಫ್ರೆಂಡ್ ಗಳನ್ನಾಗಿ ಮಾಡಿಕೊಂಡನು. ಕುಂತರು ನಿಂತರು ದಿನದ 15 ಗಂಟೆ ಅವನು ಪುಸ್ತಕಗಳನ್ನೇ ಓದಲು ಶುರು ಮಾಡಿದ.
ಬಾಲ್ಯದಲ್ಲಿ ಎಲನ್ ಮಸ್ಕ್ ರ ತಂದೆ ತಾಯಿಗಳು ಮತ್ತು ನೆರೆಹೊರೆಯವರು ಅವನನ್ನ ಕಿವುಡ ಎಂದು ಭಾವಿಸಿದ್ದರು. ಆದರೆ ಮಸ್ಕ್ ನಿಜವಾಗಿಯೂ ಕಿವುಡನಾಗಿರಲಿಲ್ಲ ಮತ್ತು ಅವನು ಯಾರ ಮಾತು ಕೇಳುತ್ತಿರಲಿಲ್ಲ. ಏಕೆಂದರೆ ಅವನ ಏಕಾಗ್ರತೆ ಎಷ್ಟು ನಿಖರವಾಗಿತ್ತು ಎಂದರೆ ಅವನು ಒಮ್ಮೆ ಒಂದು ವಿಷಯದ ಮೇಲೆ ಗಮನ ಕೇಂದ್ರೀಕರಿಸಿದರೆ ಮತ್ತೆ ಬೇರೆ ಏನೂ ಕೇಳುತ್ತಿರಲಿಲ್ಲ. ಒಂದು ಕಡೆ ಒಬ್ಬ ಶ್ರೀಸಾಮಾನ್ಯ ವಾರಕ್ಕೆ 40 ರಿಂದ 50 ಗಂಟೆಗಳಷ್ಟು ಕೆಲಸ ಮಾಡುತ್ತಿದ್ದರೆ ಇನ್ನೊಂದು ಕಡೆ ಮಸ್ಕ್ ವಾರಕ್ಕೆ ಒಂದು 100 ಗಂಟೆಗಳಷ್ಟು ಕೆಲಸ ಮಾಡುತ್ತಿದ್ದ ಮತ್ತು ಅವನು ತನ್ನ ಕೆಲಸದಿಂದ ಎಂದಿಗೂ ರಜೆ ತೆಗೆದುಕೊಳ್ಳುತ್ತಾ ಇರಲಿಲ್ಲ. ಇದು ಅದೃಷ್ಟದ ಆಟ ಅಲ್ಲ ಸ್ನೇಹಿತರೆ ಬದಲಾಗಿ ಇದು ಹುಚ್ಚರಾಟ. ಇದು ಕೇವಲ ಹುಚ್ಚುತನ ಅಲ್ಲ ಬದಲಾಗಿ ಮಹಾ ಹುಚ್ಚುತನ. ಇದೇ ಹುಚ್ಚ ನಾವು ನೀವು ಯಾರು ಊಹಿಸಿರದನ್ನ ಈತ ಈಗ ಮಾಡಿ ತೋರಿಸಿದ್ದಾನೆ.
ಹಿತ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಹಲವಾರು ಕಂಪನಿಗಳನ್ನ ಹುಟ್ಟು ಹಾಕಿದ ಕೇವಲ ಒಂದೆರಡು ಚೆಕ್ ಗಳಿಂದ ಹಣವನ್ನು ಪಡೆಯಲು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ನಿಲ್ಲುವ ಜನರನ್ನ ಕಂಡು ಯಾಕೆ ತಾನು ಅವರಿಗಾಗಿ ಆನ್ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಹುಟ್ಟು ಹಾಕಬಾರದು ಎಂದು ಆತ ಯೋಚಿಸಿದ ಈ ಕಾರಣದಿಂದ ಅವನು ಎಕ್ಸ್ ಡಾಟ್ ಕಾಮ್ ಎಂಬ ಕಂಪನಿಯನ್ನು ಹುಟ್ಟು ಹಾಕಿ ಕನ್ ಫಿನಿಟಿ ಎಂಬ ಸಂಸ್ಥೆಯೊಂದಿಗೆ ಸೇರಿಸಿ ಕಂಪನಿ ಹೆಸರನ್ನು ಪೇಪಾಲ್ ಎಂದು ಮರುನಾಮಕರಣ ಮಾಡಿದ. ಮುಂದೆ ಈ ಕಂಪನಿಯನ್ನು ಇದೇ ಎಂಬ ಕಂಪನಿಯು 1.5 ಬಿಲಿಯನ್ ಡಾಲರ್ ಕೊಟ್ಟು ಖರೀದಿಸಿತು. ಇದರಿಂದ ಎಲ್ಲಾನು ಮಸ್ಕಿಗೆ 180 ಮಿಲಿಯನ್ ಡಾಲರ್ ನಷ್ಟು ಹಣ ಸಿಕ್ಕಿತು. ಅಂದರೆ ಬರೋಬ್ಬರಿ 1,400 ಕೋಟಿ ರೂಪಾಯಿ. ಈ ಸಮಯದಲ್ಲಿ ಅವನಿಗೆ 30 ವರ್ಷ ವಯಸ್ಸು ಆತ ಮನಸ್ಸು ಮಾಡಿದ್ದರೆ ಅವನು ಜೀವನ ಪೂರ್ತಿ ಈ ಹಣದಿಂದ ವಿಲಾಸ ಭೋಗವನ್ನು ಅನುಭವಿಸಬಹುದಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಈ ಹಣವನ್ನ ಆತ ಹೊಸ ಕಂಪನಿಗಳಲ್ಲಿ ಹೂಡಿಕೆ ಮಾಡಿ ಮುಂದೆ ಸ್ಪೇಸ್ ಎಕ್ಸ್ ಎಂಬ ತನ್ನದೇ ಹೊಸ ಕಂಪನಿಯನ್ನು ಶುರು ಮಾಡಿದ. ಆ ಸಮಯದಲ್ಲಿ ರಷ್ಯಾ ರಾಕೆಟ್ ಟೆಕ್ನಾಲಜಿಯಲ್ಲಿ ಬಹಳ ಮುಂದುವರೆದಿತ್ತು. ಆದ್ದರಿಂದ ತನ್ನ ಕಂಪನಿಗಾಗಿ ರಾಕೆಟ್ಗಳನ್ನ ಖರೀದಿಸಲು ಮಸ್ಕ್ ರಷ್ಯಾಗೆ ಹೋದಾಗ ಅಲ್ಲಿ ಅವನನ್ನ ನಗೆ ಪಾಟಲಿಗೆ ಈಡು ಮಾಡಲಾಯಿತು. ಅಲ್ಲಿಂದ ಮರಳಿದ ಮಸ್ಕ್ ಸ್ವತಃ ತಾನೇ ಕಲಿಯಲು ಶುರು ಮಾಡಿದ.
ಬಹಳ ಪರಿಶ್ರಮದಿಂದ ಆತ ತನ್ನ ಪ್ರಥಮ ರಾಕೆಟ್ ಅನ್ನ ಉಡಾವಣೆ ಮಾಡಿದ. ಆದರೆ ಅದು ವಿಫಲವಾಯಿತು. ಆದರೆ ಆತ ಇಲ್ಲಿಗೆ ನಿಲ್ಲಿಸಲಿಲ್ಲ ಮತ್ತೆ ಎರಡನೇ ರಾಕೆಟ್ ಉಡಾವಣೆ ಮಾಡಿದ ರಾಕೆಟ್ ಏನೋ ಬಾಹ್ಯಕಾಶಕ್ಕೆ ತೆರಳಿತು ಆದರೆ ಅದು ಸರಿಯಾದ ಕಕ್ಷೆಗೆ ಸೇರಲಿಲ್ಲ. ಈ ವಿಫಲತೆಯ ನಂತರವೂ ಅವನು ಮೂರನೇ ರಾಕೆಟ್ ಉಡಾವಣೆ ಮಾಡಿದ. ಈ ಎಲ್ಲ ವಿಫಲತೆಗಳ ಕಾರಣದಿಂದ ಅವನ ಎಲ್ಲಾ ಹಣ ಮಂಜಿನಂತೆ ಕರಗಿ ಹೋಯಿತು ಕಂಪನಿಯು ನಷ್ಟದತ್ತ ಮುಖ ಮಾಡಿತ್ತು.
ಈ ವಿಫಲತೆಗಳ ಕಾರಣ ಕೊಟ್ಟು ನಾಸಾ ಕೂಡ ಇವನೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರಾಕರಿಸಿತು. ಆದರೆ ಈತ ಇಲ್ಲಿಗೆ ನಿಲ್ಲಲಿಲ್ಲ ಅವನು ಕೊನೆಯದಾಗಿ ನಾಲ್ಕನೇ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಮುಂದೆ ಆತ ಈ ಕಂಪನಿಯಲ್ಲಿಯೂ ಯಶಸ್ವಿಯಾದ. ಭೂಗರ್ಭದಲ್ಲಿರುವ ಕಲ್ಲಿದ್ದಲನ್ನ ಅಗೆದು ಅದನ್ನು ಸುಟ್ಟು ವಿದ್ಯುತ್ ತಯಾರಿಸುವುದನ್ನು ಕಂಡ ಈತ ಅದರಿಂದ ಹೊರಹೊಮ್ಮುವ ಕಲುಷಿತ ಹೊಗೆಯಿಂದ ಆಗುವ ಪರಿಸರ ಮಾಲಿನ್ಯವನ್ನು ತಡೆಯಲು ಸೋಲಾರ್ ಸಿಟಿ ಎಂಬ ಹೊಸ ಅಧ್ಯಾಯವನ್ನ ಶುರು ಮಾಡಿದ. ಇದರ ಮಾಲಿಕತ್ವವನ್ನು ತನ್ನ ಸಂಬಂಧಿಗೆ ನೀಡಿ ಅದರಲ್ಲಿ ಹೂಡಿಕೆ ಶುರು ಮಾಡಿದ ಈ ಕಂಪನಿಯು ಯಶಸ್ವಿಯಾಗಿ ಅವನಿಗೆ ನಿವ್ವಳ ಲಾಭವನ್ನ ತಂದುಕೊಟ್ಟಿತು.
ಇದರ ಮುಂದುವರೆದ ಭಾಗವಾಗಿ ಮಾಲಿನ್ಯವನ್ನು ಕಡಿಮೆಗೊಳಿಸಲು ಎಲೆಕ್ಟ್ರಿಕ್ ಕಾರುಗಳನ್ನು ಹುಟ್ಟುಹಾಕಿದ. ಆದರೆ ಇದಕ್ಕೆ ಯಾರು ಬಂಡವಾಳ ಹೂಡಲು ಮುಂದೆ ಬರಲಿಲ್ಲ ಯಾಕೆಂದರೆ ಎಲೆಕ್ಟ್ರಿಕ್ ಕಾರುಗಳು ಮಕ್ಕಳ ಆಟಿಕೆಗಳಂತೆ ಎಂದು ಅವರು ಭಾವಿಸಿದ್ದರು ಆದ್ದರಿಂದ ಸ್ವತಹ 6.3 ಮಿಲಿಯನ್ ಡಾಲರ್ ಹಣವನ್ನು ತನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ ಈ ಕಂಪನಿಯ ಹೆಸರೇ Tesla. ಆತ ತನ್ನ ಕಾರಿನ ವಿನ್ಯಾಸವನ್ನು ಎಷ್ಟು ಆಕರ್ಷಕವಾಗಿ ರೂಪಿಸಿದನೆಂದರೆ ಅದನ್ನು ನೋಡಿದ ಪ್ರತಿ ವ್ಯಕ್ತಿಯು ಅದನ್ನು ಖರೀದಿಸಲೇಬೇಕು ಎಂದು ಹಂಬಲಿಸುವ ಅಷ್ಟರಮಟ್ಟಿಗೆ. ಈ ಕಂಪನಿಯಲ್ಲಿಯೂ ಆತ ಯಶಸ್ಸಿನ ಉತ್ತುಂಗಕ್ಕೆ ಏರಿದ. ಮುಂದೆ ಆಫೀಸಿಗೆ ಹೋಗುವ ಸಂದರ್ಭದಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ಆತ ದ ಬೋರಿಂಗ್ ಕಂಪನಿ ಎಂಬ ಹೆಸರಿನ ಹೊಸ ಕಂಪನಿ ಒಂದನ್ನೇ ಶುರು ಮಾಡಿದ. ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸುರಂಗ ಕೊರೆದು ಭೂಗರ್ಭದಲ್ಲಿ ರಸ್ತೆ ನಿರ್ಮಿಸುವ ಕಾರ್ಯವನ್ನು ಈ ಕಂಪನಿಯು ಶುರು ಮಾಡಿತು ಆಫೀಸ್ ಗಾಗಿ ಹೊರಡಲು ತಡವಾದ ಕಾರಣ ಆತನ ಮನಸ್ಸಿನಲ್ಲಿ ಇಂತದ್ದೊಂದು ಅದ್ಭುತ ಆಲೋಚನೆ ಮೂಡಿತ್ತು. ಸ್ನೇಹಿತರೆ ಒಂದು ವೇಳೆ ಮಸ್ಕ ಸ್ಥಾನದಲ್ಲಿ ನಾವು ನೀವು ಇದ್ದರೆ ನಮ್ಮ ಸರ್ಕಾರಗಳನ್ನು ಬೈದುಕೊಂಡು ಸುಮ್ಮನಾಗಿರುತ್ತಿದ್ದೆವು. ಆದರೆ ಮಸ್ಕ್ ಹಾಗೆ ಮಾಡಲಿಲ್ಲ ಆತ ಅದಕ್ಕೆ ಸ್ವತಹ ಪರಿಹಾರ ಕಂಡುಕೊಂಡಿದ್ದ.ಕೇವಲ ಇಷ್ಟೇ ಅಲ್ಲ ಸ್ನೇಹಿತರೆ ಬರಲಿರುವ ದಿನಗಳಲ್ಲಿ ಮಸ್ಕ್ ಬರೋಬ್ಬರಿ 42,000 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಪ್ರತಿ ವ್ಯಕ್ತಿ ಕಡಿಮೆ ದರದಲ್ಲಿ ಅತಿ ವೇಗದ ಇಂಟರ್ನೆಟ್ ಬಳಸಲಿ ಎಂಬ ಮಹೋನ್ನತ ಉದ್ದೇಶ ಹೊಂದಿದ್ದಾನೆ ಈಗ ಆತ ಮುಟ್ಟಿದ್ದೆಲ್ಲ ಚಿನ್ನವೇ ಆಗಿದೆ.
ಇದನ್ನೂ ಓದಿ…
ನಿಮ್ಮನ್ನು ರೋಮಾಂಚನಗೊಳಿಸುವ ಕಥೆ.. ತಪ್ಪದೇ ಓದಿ!
ಅದೊಂದು ಊರು, ಅಲ್ಲೊಂದು ಹೋಟೆಲು. ಆ ಊರಿನ ಮಟ್ಟಿಗೆ ಭಾರಿ ಜನಪ್ರಿಯವೇ ಆಗಿತ್ತು. ಸಾಕಷ್ಟು ಜನ ಬಂದು ಅಲ್ಲಿ ತಿಂಡಿ ಊಟ ಮಾಡಿ ಹೋಗುತ್ತಾ ಇದ್ದರು. ಅದೊಂದು ಸಾರಿ ಒಬ್ಬ ವ್ಯಕ್ತಿ ಅಲ್ಲಿಗೆ ಊಟಕ್ಕೆ ಹೋದ.ಹೋಟೆಲ್ ತುಂಬಿ ತುಳುಕುತ್ತಿತ್ತು. ಆಗ ಯಾರೋ ಒಬ್ಬ ಹೋಟೆಲ್ಗೆ ಬಂದು ಊಟ ಮಾಡಿ ತುಂಬಾ ಜನರ ಮಧ್ಯೆ ಹಣವನ್ನ ಕೊಡದೆ ಕಳ್ಳನ ಹಾಗೆ ತಪ್ಪಿಸಿಕೊಂಡು ಹೋಗುತ್ತಿರುವುದು ಈ ವ್ಯಕ್ತಿಗೆ ಕಂಡಿತು. ಅವನನ್ನ ಹಿಡಿಬೇಕು ಅಂತ ಈ ವ್ಯಕ್ತಿ ಮರುದಿನವೂ ಅದೇ ಹೊತ್ತಿಗೆ ಅಲ್ಲಿಗೆ ಹೋದ. ಹಿಂದಿನ ದಿನ ಊಟ ಮಾಡಿ ಹಣ ಕೊಡದೆ ತಪ್ಪಿಸಿಕೊಂಡು ಹೋಗಿದ್ದವನು ಅದೇ ಸಮಯದಲ್ಲಿ ಅಲ್ಲಿ ಊಟ ಮಾಡ್ತಾ ಇದ್ದ. ಈ ವ್ಯಕ್ತಿ ಮೆಲ್ಲನೆ ಹೋಗಿ ಹೋಟೆಲ್ ಮ್ಯಾನೇಜರ್ ಗೆ ವಿಷಯ ತಿಳಿಸಿದ. ಆಗ ಹೋಟೆಲ್ ಮ್ಯಾನೇಜರ್ ಹೇಳಿದ “ಅವನು ಊಟ ಮಾಡಿ ಹೋಗಲಿ ನಾವು ಆಮೇಲೆ ಮಾತಾಡೋಣ” ಎಂದು.
ಹಿಂದಿನ ದಿನದ ಹಾಗೆ ಊಟ ಮಾಡಿದ ವ್ಯಕ್ತಿ ಮೆಲ್ಲಗೆ ತಲೆತಗ್ಗಿಸಿಕೊಂಡು ಜನರ ಮಧ್ಯೆ ತಪ್ಪಿಸಿಕೊಂಡು ಹೋದ. ಹಣವನ್ನು ಪಾವತಿ ಮಾಡಲೇ ಇಲ್ಲ. ಆಗ ಈ ವ್ಯಕ್ತಿ ಹೋಟೆಲ್ ಮಾಲೀಕನ ಬಳಿ ಬಂದು ಕೇಳಿದ “ಯಾಕೆ ಅವನನ್ನ ಹಾಗೆ ಹೋಗಲು ಬಿಟ್ರಿ ಅವನಿಗೆ ಯಾಕೆ ನೀವು ಶಿಕ್ಷೆ ಕೊಡಲಿಲ್ಲ” ಅಂತ ಕೇಳಿದ. ಅದಕ್ಕೆ ಹೋಟೆಲ್ ಮಾಲೀಕ ಉತ್ತರಿಸಿದ ಸರ್ ನೀವು ಒಬ್ಬರೇ ಅಲ್ಲ ನಮ್ಮ ಹೊಟ್ಟೆಯಲ್ಲಿನ ಹಲವಾರು ರೆಗ್ಯುಲರ್ ಕಸ್ಟಮರ್ಗಳು ಅವನು ಇಲ್ಲಿ ತುಂಬಾ ಜನ ಇರುವಾಗ ಬಂದು ಬಿಲ್ ಕೊಡದೆ ಹೋಗುವುದನ್ನ ಗಮನಿಸಿದ್ದಾರೆ ಕಂಪ್ಲೇಂಟ್ ಕೂಡ ಮಾಡಿದ್ದಾರೆ ಆದರೆ ನನಗೆ ಗೊತ್ತಿದೆ ಅವನು ತುಂಬಾ ಹೊತ್ತು ನಮ್ಮ ಹೋಟೆಲ್ ಎದುರುಗಡೆ ದೊಡ್ಡ ಕಲ್ಲಿದೆ ಅಲ್ವಾ, ಅದರ ಹಿಂದೆ ಕುಳಿತಿರುತ್ತಾನೆ. ನಮ್ಮ ಹೋಟೆಲ್ನಲ್ಲಿ ಜನಜಂಗುಳಿ ಆಗೋದನ್ನೇ ಕಾಯುತ್ತಾ ಇರುತ್ತಾನೆ. ಜನ ತುಂಬಿರುವಾಗ ಬಂದು ಊಟ ಮಾಡಿ ಮೆಲ್ಲಗೆ ತಪ್ಪಿಸಿಕೊಂಡು ಹೋಗುತ್ತಾನೆ. ನಾನೇ ತುಂಬಾ ಸಾರಿ ನೋಡಿದ್ದೇನೆ. ಅವನನ್ನು ನಾನು ತಡೆಯಲೇ ಇಲ್ಲ.
ಅದಕ್ಕೆ ಆ ವ್ಯಕ್ತಿ ಕೇಳಿದ ಅದೇ ಯಾಕೆ ನೀವು ಹಿಡಿಯಲಿಲ್ಲ ಅಂತ. ಅದಕ್ಕೆ ಪ್ರತಿ ಉತ್ತರವಾಗಿ ಮಾಲಿಕ ಹೇಳಿದ ” ನನಗೆ ಏನು ಅನಿಸುತ್ತದೆ ಗೊತ್ತಾ? ನನ್ನ ಈ ಹೊಟ್ಟೆ ಈ ತರ ತುಂಬಿ ತುಳುಕುತ್ತಾ ಇರೋದಕ್ಕೆ ಅವನೇ ಕಾರಣ ಅನಿಸುತ್ತ ಇರುತ್ತದೆ ನನಗೆ. ಅವನು ನನ್ನ ಹೋಟೆಲ್ ಮುಂದೆ ಬಂದು ಕೂತಿರುತ್ತಾನೆ ಹೋಟೆಲ್ ಗೆ ತುಂಬಾ ಜನ ಬರಲಿ ಅಂತ ದೇವರ ಹತ್ರ ಪ್ರಾರ್ಥನೆ ಮಾಡ್ತಾ ಇರ್ತಾನೆ ಹಾಗೆ ತುಂಬಾ ಜನ ಬಂದ್ರೆ ತಾನೇ ಅವನಿಗೆ ಒಳಗೆ ಬಂದು ಊಟ ಮಾಡಿ ದುಡ್ಡು ಕೊಡದೆ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗುವುದು. ಅವನ ಕಷ್ಟಗಳು ಏನು ಎಂಬುದು ನನಗೆ ಗೊತ್ತಿಲ್ಲ ಆದರೆ ಒಂದು ಹೊತ್ತು ಊಟಕ್ಕಾಗಿ ದೇವರಲ್ಲಿ ನನಗಾಗಿ ಪ್ರಾರ್ಥನೆ ಮಾಡ್ತಾನಲ್ಲ ಅದಕ್ಕೆ ನಾನು ಬೆಲೆಕೊಟ್ಟುವುದು ಸಾಧ್ಯನಾ? ಹಾಗಾಗಿ ಅವನನ್ನು ತಡೆಯಬೇಕು ಅವಮಾನಿಸಬೇಕು ಎಂದು ನನಗೆ ಅನಿಸಲೇ ಇಲ್ಲ. ಗ್ರಾಹಕ ಮಾಲೀಕನ ಮುಖವನ್ನೇ ನೋಡುತ್ತಿದ್ದ.
ಸ್ನೇಹಿತರೆ ಈ ಕಥೆಯ ಸಾರಾಂಶ ಇಷ್ಟೇ. ಹೇಗೆ ಒಂದು ನಾಣ್ಯಕ್ಕೆ ಎರಡು ಮುಖಗಳಿರುತ್ತವೆಯೋ ಅದೇ ರೀತಿ ನಮ್ಮ ಆಲೋಚನೆಗಳು ಕೂಡ. ಹಾಗಾಗಿ ನಾವು ಸದಾ ಪೋಸಿಟಿವ್ ಆದನ್ನೇ ವಿಚಾರ ಮಾಡುತ್ತಾ ನಮ್ಮನ್ನು ನಾವು ಎತ್ತರಕ್ಕೆ ಬೆಳೆಸಿಕೊಳ್ಳೋಣ.