ದಾಖಲೆಗಳು ತುಂಬಾ ಮುಖ್ಯವಾದದ್ದು. ಹಾಗಾದರೆ ನಾವು ಭೂಮಿ ಖರೀದಿಸುವಾಗ ಏನೆಲ್ಲಾ ದಾಖಲೆಗಳು ಇರಬೇಕು ದಾಖಲೆಗಳಲ್ಲಿ ಏನೆಲ್ಲಾ ಪರೀಕ್ಷಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ..
ಸ್ನೇಹಿತರೇ ಯಾವುದೇ ಆಸ್ತಿ ಖರೀದಿ ಮಾಡುವಾಗ ಕೆಲವು ನಿರ್ದಿಷ್ಟ ದಾಖಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆ ಆಸ್ತಿ ನಮ್ಮದು ನಮ್ಮ ಸ್ವಂತದ್ದು ಅನ್ನುವುದಕ್ಕೆ ದಾಖಲೆಗಳೇ ಆಧಾರ ದಾಖಲೆಗಳಿಲ್ಲದಿದ್ದರೆ ಆಸ್ತಿಯು ಇನ್ನೊಬ್ಬರ ಪಾಲಾಗುವ ಸಂದರ್ಭವೂ ಬರುತ್ತದೆ. ಕೆಲವೊಂದು ಸಾರಿ ದಾಖಲೆಗಳಿದ್ದರೂ ಅಪ್ಪಿತಪ್ಪಿಯು ಹಕ್ಕುದಾರನ ಅಥವಾ ಮಾಲೀಕನ ಮಾಹಿತಿಯಲ್ಲಿ ಒಂದು ಅಕ್ಷರ ಬೇರೆಯಾದರೂ ಅದು ಅಡತಡೆ ಉಂಟಾಗುತ್ತದೆ, ನಮ್ಮದಲ್ಲದಂತಾಗುತ್ತದೆ ಮತ್ತು ಖರೀದಿದಾರನು ಮೋಸಕ್ಕೆ ಒಳಗಾಗುತ್ತಾನೆ. ಅದಕ್ಕಾಗಿ ದಾಖಲೆಗಳು ತುಂಬಾ ಮುಖ್ಯವಾದದ್ದು. ಹಾಗಾದರೆ ನಾವು ಭೂಮಿ ಖರೀದಿಸುವಾಗ ಏನೆಲ್ಲಾ ದಾಖಲೆಗಳು ಇರಬೇಕು ದಾಖಲೆಗಳಲ್ಲಿ ಏನೆಲ್ಲಾ ಪರೀಕ್ಷಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ..
Thank you for reading this post, don't forget to subscribe! 1) ಆಕಾರ್ ಬಂದ್:-
ಇದು ಜಮೀನಿನ ಅಂತಿಮ ವಿಸ್ತೀರ್ಣವನ್ನು ಒಳಗೊಂಡಿರುತ್ತದೆ. ಜಮೀನು ಖರೀದಿದಾರರು ಆಕಾರ್ ಬಂದ್ ಮತ್ತು ಪಹಣಿಯನ್ನು ಕೂಲಂಕುಶವಾಗಿ ಪರಿಶೀಲಿಸಬೇಕು ಏಕೆಂದರೆ ಕೆಲವು ತಾಂತ್ರಿಕ ಅಡೆತಡೆಗಳಿಂದ ಅಥವಾ ಕೆಲವರ ನಿರ್ಲಕ್ಷದಿಂದ ಆಕಾರ್ ಬಂದ್ ಮತ್ತು ಪಹಣಿಯಲ್ಲಿ ಮಾಲೀಕನ ಹೆಸರು ಮತ್ತು ಅಳತೆ ವ್ಯತ್ಯಾಸಗಳು ಕಂಡುಬರುತ್ತವೆ ಆದಕಾರಣ ಪಹಣಿ ಮತ್ತು ಆಕಾರ್ ಬಂದ್ ತಾಳೆ ಮಾಡಿ ನೋಡಬೇಕು ಹೀಗೆ ವ್ಯತ್ಯಾಸ ಕಂಡು ಬಂದರೂ ಖರೀದಿ ಮಾಡುವುದರಿಂದ ಮೋಸ ಹೋಗಬೇಕಾಗುತ್ತದೆ.
2) ಪಹಣಿ/ RTC ದಾಖಲೆ:-
ಈ ದಾಖಲೆ 16 ಕಾಲಂ ಗಳನ್ನು ಹೊಂದಿದ್ದು. ಈ ದಾಖಲೆ ಮುಖಾಂತರ ಜಮೀನು ಎಷ್ಟು ಅ ಖರಾಬ್ ಮತ್ತು ಬ ಖರಾಬ್ ಭೂಮಿಯನ್ನು ಹೊಂದಿದೆ, ಜಮೀನಿನ ಮೇಲೆ ಎಷ್ಟು ಸಾಲ ಇದೆ ಮತ್ತು ಪ್ರಚಲಿತ ಈ ಜಮೀನಿನ ಮೇಲೆ ಹಕ್ಕುಗಳ ಬದಲಾವಣೆ ಹೇಗೆ ಆಗಿದೆ ಎಂಬುದನ್ನು ಋಣಗಳ ಮೂಲಕ ತಿಳಿದುಕೊಳ್ಳಬಹುದು. ಮತ್ತು ಆ ಜಮೀನಿಗೆ ಎಷ್ಟು ಸಾಗುವಳಿದಾರರು ಇದ್ದಾರೆ, ವಾಸ್ತವಿಕ ಹಕ್ಕುದಾರರು ಯಾರು ಎಂಬುದನ್ನು ತಿಳಿಸುತ್ತದೆ.
ಖರಾಬ್ ಎಂದರೆ ಕೃಷಿಗೆ ಯೋಗ್ಯವಲ್ಲದ ಭೂಮಿ. ಇದರಲ್ಲಿ ಅ ಮತ್ತು ಬ ಎಂಬ ಎರಡು ವಿಧಗಳಿವೆ. ಅ ಖರಾಬ್ ಕೃಷಿಗೆ ಅನರ್ಹವಾಗಿದ್ದು ಕಾಸಗಿ ಒಡೆತನದಲ್ಲಿರುತ್ತದೆ. ಇದನ್ನು ಸರ್ಕಾರದ ಮೂಲಕ ಪಡೆದುಕೊಳ್ಳಬಹುದು ಅಥವಾ ಉಡುಗೊರೆ ರೂಪದಲ್ಲಿ ಪಡೆದುಕೊಳ್ಳಬಹುದು. ಬ ಖರಾಬ್ ಸರ್ಕಾರದ ಒಡೆತನದಲ್ಲಿದ್ದು ಸಾರ್ವಜನಿಕ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತದೆ ಉದಾಹರಣೆಗೆ ಸ್ಮಶಾನಕ್ಕಾಗಿ, ರಸ್ತೆ ನಿರ್ಮಿಸಲು, ದೇವಸ್ಥಾನಕ್ಕಾಗಿ, ಮಠಗಳಿಗೆ.
3.) ಪಾರ್ಮ್ 10:-
ಇದು ಜಮೀನಿನ ಸರ್ವೇ ನಂಬರನ್ನು ಒಳಗೊಂಡಿದ್ದು ಅದರಲ್ಲಿ ಪ್ರತ್ಯೇಕವಾಗಿ ಹಿಸ್ಸಾ ನಂಬರ್, ಜಮೀನಿನ ಅಳತೆ ಮತ್ತು ಮಾಲೀಕನ ಹೆಸರನ್ನು ಒಳಗೊಂಡಿರುತ್ತದೆ. ಈ ಫಾರ್ಮ್ ಸರಳವಾಗಿ ರಿಜಿಸ್ಟರ್ ಮಾಡಲು ಸಹಾಯ ಮಾಡುತ್ತದೆ.
4.) ಸರ್ವೆ ಸ್ಕೆಚ್:-
ಇದು ಜಮೀನಿನ ಸಂಪೂರ್ಣ ಮಾಹಿತಿಯನ್ನು ನಕ್ಷೆ ಮೂಲಕ ತಿಳಿಸಿ ಕೊಡುತ್ತದೆ ಇದರಲ್ಲಿ ಜಮೀನಿನ ಸರ್ವೇ ನಂಬರ್ ಜಮೀನಿನ ಕಾಲುದಾರಿ, ಬಂಡಿ ದಾರಿಯನ್ನು ಹೇಗೆ ಎಲ್ಲಿ ಎಂದು ತಿಳಿದುಕೊಳ್ಳಬಹುದು.
5.)11 E ಸ್ಕೆಚ್:-
ಭೂಮಿ ಖರೀದಿ ಮಾಡುವ ಸಂದರ್ಭದಲ್ಲಿ ಸಂಪೂರ್ಣ ಜಮೀನನ್ನು ಖರೀದಿ ಮಾಡುವುದಿಲ್ಲ ಜಮೀನಿನ ಸಂಪೂರ್ಣ ಭಾಗದಲ್ಲಿ ಪ್ರತ್ಯೇಕ ಭಾಗವನ್ನು ಖರೀದಿ ಮಾಡುತ್ತೇವೆ ಪ್ರತ್ಯೇಕ ಭಾಗಕ್ಕೆ 11 E ಸ್ಕೆಚ್ ನಕ್ಷೆ ಬೇಕಾಗುತ್ತದೆ.
6.) Sale Deed:-
ಅಂದರೆ ಜಮೀನು ಖರೀದಿ ಪತ್ರ ಇದರಲ್ಲಿ ನಾವು ಜಮೀನು ಯಾರಿಂದ ಖರೀದಿಯಾಗಿದೆ ಯಾರು ಸೇಲ್ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು ಮತ್ತು ಜಮೀನಿನ ಚೆಕ್ಕು ಬಂದಿ ವಿವರ ನೀಡುತ್ತದೆ.
7.Mutation Report:-
ಇದರಿಂದ ಮೊದಲಿನಿಂದ ಹಿಡಿದು ಇಲ್ಲಿಯವರೆಗೆ ಜಮೀನಿನ ಹಕ್ಕು ಯಾರಿಂದ ಯಾರಿಗೆ ಹಸ್ತಾಂತರ ಆಗಿದೆ ಮತ್ತು ಯಾವ ರೂಪದಲ್ಲಿ ಧಾನ, ಕ್ರಯ, ವಿಭಾಗಗಳ ಮೂಲಕ ಹೇಗೆ ಹಂತ ಹಂತವಾಗಿ ಬದಲಾವಣೆಯಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು .
8.No Tenancy Certificate / ಗೇಣಿರಹಿತ ಪ್ರಮಾಣ ಪತ್ರ:-
ಜಮೀನು, ಊಳುವವನೇ ಭೂಮಿಯ ಒಡೆಯ ಎಂಬ ಪದ್ಧತಿ ಬಂದಾಗ ಆಗಿತ್ತೋ ಅಥವಾ ಯಾರಾದರೂ ಆ ಜಮೀನಿಗೆ ಆರ್ಜಿ ಸಲ್ಲಿಸಿದ್ದಾರೋ ಎಂಬುದು ತಾಲೂಕಾ ಕಚೇರಿಯಲ್ಲಿ NTC ಬಗ್ಗೆ ಮಾಹಿತಿ ಸಿಗುತ್ತದೆ.
9).ಸಾಗುವಳಿ ಚೀಟಿ:-
ಬಗರ್ ಹುಕುಂ ಅಥವಾ ಸರಕಾರ ಯಾವುದೇ ಯೋಜನೆಯಲ್ಲಿ ಜಮೀನು ಮಂಜೂರು ಮಾಡಿದ್ದರೆ ಜಮೀನು ಹೊಂದಿರುವವರು ತಹಸೀಲ್ದಾರರಿಂದ ಸಾಗುವಳಿ ಚೀಟಿಯನ್ನು ಪಡೆದುಕೊಂಡಿರುತ್ತಾರೆ ಸಾಗುವಳಿ ಚೀಟಿಯಲ್ಲಿ ಜಮೀನ್ದಾರರು ಇಂತಿಷ್ಟು ವರ್ಷ ಬೇರೆಯವರಿಗೆ ಪರಭಾರೆ ಅಥವಾ ಮಾರಾಟ ಮಾಡಬಾರದೆಂದು ಇರುತ್ತದೆ. ಸಾಗುವಳಿ ಚೀಟಿಯಲ್ಲಿನ ಸಮಯ ಮುಗಿದ ನಂತರ ಜಮೀನ್ದಾರರು ತಾಲೂಕಿನ ತಹಸಿಲ್ದಾರರ ಬಳಿ ಎನ್ ಓ ಸಿ ಪಡೆದುಕೊಂಡ ನಂತರ ಪರಭಾರೆ ಮಾಡಲು ಅವಕಾಶವಿರುತ್ತದೆ.
10).EC Encumbrance Certificate/ ಋಣ ಭರ ಪ್ರಮಾಣ ಪತ್ರ:-
ಇದರಲ್ಲಿ ನಾವು ಸದರಿ ಭೂಮಿಯ ಹೆಸರಲ್ಲಿ ಎಷ್ಟು ಸಾಲವಿದೆ, ನಿರ್ದಿಷ್ಟ ಹಕ್ಕುಗಳ ಮಾಹಿತಿ ಎಷ್ಟು ಋಣಭಾರ ಗಳಿವೆ ಎಂದು ತಿಳಿದುಕೊಳ್ಳಬಹುದು. ಈ ಸರ್ಟಿಫಿಕೇಟ್ ಅನ್ನು ಉಪ ನೋಂದಣಿ ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು.
11).PTCL.
Prevention of Transfer of Certain Lands Act:-
ಈ ಕಾಯ್ದೆಗೆ ಒಳಪಡುವ ಭೂಮಿಯನ್ನು ಖರೀದಿ ಮಾಡಲು ಅವಕಾಶವಿರುವುದಿಲ್ಲ.
ಕೊನೆಯದಾಗಿ ಹೇಳುವುದೇನೆಂದರೆ ಖರೀದಿ ಮಾಡುವ ಸಂದರ್ಭದಲ್ಲಿ ಯಾವುದೇ ಗೊಂದಲಗಳಿದ್ದರೆ ಸ್ಥಳೀಯ ವಕೀಲರನ್ನು ಭೇಟಿ ಮಾಡಿ ದಾಖಲೆಗಳೊಂದಿಗೆ ಪರಿಶೀಲಿಸಿದರೆ ಒಳ್ಳೆಯದು.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…