WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಕನ್ನಡ ಚಲನಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ನೈಸರ್ಗಿಕ ಅಭಿನಯದ ಮೂಲಕ ಚಲನಚಿತ್ರರಂಗದಲ್ಲಿ ವಿಶೇಷ ಛಾಪನ್ನು ಮೂಡಿಸಿದ ನಟರು ಆಗಿದ್ದಾರೆ. ತಂದೆ ತೂಗುದೀಪ ಶ್ರೀನಿವಾಸ ಅವರು ಹೆಸರಾಂತ ಕನ್ನಡ ಚಲನಚಿತ್ರ ರಂಗದ ಖಳನಾಯಕರಾದರೂ ಅವರ ಪ್ರಭಾವ ಇಲ್ಲದೆ ಕೇವಲ ತಮ್ಮ ಸ್ವಂತ ಪ್ರತಿಭೆಯಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹೆಸರನ್ನು ಗಳಿಸಿದಂತವ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಇತ್ತೀಚೆಗೆ ಅವರ ಯಾವ ಸಿನಿಮ ಕೂಡ ರಿಲೀಸ್ ಆಗದೆ ಅಭಿಮಾನಗಳಲ್ಲಿ ಹತಾಶೆ ಉಂಟುಮಾಡಿದೆ. ಆದರೆ ಮುಂದಿನ ವರ್ಷ ಡಿ ಬಾಸ್ ಅಭಿಮಾನಿಗಳಿಗೆ ಹಬ್ಬವೇ ಸರಿ. ಏಕೆಂದರೆ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ದರ್ಶನ್ ಅವರ ಮುಂದಿದ್ದು, ಮುಂದಿನ ವರ್ಷದಲ್ಲಿ ತೆರೆ ಕಾಣುವ ಎಲ್ಲ ಲಕ್ಷಣಗಳಿವೆ. ಹಾಗಾದರೆ ಬನ್ನಿ ಸ್ನೇಹಿತರೆ ಇವತ್ತಿನ ಈ ಆರ್ಟಿಕಲ್ ನಲ್ಲಿ ದರ್ಶನ್ ಅವರ ಮುಂದಿನ ಬಿಗ್ ಬಜೆಟ್ ಸಿನಿಮಾಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

1. ಕಾಟೇರಾ: ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ದರ್ಶನವರ ಮೊದಲ ಚಿತ್ರವಾಗಿ ಇದು ತೆರೆಗೆ ಬರಲಿದೆ.

2. ಪ್ರೊಡಕ್ಷನ್ ನಂಬರ್ 1 : ಇದು ಕೂಡ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಸಿನಿಮಾ ಬಿಗ್ ಬಜೆಟ್ ಸಿನಿಮಾ ಆಗಿದೆ. ಇತ್ತೀಚೆಗೆ ಇದರ ಫೋಟೋಶೂಟ್ಗಳು ಮುಗಿದಿದ್ದು ಇಂಟರ್ನೆಟ್ ನಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

3. ಪ್ರೊಡಕ್ಷನ್ ನಂಬರ್ 4: ಇದು ಅರಣ್ಯಗಳ ಕುರಿತಾದ ಸಿನಿಮ ವಾಗಿದ್ದು ದರ್ಶನ್ ಇದರಲ್ಲಿ ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಅಭಿಮಾನಿಗಳ ಪಾಲಿಗೆ ವಿಶೇಷ ಅನುಭವ ನೀಡಲಿದೆ ಎಂದು ಹೇಳಲಾಗುತ್ತಿದೆ.

4. ಪ್ರೊಡಕ್ಷನ್ ನಂಬರ್ 7 : ಸೌಂದರ್ಯ ಜಗದೀಶ್ ಪ್ರೊಡಕ್ಷನ್ ಅವರು ಮೊನ್ನೆ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಈ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಇದು ಕೂಡ ಬಿಗ್ ಬಜೆಟ್ ಮೂವಿ ಆಗಿದ್ದು ಮುಂದಿನ ವರ್ಷ ಸೆಟ್ಟೇರಬಹುದಾದ ಲಕ್ಷಣಗಳಿವೆ.

      
                    WhatsApp Group                             Join Now            
   
                    Telegram Group                             Join Now            

5. ತೆಲುಗಿನ A.K. Entertainments ಅವರು ಡಿ ಬಾಸ್ ಜೊತೆ ಒಂದು ಚಲನಚಿತ್ರವನ್ನು ಮಾಡಲು ಮುಂದಾಗಿದ್ದಾರೆ. ಈ ಕುರಿತು ಮೊನ್ನೆ ದರ್ಶನ ಅವರ ಹುಟ್ಟು ಹಬ್ಬದಂದು A.K. Entertainments ನ ಮಾಲೀಕರಾದ ಅನಿಲ್ ಸುಂಕರ ಅವರು ತಿಳಿಸಿದ್ದಾರೆ.

6. ರಾಜ ವೀರ ಮದಕರಿ ನಾಯಕ: ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ದರ್ಶನವರ 55ನೇ ಚಿತ್ರವಾಗಿದೆ. ಇದರ ಶೂಟಿಂಗ್ ಆರಂಭವಾಗಿದ್ದು ಕಾರಣಾಂತರಗಳಿಂದ ಶೂಟಿಂಗ್ ಪೂರ್ಣಗೊಳಿಸಲಾಗಿಲ್ಲ. ಮುಂದಿನ ವರ್ಷ ಚಿತ್ರ ಶೂಟಿಂಗ್ ಮುಗಿಸಿಕೊಂಡು ತೆರೆಗೆ ಬರಲು ಯೋಜನೆ ರೂಪಿಸಿದೆ.

7. ಸಿಂಧೂರ ಲಕ್ಷ್ಮಣ: ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಬಿಗ್ ಬಜೆಟ್ ಹಾಗೂ ಐತಿಹಾಸಿಕ ಚಿತ್ರ ಇದು. ಚಿತ್ರದ ಕುರಿತು ಎಲ್ಲ ಯೋಜನೆ ಸಿದ್ಧಗೊಂಡಿದ್ದು ಕಾರಣಾಂತರಗಳಿಂದ ಶೂಟಿಂಗ್ ಮುಂದೂಡಲಾಗಿದೆ ಇದು ಕೂಡ ಮುಂದಿನ ವರ್ಷ ಸೆಟ್ಟೆರಲಿದ್ದು, ಮುಂದಿನ ವರ್ಷದ ಅಂತ್ಯದಲ್ಲಿ ರಿಲೀಸ್ ಆಗುವ ಲಕ್ಷಣಗಳಿವೆ.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ಇದನ್ನು ಎಲ್ಲಾ ಡಿ ಬಾಸ್ ಅಭಿಮಾನಿಗಳಿಗೆ ತಲುಪಿಸಿ.

By

Leave a Reply

Your email address will not be published. Required fields are marked *