ಸ್ನೇಹಿತರೆ ಈ ಜಗತ್ತಿನಲ್ಲಿ ನಿಮಗಿಂತ ಬಲಿಷ್ಠರಾಗಿರುವವರು ಮತ್ತು ನಿಮಗಿಂತಲೂ ದುರ್ಬಲರಾಗಿರುವವರು ಇದ್ದೇ ಇರುತ್ತಾರೆ.ಸ್ನೇಹಿತರೆ ನಮಗೆಲ್ಲ ಕಾಡಿನ ರಾಜ ಸಿಂಹ ಎಂದು ಗೊತ್ತು ಆದರೆ ಇಂತಹ ಸಿಂಹಗಳನ್ನೇ ಮಖಾಡೆ ಮಲಗಿಸಬಲ್ಲ ಅನೇಕ ಬಲಿಷ್ಠ ಪ್ರಾಣಿಗಳು ಕಾಡಿನಲ್ಲಿವೆ. ಸಿಂಹವು ತನ್ನ ಬುದ್ಧಿವಂತಿಕೆಯಿಂದ ಕಾಡಿನ ರಾಜ ಎಂದು ಕರೆಸಿಕೊಳ್ಳಲಿಲ್ಲ ಬದಲಿಗೆ ಅದು ಯಾವಾಗಲೂ ತನ್ನೊಂದಿಗೆ ತನ್ನ ಪರಿವಾರವನ್ನು ಕರೆದುಕೊಂಡು ಬೇಟೆಯಾಡುವುದರಿಂದ ಕಾಡಿನ ರಾಜ ಎಂದು ಕರೆಸಿಕೊಂಡಿದೆ. ಇದೇ ಸಿಂಹ ನದಿ ದಂಡೆಗೆ ಹೋದರೆ ನಿಸ್ಸಹಾಯಕವಾಗಬೇಕಾಗುತ್ತದೆ. ಯಾಕೆಂದರೆ ಅಲ್ಲಿ ಆ ನದಿಯ ರಾಜ ಮೊಸಳೆ ಆಗಿರುತ್ತದೆ. ಒಂದು ವೇಳೆ ಮೊಸಳೆಯ ಬಾಯಿಗೆ ಈ ಸಿಂಹವು ಸಿಲುಕಿಕೊಂಡರೆ ಅದು ಬದುಕುಳಿಯುವುದು ಕನಸಿನ ಮಾತಾಗಿ ಬಿಡುತ್ತದೆ ಇದರ ಅರ್ಥ ಇಷ್ಟೇ ನಾವು ಎಷ್ಟೇ ಬಲಿಷ್ಠವಾಗಿದ್ದರೂ ಈ ಜಗತ್ತಿನಲ್ಲಿ ನಮಗಿಂತ ಬಲಿಷ್ಠರಾದ ಅನೇಕ ಜನ ಇದ್ದಾರೆ ಎಂಬುದು. ಒಂದು ವೇಳೆ ನಿಮ್ಮ ಶತ್ರು ನಿಮ್ಮನ್ನ ಕೆಣಕಿದರೆ ನೀವು ಅವನನ್ನ ಶಕ್ತಿಯಿಂದ ಮುನಿಸುವುದಕ್ಕಿಂತ ನಿಮ್ಮ ಯುಕ್ತಿಯನ್ನು ಉಪಯೋಗಿಸಿ ಆತನನ್ನ ಮೆಟ್ಟಬೇಕು ಎಂದು ರಾಜನೀತಿ ಮತ್ತು ಕೂಟ ನೀತಿಗಳ ಚತುರ ಎಂದೇ ಖ್ಯಾತ ಗೊಂಡಿರುವ ಚಾಣಕ್ಯನು ತನ್ನ ಅರ್ಥಶಾಸ್ತ್ರ ಕೃತಿಯಲ್ಲಿ ತಿಳಿಸಿದ್ದಾನೆ.ಅಷ್ಟೇ ಅಲ್ಲದೆ ಶತ್ರುಗಳನ್ನ ಹೇಗೆ ಹತೋಟಿಯಲ್ಲಿ ಇಡಬೇಕು ಎಂಬುದನ್ನು ಆತ ತನ್ನ ಕೃತಿಯಲ್ಲಿ ತಿಳಿಸಿದ್ದಾನೆ.ಹಾಗಾದರೆ ಬನ್ನಿ ಸ್ನೇಹಿತರೆ ಶತ್ರುಗಳನ್ನ ಮೆಟ್ಟಿಹಾಕಲು ಚಾಣಕ್ಯ ಹೇಳಿರುವ ಆ ಮೂರು ಪ್ರಮುಖ ಸೂತ್ರಗಳು ಯಾವುವು ಎಂಬುದನ್ನು ಇವತ್ತಿನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ.
* ಮೊದಲನೆಯದಾಗಿ ನಮಗೆಲ್ಲಾ ತಿಳಿದಿರುವಂತೆ ಯುದ್ಧಭೂಮಿಯಿಂದ ಹೆದರಿ ಶತ್ರುವಿಗೆ ಬೆನ್ನು ತೋರಿಸಿ ಓಡಿ ಹೋಗುವವರನ್ನು ಹೇಡಿ ಎಂದು ಕರೆಯುತ್ತಾರೆ ಆದರೆ ಆಚಾರ್ಯ ಚಾಣಕ್ಯರು ಹೇಳುವಂತೆ ಒಂದು ವೇಳೆ ನಿಮ್ಮ ಶತ್ರು ನಿಮಗಿಂತಲೂ ಬಲಿಷ್ಠನಾಗಿದ್ದರೆ ಆತನಿಗೆ ನೀವು ಏನನ್ನು ಮಾಡಲಾಗದ ಸ್ಥಿತಿಯಲ್ಲಿದ್ದರೆ ಅಂತಹ ಸಂದರ್ಭದಲ್ಲಿ ನೀವು ಸುಮ್ಮನಿರುವುದು ಅಥವಾ ಅಡಗಿಕೊಳ್ಳುವುದೇ ಒಳಿತು ಎಂದು ಚಾಣಕ್ಯ ಹೇಳುತ್ತಾನೆ ಯಾಕೆಂದರೆ ನೀವು ಬದುಕುಳಿದರೆ ಮಾತ್ರ ಅಲ್ಲವೇ ಶತ್ರುವನ್ನು ಸೋಲಿಸಲು ಸಾಧ್ಯ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾನೆ. ಅಷ್ಟೇ ಅಲ್ಲದೆ ನೀವು ನಿಮ್ಮ ಹಿತೈಷಿಗಳ ಹಿತ ಕಾಪಾಡುತ್ತಲೇ ಒಳಗಿಂದೊಳಗೆ ಬಲಿಷ್ಠರಾಗಬೇಕು ಒಂದೊಳ್ಳೆ ಸಮಯ ನೋಡಿಕೊಂಡು ಶತ್ರುವಿನ ಮೇಲೆ ಮುಗಿಬೇಕು ಎಂದು ಚಾಣಕ್ಯನು ತನ್ನ ನೀತಿಯಲ್ಲಿ ಹೇಳಿದ್ದಾನೆ.
* ಎರಡನೆಯದಾಗಿ ಎಂದಿಗೂ ಶತ್ರುವನ್ನ ಬಲಹೀನ ಎಂದು ಕಡೆಗಣಿಸಬಾರದೆಂದು ಆಚಾರ್ಯ ಚಾಣಕ್ಯ ಹೇಳುತ್ತಾನೆ ಯಾವ ವ್ಯಕ್ತಿಯು ತನ್ನ ಶತ್ರುವನ್ನು ಹಗುರವಾಗಿ ಪರಿಗಣಿಸುತ್ತಾನೋ ಆತ ಅದಕ್ಕೆ ತಕ್ಕ ಬೆಲೆ ತರಬೇಕಾಗುತ್ತದೆ ಯಾಕೆಂದರೆ ಶತ್ರುಗಳು ಬಲಹೀನರೆಂದು ಕಡೆಗಣಿಸಿ ಅನೇಕ ಜನ ಮೈ ಮರೆತು ಬಿಡುತ್ತಾರೆ. ಹೀಗೆ ಅವರು ಮೈ ಮರೆತಾಗಲೇ ಶತ್ರುವಿನ ಬಲ ಹೆಚ್ಚುತ್ತದೆ.ಹಾಗಾಗಿ ನಾವು ಯಾವ ಕಾರಣಕ್ಕೂ ಮೈ ಮರೆಯಬಾರದೆಂದು ಕ್ಷಣಕ್ಕೆ ಹೇಳಿದ್ದಾನೆ.
* ಇನ್ನು ಮೂರನೇಯದಾಗಿ ಶತ್ರುವಿನ ಚಲನವಲನಗಳ ಮೇಲೆ ಸದಾ ಗಮನ ಇಡಬೇಕು ಎಂದು ಆಚಾರ್ಯ ಚಾಣಕ್ಯನು ಹೇಳುತ್ತಾನೆ. ನೀತಿ ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿಗೆ ತನ್ನ ಶತ್ರುವನ್ನ ಮಟ್ಟ ಹಾಕಬೇಕಾದರೆ ಆತನ ಬಲ ಮತ್ತು ದುರ್ಬಲಗಳೆರಡನ್ನು ಚೆನ್ನಾಗಿ ಅರಿತಿರಬೇಕು ಆದ್ದರಿಂದ ನೀವು ನಿಮ್ಮ ಶತ್ರುವಿನ ಪ್ರತಿ ಹೆಜ್ಜೆಯ ಮೇಲು ಗಮನ ಹರಿಸಬೇಕು ಯಾಕೆಂದರೆ ಸರಿಯಾದ ಸಮಯ ನೋಡಿಕೊಂಡು ಒಂದು ಒಳ್ಳೆ ಯೋಜನೆ ರೂಪಿಸಿ ನಿಮ್ಮ ಶತ್ರುವಣ್ಣ ಹೊಸಕೆ ಹಾಕಲು ಇದು ಅತ್ಯವಶ್ಯವಾಗಿದೆ. ಶತ್ರುವಿನ ಪ್ರತಿ ಹೆಜ್ಜೆಯ ಅರಿವು ನಿಮಗಿದ್ದರೆ ಆತ ನನ್ನ ಮನಸ್ಸು ತುಂಬಾ ಸರಳ ಎಂದು ಆಚಾರಿ ಚಾಣಕ್ಯರು ಹೇಳಿದ್ದಾರೆ.
* ಸ್ನೇಹಿತರೆ ಆಚಾರ್ಯ ಚಾಣಕ್ಯರು ಹೇಳುವಂತೆ ಮೂರ್ಖನು ಪುರುಷಣೆ ಆಗಲಿ ಅಥವಾ ಮಹಿಳೆಯ ಆಗಲಿ ಅವರಿಗೆ ಉಪದೇಶ ಮಾಡಬಾರದು ಹೌದು ಸ್ನೇಹಿತರೆ ಮೂರ್ಖರಿಗೆ ಉಪದೇಶ ಮಾಡುವುದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ. ಏಕೆಂದರೆ ನೀವು ನೀಡುವ ಉಪದೇಶಕ್ಕೆ ಅವರದೊಂದು ಅರ್ಥವಿಲ್ಲದ ವಾದ ಇದ್ದೇ ಇರುತ್ತದೆ ಮತ್ತು ನೀವು ಹೇಳುವ ಉಪದೇಶವನ್ನು ಅವರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಇದರಿಂದ ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ ಆದ್ದರಿಂದ ಚಾಣಕ್ಯರು ಹೇಳುತ್ತಾರೆ ಯಾವುದೇ ಕಾರಣಕ್ಕೂ ಮೂರ್ಖರಿಗೆ ಉಪದೇಶ ಮಾಡಬಾರದು ಎಂದು.
* ದುಷ್ಟ ವ್ಯಕ್ತಿಗಳ ಪಾಲನೆ ಪೋಷಣೆ ಮಾಡಬಾರದೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹೌದು ಸ್ನೇಹಿತರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ ಎಂದು ಹೇಳುತ್ತಾರೆ ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ದುಷ್ಟ ವ್ಯಕ್ತಿಗಳು ಅಥವಾ ಕ್ರೂರ ವ್ಯಕ್ತಿಗಳು ಎಷ್ಟೇ ಕಷ್ಟದಲ್ಲಿದ್ದರೂ ಅವರಿಗೆ ಸಹಾಯ ಹಸ್ತ ಚಾಚಬಾರದೆಂದು ಹೇಳುತ್ತಾರೆ.ಯಾಕೆಂದರೆ ನೀವು ಹಾವಿಗೆ ಎಷ್ಟೇ ಹಾಲು ಹಾಕಿ ಪ್ರೀತಿಯಿಂದ ಸಾಕಿದರು ಅದು ತನ್ನ ಕಚ್ಚುವ ಬುಸುಗುಡುವ ಸ್ವಭಾವವನ್ನು ಬಿಡುವುದಿಲ್ಲ.
* ಸದಾ ದುಃಖಿತರಾಗಿರುವ ಜನರಿಂದ ಯಾವಾಗಲೂ ದೂರವಿರಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಚಾಣಕ್ಯರು ಹೇಳುವ ಹಾಗೆ ಮನುಷ್ಯ ಜನ್ಮವು ಅತ್ಯಮೂಲ್ಯವಾದದ್ದು ಅದು ಭಗವಂತನಿಂದ ಸಿಕ್ಕ ವರವಾಗಿದೆ. ಹೀಗಿದ್ದಾಗಿಯೂ ಕೆಲವರು ತಮ್ಮ ಕಷ್ಟಗಳಿಗೆ ಅಂಜಿ ಸದಾ ದುಃಖಿತರಾಗಿ ಭಗವಂತನ ಮೇಲೆ ಆಪಾದನೆ ಹೊರಿಸುತ್ತಾರೆ. ಇಂತಹ ಜನರೊಂದಿಗೆ ನೀವು ಸ್ನೇಹ ಮಾಡಿದ್ದಲ್ಲಿ ಅವರು ನಿಮ್ಮಲ್ಲೂ ಅದೇ ಭಾವನೆ ಉಂಟಾಗುವಂತೆ ಮಾಡುತ್ತಾರೆ ಮತ್ತು ನಿಮ್ಮಲ್ಲಿ ನೆಗೆಟಿವ್ ವಿಚಾರಗಳು ಹೆಚ್ಚಾಗುವಂತೆ ಮಾಡುತ್ತಾರೆ. ಆದ್ದರಿಂದ ಜನರಿಂದ ದೂರವಿರಬೇಕು ಎಂದು ಆಚಾರಿ ಚಾಣಕ್ಯರು ಹೇಳುತ್ತಾರೆ.
* ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ಹೇಳುವ ಹಾಗೆ ನಮಗೆ ಸಮಯದ ಮಹತ್ವದ ಬಗ್ಗೆ ಅರಿವಿರಬೇಕು ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರೆ ಆತನಿಗೆ ಸಮಯದ ಪ್ರಾಮುಖ್ಯತೆ ಏನು ಎಂಬುದು ತಿಳಿದಿರಬೇಕು ಮತ್ತು ಪ್ರಸ್ತುತ ವರ್ತಮಾನ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅರಿವಿರಬೇಕು.
* ಆಚಾರ್ಯ ಚಾಣಕ್ಯರು ಹೇಳ್ತಾರೆ ನಮಗೆ ನಮ್ಮ ಸುತ್ತಲಿನ ಜನರ ಬಗ್ಗೆ ಸದಾ ತಿಳಿದಿರಬೇಕು ಎಂದು ಯಾಕೆಂದರೆ ಚಾಣಕ್ಯನು ತನ್ನ ನೀತಿಯಲ್ಲಿ ಹೇಳುತ್ತಾನೆ ನಮಗೆ ನಮ್ಮ ನಿಜವಾದ ಸ್ನೇಹಿತರು ಯಾರು ಎಂಬುದು ಗೊತ್ತಿರಬೇಕು. ಮುಂದುವರೆದು ಚಾಣಕ್ಯ ಹೇಳುತ್ತಾನೆ ನಮಗೆ ನಮ್ಮ ಶತ್ರುಗಳು ಯಾರು ಎಂಬುದು ಗೊತ್ತಿರುತ್ತದೆ ಆದರೆ ಸ್ನೇಹಿತನ ವೇಷದಲ್ಲಿರುವ ಶತ್ರುವಿನ ಬಗ್ಗೆ ನೀವು ತಿಳಿದುಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಚಾಣಕ್ಯ ಹೇಳುತ್ತಾನೆ. ಯಾಕೆಂದರೆ ನಿಮ್ಮ ಸುತ್ತಲಿನ ಜನ ಹೇಗಿರುತ್ತಾರೋ ನೀವು ಅದೇ ರೀತಿ ಕೆಲಸ ಮಾಡುತ್ತೀರಿ ಒಂದು ವೇಳೆ ನಿಮ್ಮ ಸ್ನೇಹಿತ ಒಳ್ಳೆಯವನಾಗಿದ್ದರೆ ನಿಮ್ಮ ಯಶಸ್ಸಿನ ಪಯಣ ಮತ್ತಷ್ಟು ಸುಲಭವಾಗುತ್ತದೆ.ಅಕಸ್ಮಾತ್ ನಿಮ್ಮ ಸ್ನೇಹಿತ ಕೆಟ್ಟವನಾಗಿದ್ದರೆ ನಿಮ್ಮ ಯಶಸ್ಸಿಗೆ ಅವನೇ ಕಂಟಕವಾಗುತ್ತಾನೆ ನಿಮ್ಮ ವಿನಾಶಕ್ಕೆ ಅವನೇ ಕಾರಣವಾಗುತ್ತಾನೆ.
* ಚಾಣಕ್ಯರು ಹೇಳುತ್ತಾರೆ ನಿಮ್ಮ ಸುತ್ತಲಿನ ಪರಿಸರದ ಬಗ್ಗೆ ನಿಮಗೆ ತಿಳಿದಿರಬೇಕು ಎಂದು ಏಕೆಂದರೆ ಅವರು ತಮ್ಮ ನೀತಿಯಲ್ಲಿ ಹೇಳುತ್ತಾರೆ ಯಾವುದೇ ಒಬ್ಬ ವ್ಯಕ್ತಿಗೆ ತಾನು ನೌಕರಿ ಅಥವಾ ಬ್ಯುಸಿನೆಸ್ ಮಾಡುವ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಎಂದು. ಆ ಜಾಗ ಎಲ್ಲಿದೆ? ಅಲ್ಲಿನ ಜನ ಹೇಗಿದ್ದಾರೆ? ಮತ್ತು ಅಲ್ಲಿನ ಪರಿಸ್ಥಿತಿ ಹೇಗಿದೆ? ಎಂಬುದರ ಸಂಪೂರ್ಣ ಅರಿವು ಅವನಿಗಿರಬೇಕು ಎಂದು. ಯಾಕೆಂದರೆ ನಿಮ್ಮ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗಬೇಕೆಂದರೆ ಈ ಎಲ್ಲ ಮಾಹಿತಿ ನಿಮಗೆ ಗೊತ್ತಿದ್ದಲ್ಲಿ ನೀವು ನಿಮ್ಮ ಸುತ್ತಲಿನ ಪರಿಸರದ ಮೇಲೆ ನೀವು ಕೆಲಸ ಮಾಡುವ ಜಾಗದ ಮೇಲೆ ನಿಯಂತ್ರಣವನ್ನು ಸಾಧಿಸಬಲ್ಲಿರಿ ಎಂದು.
* ಇನ್ನು ನಿಮ್ಮ ಖರ್ಚು ವೆಚ್ಚದ ಬಗ್ಗೆ ನಿಮಗೆ ತಿಳಿದಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನೀವು ಶ್ರೀಮಂತ ವ್ಯಕ್ತಿ ಆಗಬೇಕು ಎಂದುಕೊಂಡಿದ್ದರೆ, ನಿಮಗೆ ನಿಮ್ಮ ಆಯವ್ಯಯದ ಬಗ್ಗೆ ನಿಖರವಾದ ಮಾಹಿತಿ ಇರಬೇಕು ಎಂದು ಚಾಣಕ್ಯ ಹೇಳುತ್ತಾನೆ ಅದರ ಜೊತೆಗೆ ಹಣವನ್ನ ಹೇಗೆ ಸಮರ್ಥವಾಗಿ ಬಳಸಬೇಕು ಎಂಬುದು ತಿಳಿದಿರಬೇಕು. ಒಂದು ವೇಳೆ ನೀವು ಉಳಿತಾಯಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದರೆ ನಿಮಗೆ ಸಮಸ್ಯೆಗಳ ಸರಮಾಲೆ ಅಂಟಿಕೊಳ್ಳುತ್ತವೆ. ನೌಕರಿ ಅಥವಾ ಬಿಜಿನೆಸ್ಸಿನಲ್ಲಿ ನೀವು ನಿಮ್ಮ ಉಳಿತಾಯವನ್ನು ನೋಡಿಕೊಂಡೆ ಇನ್ವೆಸ್ಟ್ ಮಾಡಿ ನೀವು ಖರ್ಚು ಮಾಡುವುದನ್ನ ಕಡಿಮೆ ಮಾಡಿದರೆ ನಿಧಾನವಾಗಿ ಆದರೂ ನಿಮ್ಮ ಖಜಾನೆ ತುಂಬಲಾರಂಬಿಸುತ್ತದೆ ಎಂದು ಆಚಾರ್ಯ ಚಾಣಕ್ಯನು ಹೇಳುತ್ತಾನೆ.
* ನಿಮಗೆ ನಿಮ್ಮ ನೌಕರಿ ಅಥವಾ ಕೆಲಸದ ಬಗ್ಗೆ ತಿಳಿದಿರಬೇಕು ಎಂದು ಆಚಾರ್ಯ ಚಾಣಕ್ಯನು ಹೇಳುತ್ತಾನೆ. ನೀವು ನಿಮ್ಮ ಕೆಲಸದ ಜಾಗದಲ್ಲಿ ಯಶಸ್ಸು ಸಾಧಿಸಬೇಕೆಂದರೆ ನಿಮ್ಮ ಬಾಸ್ ಅಥವಾ ಮಾಲೀಕ ನಿಮ್ಮಿಂದ ಯಾವ ಕೆಲಸವನ್ನ ನಿರೀಕ್ಷಿಸುತ್ತಾರೆ ಎಂಬುದರ ಬಗ್ಗೆ ನಿಮಗೆ ತಿಳಿದಿರಬೇಕು ಒಂದು ವೇಳೆ ನೀವು ಅವರು ಅಂದುಕೊಂಡಂತೆ ನಡೆದುಕೊಂಡರೆ ಅವರು ನಿರೀಕ್ಷಿಸಿದ ಕೆಲಸವನ್ನು ಮಾಡಿಕೊಟ್ಟರೆ ನಿಮಗೆ ನಿಮ್ಮ ಕಂಪನಿ ಅಥವಾ ನೌಕರಿಯಲ್ಲಿ ಸಿಗುವ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಕೆಲಸದಿಂದ ಕಂಪನಿಗೆ ಯಶಸ್ಸು ಸಿಗುತ್ತದೆ ಮತ್ತೆ ನಿಮಗೂ ಕೂಡ ಲಾಭವಾಗುತ್ತದೆ.
* ಕೊನೆಯದಾಗಿ ನಿಮಗೆ ನಿಮ್ಮ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು ಎಂದು ಆಚಾರಕ್ಕೆ ಹೇಳುತ್ತಾನೆ ಏಕೆಂದರೆ ಚಾಣಕ್ಯ ತನ್ನ ನೀತಿಯಲ್ಲಿ ಕೊನೆಯಲ್ಲಿ ಹೇಳುತ್ತಾನೆ ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರೆ ನೀವು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದೀರಿ ಮತ್ತು ಆ ಕ್ಷೇತ್ರದಲ್ಲಿ ಕೆಲಸ ಮಾಡುವಷ್ಟು ಕ್ಷಮತೆಯನ್ನು ಹೊಂದಿದ್ದೀರಿ ಎಂಬುದರ ಬಗ್ಗೆ ನಿಮಗೆ ಅರಿವಿರಬೇಕು ನೀವು ಮಾಡುವ ಕೆಲಸದಲ್ಲಿ ಆಸಕ್ತಿ ಜೊತೆಗೆ ಪ್ರಿಯ ಶೀಲತೆಯನ್ನು ಅಳವಡಿಸಿಕೊಂಡರೆ ನೀವು ಯಶಸ್ಸಿನ ಶಿಖರವನ್ನು ಅತಿ ಬೇಗನೆ ತಲುಪುತ್ತೀರಿ ಎಂದು ಆಚಾರ್ಯ ಚಾಣಕ್ಯನು ತನ್ನ ನೀತಿಯ ಕೊನೆಯಲ್ಲಿ ಹೇಳುತ್ತಾನೆ ಒಂದು ವೇಳೆ ನೀವು ನಿಮ್ಮ ಸಾಮರ್ಥ್ಯಕ್ಕೂ ಮೀರಿದ ಕೆಲಸವನ್ನ ಕೈಗೆತ್ತಿಕೊಂಡಿದ್ದೆ ಆದಲ್ಲಿ ಮೊದಲನೆಯದಾಗಿ ನಿಮಗೆ ಆ ಕೆಲಸವನ್ನು ಪೂರ್ಣ ಮಾಡಲು ಆಗುವುದಿಲ್ಲ ಇನ್ನು ಎರಡನೆಯದಾಗಿ ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಒಂದು ಉಂಟಾಗುತ್ತದೆ ಎಂದು ಆಚಾರ್ಯ ಚಾಣಕ್ಯನು ಹೇಳುತ್ತಾನೆ. ಹೀಗೆ ಉತ್ತಮ ಜೀವನವನ್ನು ನಿರ್ವಹಿಸಲು ಮತ್ತು ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸದಾ ಚಾಣಕ್ಯನ ಈ ನೀತಿಯುತ ಮಾತುಗಳನ್ನ ಸದಾ ರೂಢಿಯಲ್ಲಿ ಇಟ್ಟುಕೊಂಡು ಅವುಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂಬುದೇ ಇವತ್ತಿನ ಈ ಆರ್ಟಿಕಲ್ ನ ಉದ್ದೇಶ.
ಆತ್ಮೀಯ ಓದುಗ ಮಿತ್ರರೇ…ವೇಗವಾಗಿ ಬೆಳೆಯುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಮಾಹಿತಿಯೇ ಸಂಪತ್ತಾಗಿ ಮಾರ್ಪಾಡಾಗಿದೆ. ಗಲ್ಲಿಯಿಂದ ದಿಲ್ಲಿವರೆಗೆ, ಹಳ್ಳಿಯಿಂದ ಹಿಡಿದು ವಿದೇಶದ ಸುದ್ದಿಯನ್ನು ತ್ವರಿತವಾಗಿ ನಮ್ಮ ಪ್ರಬುದ್ಧ ಓದುಗ ವರ್ಗಕ್ಕೆ ಮಾಹಿತಿಯನ್ನು ಒದಗಿಸುವುದೇ MEDIA CHANAKYA ಉದ್ದೇಶವಾಗಿದೆ. ಆಟ, ಮನರಂಜನೆ ಜೊತೆಗೆ ಅಂತರರಾಷ್ಟ್ರೀಯ ಸುದ್ದಿಗಳ ಕುರಿತು ವಿಶೇಷ ಮಾಹಿತಿಯನ್ನು ನೀಡಲು MEDIA CHANAKYA ಸದಾ ಮುಂಚೂಣಿ ಸ್ಥಾನದಲ್ಲಿದೆ. ಆರೋಗ್ಯ, ಅದ್ಭುತ ಮಾಹಿತಿ, ವಿಶೇಷ ಮಾಹಿತಿ ನಿಮ್ಮ ಬೆರಳ ತುದಿಗೆ ತಂದು ತಲುಪಿಸುವ ಪ್ರಾಮಾಣಿಕ ಕೆಲಸವನ್ನು Media Chanakya ಮನಸಾರೆ ಮಾಡುತ್ತಿದೆ.ಹಾಗಾಗಿ ಉತ್ಕೃಷ್ಟ ಮಾಹಿತಿ ಹಾಗೂ ಸರಳ ಮಾಹಿತಿಗಾಗಿ ನಮ್ಮ ವೆಬ್ಸೈಟ್ಗೆ ಸಬ್ಸ್ಕ್ರೈಬ್ ಮಾಡಿ.