ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಕಳೆದ ಸಾಲಿನ ಮುಂಗಾರು ಹಂಗಾಮಿ ಬೆಳೆಗೆ ಬೆಳೆವಿಮೆ ಮಾಡಿಸಿದ್ದ ರೈತರಿಗೆ ಇದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ತಿಳಿಯಲು ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.
Thank you for reading this post, don't forget to subscribe!ಇದನ್ನೂ ಓದಿ: ಬರ ಪರಿಹಾರ ಹಣ: ಇಲ್ಲಿಯವರೆಗೆ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!
ಆತ್ಮೀಯ ಓದುಗರೇ, ಅತಿವೃಷ್ಟಿ , ಅನಾವೃಷ್ಟಿ,ಭೂಕಂಪ, ಸುನಾಮಿ ಇದೇ ಮುಂತಾದ ಪ್ರಕೃತಿ ವಿಕೋಪಗಳಿಗೆ ಸಿಲುಕಿ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾಗುವ ಕ್ಷೇತ್ರವೆಂದರೆ ಅದು ಕೃಷಿ. ಇನ್ನು ಭಾರತದಲ್ಲಿ ಸುಮಾರು ಶೇಕಡಾ 60 ರಷ್ಟು ಕುಟುಂಬಗಳು ಈ ಕೃಷಿಯನ್ನೇ ನಂಬಿ ಬದುಕುತ್ತಿವೆ. ಆದರೆ ಮೇಲೆ ಸೂಚಿಸಿದ ಪ್ರಕೃತಿ ವಿಕೋಪಗಳಾದಾಗ ಇಂತಹ ರೈತರ ಬದುಕು ತುಂಬಾ ದುಸ್ತರವಾಗುತ್ತದೆ. ಸಾಲ ಶೂಲ ಮಾಡಿ ಬಿತ್ತಿ ಬೆಳೆದ ಬೆಳೆ ಹೀಗೆ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಮರು ಕ್ಷಣವೇ ಎಷ್ಟೊ ರೈತ ಕುಟುಂಬಗಳು ಸಾಲದ ಹೊರೆ ತಾಳದೇ ಬೀದಿಗೆ ಬೀಳುತ್ತವೆ.
ಇದನ್ನೂ ಓದಿ: ಬೀಜ ಮಾರಾಟ: ಕೃಷಿ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಲಭ್ಯವಿರುವ ಬೀಜಗಳು ಇಲ್ಲಿವೆ ನೋಡಿ! ಯಾವ ಬೀಜಕ್ಕೆ ಎಷ್ಟು ಹಣ?
ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗುವ ದೃಷ್ಟಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿವೆ. ಈ ಯೋಜನೆಯ ಅಡಿಯಲ್ಲಿ ಪ್ರಕೃತಿ ವಿಕೋಪಗಳಿಗೆ ಸಿಲುಕಿ ಬೆಳೆ ಹಾನಿಯಾದ ರೈತರಿಗೆ ಆರ್ಥಿಕವಾಗಿ ಧನ ಸಹಾಯವನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ನಿಮ್ಮ ಹೊಲದ ಮ್ಯಾಪ್ ಚೆಕ್ ಮಾಡಿ! ಕಾಲುದಾರಿ, ಹಳ್ಳ ಎಲ್ಲವೂ ಈ ಮ್ಯಾಪ್ ನಲ್ಲಿ ಕಾಣುತ್ತದೆ !
ಕಳೆದ ವರ್ಷ ಮುಂಗಾರು ಬೆಳೆಗೆ ಯಾವ ಯಾವ ರೈತರು ಬೆಳೆವಿಮೆಯನ್ನು ಮಾಡಿಸಿದ್ದಾರೋ ಅಂತಹ ರೈತರಿಗೆ ಇದೀಗ ರಾಜ್ಯ ಸರ್ಕಾರವು ಕಳೆದ ವರ್ಷದ ಬೆಳೆ ವಿಮೆಯನ್ನು ಅರ್ಹ ರೈತರ ಖಾತೆಗೆ ನೇರವಾಗಿ ಜಮಾ ಮಾಡಿದೆ. ನಿಮ್ಮ ಖಾತೆಗೆ ಬೆಳೆವಿಮೆ ಹಣ ಜಮಾ ಆಗಿದೆಯಾ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದನ್ನು ಇವತ್ತಿನ ಅಂಕಣದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ: ಬೆಳೆ ಪರಿಹಾರ: ನಿಮ್ಮ ಪಹಣಿ ಪತ್ರ (ಉತಾರಿ) ಕ್ಕೆ ಮೊಬೈಲ್ ನಲ್ಲೇ ಆಧಾರ್ ಲಿಂಕ್ ಮಾಡಿ! ಲಿಂಕ್ ಮಾಡಲು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಬೆಳೆ ವಿಮೆ ಹಣ ಜಮಾ ಚೆಕ್ ಮಾಡುವುದು ಹೇಗೆ?
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://samrakshane.karnataka.gov.in/
ಹಂತ -2) ನಂತರ ನಿಮಗೆ ಕೆಳಗೆ ನೀಡಲಾಗಿರುವ ಚಿತ್ರದಂತೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Summer ಬದಲು Kharif ಅನ್ನು ಆಯ್ಕೆ ಮಾಡಿ, Go ಮೇಲೆ ಕ್ಲಿಕ್ ಮಾಡಿ.
ಹಂತ -3) ನಂತರ ನಿಮಗೆ ಕೆಳಗೆ ನೀಡಲಾಗಿರುವ ಚಿತ್ರದಲ್ಲಿರುವಂತೆ ಕಾಣಿಸುತ್ತದೆ. ಅಲ್ಲಿ ನೀವು check status ಮೇಲೆ ಕ್ಲಿಕ್ ಮಾಡಿ.
ಹಂತ -4) ನಂತರ ನಿಮಗೆ ಕೆಳಗೆ ನೀಡಲಾಗಿರುವ ಚಿತ್ರದಲ್ಲಿರುವಂತೆ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ ಮತ್ತು ಅಲ್ಲಿ ನೀಡಲಾಗಿರುವ ಕ್ಯಾಪ್ಚ ಹಾಕಿ Go ಮೇಲೆ ಕ್ಲಿಕ್ ಮಾಡಿ. ನಿಮಗೆ ಬೆಳೆ ವಿಮೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವಾ ಎಂಬ ಮಾಹಿತಿ ನಿಮಗೆ ಸಿಗುತ್ತದೆ.
ಈ ರೀತಿಯಾಗಿ ನೀವು ನಿಮ್ಮ ಖಾತೆಗೆ ಕಳೆದ ಸಾಲಿನ ಬೆಳೆ ವಿಮೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ಚೆಕ್ ಮಾಡಬಹುದಾಗಿದೆ.
ಇದನ್ನೂ ಓದಿ: Bele Parihara: ಬೆಳೆಹಾನಿ ಪರಿಹಾರ ಹಣ ಜಮಾ ಆಗದೇ ಇರಲು ಇಲ್ಲಿವೆ ನೋಡಿ ಪ್ರಮುಖ ಕಾರಣಗಳು! ಇವುಗಳನ್ನು ಸರಿಪಡಿಸಿ ನಿಮಗೆ ಹಣ ಬರುತ್ತೆ
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M