ಬೆಳೆ ವಿಮೆ: ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ ! ನಿಮ್ಮ FID ನಂಬರ್ ಚೆಕ್ ಮಾಡುವುದು ಹೇಗೆ?

ಆತ್ಮೀಯ ರೈತ ಬಾಂಧವರೇ,ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಇತ್ತೀಚೆಗೆ ರಾಜ್ಯ ಸರ್ಕಾರ ಈ ಸಾಲಿನ ಮುಂಗಾರು ಬೆಳೆಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಸಲ್ಲಿಸಲು ಸೂಚಿಸಿದೆ. ಹೀಗಾಗಿ ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಹಲವು ರೈತರು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಹಲವು ರೈತರಿಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ ಎಂದು ತಿಳಿದಿರುವುದಿಲ್ಲ. ಅಂತಹ ರೈತರಿಗಾಗಿ ಈ ಅಂಕಣವನ್ನು ಪ್ರಕಟಿಸುತ್ತಿದ್ದೇವೆ, ತಪ್ಪದೇ ಕೊನೆಯವರೆಗೂ ಓದಿರಿ.

Spread the love

ಆತ್ಮೀಯ ರೈತ ಬಾಂಧವರೇ,ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಇತ್ತೀಚೆಗೆ ರಾಜ್ಯ ಸರ್ಕಾರ ಈ ಸಾಲಿನ ಮುಂಗಾರು ಬೆಳೆಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಸಲ್ಲಿಸಲು ಸೂಚಿಸಿದೆ. ಹೀಗಾಗಿ ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಹಲವು ರೈತರು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಹಲವು ರೈತರಿಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ ಎಂದು ತಿಳಿದಿರುವುದಿಲ್ಲ. ಅಂತಹ ರೈತರಿಗಾಗಿ ಈ ಅಂಕಣವನ್ನು ಪ್ರಕಟಿಸುತ್ತಿದ್ದೇವೆ, ತಪ್ಪದೇ ಕೊನೆಯವರೆಗೂ ಓದಿರಿ.

Thank you for reading this post, don't forget to subscribe!

ಬೆಳೆ ವಿಮೆ ಎಂದರೇನು?

ಆತ್ಮೀಯ ಓದುಗರೇ, ಅತಿವೃಷ್ಟಿ , ಅನಾವೃಷ್ಟಿ,ಭೂಕಂಪ, ಸುನಾಮಿ ಇದೇ ಮುಂತಾದ ಪ್ರಕೃತಿ ವಿಕೋಪಗಳಿಗೆ ಸಿಲುಕಿ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾಗುವ ಕ್ಷೇತ್ರವೆಂದರೆ ಅದು ಕೃಷಿ. ಇನ್ನು ಭಾರತದಲ್ಲಿ ಸುಮಾರು ಶೇಕಡಾ 60 ರಷ್ಟು ಕುಟುಂಬಗಳು ಈ ಕೃಷಿಯನ್ನೇ ನಂಬಿ ಬದುಕುತ್ತಿವೆ. ಆದರೆ ಮೇಲೆ ಸೂಚಿಸಿದ ಪ್ರಕೃತಿ ವಿಕೋಪಗಳಾದಾಗ ಇಂತಹ ರೈತರ ಬದುಕು ತುಂಬಾ ದುಸ್ತರವಾಗುತ್ತದೆ. ಸಾಲ ಶೂಲ ಮಾಡಿ ಬಿತ್ತಿ ಬೆಳೆದ ಬೆಳೆ ಹೀಗೆ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಮರು ಕ್ಷಣವೇ ಎಷ್ಟೊ ರೈತ ಕುಟುಂಬಗಳು ಸಾಲದ ಹೊರೆ ತಾಳದೇ ಬೀದಿಗೆ ಬೀಳುತ್ತವೆ.

ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗುವ ದೃಷ್ಟಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿವೆ. ಈ ಯೋಜನೆಯ ಅಡಿಯಲ್ಲಿ ಪ್ರಕೃತಿ ವಿಕೋಪಗಳಿಗೆ ಸಿಲುಕಿ ಬೆಳೆ ಹಾನಿಯಾದ ರೈತರಿಗೆ ಆರ್ಥಿಕವಾಗಿ ಧನ ಸಹಾಯವನ್ನು ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ?

  • ರೈತರ ಆಧಾರ ಕಾರ್ಡ
  • ಜಮೀನಿನ ಪಹಣಿ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಫ್ರೂಟ್ಸ್ ಐಡಿ ನಂಬರ್

ನಿಮ್ಮ ಫ್ರೂಟ್ಸ್ ಐಡಿ ನಂಬರ್ ಚೆಕ್ ಮಾಡುವುದು ಹೇಗೆ?

ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ತಮ್ಮ ಫ್ರೂಟ್ಸ್ ಐಡಿ ನಂಬರ್ ಹೊಂದಿರುವುದು ಕಡ್ಡಾಯವಾಗಿದೆ. ಒಂದು ವೇಳೆ ರೈತರು ತಮ್ಮ ಫ್ರೂಟ್ಸ್ ಐಡಿ ನಂಬರ್ ಮರೆತು ಹೋಗಿದ್ದರೆ ಅದನ್ನು ಚೆಕ್ ಮಾಡುವುದು ಹೇಗೆ ಎಂಬುದನ್ನು ಕೆಳಗೆ ವಿವರಿಸಿದ್ದೇವೆ. ಕೊನೆಯವರೆಗೂ ಓದಿರಿ.

ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://fruitspmk.karnataka.gov.in/MISReport/GetDetailsByAadhaar.aspx

ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ.

ಹಂತ -3) ನಂತರ ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದ್ದರೆ ಅಲ್ಲಿ ನಿಮಗೆ ಕಾಣಿಸುತ್ತದೆ. ಅದರ ಜೊತೆಗೆ ಪಿಎಂಕೆ ಐಡಿ ನಂಬರ್ ಕೂಡ ಕಾಣುತ್ತದೆ.

ಹೀಗೆ ನೀವು ನಿಮ್ಮ ಫ್ರೂಟ್ಸ್ ಐಡಿ ನಂಬರ್ ಪಡೆದುಕೊಂಡು ಈ ಸಾಲಿನ ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿಶೇಷ ಸೂಚನೆ: ಸರ್ವರ್ ಡೌನ್ ಆಗಿರುವುದರಿಂದ ಮೇಲಿನ ಲಿಂಕ್ ಓಪನ್ ಆಗುತ್ತಿಲ್ಲ. ದಯವಿಟ್ಟು ಸ್ವಲ್ಪ ಸಮಯ ಬಿಟ್ಟು ಪ್ರಯತ್ನಿಸಿ.

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode

Recent Posts

SSLC ವಿದ್ಯಾರ್ಥಿಗಳೇ ಗಮನಿಸಿ: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ

"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…

56 years ago

ರಾಜ್ಯದಲ್ಲಿ ನಡುಗುವ ಚಳಿ! ಈ 7 ಜಿಲ್ಲೆಗಳಲ್ಲಿ ‘ಶೀತ ಗಾಳಿ’ಯ ಅಲರ್ಟ್. ಜನವರಿ 10 ರವರೆಗೆ ಈ ಜಿಲ್ಲೆಯವರಿಗೆ ಎಚ್ಚರಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…

56 years ago

BBK 12 Finale: ಬಿಗ್‌ಬಾಸ್‌ ಘೋಷಣೆಗೂ ಮುನ್ನವೇ ವಿನ್ನರ್ ಹೆಸರು ಲೀಕ್ ಮಾಡಿದ ವಿಕಿಪೀಡಿಯಾ

BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…

56 years ago

ನೀವು ಖರೀದಿಸುವ ಜಮೀನಿನಹೆಸರು ಯಾರುದು? ಆ ಜಮೀನಿನ ಅಕ್ಕಪಕ್ಕ ಮಾಲಿಕರ ಹೆಸರು ಇಲ್ಲಿ ಚೆಕ್ ಮಾಡಿ.

ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…

56 years ago

ಗೃಹಲಕ್ಷ್ಮಿ ಯೋಜನೆಯ ಬಾಕಿ ₹4000 ಹಣ ಒಟ್ಟಿಗೆ ಜಮಾ? ಖಾತೆಗೆ ಹಣ ಬರುವುದು ಯಾವಾಗ?  ಸಂಕ್ರಾಂತಿಗೆ ಸರ್ಕಾರದಿಂದ ಸಿಕ್ತು ಸ್ಪಷ್ಟನೆ. ಇಲ್ಲಿದೆ ಡಿಟೇಲ್ಸ್!

ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…

56 years ago

ಶೇ. 90 ರಷ್ಚು ಸಬ್ಸಿಡಿಯಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳು ಇಲ್ಲಿದೆ ಮಾಹಿತಿ

ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…

56 years ago