ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಕಳೆದ ಅಂಕಣದಲ್ಲಿ ನಾವು 2023-24 ನೇ ಸಾಲಿನಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಇತ್ತಿಚೆಗೆ ರಾಜ್ಯ ಸರ್ಕಾರ ಆ ಬೆಳೆ ವಿಮೆ ಹಣ ಬಿಡುಗಡೆ ಮಾಡಿದ್ದರ ಬಗ್ಗೆ ತಿಳಿಸಿದ್ದೇವೆ.
ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಕಳೆದ ಅಂಕಣದಲ್ಲಿ ನಾವು 2023-24 ನೇ ಸಾಲಿನಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಇತ್ತಿಚೆಗೆ ರಾಜ್ಯ ಸರ್ಕಾರ ಆ ಬೆಳೆ ವಿಮೆ ಹಣ ಬಿಡುಗಡೆ ಮಾಡಿದ್ದರ ಬಗ್ಗೆ ತಿಳಿಸಿದ್ದೇವೆ.
Thank you for reading this post, don't forget to subscribe!ಇವತ್ತಿನ ಅಂಕಣದಲ್ಲಿ ನಾವು ಈ ಸಾಲಿನ ಅಂದರೆ 2024-25 ನೇ ಸಾಲಿನ ಬೆಳೆ ವಿಮೆಗೆ ಲಭ್ಯವಿರುವ ಬೆಳೆಗಳು ಯಾವುವು ಹಾಗೂ ಅವುಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಆದ್ದರಿಂದ ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.
ಇದನ್ನೂ ಓದಿ: ಬೆಳೆ ಪರಿಹಾರ ಹಣ : ಸರ್ವೇ ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಚೆಕ್ ಮಾಡಿ !
ಆತ್ಮೀಯ ಓದುಗರೇ, ಅತಿವೃಷ್ಟಿ , ಅನಾವೃಷ್ಟಿ,ಭೂಕಂಪ, ಸುನಾಮಿ ಇದೇ ಮುಂತಾದ ಪ್ರಕೃತಿ ವಿಕೋಪಗಳಿಗೆ ಸಿಲುಕಿ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾಗುವ ಕ್ಷೇತ್ರವೆಂದರೆ ಅದು ಕೃಷಿ. ಇನ್ನು ಭಾರತದಲ್ಲಿ ಸುಮಾರು ಶೇಕಡಾ 60 ರಷ್ಟು ಕುಟುಂಬಗಳು ಈ ಕೃಷಿಯನ್ನೇ ನಂಬಿ ಬದುಕುತ್ತಿವೆ. ಆದರೆ ಮೇಲೆ ಸೂಚಿಸಿದ ಪ್ರಕೃತಿ ವಿಕೋಪಗಳಾದಾಗ ಇಂತಹ ರೈತರ ಬದುಕು ತುಂಬಾ ದುಸ್ತರವಾಗುತ್ತದೆ. ಸಾಲ ಶೂಲ ಮಾಡಿ ಬಿತ್ತಿ ಬೆಳೆದ ಬೆಳೆ ಹೀಗೆ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಮರು ಕ್ಷಣವೇ ಎಷ್ಟೊ ರೈತ ಕುಟುಂಬಗಳು ಸಾಲದ ಹೊರೆ ತಾಳದೇ ಬೀದಿಗೆ ಬೀಳುತ್ತವೆ.
ಇದನ್ನೂ ಓದಿ: ಬೆಳೆ ಪರಿಹಾರ ಹಣ : ಮೊಬೈಲ್ ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಚೆಕ್ ಮಾಡಿ !
ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗುವ ದೃಷ್ಟಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿವೆ. ಈ ಯೋಜನೆಯ ಅಡಿಯಲ್ಲಿ ಪ್ರಕೃತಿ ವಿಕೋಪಗಳಿಗೆ ಸಿಲುಕಿ ಬೆಳೆ ಹಾನಿಯಾದ ರೈತರಿಗೆ ಆರ್ಥಿಕವಾಗಿ ಧನ ಸಹಾಯವನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: ಬೆಳೆ ಪರಿಹಾರ ಹಣ : FID ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಚೆಕ್ ಮಾಡಿ !
ಹಾಗಾಗಿ ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ ರೈತರು ಮೊದಲು ರಾಜ್ಯ ಸರಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಈ ಸಾಲಿನ ಬೆಳೆ ವಿಮೆಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಜಿಲ್ಲೆಯ ಯಾವ ಬೆಳೆಗೆ ಎಷ್ಟು ವಿಮೆ ಮಾಡಿಸಬೇಕು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದನ್ನು ಕೆಳಗೆ ತೋರಿಸಲಾಗಿದೆ. ತಪ್ಪದೇ ಕೊನೆಯವರೆಗೂ ಓದಿರಿ ಹಾಗೂ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಕೆಳಗೆ ನೀಡಲಾಗಿರುವ ನಮ್ಮ WhatsApp ಗುಂಪಿಗೆ ಸೇರಿ.
ಇದನ್ನೂ ಓದಿ: ಬೆಳೆ ಪರಿಹಾರ ಹಣ: ಆಧಾರ್ ನಂಬರ್ ಹಾಕಿ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯೇ ಎಂಬುದನ್ನ ಮೊಬೈಲ್ ನಲ್ಲೇ ಚೆಕ್ ಮಾಡಿ!
ಹಂತ -1) ಮೊದಲಿಗೆ ರೈತರು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://samrakshane.karnataka.gov.in/CropHome.aspx
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ವರ್ಷ 2024-25 ಹಾಕಿ, ಋತು ಆಯ್ಕೆಯನ್ನು kharif ಎಂದು ನಮೂದಿಸಿ.
ಹಂತ-3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು crop you can isure ಮೇಲೆ ಕ್ಲಿಕ್ ಮಾಡಿ.
ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ, ಕೆಳಗೆ ನೀಡಲಾಗಿರುವ Dispaly ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ -5) ನಂತರ ನಿಮಗೆ ಕೆಳಗೆ ತೋರಿಸಿದಂತೆ ನಿಮ್ಮ ಜಿಲ್ಲೆಯಲ್ಲಿ ಈ ಸಾಲಿನ ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಯಾವ ಯಾವ ಬೆಳೆಗಳು ಇವೆ ಮತ್ತು ಬೆಳೆ ವಿಮೆ ಎಷ್ಟು ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.
ಈ ರೀತಿಯಾಗಿ ನೀವು ಈ ಸಾಲಿನ ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ಬೆಳೆವಿಮೆ ಲಭ್ಯವಿದೆ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ.
ಇನ್ನು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಬಗ್ಗೆ ಹೇಳುವುದಾದರೆ, ಬೆಳೆ ವಿಮೆಯಲ್ಲಿರುವ ಪ್ರತಿ ಜಿಲ್ಲೆಯ ಬೆಳೆಗೆ ಅರ್ಜಿ ಸಲ್ಲಿಸುವ ದಿನಾಂಕ ಬೇರೆ ಬೇರೆ ಆಗಿರುತ್ತದೆ. ಉದಾಹರಣೆಗೆ ಈರುಳ್ಳಿ ಬೆಳೆ ವಿಮೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಜಯಪುರದಲ್ಲಿ ಬೇರೆ ಇದ್ದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಬೇರೆ ಇರುತ್ತದೆ.
ಸದ್ಯ ಇರುವ ಮಾಹಿತಿ ಪ್ರಕಾರ ಯಾವ ಬೆಳೆಗೆ ಬೆಳೆ ವಿಮೆ ಮಾಡಿಸುವ ಕೊನೆಯ ದಿನಾಂಕ ಯಾವುದು ಎಂಬುದರ ಬಗ್ಗೆ ಮಾಹಿತಿ ಕೆಳಗಿದೆ ನೋಡಿ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…