ಆತ್ಮೀಯ ರೈತ ಬಾಂಧವರೇ ತಮಗೆಲ್ಲೇಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ತಮಗೆಲ್ಲ ತಿಳಿದಿರುವಂತೆ ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಾಡಿಕೆಗಿಂತ ಕಡಿಮೆ ಮಳೆಯಾದ ಕಾರಣ ಎಲ್ಲ ಬೆಳೆಗಳು ನಷ್ಟವಾಗಿದ್ದವು.
ಆತ್ಮೀಯ ರೈತ ಬಾಂಧವರೇ ತಮಗೆಲ್ಲೇಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ತಮಗೆಲ್ಲ ತಿಳಿದಿರುವಂತೆ ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಾಡಿಕೆಗಿಂತ ಕಡಿಮೆ ಮಳೆಯಾದ ಕಾರಣ ಎಲ್ಲ ಬೆಳೆಗಳು ನಷ್ಟವಾಗಿದ್ದವು.
Thank you for reading this post, don't forget to subscribe!ಅದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರವು ಬೆಳೆಹಾನಿಯಾದ ಪ್ರತಿ ರೈತರ ಖಾತೆಗೆ ನೇರವಾಗಿ ಬೆಳೆ ಹಾನಿ ಪರಿಹಾರ ಹಣ ಜಮಾ ಮಾಡುವ ಕ್ರಮವನ್ನು ತೆಗೆದುಕೊಂಡಿದ್ದಾರೆ. ಅದರಂತೆ ಈಗಾಗಲೇ ಮೂರು ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ.
ಅಲ್ಲದೇ ರಾಜ್ಯ ಸರಕಾರ ಹೆಚ್ಚುವರಿಯಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೇಂದ್ರ ಸರ್ಕಾರದ ಅನುದಾನ ಅಲ್ಲದೇ ರಾಜ್ಯ ಸರ್ಕಾರದ ಬೊಕ್ಕಸದಿಂದ 500 ಕೋಟಿ ರೂಪಾಯಿ ವೆಚ್ಚದಲ್ಲಿ ರೈತರಿಗೆ ಹೆಚ್ಚುವರಿ ಪರಿಹಾರ ಹಣ ಜಮಾ ಮಾಡುತ್ತಿದೆ.
ಆದರೆ ಇನ್ನೂ ಹಲವು ರೈತರಿಗೆ ಬರ ಪರಿಹಾರದ ಒಂದು ಕಂತಿನ ಹಣವು ಬಂದಿಲ್ಲ. ಅಂತಹ ಹಣ ಜಮಾ ಆಗದೇ ಇರುವ ರೈತರು ಏನು ಮಾಡಬೇಕು, ಎಲ್ಲಿ ದಾಖಲೆ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ತಿಳಿಯಲು ಈ ಅಂಕಣವನ್ನು ಕೊನೆವರೆಗೂ ತಪ್ಪದೇ ಓದಿರಿ.
ಹಲವು ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಆಗದೇ ಇರಲು ಮುಖ್ಯ ಕಾರಣವೆಂದರೆ ಅಂತಹ ರೈತರು ತಮ್ಮ ಹೆಸರಿಗೆ ಎಫ್ ಐ ಡಿ (FID) ನಂಬರ್ ಮಾಡಿಸದೇ ಇರುವುದು.
ಹೌದು ರೈತರೇ ಇದೀಗ ಸರ್ಕಾರದ ಎಲ್ಲ ಯೋಜನೆಗಳ ಲಾಭ ಪಡೆಯಲು ರೈತರಿಗೆ ಎಫ್ ಐ ಡಿ (FID) ನಂಬರ್ ಕಡ್ಡಾಯವಾಗಿದ್ದು ಈ ನಂಬರ್ ಇಲ್ಲದಿದ್ದರೆ ನಿಮಗೆ ಬೆಳೆ ಪರಿಹಾರ ಹಣ, ಬೆಳೆ ವಿಮೆ ಹಣ ಅಥವಾ ಪಿಎಂ ಕಿಸಾನ್ ಹಣ ಜಮಾ ಆಗುವುದಿಲ್ಲ. ಇದೆಲ್ಲಕ್ಕೂ ಎಫ್ ಐ ಡಿ (FID) ನಂಬರ ಬೇಕೆ ಬೇಕು.
ನಿಮ್ಮ ಹೆಸರಿಗೆ FID ನಂಬರ್ ಇದೆಯಾ ಅಥವಾ ಇಲ್ಲವಾ ಎಂಬುದನ್ನು ಮೊಬೈಲ್ ನಲ್ಲಿ ತಿಳಿಯಲು ಕೆಳಗೆ ತಿಳಿಸಿದ ವಿಧಾನವನ್ನು ಅನುಸರಿಸಿ.
ಹಂತ -1) ರೈತರೇ ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಒಂದು ಹೊಸ ಪೇಜ್ ಕಾಣುತ್ತದೆ. ಅಲ್ಲಿ ನೀವು ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ.
ಹಂತ -3) ನಂತರ ನಿಮಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರಿಗೆ FID ನಂಬರ್ ಇದ್ದರೆ ಅಲ್ಲಿ ಕಾಣಿಸುತ್ತದೆ. ಅದರ ಜೊತೆಗೆ ನಿಮ್ಮ ಪಿಎಂ ಕಿಸಾನ್ ಐಡಿ ನಂಬರ್ ಕೂಡ ಕಾಣುತ್ತದೆ ಮತ್ತು ಯಾವ ಸರ್ವೆ ನಂಬರಿಗೆ ನಿಮ್ಮ FID ನಂಬರ್ ಲಿಂಕ್ ಆಗಿದೆ ಎಂಬ ಮಾಹಿತಿ ಸಿಗುತ್ತದೆ.
ಒಂದು ವೇಳೆ ನಿಮ್ಮ ಹೆಸರಿಗೆ ಎಫ್ ಐ ಡಿ (FID) ನಂಬರ್ ಇಲ್ಲದಿದ್ದರೆ ಈ ಕೂಡಲೇ ನೀವು ಎಫ್ ಐ ಡಿ (FID) ನಂಬರ್ ಮಾಡಿಸಿ. ಎಫ್ ಐ ಡಿ (FID) ನಂಬರ್ ಮಾಡಿಸುವುದು ಹೇಗೆ ಮತ್ತು ಅದಕ್ಕೆ ಯಾವ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ಕೆಳಗೆ ತಿಳಿಸಿದ್ದೇವೆ ತಪ್ಪದೇ ಓದಿ.
ರೈತ ಮಿತ್ರರೇ ಈಗಾಗಲೇ ನಿಮಗೆ ಮೇಲೆ ತಿಳಿಸಿದಂತೆ ಸರ್ಕಾರದ ಯಾವುದೇ ಕಾರ್ಯಕ್ರಮವಾಗಲಿ ಅಥವಾ ಯೋಜನೆಯಾಗಲಿ ಅಥವಾ ಸಬ್ಸಿಡಿಯಾಗಲಿ , ಅದರ ಪ್ರಯೋಜನ ಪಡೆಯಲು ನಿಮ್ಮ ಬಳಿ ನಿಮ್ಮ ಸ್ವಂತ FID ನಂಬರ್ ಇರುವುದು ಅವಶ್ಯಕ. ಹಾಗಾಗಿ ಒಂದು ವೇಳೆ ನಿಮ್ಮ ಹೆಸರಿಗೆ FID ನಂಬರ್ ರಚನೆಯಾಗದೆ ಇದ್ದರೆ, ನೀವು ಈ ಕೂಡಲೇ ನಿಮ್ಮ ಸಮೀಪದ ಗ್ರಾಮ್ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಕೆಳಗೆ ನೀಡಲಾಗಿರುವ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…