ಇದೀಗ ಹಿಂಗಾರು ಹಂಗಾಮಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು ಮುಂದಿನ ಒಂದು ವಾರದಲ್ಲಿ ಎಲ್ಲಾ ಅರ್ಹ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ಬಾರಿ ಹಿಂಗಾರು ಋತುವಿನಲ್ಲಿ ಅಕಾಲಿಕ ಮಳೆಯಾಗಿ ರಾಜ್ಯದ ಹಲವೆಡೆ ಬೆಳೆಗಳು ಹಾನಿಗೆ ಒಳಗಾಗಿವೆ.
Thank you for reading this post, don't forget to subscribe!ಇದೀಗ ಹಿಂಗಾರು ಹಂಗಾಮಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು ಮುಂದಿನ ಒಂದು ವಾರದಲ್ಲಿ ಎಲ್ಲಾ ಅರ್ಹ ರೈತರ ಖಾತೆಗೆ ಪರಿಹಾರ ಹಣ ಜಮಾ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಈ ವರ್ಷದ ಹಿಂಗಾರು ಹಂಗಾಮಿನಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ 1.58 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು, ಬೆಳೆ ಹಾನಿಗೊಳಗಾದ ರೈತರಿಗೆ 120 ಕೋಟಿ ರೂಪಾಯಿ ಪರಿಹಾರ ಹಣವನ್ನು(bele parihara amount) ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ಕೃಷ್ಣ ಭೈರೇಗೌಡ ಅವರು ಮಾಧ್ಯಮಗಳಿಗೆ ಹೇಳಿದರು.
ಇನ್ನು ನಿಮ್ಮ ಬೆಳೆ ಕೂಡ ಹಿಂಗಾರು ಹಂಗಾಮಿನಿಂದ ಹಾನಿಗೊಳಗಾಗಿ ಹಿಂಗಾರು ಬೆಳೆ ಪರಿಹಾರಕ್ಕೆ ನೀವು ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿ ಸ್ಥಿತಿಯನ್ನು ನೀವು ಮನೆಯಲ್ಲೇ ಕುಳಿತು ಚೆಕ್ ಮಾಡಬಹುದು.
ಹೌದು ರೈತ ಮಿತ್ರರೇ, ಇದೀಗ ನೀವು ರಾಜ್ಯ ಸರಕಾರ ಬಿಡುಗಡೆ ಮಾಡಲಿರುವ ಹಿಂಗಾರು ಬೆಳೆ ಪರಿಹಾರ ಹಣವನ್ನು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಚೆಕ್ ಮಾಡಬಹುದು. ಅದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ಹಂತ -1) ಮೊದಲಿಗೆ ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು ಕನ್ನಡ ಅಥವಾ ಇಂಗ್ಲಿಷ್ ಭಾಷೆ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ. ಅಲ್ಲಿ ನಿಮಗೆ Parihara Payment Reports ಎಂದು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ -3) ನಂತರ ನಿಮಗೆ ಅಲ್ಲಿ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನೀವು Village Wise List ಮೇಲೆ ಕ್ಲಿಕ್ ಮಾಡಿ. ನಂತರ ವರ್ಷ, ಋತು ಮತ್ತು ವಿಪತ್ತಿನ ವಿಧವನ್ನು ಆಯ್ಕೆ ಮಾಡಿ. ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ Get Report ಮೇಲೆ ಕ್ಲಿಕ್ ಮಾಡಿ.
ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣಿಸುತ್ತದೆ. ಅಲ್ಲಿ ನಿಮ್ಮ ಗ್ರಾಮದಲ್ಲಿ ಹಿಂಗಾರು ಬೆಳೆ ಪರಿಹಾರ ಹಣಕ್ಕೆ ಅರ್ಹರಾಗಿರುವ ರೈತರ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.
ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನಿಮಗೆ ಹಿಂಗಾರು ಬೆಳೆ ಪರಿಹಾರ ಹಣ ಬರುವುದಿಲ್ಲ.ಈ
ಈ ರೀತಿಯಾಗಿ ನೀವು ಸುಲಭವಾಗಿ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಹಿಂಗಾರು ಬೆಳೆ ಪರಿಹಾರ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಬಹುದು.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…
ನಿಮ್ಮ ರೇಷನ್ ಕಾರ್ಡ್ ಬಿಪಿಎಲ್ (BPL Card) ಇದೆಯೋ ಅಥವಾ ಎಪಿಎಲ್ (APL Card) ಆಗಿ ಪರಿವರ್ತನೆ ಆಗಿದೆಯೋ ಎಂಬುದನ್ನು…