ಸ್ನೇಹಿತರೆ ‘ದಿನಕ್ಕೊಂದು ಸೇಬು ತಿಂದರೆ ಡಾಕ್ಟರ್ ರನ್ನ ದೂರ ಇಡಬಹುದು ‘ ಎಂದು ನಮ್ಮಲ್ಲಿ ಒಂದು ಪ್ರಸಿದ್ಧ ಮಾತಿದೆ. ಆದರೆ ಭಾರತದಂತಹ ಬೆಳವಣಿಗೆ ಹೊಂದುತ್ತಿರುವ ದೇಶದಲ್ಲಿ ಹಲವರಿಗೆ ಒಂದು ಹೊತ್ತಿನ ಊಟ ಸರಿಯಾಗಿ ಸಿಗುತ್ತಿಲ್ಲ, ಇನ್ನು ಸಿಕ್ಕರೂ ಅದರಲ್ಲಿ ಕೆಮಿಕಲ್ ನ ಅಂಶವೇ ಹೆಚ್ಚಾಗಿ ದಿನಕ್ಕೊಂದು ಹೊಸ ಹೊಸ ರೋಗವನ್ನು ತರುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವುದು ಇವತ್ತಿನ ಅತೀ ಜರೂರ್ ವಿಷಯ ಆಗಿದೆ.ಕೇವಲ ಹಣದ ಹಿಂದೆ ಓಡುತ್ತಿರುವ ಇಂದಿನ ಜಗತ್ತು ಅದಕ್ಕಾಗಿ ತಮ್ಮ ಅರೋಗ್ಯವನ್ನು ಲೆಕ್ಕಿಸುತ್ತಿಲ್ಲ. ಅದರ ಜೊತೆಗೆ ನಮ್ಮ ಆಹಾರ ಪದ್ದತಿಯನ್ನೇ ಹಾಳುಮಾಡಿರುವ ಜಂಕ್ ಫುಡ್ ಗೆ ಇಂದಿನ ಯುವಜನತೆ ಹೆಚ್ಚು ಮಾರು ಹೋಗಿದ್ದಾರೆ. ಈ ಕಾರಣದಿಂದಲೇ ಅವರು ಯೌವ್ವನದಲ್ಲೇ ಹಲವು ಗಂಭೀರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಶ್ರೀಮಂತರ ಅರೋಗ್ಯ ಹೀಗೆ ಹಾಳಾದರೆ ಅತ್ತ ಬಡವರ ಪಾಡು ದಿನಕ್ಕೊಂದು ಹೊತ್ತು ಊಟವಿಲ್ಲದೆ, ಸಿಕ್ಕರೆ ಅದು ಪೋಷಕಾಂಶಗಳ ಕೊರತೆಯಿಂದ ಅವರಲ್ಲಿ ಹಲವು ರೋಗಗಳನ್ನು ತರುತ್ತಿದೆ. ಹಾಗಾಗಿ ನಾವು ಉತ್ತಮ ಆರೋಗ್ಯಕ್ಕಾಗಿ ಎಂತಹ ಆಹಾರ ಸೇವಿಸಬೇಕು ಎಂಬ ವಿಷಯದ ಮೇಲೆ ವೈದ್ಯರನ್ನು ಸಂಪರ್ಕಿಸಿದಾಗ ಅವರು ಹೆಚ್ಚು ಹಸಿ ತರಕಾರಿ ಮತ್ತು ಹಣ್ಣುಗಳನ್ನು ತಿನ್ನಲು ಸಲಹೆ ನೀಡಿದರು. ಈ ಕಾರಣದಿಂದ ನಾವು ಹಣ್ಣುಗಳ ಮಹತ್ವವನ್ನು ತಿಳಿಸುವ ಸಲುವಾಗಿ ಈ ಆರ್ಟಿಕಲ್ ಅನ್ನು ನಿಮಗಾಗಿ ಸಮರ್ಪಸುತ್ತಿದ್ದೇವೆ. ದಯವಿಟ್ಟು ಕೊನೆತನಕ ಓದಿ… ಈ ಅರ್ಟಿಕಲ್ ನಿಮ್ಮ ಕಾಯಿಲೆಯನ್ನು ತಪ್ಪಿಸಬಹುದು.
Thank you for reading this post, don't forget to subscribe!ಸ್ನೇಹಿತರೇ ಇವತ್ತಿನ ಈ ಅರ್ಟಿಕಲ್ ನಲ್ಲಿ ನಾವು ನಮ್ಮೆಲ್ಲರಿಗೂ ಪರಿಚಿತವಾಗಿರುವ ಮತ್ತು ಎಂತಹ ಕಡು ಬಡವರ ಕೈಗೇಟುಕುವ ಹಣ್ಣಾದ ಬಾಳೆಹಣ್ಣಿನ ಮಹತ್ವವನ್ನು ತಿಳಿಯೋಣ ಬನ್ನಿ.
1. ಬಾಳೆಹಣ್ಣು ಒಂದು ಬಹುಪಯುಕ್ತ ಹಣ್ಣಾಗಿದ್ದು, ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ತೂಕವನ್ನು ನಿಯಂತ್ರಣದಲ್ಲಿಡಬಹುದು.
2. ಬಾಳೆಹಣ್ಣಿನಲ್ಲಿ ನೈಸರ್ಗಿಕ ನಾರಿನಂಶ (natural fibre) ಮತ್ತು ಪೊಟ್ಯಾಸ್ಸಿಯಂ ಅಂಶಗಳು ಹೆಚ್ಚಾಗಿರುವುದರಿಂದ ಇದು ಲೈಂಗಿಕಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಪುರುಷರಲ್ಲಿ ವೀರ್ಯದ ಗುಣಮಟ್ಟವನ್ನು (sperm quality) ಹೆಚ್ಚಿಸುತ್ತದೆ.
3. ಬಾಳೆಹಣ್ಣಿನಲ್ಲಿರುವ ಸಕ್ಕರೆ ಅಂಶವು ನಿಮಗೆ ಪ್ರತಿನಿತ್ಯ ವ್ಯಾಯಾಮ ಮಾಡುವ ಮುನ್ನ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ತ್ವರಿತವಾಗಿ ಶಕ್ತಿ ನೀಡುತ್ತದೆ.
4. ಬಾಳೆಹಣ್ಣು ನೈಸರ್ಗಿಕ ನಾರಿನಂಶಗಳನ್ನು ಹೇರಳವಾಗಿ ಹೊಂದಿದ್ದು ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದ್ದು, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
5. ಬಾಳೆಹಣ್ಣಿನಲ್ಲಿ ವಿಟಮಿನ್ B-6, ಮತ್ತು ಟ್ರಿಪ್ಟೊಫನ್ ನಂತಹ ಅಮೈನೋ ಆಸಿಡ್ ಇರುವುದರಿಂದ ಇದು ನಿಮಗೆ ಸುಖಕರವಾದ ನಿದ್ರೆ ಮತ್ತು ನಿಮಗೆ ಒಳ್ಳೆಯ ಮೂಡ್ ನಲ್ಲಿರಲು ಸಹಾಯ ಮಾಡುತ್ತದೆ.
6. ಇದರಲ್ಲಿ ಹೆಚ್ಚು ಕಾರೋಟಿನ್ ಪ್ರೊಟೀನ್ ಅಂಶಗಳು ಇರುವುದರಿಂದ ಇದರಿಂದ ನಿಮಗೆ ಕಿಡ್ನಿ ಕ್ಯಾನ್ಸರ್ ಆಗುವುದನ್ನ ತಡೆಗಟ್ಟುತ್ತದೆ.
7. ಬಾಳೆಹಣ್ಣು ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಪ್ರಮುಖ ಕಾರಣವಾದ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ.
8. ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಇದು ತಡೆಗಟ್ಟುತ್ತದೆ.
9. ಬಾಳೆಹಣ್ಣಿನಲ್ಲಿ ಮೆಗ್ನೇಸಿಯಂ ಮತ್ತು ಪೊಟ್ಯಾಸಿಯಂ ಅಂಶಗಳು ಇರುವುದರಿಂದ ಇವು ಸ್ನಾಯುಗಳನ್ನು ಬಲಪಡಿಸುತ್ತವೆ.
10. ಇಷ್ಟೇ ಅಲ್ಲದೇ ಇದು ಮೂಳೆಮುರಿತವನ್ನು ಕಡಿಮೆ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
ಸ್ನೇಹಿತರೆ ನಮ್ಮ ರಾಷ್ಟ್ರ ರಾಜಧಾನಿಯಾದ ದಿಲ್ಲಿಯ ಪ್ರಗತಿ ವಿಹಾರ ಎಂಬ ಏರಿಯಾದಲ್ಲಿ ಅನೇಕ ಸರ್ಕಾರಿ ಕಚೇರಿಗಳ ದೊಡ್ಡ ದೊಡ್ಡ ಕಟ್ಟಡಗಳೇ ಇವೆ. ಅವುಗಳಲ್ಲಿ ನ್ಯಾಷನಲ್ ಇಂಫಾರ್ಮೇಟಿಕ್ಸ್ ಸೆಂಟರ್ ಅಂದರೆ ರಾಷ್ಟ್ರೀಯ ಮಾಹಿತಿ ಕೇಂದ್ರ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಂದ್ರೆ ಸಿಬಿಐ, ಐಟಿಬಿಪಿ ಅಂದ್ರೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಹೀಗೆ ಸರ್ಕಾರದ 10 ಹಲವಾರು ಮಹತ್ವದ ಕಚೇರಿಗಳು ಅಲ್ಲಿ ನೆಲೆಸಿವೆ ಆದರೆ ಈ ಎಲ್ಲಾ ಕಟ್ಟಡಗಳನ್ನು ಹೊರತುಪಡಿಸಿ ಅಲ್ಲಿ ಇನ್ನೊಂದು ಮಹತ್ವವಾದ ಕಟ್ಟಡವಿದೆ. ಬಹುಶಹ ಈ ಕಟ್ಟಡದ ಬಗ್ಗೆ ಸ್ವತಹ ದೆಹಲಿಯ ಎಷ್ಟೋ ಸ್ಥಳೀಯ ನಿವಾಸಿಗಳಿಗೆ ತಿಳಿದಿಲ್ಲ. ಯಾಕೆಂದರೆ ಈ ಕಟ್ಟಡವು ಇಂತದ್ದೇ ಮತ್ತು ಇಂಥವರಿಗೆ ಸಂಬಂಧಿಸಿದ್ದು ಎಂದು ಹೇಳುವ ಯಾವ ಬೋರ್ಡು ಆ ಕಟ್ಟಡದ ಮೇಲಿಲ್ಲ. ಈ ಕಟ್ಟಡಕ್ಕೆ ಬಂದು ಹೋಗುವ ಯಾವ ವ್ಯಕ್ತಿಯ ಕೋಟ್ ಮೇಲು ಆತನ ಹೆಸರು ಮತ್ತು ಆತನ ಕೆಲಸದ ಬಗ್ಗೆ ಯಾವುದೇ ಗುರುತುಗಳಿರುವುದಿಲ್ಲ. ದೇಶದ ರಕ್ಷಣಾ ವ್ಯವಸ್ಥೆಯ ಬಗ್ಗೆ ತಿಳಿದಿರುವ ಕೆಲವೇ ಕೆಲವು ಬಲ್ಲವರಿಗೆ ಮಾತ್ರ ಈ ಕಟ್ಟಡ ಯಾವುದು ಮತ್ತು ಈ ಕಟ್ಟಡದ ಒಳಗೆ ಏನು ನಡೆಯುತ್ತದೆ ಎಂಬುದು ತಿಳಿದಿರುತ್ತೆ. ಹೌದು ಸ್ನೇಹಿತರೆ, ನಾನೀಗ ನಿಮಗೆ ಹೇಳೋಕೆ ಹೊರಟಿರೋದು Research and Analysis Wing ಅಂದ್ರೆ RAW ಎಂಬ ಭಾರತೀಯ ಗುಪ್ತಚರ ಸಂಸ್ಥೆಯ ಹುಟ್ಟಿಕೊಂಡ ಇತಿಹಾಸದ ಬಗ್ಗೆ.
ಸ್ನೇಹಿತರೆ ನಾನು ಈ ಆರ್ಟಿಕಲ್ ನ ಆರಂಭದಲ್ಲಿ ಪೀಠಿಕೆ ಹಾಕಿದ ಆ ಅನಾಮಧೇಯ ಕಟ್ಟಡವೇ Research and Analysis Wing ಅಂದ್ರೆ ರವರು ನ ಮುಖ್ಯ ಕಚೇರಿ. ಇದೇ ಕಟ್ಟಡದಲ್ಲಿ ಜಗತ್ತಿನ ಅಷ್ಟು ದೇಶಗಳಲ್ಲಿ ನಡೆಯುವ ಚಿಕ್ಕ ವ್ಯತ್ಯಾಸವನ್ನು ಸೂಕ್ಷ್ಮವಾಗಿ ನೋಡುವ ಬಲಿಷ್ಠ ಕಣ್ಣುಗಳಿರುವುದು ಆ ಕಣ್ಣುಗಳ ಹೆಸರೇ ರಾ ಏಜೆಂಟ್ಸ್.
ಸ್ನೇಹಿತರೆ ಅಮೆರಿಕಾಗೆ CIA, ಇಸ್ರೇಲ್ ಗೆ MOSSAD, ರಷ್ಯಾ ಗೆ KGB ಹೇಗೋ ಹಾಗೆ ಭಾರತದ ಗುಪ್ತಚರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವುದೇ ಈ RAW.
RAW ನ ರಹಸ್ಯ ಕಾರ್ಯಾಚರಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವ ಏಜೆಂಟನ ಹೆಸರು ಯಾರಿಗೂ ಗೊತ್ತಿರುವುದಿಲ್ಲ. ಅಸಲಿಗೆ ಅವರು ಯಾರು ಎನ್ನುವುದೇ ಒಂದು ರಹಸ್ಯ. ಸ್ನೇಹಿತರೆ ಜಗತ್ತಿನ ಯಾವುದೇ ರಾಷ್ಟ್ರದ ಸರ್ಕಾರಿ ಕೆಲಸಗಳು ಜಗತ್ ಜಾಹಿರ್ ಆಗಿರುತ್ತವೆ ನಮ್ಮ ಭಾರತೀಯ ಸೈನ್ಯ ಹೇಳುವುದಾದರೆ ಭಾರತೀಯ ಸೇನೆಯು ಕೂಡ ಮುಂದಿನ ಪೀಳಿಗೆಗೆ ಭಾರತೀಯ ಸೈನ್ಯದ ಸಾಹಸಗಾಥೆಯ ಮಹತ್ವವನ್ನು ತಿಳಿಸುವುದಕ್ಕಾಗಿ ವಾರ್ ಡೈರಿಗಳನ್ನ ಬರೆದಿಡುತ್ತದೆ. ಆದರೆ ಭಾರತೀಯ ಗುಪ್ತಚರ ಸಂಸ್ಥೆ ನಡೆಸುವ ಕಾರ್ಯಾಚರಣೆಯ ಚಿಕ್ಕ ವಿವರವು ಯಾರ ಕೈಗೂ ಸಿಗುವುದಿಲ್ಲ ಇಂತಹ ರಹಸ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ರಹಸ್ಯ ಏಜೆಂಟ್ಗಳ ಬಗ್ಗೆ ಯಾರಿಗೂ ಕಾಳಜಿ ಇರುವುದಿಲ್ಲ ಮತ್ತು ಕಾರ್ಯಾಚರಣೆ ಯಶಸ್ವಿಯಾದರೆ ಅವರಿಗೆ ಯಾರೂ ಶಹಬಾಷ್ ಗಿರಿಯನ್ನು ಕೊಡುವುದಿಲ್ಲ. ಇವರು ದೇಶದ ಎಂತಹ ಯೋಧರೆಂದರೆ ಇವರು ಯಾರು ಎಂಬುದು ಕೇವಲ ಅವರಿಗೆ ಮತ್ತು ಅವರ ಶತ್ರುಗಳಿಗೆ ಮಾತ್ರ ಗೊತ್ತಿರುತ್ತದೆ. ರಾ ಎಷ್ಟು ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತದೆ ಎಂದರೆ ಸರ್ಕಾರ ರಾ ಗೆ ಕೊಡುವ ಬಜೆಟ್ ನ ಚಿಕ್ಕ ಮಾಹಿತಿಯನ್ನು ಅದು ಎಲ್ಲಿಯೂ ಪ್ರಕಟಿಸುವುದಿಲ್ಲ ಮತ್ತು ಇಲ್ಲಿಯವರೆಗೆ ನಮ್ಮ ಪಾರ್ಲಿಮೆಂಟಿನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ರಾಗೆ ಕೊಡಲಾಗುವ ಬಜೆಟ್ ನ ಮಾಹಿತಿಯು ಕೇವಲ ಹಣಕಾಸು ಸಚಿವರಿಗೆ ಮಾತ್ರ ಗೊತ್ತಿರುತ್ತದೆ ಮತ್ತು ಅಲ್ಲಿಗೆ ಹಣಕಾಸು ಸಚಿವಾಲಯದ ಅಧಿಕಾರದ ವ್ಯಾಪ್ತಿ ಮುಗಿಯುತ್ತದೆ. ಯಾಕೆಂದರೆ ಬಜೆಟ್ ನ ಅಷ್ಟು ಹಣವನ್ನ ಎಲ್ಲಿ ಖರ್ಚು ಮಾಡಲಾಯಿತು ಹೇಗೆ ಖರ್ಚು ಮಾಡಲಾಯಿತು ಕ್ಯಾಶ್ ಮೂಲಕ ಖರ್ಚು ಮಾಡಲಾಯಿತೊ ಅಥವಾ ಚೆಕ್ ಮೂಲಕ ಖರ್ಚು ಮಾಡಲಾಯಿತು ಈ ಎಲ್ಲ ಮಾಹಿತಿಯನ್ನು ಟಾಪ್ ಸೀಕ್ರೆಟ್ ಆಗಿ ಇಡಲಾಗಿರುತ್ತದೆ ಮತ್ತು ಇದನ್ನ ತಿಳಿದುಕೊಳ್ಳುವ ಹಕ್ಕು ರಾ ಅನ್ನು ಬಿಟ್ಟು ಸ್ವತಹ ಸಂಸದರಿಗೂ ಇರುವುದಿಲ್ಲ. ರಾಡ್ ನಲ್ಲಿ ಎಷ್ಟು ಏಜೆಂಟ್ಗಳಿದ್ದಾರೆ, ಅವರು ಯಾವ ದೇಶಗಳಲ್ಲಿದ್ದಾರೆ ಮತ್ತು ಯಾವ ಮಿಷನ್ ಮೇಲಿದ್ದಾರೆ ಈ ಎಲ್ಲ ಮಾಹಿತಿ ದೆಹಲಿಯ ಆ ಅನಾಮಧೇಯ ಕಟ್ಟಡದ ನಾಲ್ಕು ಗೋಡೆಗಳ ಮಧ್ಯೆ ಅಷ್ಟೇ ಇರುತ್ತದೆ. ಕೇವಲ ಪ್ರಧಾನಮಂತ್ರಿ ಮತ್ತು ಅವರ ವ್ಯಾಪ್ತಿಗೆ ಬರುವ ಜಾಯಿಂಟ್ ಇಂಟೆಲಿಜೆಂಟ್ ಕಮಿಟಿಗೆ ಮಾತ್ರ ರಾ ನ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕಿದೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಕೃಷ್ಣ ವಾಣಿಯನ್ನೇ ಘೋಷ ವಾಕ್ಯವನ್ನಾಗಿ ಇಟ್ಟುಕೊಂಡಿರುವ ರಾ ನ ಅಸಲಿ ಕೆಲಸವೆಂದರೆ ನಮ್ಮ ದೇಶದ ರಾಜಕೀಯ,ಆರ್ಥಿಕ ಮತ್ತು ಸೇನೆಗೆ ಉಪಯುಕ್ತ ವಾಗುವ ಮಾಹಿತಿಯನ್ನು ಒದಗಿಸಲು ವಿದೇಶಗಳಲ್ಲಿ ಗೂಢಚಾರಿಕೆಯನ್ನು ನಡೆಸುವುದು. ಇದಕ್ಕಾಗಿ ವಿದೇಶಗಳಲ್ಲಿ ಹರಡಿಕೊಂಡಿರುವ ಗೂಡಚಾರ ನೆಟ್ವರ್ಕ್ಗಳಿಗೆ ಗುಪ್ತಚರ ಸಂಸ್ಥೆಗಳ ಮೂಲಕ ಸಾಕಷ್ಟು ಹಣ ಹರಿದು ಬರುತ್ತದೆ. ದೇಶಕ್ಕಾಗಿ ತಮ್ಮ ಜೀವದ ಹಂಗನ್ನು ತೊರೆದು ರಹಸ್ಯ ಕಾರ್ಯಾಚರಣೆಯಲ್ಲಿ ವಿಜಯ ಸಾಧಿಸುವ ಈ ಛಲದಂಕ ಮಲ್ಲರಿಗೆ ಪ್ರಶಸ್ತಿ ಪುರಸ್ಕಾರ ಬಿಡಿ ಸಾರ್ವಜನಿಕವಾಗಿ ಚಿಕ್ಕ ಪ್ರಶಂಸೆಯು ಸಿಗುವುದಿಲ್ಲ ಆದರೆ ಈ ಸಿಡಿಲು ಮರಿಗಳು ಇದಾವುದರ ಬಗ್ಗೆಯೂ ಯೋಚಿಸುವುದಿಲ್ಲ. ಯಾಕೆಂದರೆ ಅವರಿಗೆ ಇದರ ಅವಶ್ಯಕತೆಯೂ ಇಲ್ಲ ದೇಶದ ಈ ಗುಪ್ತ ಯೋಧ ಎಂತದ್ದೆ ಸಂದಿಗ್ಧ ಸಂದರ್ಭದಲ್ಲೂ ದೇಶದ ಹಿತವನ್ನೇ ಬಯಸುತ್ತಾನೆ ಆಗಲಿ ತನ್ನ ಸ್ವಾರ್ಥವಲ್ಲ.
ಜಗತ್ತಿನಲ್ಲಿ ಇಂಟಲಿಜೆನ್ಸ್ ಏಜೆನ್ಸಿಗಳು ಹೇಗೆ ಹುಟ್ಟಿದವು ಎಂಬುದನ್ನು ನೋಡುವುದಾದರೆ ಸುಮಾರು 185 ವರ್ಷಗಳ ಹಿಂದೆ ಅಂದ್ರೆ 1835 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಜಗತ್ತಿನ ಪ್ರಥಮ ಇಂಟಲಿಜೆನ್ಸ್ ಏಜೆನ್ಸಿಯನ್ನು ಹುಟ್ಟು ಹಾಕಿತ್ತು. ಅದರ ಹೆಸರು ಇಂಟಲಿಜೆನ್ಸ್ ಬ್ಯೂರೋ ಅಂದರೆ ಐಬಿ ಎಂದು ನಾಮಕರಣ ಮಾಡಲಾಗಿತ್ತು. ಬ್ರಿಟಿಷರು ಈ ಸಂಸ್ಥೆಯನ್ನು ಭಾರತೀಯರ ಮೇಲೆ ನಿಗಾ ವಹಿಸಲು ಹುಟ್ಟು ಹಾಕಿದ್ದರು. ನಂತರದ ದಿನಗಳಲ್ಲಿ ರಷ್ಯಾದ ಝಾರ್ ಶಾಹಿಯು ಬ್ರಿಟಿಷರ ವಿರುದ್ಧ ಆಕ್ರಮಣ ಮಾಡಲು ಪಿತೂರಿ ನಡೆಸುತ್ತಿದ್ದಾನೆ ಎಂದು ತಿಳಿದ ಬ್ರಿಟಿಷರು ಈ ತಂಡವನ್ನು ರಷ್ಯಾದ ವಿರುದ್ಧ ಸಕ್ರಿಯಗೊಳಿಸಿದರು. ಮುಂದೆ ರಷ್ಯಾವು ಆಕ್ರಮಣ ಮಾಡದೆ ಇದ್ದುದರಿಂದ ಬ್ರಿಟಿಷರು ಈ ತಂಡವನ್ನು ಭಾರತೀಯ ಕ್ರಾಂತಿಕಾರಿಗಳ ಮೇಲೆ ಗೂಢಚಾರಿಕೆ ಮಾಡಲು ನೇಮಿಸಿದರು. ಮಹಾತ್ಮ ಗಾಂಧೀಜಿ,ಸರ್ದಾರ್ ವಲ್ಲಭಾಯಿ ಪಟೇಲ್ ಸುತ್ತಮುತ್ತ ಐಬಿ ಏಜೆಂಟ್ಸ್ ಗಳೇ ತುಂಬಿದ್ದರು ಎಂದು ಹೇಳಲಾಗುತ್ತದೆ.
ಅದರ ನಂತರ ಎರಡನೇ ವಿಶ್ವ ಯುದ್ಧದಲ್ಲಿ ಐಬಿಯು ಮಯನ್ಮಾರ್ನಲ್ಲಿ ಇದ್ದುಕೊಂಡೇ ಜಪಾನ ದೇಶದ ವಯರ್ಲೆಸ್ ಸಂದೇಶಗಳನ್ನು ರೆಕಾರ್ಡ್ ಮಾಡಿಕೊಂಡಿತ್ತು. ಮುಂದೆ 1947ರಲ್ಲಿ ಸ್ವತಂತ್ರ ಬರುವುದಕ್ಕೂ ಮುಂಚೆ ಐಬಿಯು ಎಲ್ಲಾ ಸೀಕ್ರೆಟ್ ಗಳನ್ನ ನಾಶ ಮಾಡಿತ್ತು. ಇನ್ನು ಸ್ವತಂತ್ರ ಬಂದ ನಂತರ ಐವಿಯ ನಿರ್ದೇಶಕತ್ವವನ್ನ ಸಂಜು ಪಿಳ್ಳೆ ಅವರು ನಿರ್ವಹಿಸಿದ್ದರು. ಬ್ರಿಟಿಷರಿಗಾಗಿ ಕಾರ್ಯನಿರ್ವಹಿಸುತ್ತಿದ್ದ ಸೀಕ್ರೆಟ್ ಏಜೆಂಟ್ ಗಳು ಕಾರ್ಯನಿರ್ವಹಿಸುವುದನ್ನ ನಿಲ್ಲಿಸಿದ್ದರು. ಈ ಕಾರಣದಿಂದಾಗಿ ಐಬಿಯು ಮಹಾತ್ಮ ಗಾಂಧೀಜಿಯವರ ಹತ್ಯೆ,ಪಾಕಿಸ್ತಾನ ಮತ್ತು ಚೀನಿಯರ ಆಕ್ರಮಣದ ಮುನ್ಸೂಚನೆ ನೀಡಲು ವಿಫಲವಾಗಿತ್ತು. ಮುಂದೆ ಜವಾಹರಲಾಲ್ ನೆಹರು ಅವರು ಇರುವವರೆಗೂ ಹೊಸ ಸಂಸ್ಥೆಯು ಉಗಮವಾಗಲಿಲ್ಲ ಆದರೆ ಇಂದಿರಾ ಗಾಂಧಿಯವರು ಈ ಕೆಲಸವನ್ನು ಪೂರ್ಣಗೊಳಿಸಿದರು ಇಂದಿರಾಗಾಂಧಿಯವರಿಗೆ ಒಂದು ವಿಷಯ ಮನವರಿಕೆಯಾಗಿತ್ತು ಅದೇನೆಂದರೆ ಶತ್ರು ದೇಶದ ಮೇಲೆ ಗೂಢಚಾರಿಕೆಯನ್ನು ಮಾಡಿ ಅವರ ಪ್ಲಾನ್ ಗಳನ್ನು ನಾಶ ಮಾಡುವುದರಲ್ಲಿಯೇ ನಮ್ಮ ದೇಶದ ಹಿತ ಅಡಗಿದೆ ಎಂಬುದನ್ನು ಅವರು ಅರಿತುಕೊಂಡಿದ್ದರು ಮತ್ತು ಅದನ್ನು ಮನಗಂಡಿದ್ದರು. ಈ ಕಾರಣದಿಂದಾಗಿಯೇ ಸಪ್ಟೆಂಬರ್ 21 1968 ರಂದು ಹುಟ್ಟಿಕೊಂಡ ಸಂಸ್ಥೆಯೇ RAW. ರಾಮೇಶ್ವರನಾಥ ಕಾವ್ ಅವರು RAW ನ ಪ್ರಥಮ ನಿರ್ದೇಶಕರಾಗಿ ನಿಯುಕ್ತಿಗೊಂಡರು.
ಸ್ನೇಹಿತರೆ RAW ನ ನಿಜವಾದ ಹೆಸರು R & AW. ಅಂದರೆ Research & Analysis Wing. ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ಎಂದರ್ಥ ಆದರೆ ಶ್ರೀಸಾಮಾನ್ಯರು ಮಾತ್ರ ಇದನ್ನ ರಾ ಎಂದೇ ಕರೆಯುತ್ತಾರೆ ಸ್ನೇಹಿತರೆ ಇಂಟರೆಸ್ಟಿಂಗ್ ವಿಷಯ ಏನೆಂದರೆ ರಾ ಸ್ಥಾಪನೆಯಾದ ಬಳಿಕವೂ ಶ್ರೀಸಾಮಾನ್ಯರಿಗೆ ಅದರ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದಿರಲಿಲ್ಲ.ಆದರೆ ಅಶೋಕ್ ರೈನಾ ಎಂಬ ದಿಲ್ಲಿಯ ಪತ್ರಕರ್ತರೊಬ್ಬರು ಇದರ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಬೆಳಕು ಚೆಲ್ಲಿದಾಗಲೇ ಶ್ರೀಸಾಮಾನ್ಯರಿಗೆ RAW ನ ಬಗ್ಗೆ ತಿಳಿದದ್ದು.
ಆದರೆ ಮುಂದೆ 1981ರಲ್ಲಿ “INSIDE RAW” ಎಂಬ ಪುಸ್ತಕ ಬಿಡುಗಡೆಯಾದ ಮೇಲೆ ಜಗತ್ತಿಗೆ ತಿಳಿದಿದ್ದು ರಾ ಎಂಬುದು ಭಾರತೀಯ ಗುಪ್ತಚರ ಸಂಸ್ಥೆ ಎಂದು.
ಸ್ನೇಹಿತರೆ ಆರ್ಟಿಕಲ್ ನ ಪ್ರಾರಂಭದಲ್ಲಿಯೇ ಹೇಳಿರುವಂತೆ ಜಗತ್ತಿನ ಇತರ ದೇಶಗಳ ಗುಪ್ತಚರ ಸಂಸ್ಥೆಗಳಂತೆ RAW ನಡೆಸುವ ರಹಸ್ಯ ಕಾರ್ಯಾಚರಣೆಗಳು ಬೆಳಕಿಗೆ ಬರುವುದಿಲ್ಲ. ಆದರೆ ಕೆಲವೊಮ್ಮೆ RAW ನ ನಿವೃತ್ತ ಅಧಿಕಾರಿಗಳ ಆತ್ಮಕಥೆಯಿಂದಲೋ ಅಥವಾ ಪತ್ರಕರ್ತರ ಲೇಖನಗಳಿಂದಲೋ RAW ನ ರಹಸ್ಯ ಕಾರ್ಯಾಚರಣೆಗಳು ಬೆಳಕಿಗೆ ಬರುತ್ತವೆ. ಉದಾಹರಣೆಗೆ 1971ರಲ್ಲಿ ರಾ ನ ಸೀಕ್ರೆಟ್ ಏಜೆಂಟ್ ಗಳು ಪಾಕಿಸ್ತಾನದ ರಹಸ್ಯ ಸಂದೇಶ ಒಂದನ್ನ ಡಿಕೋಡ್ ಮಾಡಿ ಕರಾಚಿ ಬಂದರೂನಲ್ಲಿದ್ದ ಪಾಕಿಸ್ತಾನದ ಎಲ್ಲಾ ಹಡಗುಗಳನ್ನು ದ್ವಂಸ ಮಾಡಿದ್ದರು. ಯಾಕೆಂದರೆ ಇದೇ ಹಡಗುಗಳಿಂದ ಭಾರತೀಯ ನೌಕಾ ಸೇನೆಯ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಸಂಚು ರೂಪಿಸಿತ್ತು.
ಇದೇ ರಾ ಮುಂದೆ 1999 ರಲ್ಲಿ ಕಾರ್ಗಿಲ್ ನಲ್ಲಿ ಅಪರಿಚಿತರಂತೆ ಅಡಗಿಕೊಂಡಿದ್ದ ಉಗ್ರರ ಫೋಟೋಗಳನ್ನ ಸೆರೆ ಹಿಡಿದು ಆಗಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರಿಗೆ ಕಳುಹಿಸಿತ್ತು. ಇದರಿಂದಾಗಿ ಅಂದಿನ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಉಗ್ರರ ಹುಟ್ಟಡಗಿಸಲು ಮತ್ತು ಅಕ್ರಮವಾಗಿ ನುಸುಳಿ ಬಂದಿದ್ದ ಪಾಕಿಸ್ತಾನ ಸೈನ್ಯವನ್ನು ಧೂಳಿಪಟ ಮಾಡಿ ಸುಲಭವಾಗಿ ಹೆಮ್ಮೆಟ್ಟಿಸಲು ಇದೇ ಮಾಹಿತಿ ಮಹತ್ವದ ಕೆಲಸ ಮಾಡಿತ್ತು.ಅದಷ್ಟೇ ಅಲ್ಲದೇ ಮುಂದೆ ಮುಂಬೈ ದಾಳಿಯ ಕುರಿತಂತೆಯೂ ಇದೇ RAW ಮುನ್ಸೂಚನೆ ನೀಡಿದ್ದರೂ ಆಗಿನ ಸರ್ಕಾರ ಅದನ್ನ ಲಘುವಾಗಿ ಪರಿಗಣಿಸಿತ್ತು. ಪ್ರತಿಫಲವಾಗಿ ಸಾಕಷ್ಟು ಸಾವು ನೋವುಗಳು ಅನುಭವಿಸಿದವು.ಇನ್ನು ಪಾಕಿಸ್ತಾನದಲ್ಲಿ ಇದ್ದುಕೊಂಡೇ ಈ ದೇಶಕ್ಕಾಗಿ ತಮ್ಮ ಜೀವವನ್ನು ಮೂಡಿಪಾಗಿಟ್ಟ ಅನೇಕ ಏಜೆಂಟರುಗಳು ತಮ್ಮ ಪ್ರಾಣಕ್ಕೆ ಕುತ್ತು ಬಂದಾಗಲೂ ಈ ದೇಶದ ರಕ್ಷಣೆಗಾಗಿ ಎಷ್ಟೇ ಆಸೆ ಆಮಿಷ ಒಡ್ಡಿದರೂ ಅದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಬಳಿ ಇದ್ದ ಮಹತ್ವದ ಮಾಹಿತಿಯನ್ನು ಬಿಟ್ಟು ಕೊಡದೆ ಪಾಕಿಸ್ತಾನದ ಜೈಲುಗಳಲ್ಲಿ ಕೊಳೆತು ಹೋಗಿದ್ದಾರೆ.ಸ್ನೇಹಿತರೆ ಹೀಗೆ ಹೇಳುತ್ತಾ ಹೊರಟರೆ ನಡೆಸಿರುವ ಅನೇಕ ಕಾರ್ಯಾಚರಣೆಗಳು ಯಾವ ರೋಮಾಂಚನಕಾರಿ ಸಸ್ಪೆನ್ಸ್ ಥ್ರಿಲ್ಲರ್ ಮೂವಿಗಿಂತಲೂ ಕಡಿಮೆ ಏನಿಲ್ಲ ಅವುಗಳನ್ನ ಮುಂದೆ ಸಮಯ ಸಿಕ್ಕಾಗ ನಿಮ್ಮ ಮುಂದೆ ತರಲು ಪ್ರಯತ್ನಿಸುತ್ತೇನೆ. ದೇಶದ ಹಿತಕ್ಕಾಗಿ ತೆರೆಯ ಹಿಂದೆ ಇದ್ದುಕೊಂಡು ಯಾವ ಪ್ರಶಸ್ತಿ ಪುರಸ್ಕಾರದ ಲಾಲಸೆ ಇಲ್ಲದೆ ನಮ್ಮನ್ನು ಕಾಯುತ್ತಿರುವ ಆ ಆತ್ಮಗಳು ತನ್ನಗಿರಲಿ ಎಂದು ಹಾರೈಸುತ್ತಾ ಈ ಸಂಚಿಕೆಯನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ. ಮತ್ತೊಂದು ವಿಶೇಷ ಸಂಚಿಕೆಯೊಂದಿಗೆ ನಾನು ನಿಮ್ಮನ್ನು ಮುಂದಿನ ಆರ್ಟಿಕಲ್ ನಲ್ಲಿ ಭೇಟಿಯಾಗುತ್ತೇನೆ ಅಲ್ಲಿಯವರೆಗೆ ಜೈ ಹಿಂದ್ ಜೈ ಭಾರತ್.
ಸ್ನೇಹಿತರೆ ಈ ಆರ್ಟಿಕಲ್ ನಿಮಗೇ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ..
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…