Categories: Motivation

Attitude ಇದ್ದರೆ ಹದ್ದಿನಂತೆ ಇರಬೇಕು : ಹದ್ದಿನಿಂದ ಕಲಿಯಬೇಕಾದ 5 ಪಾಠಗಳು!

Spread the love

ನೀವು ಏನನ್ನಾದರೂ ಆಗಲು ಬಯಸಿದ್ದರೆ ರಣಹದ್ದಾಗಿ, ಆದರೆ ಎಂದು ಗಿಳಿ ಆಗಬೇಡಿ. ಯಾಕೆಂದರೆ ಗಿಳಿ ಸಾಕಷ್ಟು ಮಾತನಾಡುತ್ತದೆ. ಆದರೆ ಅತಿ ಎತ್ತರ ಹಾರುವುದಿಲ್ಲ. ಹದ್ದು ಮಾತನಾಡುವುದೇ ಕಡಿಮೆ ಆದರೆ ಎಲ್ಲ ಪಕ್ಷಿಗಳಿಗಿಂತ ಅತಿ ಎತ್ತರ ಹಾರಾಡಬಲ್ಲದು, ಆದ್ದರಿಂದ ಅದಕ್ಕೆ ಪಕ್ಷಿಗಳಲ್ಲಿ ರಾಜನಂತೆ ಮರ್ಯಾದೆ ಇರೋದು.ಉಳಿದೆಲ್ಲ ಪಕ್ಷಿಗಳು ಅಂದ ಚೆಂದಕ್ಕೆ ಹೆಸರು ಆಗಿರಬಹುದು. ಆದರೆ ರಾಜ ಮರ್ಯಾದೆ ಮತ್ತು ರಾಜ ಗಂಭೀರ್ಯ ಇರುವುದು ಮಾತ್ರ ಹದ್ದಿಗೆ. ಹೇಗೆ ಪ್ರಾಣಿಗಳಲ್ಲಿ ಸಿಂಹಕ್ಕೆ ರಾಜನ ಪಟ್ಟ ಇದೆಯೋ ಅದೇ ರೀತಿ ಪಕ್ಷಿಗಳಲ್ಲಿ ಹದ್ದಿಗೆ ಆ ಸ್ಥಾನ ಇದೆ. ಕಾರಣ ಹದ್ದು ಎಂದರೆ ಎಲ್ಲರೂ ಭಯ ಪಡುತ್ತಾರೆ. ಏಕೆಂದರೆ ಹದ್ದು ತನ್ನ ತೀಕ್ಷಣ ದೃಷ್ಟಿ ಮತ್ತು ವೇಗವಾಗಿ ಶತ್ರುವನ್ನು ಬೇಟೆಯಾಡುವ ಚಾಕಚಕ್ಯತೆ ಹೊಂದಿದೆ. ಅದು ವೇಗ ಮತ್ತು ನಿಖರ ಗುರಿಗೆ ಮತ್ತೊಂದು ಹೆಸರು. ಇವತ್ತಿನ ಈ ಆರ್ಟಿಕಲ್ ನಲ್ಲಿ ನಾನು ನಿಮಗೆ ಹದ್ದಿನಿಂದ ಕಲಿಯಬಹುದಾದ 5 ಪಾಠಗಳನ್ನು ಹೇಳುತ್ತೇನೆ. ಈ ಐದು ಪಾಠಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲವು. ಈ 5 ಪಾಠಗಳನ್ನ ನೀವು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿದ್ದೆ ಆದಲ್ಲಿ ನೀವು ಮಾಡುವ ಕೆಲಸದಲ್ಲಿ ನಿಮಗೆ ಯಶಸ್ಸು ಮತ್ತು ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ನಿಮಗೆ ಗೌರವ, ಮರ್ಯಾದೆ ಎಲ್ಲವು ಸಿಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಈ ಆರ್ಟಿಕಲ್ ಅನ್ನ ಕೊನೆತನಕ ಓದಿ ಮತ್ತು ಇಲ್ಲಿ ಹೇಳಲಾದ 5 ಪಾಠಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಕಾರ್ಯ ರೂಪಕ್ಕೆ ತನ್ನಿ…

Thank you for reading this post, don't forget to subscribe!

* ಮೊದಲನೆಯ ಪಾಠ : ಹದ್ದು ಯಾವಾಗಲೂ ಒಬ್ಬಂಟಿಯಾಗಿ ಹಾರಾಡುತ್ತದೆ. ಅದು ಎಂದಿಗೂ ಸಣ್ಣ ಗುಬ್ಬಿ ಮರಿಗಳೊಂದಿಗೆ ಅಥವಾ ಕಾಗೆಗಳಂತೆ ಹಿಂಡು ಹಿಂಡಾಗಿ ಹಾರಾಡುವುದಿಲ್ಲ. ಅದರ ಹಾರಾಟ ಒಂಟಿಯಾದರೂ ಅದು ಹಾರಾಡಿದಾಗಲೆಲ್ಲ ಉಳಿದ ಪಕ್ಷಿಗಳು ಅದರ ಕಾಲಡಿಯಲ್ಲಿ ಇರುತ್ತವೆ. ಹದ್ದಿನ ಈ ಮನಸ್ಥಿತಿಯಿಂದ ನಾವು ಸಂಕುಚಿತ ಮನಸ್ಸಿನಿಂದ ಇರುವ ಜನರಿಂದ ದೂರ ಇರುವುದನ್ನು ಮತ್ತು ಒಬ್ಬಂಟಿ ಆಗಿರುವುದನ್ನು ಕಲಿಯಬೇಕು. ಏಕೆಂದರೆ ನಿಮ್ಮನ್ನ ನೀವು ಅರಿಯಲು ಇದೇ ಒಳ್ಳೆಯ ಸಮಯ. ಗುಂಪಿನಲ್ಲಿ ಇದ್ದಾಗ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಅದೇ ನೀವು ಏಕಾಂಗಿ ಆಗಿದ್ದಾಗ ಮನಸ್ಸು ಏಕಾಗ್ರತೆ ಇಂದ ತುಂಬಿರುತ್ತದೆ. ಇಂತಹ ಸಂದರ್ಭದಲ್ಲಿಯೇ ನೀವು ನಿಮ್ಮ ಬಗ್ಗೆ ಆಲೋಚಿಸಬೇಕು. ಆಗ ನಿಮ್ಮ ಜೀವನ ಕುರಿತಂತೆ ನಿಮಗೊಂದು ದಾರಿ ಕಾಣುತ್ತದೆ. ನಿಮ್ಮ ಜೀವನದಲ್ಲಿ ಏನು ನಡೆಯುತ್ತಿದೆ, ನಿಮ್ಮ ಬದುಕಿನಲ್ಲಿ ಇರುವ ಸಮಸ್ಯೆಗಳು ಯಾವುವು ಅವುಗಳಿಂದ ಪರಿಹಾರ ಹುಡುಕುವುದು ಹೇಗೆ ಎಂಬಂತಹ ಹತ್ತು ಹಲವು ವಿಚಾರಗಳು ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿ ಮೂಡುತ್ತವೆ.
* ಎರಡನೆಯ ಪಾಠ : ಹದ್ದಿನ ದೃಷ್ಟಿ ಯಾವಾಗಲು ಸ್ಪಷ್ಟವಾಗಿರುತ್ತದೆ ಮತ್ತು ಬಹಳ ನಿಖರವಾಗಿ ಇರುತ್ತದೆ. ಅದು ತನ್ನ ಬೇಟೆಯನ್ನು ಐದು ಕಿಲೋಮೀಟರ್ ದೂರದಿಂದಲೇ ನೋಡಬಲ್ಲದು. ಒಮ್ಮೆ ಅದು ತನ್ನ ಬೇಟೆಯನ್ನು ನೋಡಿದರೆ ಮುಗಿಯಿತು, ಅದೆಷ್ಟೇ ಕಷ್ಟವಾದರೂ ಅದು ತನ್ನ ಗುರಿಯನ್ನು ಬೇಟೆಯಾಡಿಯೇ ಮುಗಿಸುತ್ತದೆ. ಇದರಿಂದಲೂ ಒಂದು ದೊಡ್ಡ ಪಾಠವನ್ನು ನಾವು ಕಲಿಯಬೇಕಿದೆ. ಅದೇನಂದರೆ ನಮ್ಮ ಗುರಿ ಯಾವಾಗಲೂ ಸ್ಪಷ್ಟವಾಗಿ ಇರಬೇಕು ಮತ್ತು ಅದನ್ನು ಸಾಧಿಸುವಲ್ಲಿ ಎಷ್ಟೇ ಕಷ್ಟವಾದರೂ ಮುಂದಿಟ್ಟ ಹೆಜ್ಜೆ ಹಿಂದೆ ಇಡಬಾರದು ಆ ಹದ್ದಿನಂತೆ.
* ಮೂರನೆಯ ಪಾಠ : ಹದ್ದು ಎಂದಿಗೂ ಸತ್ತ ಪ್ರಾಣಿಗಳನ್ನ ತಿನ್ನುವುದಿಲ್ಲ. ಅದು ಎಂದಿಗೂ ಜೀವಂತ ಪ್ರಾಣಿಗಳನ್ನ ಬೇಟೆಯಾಡುತ್ತದೆ. ಇದು ನಮಗೆ ನಮ್ಮ ಜೀವನದಲ್ಲಿ ಆದ ಕಹಿ ನೆನಪುಗಳು ಆ ಸತ್ತ ಪ್ರಾಣಿಗಳಂತೆ ಎಂಬುದನ್ನ ಕಲಿಸುತ್ತದೆ. ಸತ್ತು ಹೋದ ನೆನಪುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಭವಿಷ್ಯದ ತಾಜಾ ಜೀವನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ನಿಮಗೆ ನೋವುಂಟು ಮಾಡುವ ಹಳೆಯ ನೆನಪುಗಳು ಎಲ್ಲವನ್ನ ಅವುಗಳ ಜಾಗದಲ್ಲಿಯೇ ಬಿಟ್ಟು ಮೇಲೆದ್ದು ಬನ್ನಿ. ನಿಮ್ಮ ಜೀವನದಲ್ಲಿ ಘಟಿಸಿ ಹೋದ ಕಹಿ ಘಟನೆಗಳಿಗೆ ನಿಮ್ಮ ವರ್ತಮಾನ ಜೀವನದಲ್ಲಿ ಜಾಗವನ್ನು ಕೊಡಬೇಡಿ. ಒಂದು ವೇಳೆ ನೀವು ಕೊಟ್ಟಿದ್ದೆ ಆದರೆ ವರ್ತಮಾನದಲ್ಲಿ ನಿಮ್ಮನ್ನ ಅವು ಎಂದಿಗೂ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ. ನಿಮ್ಮ ಜೀವನದಲ್ಲಿ ಗತಿಸಿ ಹೋಗಿರುವ ಆ ಕಹಿ ನೆನಪುಗಳು ಸತ್ತ ಪ್ರಾಣಿಗಳಂತೆ ಮತ್ತು ಹದ್ದು ಎಂದಿಗೂ ಸತ್ತ ಪ್ರಾಣಿಗಳನ್ನು ತಿನ್ನುವುದಿಲ್ಲ.
* ನಾಲ್ಕನೆಯ ಪಾಠ : ಬಿರುಗಾಳಿ ಮತ್ತು ಚಂಡಮಾರುತ ಬೀಸಿದಾಗ ಹದ್ದು ತುಂಬಾ ಖುಷಿಪಡುತ್ತದೆ. ಮಳೆ ಬರಲು ಆರಂಭಿಸಿದರೆ ಎಲ್ಲ ಪಕ್ಷಿಗಳು ತಮ್ಮ ಗೂಡಿನಲ್ಲಿ ಬಚ್ಚಿಟ್ಟುಕೊಳ್ಳುತ್ತವೆ. ಆದರೆ ಹದ್ದು ಮಳೆಯ ಜೊತೆಗೆ ಚೆಲ್ಲಾಟ ಆಡುತ್ತದೆ. ಬಿರುಗಾಳಿ ಬೀಸಿದಾಗ ಅದು ಅದೇ ಬಿರುಗಾಳಿಯ ಸಹಾಯದಿಂದ ಇನ್ನಷ್ಟು ಎತ್ತರಕ್ಕೆ ಹಾರುತ್ತದೆ. ಹಾರುತ್ತಾ ಹಾರುತ್ತಾ ಅದು ಮೋಡಗಳನ್ನ ಸಿಳಿಕೊಂಡು ಅದರ ಮೇಲೆ ಹಾರಾಡುತ್ತದೆ. ಹದ್ದಿನ ಈ ಸ್ವಭಾವದಿಂದ ನಾವು ಕಲಿಯುವ ಪಾಠವೇನೆಂದರೆ ಕಷ್ಟಗಳನ್ನು ಸಂತೋಷದಿಂದ ಎದುರಿಸುವುದನ್ನ ಮತ್ತು ಅವುಗಳ ಜೊತೆ ಚೆಲ್ಲಾಟ ಆಡುವುದನ್ನ. ನೆಪೋಲಿಯನ್ ಹಿಲ್ ಎಂಬಾತ ಹೇಳುತ್ತಾನೆ ಪ್ರತಿ ಸಮಸ್ಯೆಯೂ ಸಮಾನ ಅಥವಾ ಹೆಚ್ಚಿನ ಅವಕಾಶಗಳೊಂದಿಗೆ ಬರುತ್ತದೆ ಎಂದು. ಆ ಹದ್ದಿನಂತೆ ನೀವು ಕೂಡ ಕಷ್ಟದಲ್ಲಿ ಅವಕಾಶಗಳನ್ನು ಹುಡುಕಲು ಕಲಿಯಿರಿ. ಅಂತಹ ಅವಕಾಶಗಳನ್ನು ಹುಡುಕಿದ ದಿನ ನೀವು ಆ ಕಷ್ಟಗಳ ಮೇಲೆ ಇರುತ್ತೀರಿ ಮತ್ತು ಆ ಕಷ್ಟಗಳು ನಿಮ್ಮ ಕಾಲಡಿಯಲ್ಲಿ ಇರುತ್ತವೆ.
* ಐದನೆಯ ಪಾಠ : ಹದ್ದು ತನ್ನ ಗೂಡಿನಲ್ಲಿ ಮೆತ್ತನೆಯ ಹುಲ್ಲನ್ನ ಎಂದಿಗೂ ಇಟ್ಟುಕೊಳ್ಳುವುದಿಲ್ಲ. ಯಾಕೆಂದರೆ ಅದರ ಮರಿ ಅದರಲ್ಲಿ ಸುಖವಾಗಿ ಇರಬಾರದು ಎಂಬ ಕಾರಣಕ್ಕಾಗಿ. ಒಂದು ವೇಳೆ ಆ ಮರಿ ಗೂಡಿನಲ್ಲಿ ಸುಖವಾಗಿ ಇದ್ದರೆ ಅದು ಅಲ್ಲಿಯೇ ಇರಲು ಇಷ್ಟಪಡುತ್ತದೆ. ಆದರೆ ಹದ್ದು ಎಂದಿಗೂ ಹಾಗಾಗಲು ಬಿಡುವುದಿಲ್ಲ.ಯಕಶ್ಚಿತ ಒಂದು ಪಕ್ಷಿಯಾದ ಆ ಹದ್ದಿಗೆ ತಾನು ಗೂಡಿನಲ್ಲಿ ಇದ್ದರೆ ಬೆಳೆಯುವುದಿಲ್ಲ ಎಂದು ತಿಳಿದಿದೆ. ಆದರೆ ಅದಕ್ಕಿಂತಲೂ ಎಷ್ಟೋ ಪಟ್ಟು ಬುದ್ಧಿವಂತರಾದ ನಾವು ಅದನ್ನ ತಿಳಿಯುವುದೇ ಇಲ್ಲ. ನೀವು ನಿಮ್ಮ ಜೀವನದಲ್ಲಿ ಎಷ್ಟು ಕಂಫರ್ಟ್ ಜೀವನದಲ್ಲಿ ಇರಲು ಬಯಸುತ್ತಿರೋ ಭವಿಷ್ಯದಲ್ಲಿ ನಿಮ್ಮ ಜೀವನ ಅಷ್ಟೇ ಅನ್ ಕಂಫರ್ಟೆಬಲ್ ಆಗುತ್ತದೆ, ನಮಸ್ಕಾರ.

ಅಷ್ಟಕ್ಕೂ ಕೊಹ್ಲಿ ಗಂಭೀರ್ ಅವರ ನಡುವೆ ಸ್ನೇಹದ ಬಗ್ಗೇ ನಿಮಗೆಷ್ಟು ಗೊತ್ತು?

ಸ್ನೇಹಿತರೇ ನಿನ್ನೆ ನಡೆದ ಐಪಿಎಲ್ ನ 43 ನೇ ಪಂದ್ಯವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೆರ್ಸಸ್ ಲುಕ್ಕ್ನೌ ಸೂಪರ್ ಜಯಂಟ್ಸ್ ಪಂದ್ಯವು ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಈ ಸೀಸನ್ ನ ಕಳೆದ ಮುಖಾಮುಖಿಯಲ್ಲಿ ಆರ್‌ಸಿಬಿ ವಿರುದ್ಧ ರೋಚಕ ಜಯ ಸಾಧಿಸಿದ್ದ ಲಕ್ನೌ ಸೂಪರ್ ಜಯಂಟ್ಸ್ ತಂಡವು ಈ ಬಾರಿ ಈ ಸೀಸನ್ ನ ಕನಿಷ್ಠ ಮೊತ್ತವಾದ 126 ರನ್ನುಗಳನ್ನು ಚೇಜ್ ಮಾಡಲಾಗದೆ ಸೋಲೊಪ್ಪಿಕೊಂಡಿತು. ಈ ಮೂಲಕ ಕಳೆದ ಪಂದ್ಯದ ಸೋಲಿಗೆ ಆರ್‌ಸಿಬಿಯು ಸೇಡು ತೀರಿಸಿಕೊಂಡಿತು. ಆರ್‌ಸಿಬಿ ಏನೋ ಈ ಪಂದ್ಯದಲ್ಲಿ ಗೆದ್ದಿದ್ದು ನಿಜ. ಆದರೆ ಅದೆಲ್ಲಕ್ಕಿಂತ ಹೈಲೈಟ್ ಆದದ್ದು ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಜಗಳ. ಯಾವ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ ನಡುವೆ ಜಗಳವಾಯಿತು, ಯಾಕೆ ವಿರಾಟ್ ಕೊಹ್ಲಿ ಪಂದ್ಯದ ಉದ್ದಕ್ಕೂ ಕೆಂಡಾಮಂಡಲವಾಗಿ ಪ್ರತಿಕ್ರಿಯಿಸಿದ್ದರು ಎಂಬುದನ್ನ ಈ ಆರ್ಟಿಕಲ್ ನಲ್ಲಿ ನೋಡೋಣ.

ಸ್ನೇಹಿತರೆ ಅಲ್ಲಿ ನಿಜವಾಗಿಯೂ ನಡೆದದ್ದೇನಂದರೆ ಲಖನ್ ಸೂಪರ್ ಜಯಂತ್ ತಂಡದ ಕೆಳ ಕ್ರಮದ ಬ್ಯಾಟ್ಸ್ಮನ್ ಆದ ನವೀನ್ ಉಲ್ಹಕ್ ಮತ್ತು ವಿರಾಟ್ ಕೊಹ್ಲಿ ನಡುವೆ ಪಂದ್ಯದ ಮಧ್ಯದಲ್ಲಿ ಕೆಲಕಾಲ ವಾಗ್ವಾದ ನಡೆಯುತ್ತದೆ. ಅದನ್ನು ಅಂಪಯರ್ಗಳು ಮಧ್ಯಸ್ಥಿಕೆ ವಹಿಸಿ ಬಿಡಿಸುತ್ತಾರೆ ಆದರೆ ಇದಾದ ಬಳಿಕ ಪಂದ್ಯ ಮುಗಿದ ನಂತರ ಎಲ್ಲಾ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ಸಂದರ್ಭದಲ್ಲಿ ಎಲ್ಎಸ್ ಜಿಯ ಆರಂಭಿಕ ಆಟಗಾರನಾದ ಕೈಲ್ ಮೇಯರ್ಸ್ ಅವರು ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಟಿಪ್ಸ್ ಬಗ್ಗೆ ಏನೋ ಕೇಳುತ್ತಿರುತ್ತಾರೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಗೌತಮ್ ಗಂಭೀರ್ ಅವರು ಕೈಲ್ ಮೇಯರ್ಸ್ ಅವರ ಕೈಯನ್ನು ಹಿಡಿದು ವಿರಾಟ್ ಕೊಹ್ಲಿ ಅವರಿಂದ ದೂರ ಕರೆದುಕೊಂಡು ಹೋಗುತ್ತಾರೆ. ಅಂದರೆ ಮೇಯರ್ಸ್ ಅವರು ಕೊಹ್ಲಿ ಹತ್ತಿರ ಮಾತನಾಡಬಾರದು ಎಂಬ ಉದ್ದೇಶದಿಂದ ಗಂಭೀರವರು ಹೀಗೆ ಮಾಡುತ್ತಾರೆ. ಯಾಕೆಂದರೆ ಪಂದ್ಯದ ಉದ್ದಕ್ಕೂ ವಿರಾಟ್ ಕೊಹ್ಲಿ ತೋರಿದ ಅಗ್ರೆಶನ್ ನೋಡಿ ಗಂಭೀರ ಅವರಿಗೆ ಕೋಪ ಬಂದಿತ್ತು. ಏಕೆಂದರೆ ಕಳೆದ ಪಂದ್ಯದ ಮುಖಾಮುಖಿಯಲ್ಲಿ ಎಲ್ಎಸ್ ಜಿ ತಂಡ ಗೆದ್ದಾಗ ಗಂಭೀರ ಅವರು ಆರ್‌ಸಿಬಿ ಅಭಿಮಾನಿಗಳಿಗೆ ಸುಮ್ಮನಿರುವಂತೆ ಸನ್ನೆ ಮಾಡಿದ್ದರು. ಆದ್ದರಿಂದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದರು. ಹೀಗೆ ಕೈಲ್ ಮೇಯರ್ಸ್ ಅವರನ್ನ ವಿರಾಟ್ ಕೊಹ್ಲಿ ಜೊತೆ ಮಾತನಾಡದಂತೆ ಮಾಡಿ ಪೆವಿಲಿಯನನತ್ತ ತೆರಳುವ ಸಂದರ್ಭದಲ್ಲಿ ಗಂಭೀರ ಅವರು ಒಂದೇ ಸಮನೆ ಒಟಗಟ್ಟುತ್ತಾ ಹೋಗುತ್ತಾರೆ. ಇದನ್ನು ಕಂಡ ಕೊಹ್ಲಿಯೂ ಏನೋ ಹೇಳುತ್ತಾರೆ. ಅದಕ್ಕೆ ಗಂಭೀರ ಅವರು ಮತ್ತೆ ಕೊಹ್ಲಿ ಅವರಿಗೆ ಏನೋ ಅನ್ನುತ್ತಾರೆ. ಈ ನಡುವೆ ಎರಡು ತಂಡಗಳ ಆಟಗಾರರು ಅವರನ್ನು ಪರಸ್ಪರ ದೂರ ಮಾಡಿ ಪೆವಿಲಿಯನ್ ನತ್ತ ಕಳುಹಿಸಲು ಪ್ರಯತ್ನಿಸುತ್ತಾರೆ. ಆಗ ವಿರಾಟ್ ಕೊಹ್ಲಿಯು ಗಂಭೀರ ಅವರೊಂದಿಗೆ ಮಾತನಾಡಲು ಮುಂದಾಗುತ್ತಾರೆ. ತಾವು ಪಂದ್ಯದಲ್ಲಿ ತೋರಿದ ಅಗ್ರೇಶನ್ ಗೆ ಸಮಜಾಯಿಸಿ ನೀಡಲು ಮುಂದಾಗುತ್ತಾರೆ. ಆದರೆ ಇದಾವುದನ್ನು ಕೇಳಲು ಗಂಭೀರ ಅವರ ಬಳಿ ತಾಳ್ಮೆ ಇರುವುದಿಲ್ಲ. ಅವರು ಕೊಹ್ಲಿ ಜೊತೆ ಮತ್ತಷ್ಟು ವಾಗ್ವಾದಕ್ಕೆ ಇಳಿಯುತ್ತಾರೆ. ಹೀಗೆ ಇವರಿಬ್ಬರ ನಡುವೆ ವಾದ ತಾರಕಕ್ಕಿರುವುದನ್ನ ಕಂಡ ಎಲ್ಎಸ್ಜಿಯ ಹಿರಿಯ ಆಟಗಾರ ಅಮಿತ್ ಮಿಶ್ರ ಅವರು ವಿರಾಟ್ ಕೊಹ್ಲಿಯನ್ನು ಗಂಭೀರ ಅವರಿಂದ ದೂರ ಕಳುಹಿಸುತ್ತಾರೆ. ಆರ್‌ಸಿಬಿ ನಾಯಕ ಪಾಪು ಡು ಪ್ಲೆಸೆಸ್ ಅವರು ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ ನತ್ತ ಕರೆದುಕೊಂಡು ಹೋಗುತ್ತಾರೆ. ಇತ್ತ ಎಲ್‌ಎಸ್‌ಜಿ ತಂಡದ ನಾಯಕ ಕೆಎಲ್ ರಾಹುಲ್ ಗಂಭೀರ್ ಅವರನ್ನು ಪೆವಿಲಿಯನ್ ನತ್ತ ಕರೆದುಕೊಂಡು ಹೋಗುತ್ತಾರೆ.
ಸ್ನೇಹಿತರೆ ಒಂದು ವೇಳೆ ಸಹ ಆಟಗಾರರು ಇಲ್ಲದೇ ವಿರಾಟ್ ಮತ್ತು ಗಂಭೀರ ಮುಖಾಮುಖಿ ಆಗಿದ್ದರೆ ಪರಿಸ್ಥಿತಿ ಕೈ ಕೈ ಮಿಲಾಯಿಸುವುದರ ತನಕ ಹೋಗುತ್ತಿತ್ತು. ಕೊಹ್ಲಿ ಗಿಂತ ಹಿರಿಯ ಆಟಗಾರ ಮತ್ತು ರಾಜ್ಯಸಭಾ ಸದಸ್ಯರು ಆದ ಗಂಭೀರ ಅವರ ಈ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಸ್ನೇಹಿತರೆ ಅದೇನೇ ಇರಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಅನ್ನು ಜಗತ್ತಿನ ಜನರೆಲ್ಲರೂ ವೀಕ್ಷಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಇಬ್ಬರು ಭಾರತೀಯ ಆಟಗಾರರು ಮೈದಾನದಲ್ಲಿ ಬಹಿರಂಗವಾಗಿ ಜಗಳ ಮಾಡುವುದು ಉಚಿತವಲ್ಲ. ಬರಲಿರುವ ಪಂದ್ಯಗಳಲ್ಲಿ ಇಂತಹ ಅಹಿತಕರ ಘಟನೆ ನಡೆಯದೇ ಇರಲಿ ಎಂದು ಆಶಿಸುತ್ತಾ ಈ ಆರ್ಟಿಕಲ್ ನ್ನ ಇಲ್ಲಿಗೆ ಮುಗಿಸುತ್ತಿದ್ದೇನೆ. ಮತ್ತೊಂದು ವಿಶೇಷ ಆರ್ಟಿಕಲ್ ನೊಂದಿಗೆ ನಾನು ನಿಮ್ಮ ಮುಂದೆ ಬರುತ್ತೇನೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ.

ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನಮಸ್ಕಾರ.

Recent Posts

Bele Parihara Payment: ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯಾ ಚೆಕ್ ಮಾಡಿ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…

55 years ago

ಆಧಾರ್ ಕಾರ್ಡ್ ಹೊಂದಿದವರಿಗೆ ಮಹತ್ವದ ಮಾಹಿತಿ! ಈಗಲೇ ಈ ಕೆಲಸ ಮಾಡಿ!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…

55 years ago

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ಕೊಡಲಿದೆ 20 ಕೋಳಿ ಮರಿ ಉಚಿತ ! ಈಗಲೇ ಅರ್ಜಿ ಸಲ್ಲಿಸಿ

ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…

55 years ago

Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ

ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…

55 years ago

PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ ! ಈಗಲೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…

55 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

55 years ago