ಸ್ನೇಹಿತರೆ ನಾವು ಎಷ್ಟೋ ಬಾರಿ ಬೆಳಿಗ್ಗೆ ಹಾಸಿಗೆಯಿಂದ ಹೇಳುವ ಸಂದರ್ಭದಲ್ಲಿ ಸಿಹಿ ಕನಸು ಅರ್ಧಂಬರ್ಧ ಆಗಿದ್ದರೆ ಮತ್ತೆ ನಿದ್ರೆಗೆ ಜಾರಲು ಯತ್ನಿಸುತ್ತೇವೆ. ಆದರೆ ಆ ಕನಸನ್ನು ವಿಡಿಯೋ ರೂಪದಲ್ಲಿ ಸೆರೆ ಹಿಡಿದು ನಿಮಗೆ ತೋರಿಸುವ ಸಾಧನ ಒಂದಿದ್ದರೆ ಹೇಗಾಗುತ್ತದೆ ಎಂದು ನೀವು ಯೋಚಿಸಿದ್ದೀರಾ.. ಹೌದು ಸ್ನೇಹಿತರೆ ಅಂಥದ್ದೊಂದು ಸಾಧನವನ್ನ ವಿಜ್ಞಾನಿಗಳು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ. ಹಾಗಾದರೆ ಯಾವುದು ಆ ಸಾಧನ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಮ್ಮ ಮೆದುಳಿನಲ್ಲಿರುವ ಗಳನ್ನು ಅಧ್ಯಯನ ಮಾಡಿ ಅದರ ಮೂಲಕ ನಾವು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಅಥವಾ ಕನಸಿನಲ್ಲಿ ಕಂಡಿದ್ದನ್ನು ಚಿತ್ರಿಸುವ ಮತ್ತು ಅಕ್ಷರ ರೂಪದಲ್ಲಿ ದಾಖಲಿಸುವ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಹಲವು ಸೆನ್ಸಾರ್ಗಳನ್ನ ಒಳಗೊಂಡಿದ್ದು ನಾವು ಕನಸಿನಲ್ಲಿ ಕಂಡಾಗ ಅಥವಾ ಮನಸ್ಸಿನಲ್ಲಿ ಏನಾದರೂ ಒಂದನ್ನು ಅಂದುಕೊಂಡಾಗ ನಮ್ಮ ಮೆದುಳಿನ ನರವ್ಯೂಹದಲ್ಲಿ ಉಂಟಾಗುವ ಏರುಪೇರುಗಳ ವ್ಯತ್ಯಾಸದಿಂದ ಇದು ನಾವು ಅಂದುಕೊಂಡಿದ್ದನ್ನ ಅಕ್ಷರ ರೂಪದಲ್ಲಿ ದಾಖಲಿಸುತ್ತದೆ ಮತ್ತು ವಿಡಿಯೋ ರೂಪದಲ್ಲಿ ಚಿತ್ರಿಸುತ್ತದೆ ಎಂದು ವರದಿ ಮಾಡಲಾಗಿದೆ. ಇದು ಸೆನ್ಸಾರ್ ಗಳು ಕಳುಹಿಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಸಿಗ್ನಲ್ ಗಳನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಅದನ್ನು ಅಕ್ಷರ ರೂಪದಲ್ಲಿ ಅಥವಾ ವಿಡಿಯೋ ರೂಪದಲ್ಲಿ ಚಿತ್ರಿಸಿ ದಾಖಲಿಸುತ್ತದೆ. ಇದು ಇನ್ನು ಪ್ರಯೋಗದ ಹಂತದಲ್ಲಿದ್ದು ಒಂದು ವೇಳೆ ಇದು ಪ್ರಾಯೋಗಿಕವಾಗಿ ಜಾರಿಯಾದರೆ ಇದೊಂದು ಕ್ರಾಂತಿಯನ್ನೇ ಉಂಟು ಮಾಡಲಿದೆ ಎಂದು ವಿಜ್ಞಾನಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.