ಸ್ನೇಹಿತರೇ ಕಾಲೇಜು ಲೈಫ್ ಮುಗಿಸಿ ಡಿಗ್ರಿಯೊಂದನ್ನ ಪಡೆದುಕೊಂಡಮೇಲೆ ಉನ್ನತ ವ್ಯಾಸಂಗಕ್ಕಾಗಿ ಅಥವಾ ಡಾಕ್ಟರೇಟ್ ಪದವಿಗಾಗಿ ನಾವು ಒಳ್ಳೆಯ ಕಾಲೇಜನ್ನು ಹುಡುಕಾಡುವ ಸಂದರ್ಭದಲ್ಲಿ ನಮ್ಮ ಸ್ನೇಹಿತರ ಬಳಗದಲ್ಲಿ ಆಗಾಗ ಹೆಚ್ಚು ಚರ್ಚೆಯಾಗುವುದು ಪ್ರಪಂಚದ ಟಾಪ್ ಯೂನಿವರ್ಸಿಟಿಗಳು ಯಾವುವು ಎಂಬುದು? ಅದರಲ್ಲೂ ನೀವು ವಿದೇಶಕ್ಕೆ ಹೋಗಿ ನಿಮ್ಮ ಮಾಸ್ಟರ್ಸ್ ಡಿಗ್ರಿ ಮಾಡಬೇಕೆಂದು ಕೊಂಡಿದ್ದರೆ ಈ ಚರ್ಚೆ ಇನ್ನೂ ಹೆಚ್ಚು ಗಹನವಾಗಿರುತ್ತದೆ. ಇಂತಹದ್ದೇ ಒಂದು ಕುತೂಹಲಕಾರಿ ಪ್ರಶ್ನೆಯನ್ನು ಹುಡುಕುತ್ತ ಹೋದಾಗ ನಮಗೆ ಸಿಕ್ಕ ಟಾಪ್ 8 ಯೂನಿವರ್ಸಿಟಿಗಳ ಪಟ್ಟಿ ಇಲ್ಲಿದೆ ನೋಡಿ… 👇👇👇
1. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಇಂಗ್ಲೆಂಡ್
2. ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ, ಅಮೇರಿಕಾ
3. ಮ್ಯಾಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಮೇರಿಕಾ
4. ಹಾರ್ವರ್ಡ್ ವಿಶ್ವವಿದ್ಯಾಲಯ, ಅಮೇರಿಕಾ
5. ಕೆಂಬ್ರಿಡ್ಜ್ ವಿಶ್ವವಿದ್ಯಾಲಯ, ಇಂಗ್ಲೆಂಡ್
6. ಪ್ರಿನ್ಸ್ ಟನ್ ವಿಶ್ವವಿದ್ಯಾಲಯ, ಅಮೇರಿಕಾ
7. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಮೇರಿಕಾ
8. ಇಂಪೆರಿಯಲ್ ಕಾಲೇಜ್ ಲಂಡನ್, ಇಂಗ್ಲೆಂಡ್
ಸ್ನೇಹಿತರೆ ಇತ್ತೀಚಿಗಷ್ಟೇ ಚಂದ್ರನ ದಕ್ಷಿಣ ಧ್ರುವದಲ್ಲಿ ತನ್ನ ವಿಕ್ರಮ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಮಾಡಿ ಯಶಸ್ಸು ಸಾಧಿಸಿದ್ದ ಇಸ್ರೋ, ಅದಾದ ನಂತರ ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ L1 ಎಂಬ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಅದನ್ನು ಕೂಡ ಸೂರ್ಯನತ್ತ ಕಳುಹಿಸಿ ಕೊಟ್ಟಿದೆ. ಇದೀಗ ಹೆಸರು ಮತ್ತೊಂದು ಮಹತ್ವದ ಸಾಧನೆಯ ಅಂಚಿನಲ್ಲಿದ್ದು ಅದು ತನ್ನ ಮೊದಲ ಮಾನವ ಸಹಿತ ಗಗನ ಯಾನವನ್ನು ಲಾಂಚ್ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಈ ಕಾರಣಕ್ಕಾಗಿ ಭಾರತೀಯ ವಾಯು ಸೇನೆಯ ನಾಲ್ಕು ಪೈಲೆಟ್ ಗಳನ್ನ ತರಬೇತಿಗೆ ಒಳಪಡಿಸಲಾಗಿದ್ದು ಅವರು ಈಗಾಗಲೇ ಬೆಂಗಳೂರಿನಲ್ಲಿರುವ ಅಸ್ಟ್ರೋನಾಟ್ ಟ್ರೈನಿಂಗ್ ಸೆಂಟರ್ ನಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ನೇಹಿತರೆ ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ವರ್ಷದ ಆರಂಭದಲ್ಲಿ ಇಸ್ರೋ ತನ್ನ ಮಹತ್ವಕಾಂಕ್ಷಿ ಯೋಜನೆಯಾದ ಗಗನಯಾನವನ್ನು ಉಡಾವಣೆ ಮಾಡಲಿದೆ. ಸ್ನೇಹಿತರೆ ಅಂದ ಹಾಗೆ ಇಸ್ರೋ ತನ್ನ ಅಸಲಿ ಗಗನಯಾನವನ್ನು ಉಡಾವಣೆ ಮಾಡುವುದಕ್ಕೂ ಮುಂಚೆ ಅದನ್ನು ಪರೀಕ್ಷಿಸಲು ಮೊದಲು ಅದೇ ರೀತಿಯ ನಕಲು ಸ್ಪೇಸ್ ಕ್ರಾಫ್ಟ್ ಅನ್ನ ತಯಾರಿಸಿದ್ದು ಅದನ್ನು ಉಡಾವಣೆ ಮಾಡಿ ಅದರಲ್ಲಿ ಕಂಡುಬರುವ ದೋಷಗಳನ್ನು ಕುರಿತು ಅಧ್ಯಯನ ನಡೆಸಲಿದೆ. ಒಂದು ವೇಳೆ ಇದು ಯಶಸ್ವಿಯಾಗಿ ಬಾಹ್ಯಾಕಾಶವನ್ನು ತಲುಪಿ ಮರಳಿ ಭೂಮಿಗೆ ಬಂದಲ್ಲಿ ಮುಂದಿನ ಹಂತಕ್ಕೆ ಇಸ್ರೋ ತಯಾರಾಗಲಿದೆ. ಮುಂದಿನ ಹಂತದಲ್ಲಿ ಇಸ್ರೋ ರೋಬೋಟ್ ಒಂದನ್ನು ಕಳುಹಿಸಿ ಸ್ಪೇಸ್ ಕ್ರಾಫ್ಟ್ ಅನ್ನು ಪರೀಕ್ಷಿಸಲಿದೆ. ಎರಡು ಹಂತಗಳು ಯಶಸ್ವಿಯಾಗಿ ಪರೀಕ್ಷೆಯಾದಲ್ಲಿ ಇಸ್ರೋ ತನ್ನ ಅಸಲಿ ಗಗನಯಾನವನ್ನು ಮುಂದಿನ ತಿಂಗಳ ಆರಂಭದಲ್ಲಿ ಉಡಾವಣೆ ಮಾಡಲಿದೆ. ಅಂದ ಹಾಗೆ ಸ್ನೇಹಿತರೆ ಗಗನಯಾನ ಎಂಬುದು ಭಾರತದ ಪ್ರಥಮ ಮಾನವ ಸಹಿತ ಬಾಹ್ಯಾಕಾಶ ಯಾನವಾಗಿದ್ದು ಇದು ಭಾರತದ ಪಾಲಿಗೆ ಮತ್ತು ಇಸ್ರೋ ಪಾಲಿಗೆ ಮಹತ್ವಕಾಂಕ್ಷಿ ಯಾದ ಯೋಜನೆ ಆಗಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ಭಾರತವು ಕೆಲವೇ ಕೆಲವು ಮಾನವ ಸಹಿತ ಗಗನಯಾನವನ್ನು ಕೈಗೊಂಡ ರಾಷ್ಟ್ರಗಳ ಪಟ್ಟಿಗೆ ಸೇರಿಕೊಳ್ಳಲಿದೆ. ಈ ಪರೀಕ್ಷೆಯ ಸಂದರ್ಭದಲ್ಲಿ ಗಗನಯಾನ ಅಥವಾ ಬಾಹ್ಯಾಕಾಶ ನೌಕೆಯಲ್ಲಿ ಯಾವುದೇ ರೀತಿಯ ಒತ್ತಡವಿಲ್ಲದೆ ಅದನ್ನು ಪರೀಕ್ಷೆ ಮಾಡಲಾಗುತ್ತದೆ. ಆದರೆ ಅಸಲಿ ಗಗನಯಾನದ ನೌಕೆಯನ್ನ ಉಡಾವಣೆ ಮಾಡುವ ಸಂದರ್ಭದಲ್ಲಿ ಅದರಲ್ಲಿ ಒತ್ತಡವನ್ನ ಇರಿಸಲಾಗುತ್ತದೆ. ಈ ಕಾರಣಕ್ಕಾಗಿ ಭಾರತೀಯ ವಾಯು ಸೇನೆಯ ಪೈಲೆಟ್ ಗಳಿಗೆ ಒತ್ತಡ ನಿರ್ವಹಿಸುವ ತರಬೇತಿಯನ್ನು ನೀಡಲಾಗುತ್ತಿದೆ. ಗಗನಯಾನದ ಈ ನೌಕೆಯನ್ನು ಭೂಮಿಯ ಕೆಳಕಕ್ಷೆಗೆ ತಲುಪಿಸಿ ಅಲ್ಲಿಂದ ಭೂಮಿಯನ್ನು ಅಧ್ಯಯನ ಮಾಡಿ ಮರಳಿ ಭೂಮಿಗೆ ತಲುಪಿಸುವ ಕೆಲಸವನ್ನು ಈಗ ಗಗನಯಾನ ನೌಕೆ ಮಾಡಲಿದೆ. ಹೀಗೆ ಭೂಮಿಯ ಕುರಿತು ಪೃಥ್ವಿಯ ಕೆಳಕಕ್ಷೆಯಲ್ಲಿ ಅಧ್ಯಯನ ಮಾಡಿ ಬರುವ ಈ ನೌಕೆಯು ಬಂಗಾಳಕೊಲ್ಲಿಯಲ್ಲಿ ಬಂದು ತಲುಪಲಿದೆ. ಹೀಗೆ ಬಂಗಾಳಕೊಲ್ಲಿಯಲ್ಲಿ ಬಂದು ಬಿದ್ದ ಈ ನೌಕೆಯನ್ನ ಭಾರತೀಯ ನೌಕಾ ಸೇನೆಯು ರಕ್ಷಿಸಿ ಅದನ್ನು ಇಸ್ರೋಗೆ ಮುಟ್ಟಿಸಲಿದೆ. ಏನೇ ಆಗಲಿ ಸ್ನೇಹಿತರ ಇದೊಂದು ಅತ್ಯದ್ಭುತವಾದ ಮತ್ತೊಂದು ಮಹತ್ವಕಾಂಕ್ಷಿ ಯಾದ ಸಾಧನೆಯ ಹಂತದಲ್ಲಿ ಇಸ್ರೋ ಇದ್ದು ಇದು ಯಶಸ್ವಿಯಾಗಲೆಂದು ನಾವೆಲ್ಲರೂ ಹಾರೈಸೋಣ.
ಹಿಂದೆ ಭಾರತ ದೇಶದಲ್ಲಿ ಭ್ರಾತೃಹರಿ ಎಂಬ ಮಹಾನ್ ರಾಜನಿದ್ದ. ಆತ ನೋಡಲು ಬಹಳ ಸೌಂದರ್ಯವಂತನು ಮತ್ತು ಶಕ್ತಿವಂತನು ಆಗಿದ್ದನು. ಆತ ತನ್ನ ಸಾಮರ್ಥ್ಯದಿಂದಲೇ ಸುತ್ತಮುತ್ತಲಿನ ರಾಜ್ಯಗಳಲೆಲ್ಲ ಹೆಸರು ಮಾಡಿದ್ದನು. ಹೀಗೆ ಒಮ್ಮೆ ಇವನ ಆಸ್ಥಾನಕ್ಕೆ ಮಹಾನ್ ಋಷಿಮುನಿ ಒಬ್ಬರು ಬರುತ್ತಾರೆ. ಅವರು ಹಲವು ದಿನಗಳ ಅರಮನೆಯಲ್ಲಿ ವಾಸ ಮಾಡಿ ಕೊನೆಗೆ ಒಂದು ದಿನ ತಪಸ್ಸಿಗೆ ಎಂದು ಹೋಗುವ ಸಂದರ್ಭದಲ್ಲಿ ಆ ಮಹಾನ್ ರಾಜನಿಗೆ ಒಂದು ಅಮೃತ ಫಲವನ್ನು ಕೊಟ್ಟು ಹೋಗುತ್ತಾರೆ. ಈ ಹಣ್ಣಿನ ವಿಶೇಷತೆ ಏನೆಂದರೆ ಈ ಹಣ್ಣನ್ನ ಯಾರು ದಿನವೂ ತಿನ್ನುತ್ತಾರೋ ಅವರಿಗೆ ಸಾವು ಬರುವುದಿಲ್ಲ ಎಂದು ಮಹಾನ್ ಋಷಿಗಳು ಹೇಳಿರುತ್ತಾರೆ. ರಾಜನು ಈ ಹಣ್ಣನ್ನು ತಾನು ತಿಂದರೆ ಏನು ಪ್ರಯೋಜನ ತನ್ನ ಸಕಲ ಸುಖಕ್ಕೂ ಮತ್ತು ಶಾಂತಿಯು ಕಾರಣವಾದ ತನ್ನ ರಾಣಿಗೆ ಈ ಹಣ್ಣನ್ನು ಕೊಡುತ್ತಾನೆ. ಅವಳು ಎಲ್ಲಿಯವರೆಗೆ ಸೌಂದರ್ಯವಂತಳು ಮತ್ತು ಆರೋಗ್ಯವಂತಳಗಿರುತ್ತಾಳೋ ಅಲ್ಲಿವರೆಗೆ ನಾನು ಅವಳಿಂದ ಸುಖವಾಗಿ ಇರಬಹುದು ಮತ್ತು ಅವಳಿಂದ ಎಲ್ಲ ರೀತಿಯ ಸಂತೋಷವನ್ನು ಪಡೆದುಕೊಳ್ಳಬಹುದು ಎಂದು ಮಹಾರಾಜನು ಯೋಚಿಸಿ ಆ ಹಣ್ಣನ್ನು ಅವಳಿಗೆ ಕೊಡುತ್ತಾನೆ. ಆದರೆ ಆ ಮಹಾರಾಣಿಯು ಈ ರಾಜನನ್ನು ಪ್ರೀತಿ ಮಾಡುತ್ತಿರುವುದಿಲ್ಲ ಅವಳಿಗೆ ಆ ರಾಜ್ಯದ ಸೇನೆಯಲ್ಲಿರುವ ಆನೆಯನ್ನು ನೋಡಿಕೊಳ್ಳುವ ಒಬ್ಬ ಮಾವುತರ ಮೇಲೆ ಪ್ರೀತಿ ಆಗಿರುತ್ತದೆ ಹೀಗಾಗಿ ಅವಳು ಈ ಅಣ್ಣನ ಅವನು ತಿನ್ನಲಿ ಅದರಿಂದ ಆತ ಚಿರಂಜೀವಿಯಾಗಿ ಉಳಿಯಲಿ ಆತ ಚಿರಂಜೀವಿಯಾಗಿ ಉಳಿದಷ್ಟು ತಾನು ಅವನಿಂದ ಸುಖವನ್ನ ಅನುಭವಿಸಬಹುದು ಎಂದು ಮಹಾರಾಣಿಗೆ ಅನಿಸುತ್ತದೆ ಮತ್ತು ಅವಳು ಆ ಹಣ್ಣನ್ನು ಆ ಮಾವುತನಿಗೆ ತಿನ್ನಲು ಕೊಡುತ್ತಾಳೆ.
ಆದರೆ ಆ ಮಾವುತನಿಗೆ ಈ ರಾಣಿಯ ಮೇಲೆ ಪ್ರೀತಿ ಇರುವುದಿಲ್ಲ ಏಕೆಂದರೆ ಅವನು ಅದೇ ರಾಜ್ಯದಲ್ಲಿ ರಾಜನ ಆಸ್ಥಾನದಲ್ಲಿ ನರ್ತನ ಮಾಡುವ ಒಬ್ಬ ಸುಂದರ ನರ್ತಕಿಯ ಮೇಲೆ ಅವನಿಗೆ ಮೋಹ ಉಂಟಾಗಿರುತ್ತದೆ. ಹೀಗಾಗಿ ಅವನು ಈ ಹಣ್ಣನ್ನು ಆ ನರ್ತಕಿ ತಿನ್ನಲಿ ಅದರಿಂದ ಅವಳಿಗೆ ಸಾವು ಬರದೇ ಸೌಂದರ್ಯವಂತಳಾಗಿ ಇದ್ದಷ್ಟು ತನಗೆ ಅವಳಿಂದ ಸಂತೋಷ ಸುಖಗಳು ಸಿಗುತ್ತವೆ ಎಂದು ಆ ಮಾವುತ ಆ ಹಣ್ಣನ ತೆಗೆದುಕೊಂಡು ಆ ನರ್ತಕಿಗೆ ತಿನ್ನಲು ಕೊಟ್ಟನು. ಆದರೆ ನರ್ತಕಿಯು ಈ ಮಾವುತ ನನ್ನ ಪ್ರೀತಿಸುತ್ತಿರುವುದಿಲ್ಲ ಬದಲಿಗೆ ಅವಳು ಆ ರಾಜ್ಯದ ರಾಜನಾದ ಮಹಾರಾಜನನ್ನು ಪ್ರೀತಿಸುತ್ತಿರುತ್ತಾಳೆ. ಏಕೆಂದರೆ ಆ ರಾಜ ನೆಮ್ಮದಿಯಿಂದ ಸುಖ ಶಾಂತಿಯಿಂದ ಇದ್ದಷ್ಟು ತನ್ನ ಇಡೀ ರಾಜ್ಯ ನೆಮ್ಮದಿಯಿಂದ ಇರುತ್ತದೆ ಹಾಗಾಗಿ ಅವನು ಶಾಶ್ವತವಾಗಿದ್ದಷ್ಟು ತನ್ನ ಆಸ್ಥಾನವನ್ನು ಸಂತೋಷದಿಂದ ಮತ್ತು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುತ್ತಾನೆ. ಹಾಗಾಗಿ ಈ ಹಣ್ಣನ್ನು ಅವನು ತಿನ್ನಲಿ ಅವನು ತಿಂದು ಚಿರಂಜೀವಿಯಾಗಿ ಉಳಿಯಲಿ ಎಂದು ಆ ನರ್ತಕಿಯೋ ಆ ಹಣ್ಣನ್ನ ತೆಗೆದುಕೊಂಡು ಬಂದು ಆ ರಾಜನಿಗೆ ತಿನ್ನಲು ಕೊಡುತ್ತಾಳೆ. ರಾಜನಿಗೆ ಆ ಹಣ್ಣನ್ನು ನೋಡಿ ಆಶ್ಚರ್ಯವಾಗುತ್ತದೆ ಏಕೆಂದರೆ ಅದು ಅವನೇ ತನ್ನ ಮಹಾರಾಣಿಗೆ ಕೊಟ್ಟ ಹಣ್ಣು ಆಗಿರುತ್ತದೆ. ಹೀಗಾಗಿ ಆತನಿಗೆ ಒಮ್ಮೆಲೇ ದಿಗ್ಭ್ರಮೆ ಉಂಟಾಗಿ ಬಿಡುತ್ತದೆ. ಅದನ್ನು ನೋಡಿದ ಕೂಡಲೇ ರಾಜನಿಗೆ ಈ ಜೀವನದ ಮೇಲೆ ಜಿಗುಪ್ಸೆ ಉಂಟಾಗಿಬಿಡುತ್ತದೆ. ಆತ ರಾಣಿಯನ್ನು ದೂಷಿಸುವುದಿಲ್ಲ ಆ ಮಾವುತನನ್ನು ದೂಷಿಸುವುದಿಲ್ಲ ಕೊನೆಗೆ ಆ ಹಣ್ಣನ್ನು ತಂದುಕೊಟ್ಟ ನರ್ತಕಿಯನ್ನು ದೂಷಿಸುವುದಿಲ್ಲ , ಬದಲಿಗೆ ಆತ ತನ್ನ ಮನವನ್ನ ಪರಿವರ್ತನೆ ಮಾಡಿಕೊಂಡು ಸನ್ಯಾಸತ್ವವನ್ನು ಸ್ವೀಕರಿಸಿದ. ಜೀವನವೆಂಬುದು ಬಹಳ ವಿಚಿತ್ರವಾದರೂ ಮತ್ತು ಇದು ನಶ್ವರವಾದದ್ದು ಎಂದು ಸಾರುತ್ತ ಆತ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡ.
ಸ್ನೇಹಿತರೆ ಈ ಕಥೆಯ ಉದ್ದೇಶ ಇಷ್ಟೇ ನಾವು ಕೂಡ ನಮ್ಮ ಜೀವನದಲ್ಲಿ ಯಾರೋ ಒಬ್ಬರಿಗಾಗಿ ನಾವು ನಮ್ಮ ಇಡೀ ಕಾಲವನ್ನು ಇಟ್ಟು ಬಿಡುತ್ತೇವೆ ಆದರೆ ದುರಂತ ಏನೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರು ನಮಗೆ ಸಿಗುವುದಿಲ್ಲ. ಬದಲಿಗೆ ಅವರು ಇನ್ನಾರದೋ ಕೈ ಹಿಡಿದು ನಮಗೆ ಕೈ ಕೊಡುತ್ತಾರೆ. ಆದ್ದರಿಂದ ಕೇವಲ ಅಂತಹ ಜನರಿಗಾಗಿ ಬದುಕದೆ ನಮ್ಮ ಇಡಿಯ ಯೌವನದ ಕಾಲವನ್ನು ಸಮರ್ಥ ವಾಗಿ ಇಡೀ ಸಮಾಜದ ಉದ್ದಾರಕ್ಕಾಗಿ ಮತ್ತು ಇಡೀ ಮನುಕುಲದ ಒಳಿತಿಗಾಗಿ ಬಳಸೋಣ ಎಂಬುದೇ ಈ ಕಥೆಯ ಆಶಯ.
ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ಇದನ್ನ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…