Categories: information

Amazing Fact in Kannada: ಈ ಘಟನೆ ಗಾಂಧೀಜಿಯವರನ್ನು ಮಹಾತ್ಮಾರನ್ನಾಗಿಸಿತು!

Spread the love

ಸ್ನೇಹಿತರೆ ಮಹಾತ್ಮ ಎಂದರೆ ಸಾಕು ನಮ್ಮ ಸ್ಮೃತಿ ಪಟಲದಲ್ಲಿ ಥಟ್ಟನೆ ಹೊಳೆಯುವ ಹೆಸರೆಂದರೆ ಅದು ನಮ್ಮ ರಾಷ್ಟ್ರಪಿತ ಮೋಹನದಾಸ್ ಕರಮಚಂದ್ ಗಾಂಧೀಜಿ ಅವರ ಹೆಸರು.ಭಾರತದ ಸ್ವತಂತ್ರ ಹೋರಾಟದಲ್ಲಿ ಅವರ ಹೆಸರು ಅಜರಾಮರ ಆಗಿದೆ. ಆದರೆ ನಿಮಗೆ ಗೊತ್ತಾ ಸ್ನೇಹಿತರೆ ಗಾಂಧೀಜಿಯು ರಾಜಕೀಯಕ್ಕೆ ಅಕಸ್ಮಾತ್ ಆಗಿ ಬಂದವರು. ಅವರು ರಾಜಕೀಯಕ್ಕೆ ಬರಲೇಬೇಕು ಎಂದು ಬಂದವರಲ್ಲ.
1893 ರಲ್ಲಿ ಗುಜರಾತಿನ ಉದ್ಯಮಿಯಾದ ಮತ್ತು ಗಾಂಧೀಜಿಯ ನಿಕಟ ಸ್ನೇಹಿತನೂ ಆದ ದಾದಾಭಾಯ್ ಅಬ್ದುಲ್ಲಾ ಅವರು ತಮ್ಮ ಉದ್ಯಮಕ್ಕೆ ಸಂಬಂದಿಸಿದ ಕೇಸ್ ಒಂದರ ಪರವಾಗಿ ವಾದ ಮಾಡಲು ಗಾಂಧೀಜಿ ಅವರಿಗೆ ದಕ್ಷಿಣ ಆಫ್ರಿಕಾ ಗೆ ಬರುವಂತೆ ಮನವಿ ಮಾಡಿಕೊಳ್ಳುತ್ತಾರೆ. ಅವರ ವಿನಂತಿಯ ಮೇರೆಗೆ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾ ಗೆ ಹೋದಾಗ ಅವರು ಅಲ್ಲಿ ಡರ್ಬನ್ ಎಂಬ ಸ್ಥಳದಿಂದ ಜೋಹಂನ್ಸ್ಬೆರ್ಗ್ ಗೆ ಹೋಗುವ ಸಂದರ್ಭದಲ್ಲಿ ಪ್ರಿಟೋರಿಯಾ ಎಂಬ ಸ್ಥಳದಲ್ಲಿ ಅವರನ್ನು ರೈಲಿನಿಂದ ಇಳಿಸಲಾಗುತ್ತದೆ. ಇದಕ್ಕೆ ಕಾರಣ ಏನೆಂದರೆ ಗಾಂಧೀಜಿಯು ಕೇವಲ ಬಿಳಿಯರಿಗಾಗಿ ಮೀಸಲಿರಿಸಿದ್ದ ರೈಲಿನಲ್ಲಿ ಭೋಗಿಯಲ್ಲಿ ಕುಳಿತಿರುತ್ತಾರೆ. ಆ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ದಲ್ಲಿ ಜನಾಂಗಿಯ ನಿಂದನೆ ಮತ್ತು ವರ್ಣ ಭೇದ ನೀತಿ ತಾಂಡವ ಆಡುತ್ತಿತ್ತು. ಇವರು ಕಪ್ಪು ಬಣ್ಣದವರು ಎಂದು ಗಾಂಧೀಜಿಯನ್ನು ರೈಲಿನಲ್ಲಿ ಅವಮಾನಿಸಿ ಅವರನ್ನು ಪ್ರಿಟೋರಿಯಾ ಎಂಬ ಸ್ಥಳದಲ್ಲಿ ಅರ್ಧದಲ್ಲಿಯೇ ಇಳಿಸುತ್ತಾರೆ. ಈ ಘಟನೆಯು ಗಾಂಧೀಜಿಯವರ ಮೇಲೆ ತುಂಬಾ ಪರಿಣಾಮ ಬಿರುತ್ತದೆ. ಅವರು ದಾದಾಭಾಯ್ ಅಬ್ದುಲ್ಲಾ ಅವರ ಕೇಸ್ ಅನ್ನು ಗೆದ್ದ ಬಳಿಕ ಅಲ್ಲಿನ ಭಾರತೀಯ ಕಾರ್ಮಿಕರು ಗಾಂಧೀಜಿ ಅವರಿಗೆ ಅಲ್ಲಿಯೇ ಉಳಿಯಲು ವಿನಂತಿಸಿದಾಗ ಮೊದಲು ಅದಕ್ಕೆ ನಿರಾಕರಿಸಿದ್ದ ಗಾಂಧೀಜಿಯೂ ಮುಂದೆ ಭಾರತೀಯರ ವಿರುದ್ಧ ನಡೆಯುತ್ತಿದ್ದ ಶೋಷಣೆಗೆ ಸಮಾಪ್ತಿ ಹಾಡಲು ಅಲ್ಲಿಯೇ ಉಳಿದುಕೊಂಡರು. ಮೊದಮೊದಲು 2 ವರ್ಷ ಇರಬೇಕೆಂದುಕೊಂಡಿದ್ದ ಅವರು ಅಲ್ಲಿನ ವರ್ಣ ಭೇದ ನೀತಿಯ ವಿರುದ್ಧದ ಚಳುವಳಿಯಲ್ಲಿ ಧುಮುಕಿದ್ದಕ್ಕಾಗಿ ಅವರಿಗೆ ಮರಳಿ ಭಾರತಕ್ಕೆ ಬರಲು ಬರೋಬ್ಬರಿ 20 ವರ್ಷಗಳೇ ಬೇಕಾದವು. ಈ ಸಂದರ್ಭದಲ್ಲಿಯೇ ಅವರು ರಾಜತಾಂತ್ರಿಕ ನೈಪುನ್ಯತೆಗಳನ್ನು ಕಲಿತರು. ಮುಂದೆ ಅವರು ಭಾರತಕ್ಕೆ ಬಂದಾಗ ಇದೇ ರಾಜಕೀಯ ಕೌಶಲ್ಯಗಳೇ ಅವರನ್ನು ಮಹಾತ್ಮರನ್ನಾಗಿಸಿದವು.ದಕ್ಷಿಣ ಆಫ್ರಿಕಾದ ಮಾಜಿ ರಾಷ್ಟ್ರಪತಿಗಳು ಹೇಳುತ್ತಾರೆ- “ಭಾರತೀಯರು ನಮಗೆ ಮೋಹನದಾಸ್ ಕರಮಚಂದ್ ಗಾಂಧಿ ಅವರನ್ನು ಕೊಟ್ಟರು. ಆದರೆ ನಾವು ಮರಳಿ ಭಾರತೀಯರಿಗೆ ಮಹಾತ್ಮ ಗಾಂಧೀಜಿಯನ್ನು ನೀಡಿದೆವು “.

Thank you for reading this post, don't forget to subscribe!

ಇದನ್ನೂ ಓದಿ..

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ನಡೆದ ಪ್ರಮುಖ ಘಟನೆಗಳು!

ಗಾಂಧೀಜಿಯು ದಕ್ಷಿಣ ಆಫ್ರಿಕಾದಲ್ಲಿದ್ದಾಗ ನಡೆದ ಪ್ರಮುಖ ಘಟನೆಗಳು ಇಲ್ಲಿವೆ ನೋಡಿ :-
1. ಅವರು ತಮ್ಮ ಗುಜರಾತಿನ ಸ್ನೇಹಿತರಾದ ದಾದಾಬಾಯಿ ಅಬ್ದುಲ್ಲಾ ಅವರ ಆಹ್ವಾನದ ಮೇರೆಗೆ ಅವರ ಉದ್ಯಮಕ್ಕೆ ಸಂಬಂಧಿಸಿದ ಕೇಸ್ ಒಂದರ ಬಗ್ಗೆ ಹೋರಾಡಲು ದಕ್ಷಿಣ ಆಫ್ರಿಕಾ ಕ್ಕೆ ಹೋದರು.
2. ಡರ್ಬನ್ ನಿಂದ ಜೋಹಾನ್ಸ್ ಬರ್ಗ್ವರೆಗಿನ ಅವರ ಪ್ರಯಾಣದಲ್ಲಿ ಅವರು ಪ್ರಿಟೋರಿಯ ಎಂಬ ಸ್ಥಳದಲ್ಲಿ ಶೋಷಣೆಗೆ ಒಳಗಾದರು.
3. ದಾದಾಬಾಯಿ ಅಬ್ದುಲ್ಲಾ ಅವರ ಕೇಸನ್ನು ಗೆದ್ದ ಬಳಿಕ ಗಾಂಧೀಜಿಯವರು ಭಾರತಕ್ಕೆ ಬರಲು ಸಜ್ಜಾಗಿದ್ದರು, ಆದರೆ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ಭಾರತೀಯ ಕಾರ್ಮಿಕರು ವ್ಯಾಪಾರಿಗಳು ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಗಾಂಧೀಜಿ ಅವರಲ್ಲಿ ಮನವಿ ಮಾಡಿಕೊಂಡರು.
4. ಆರಂಭದಲ್ಲಿ ಗಾಂಧೀಜಿಯವರು ಅವರ ಮನವಿಗೆ ತಿರಸ್ಕಾರ ಉಂಟು ಮಾಡಿದರೂ ಮುಂದೆ ಅವರ ಒತ್ತಾಯದ ಮೇರೆಗೆ ಅಲ್ಲಿಯ ಉಳಿದುಕೊಂಡರು.
5. ಆರಂಭದಲ್ಲಿ ಎರಡು ವರ್ಷಗಳ ತನಕ ಇರಬೇಕೆಂದು ಅಂದುಕೊಂಡಿದ್ದ ಗಾಂಧೀಜಿಯವರು ಮುಂದೆ ಹೋರಾಟದಲ್ಲಿ ಧುಮುಕಿದ್ದರಿಂದ ಅದು 20 ವರ್ಷಗಳ ತನಕ ಮುಂದುವರೆಯಿತು.
6. ಅವರು ಟಾಲ್ ಸ್ಟಾಯ್ ಫಾರ್ಮ್ ಎಂಬ ಆಶ್ರಮವನ್ನು ದಕ್ಷಿಣ ಆಫ್ರಿಕದಲ್ಲಿ ತೆರೆದರು. ಅಲ್ಲದೆ ಇಂಡಿಯನ್ ಒಪಿನಿಯನ್ ಎಂಬ ಸುದ್ದಿ ಪತ್ರಿಕೆ ಒಂದನ್ನು ಅವರು ಹೊರ ತಂದರು. ಅವರು ತಮ್ಮ ಹೋರಾಟಕ್ಕೆ ಸತ್ಯಾಗ್ರಹ ಎಂಬ ಹೆಸರನ್ನ ನೀಡಿದರು
7. ಮುಂದೆ ಅವರ ರಾಜಕೀಯ ಗುರುವಾದ ಗೋಪಾಲಕೃಷ್ಣ ಗೋಖಲೆ ಮತ್ತು ಅವರ ಸ್ನೇಹಿತನಾದ ಸಿ ಎಫ್ ಅಂಡ್ರಿವ್ಸ್ ಅವರ ಸಲಹೆಯ ಮೇರೆಗೆ 9 ನೇ ಜನವರಿ 1915 ರಂದು ಭಾರತಕ್ಕೆ ಬಂದರು.

ಇದನ್ನೂ ಓದಿ..

ಜಾಗತಿಕ ಹಸಿವು ಸೂಚಂಕದಲ್ಲಿ 125 ದೇಶಗಳಲ್ಲಿ ಭಾರತಕ್ಕೆ 111ನೇ ಸ್ಥಾನ!

ಸ್ನೇಹಿತರೆ ಅಂತರಾಷ್ಟ್ರೀಯ ಮಾನವೀಯತೆ ಸಂಸ್ಥೆಯ ಅಂಗವಾದ ಕನ್ಸರ್ನ್ಡ್ ವರ್ಲ್ಡ್ವೈಡ್ ವೆಲ್ತಹಂಗರ್ ಲೈಫ್ ಎಂಬ ಸಂಸ್ಥೆಯು ಈ ಸಮೀಕ್ಷೆಯನ್ನು ಅಧ್ಯಯನ ಮಾಡಿ ವರದಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಒಟ್ಟು 125 ದೇಶಗಳಿದ್ದು ಅದರಲ್ಲಿ ಭಾರತಕ್ಕೆ 111ನೇ ಸ್ಥಾನ ಸಿಕ್ಕಿದೆ. ಕಳೆದ ವರ್ಷ ಭಾರತದ ಸ್ಥಾನವೂ 121 ದೇಶಗಳಲ್ಲಿ 107 ನೇ ಸ್ಥಾನವಾಗಿತ್ತು. ಆದರೆ ಈ ವರ್ಷ ಈ ಸ್ಥಾನವು 4 ಸ್ಥಾನಗಳನ್ನು ಕುಸಿದು ಇದೀಗ 111ನೇ ಸ್ಥಾನಕ್ಕೆ ಬಂದು ನಿಂತಿದೆ. ಈ ಸಮೀಕ್ಷೆಯಲ್ಲಿ ಭಾರತಕ್ಕೆ 28.7 ಅಂಕಗಳು ದೊರೆತಿವೆ. ಈ ಸಮೀಕ್ಷೆಯಲ್ಲಿ ಶೂನ್ಯ ಅಂಕವಿದ್ದಷ್ಟು ದೇಶ ಹಸಿವಿನಿಂದ ಮುಕ್ತವಾಗಿದೆ ಎಂದು ಸೂಚಿಸುತ್ತದೆ. ನೂರಕ್ಕೆ ನೂರು ಅಂಕಗಳನ್ನು ತೆಗೆದುಕೊಂಡ ದೇಶ ಅತಿ ಹೆಚ್ಚು ಹಸಿವಿನಿಂದ ಬಳಲುತ್ತಿದೆ ಮತ್ತು ಅತಿ ಆರ್ಥಿಕವಾಗಿ ಹಿಂದುಳಿದಿದೆ ಎಂಬುದನ್ನು ಸೂಚಿಸುತ್ತದೆ. ಇದರಲ್ಲಿ ಭಾರತಕ್ಕೆ ಸಿಕ್ಕಿರುವ 28.7 ಅಂಕಗಳು ಭಾರತವು ಹಸಿವಿನಿಂದ ತೀವ್ರ ಬಳಲುತ್ತಿದೆ ಎಂದು ಸಮೀಕ್ಷೆಯು ವರದಿ ಮಾಡಿದೆ.ಜಾಗತಿಕ ಹಸಿವು ಸೂಚ್ಯಂಕವು ಜಗತ್ತಿನ ವಿವಿಧ ದೇಶಗಳಲ್ಲಿರುವ ಹಸಿವು ಮತ್ತು ಅದರ ತೀವ್ರತೆಯನ್ನು ಅಧ್ಯಯನ ಮಾಡುವ ಸಮೀಕ್ಷೆ ಆಗಿದೆ. ಇದನ್ನು ಜಾಗತಿಕ ಪ್ರಾದೇಶಿಕ ಅಂತರಾಷ್ಟ್ರೀಯ ಮಟ್ಟಗಳಲ್ಲಿ ಅಧ್ಯಯನ ಮಾಡಲು ಬಳಸಲಾಗುತ್ತದೆ. ಅಪಘಾನಿಸ್ತಾನ ಮತ್ತು ಸಬ್ ಸಹರನ್ ಆಫ್ರಿಕಾ ದೇಶಗಳು ಭಾರತಕ್ಕಿಂತಲೂ ಹೆಚ್ಚು ಹಸಿವಿನಿಂದ ಬಳಲುತ್ತಿವೆ ಎಂದು ಈ ಸಮೀಕ್ಷೆಯು ತಿಳಿಸಿದೆ. ಅಲ್ಲದೇ ಅಫ್ಘಾನಿಸ್ತಾನವಂತು ಶೇಕಡ ನೂರಕ್ಕೆ ನೂರರಷ್ಟು ಅಂಕಗಳನ್ನು ತೆಗೆದುಕೊಂಡು ಆರ್ಥಿಕವಾಗಿ ಅಷ್ಟೇ ಅಲ್ಲದೆ ಹಸಿವಿನಿಂದಲೂ ಅದು ತೀವ್ರವಾಗಿ ಬಳಲುತ್ತಿದೆ ಎಂದು ಸಮೀಕ್ಷೆಯು ಎಚ್ಚರಿಸಿದೆ. ಆದರೆ ಭಾರತೀಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಈ ಸಮೀಕ್ಷೆಯು ದೋಷಪೂರಿತವಾಗಿದೆ ಇದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದು ತಿಳಿಸಿದೆ. ಸಮೀಕ್ಷೆ ಮಾಡಲು ಬಳಸಲಾಗಿರುವ ಮಾಪಕಗಳು ದೋಷ ಪೂರಿತವಾಗಿದ್ದು ಇವು ದೇಶಗಳ ಸೂಚಂಕದ ಸ್ಥಾನವನ್ನು ನಿರ್ಧರಿಸಲು ವಿಫಲಗೊಂಡಿವೆ. ಹಾಗಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿರುವ ಭಾರತವು ಹಸಿವಿನಿಂದ ಮುಕ್ತಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಆದರೂ ಅದೇನೇ ಇರಲಿ ಸ್ನೇಹಿತರೆ ಇಂತಹ ಸಮೀಕ್ಷೆಗಳು ಕಾಲ ಕಾಲಕ್ಕೆ ನಡೆಯುತ್ತಿದ್ದರೆ ಜಾಗತಿಕ ಮಟ್ಟದಲ್ಲಿ ದೇಶದ ಆರ್ಥಿಕತೆ ಮತ್ತು ಬಡತನದ ಸಂಪೂರ್ಣ ಮಾಹಿತಿ ಸಿಗುತ್ತದೆ.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನ ಆದಷ್ಟು ಹೆಚ್ಚು ಜನರಿಗೆ ತಲುಪಿಸಿ. ಅವರಿಗೂ ಇದರ ಬಗ್ಗೆ ಮಾಹಿತಿ ಸಿಗಲಿ. ನಮಸ್ಕಾರ.

Recent Posts

Bele Parihara Payment: ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯಾ ಚೆಕ್ ಮಾಡಿ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…

55 years ago

ಆಧಾರ್ ಕಾರ್ಡ್ ಹೊಂದಿದವರಿಗೆ ಮಹತ್ವದ ಮಾಹಿತಿ! ಈಗಲೇ ಈ ಕೆಲಸ ಮಾಡಿ!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…

55 years ago

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ಕೊಡಲಿದೆ 20 ಕೋಳಿ ಮರಿ ಉಚಿತ ! ಈಗಲೇ ಅರ್ಜಿ ಸಲ್ಲಿಸಿ

ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…

55 years ago

Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ

ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…

55 years ago

PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ ! ಈಗಲೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…

55 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

55 years ago