ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಜಮೀನಿನ ಆಕಾರ ಬಂದ ಹೇಗೆ ನೋಡುವುದು ಈ ಅಂಕಣದ ಮೂಲಕ ತಿಳಿದುಕೊಳ್ಳೋಣ.
Thank you for reading this post, don't forget to subscribe!Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು, ರೈತರು ತಮ್ಮ ಬಳಿಯಿರುವ ಫೋನ್ ನಲ್ಲೇ ಆಕಾರಬಂದ್ ಚೆಕ್ ಮಾಡಬಹುದು.
ಏನಿದು ಆಕಾರಬಂದ್?
ಜಮೀನಿಗೆ ಇರುವ ಅಧಿಕೃತ ವಿಸ್ತೀರ್ಣ ಮತ್ತು ಬೌಂಡರಿಯ ದಾಖಲೆಯನ್ನು ಆಕಾರಬಂದ್ ಎನ್ನುವರು. ನಿಮ್ಮ ಜಮೀನು ನೋಂದಣಿ ಮಾಡುವಾಗ ಪಹಣಿಯೊಂದಿಗೆ ಆಕಾರಬಂದ್ ಸಹ ಕೇಳುತ್ತಾರೆ. ಪಹಣಿಗಿಂತ ಆಕಾರಬಂದ್ ಹೆಚ್ಚು ಮಹತ್ವವಿದೆ. ಪಹಣಿಯಿಂದೆ ಆಕಾರ ಬಂದ್ ದಾಖಲೆಯಲ್ಲಿ ಒಟ್ಟು 29 ಕಾಲಂಗಳಿರುತ್ತವೆ. ಇಲ್ಲಿಯೂ ಸಹ ಸರ್ವೆ ನಂಬರ್, ಹಿಸ್ಸಾ ನಂಬರ್, ಜಮೀನಿನ ವಿಸ್ತೀರ್ಣ ಸೇರಿದಂತೆ ಇನ್ನಿತರ ಮಾಹಿತಿ ಇರುತ್ತದೆ. ಹಾಗಾಗಿ ರೈತರು ತಮ್ಮ ಜಮೀನಿನ ಆಕಾರ ಬಂದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
Check your Land Akarband ಜಮೀನಿನ ಆಕಾರಬಂದ್ ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಬಳಿಯಿರುವ ಫೋನ್ ನಲ್ಲೇ ಜಮೀನಿನ ಆಕಾರಬಂದ್ ನ್ನು ಚೆಕ್ ಮಾಡಲು ಈ
https://bhoomojini.karnataka.gov.in/service39/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಕಾರಬಂದ್ ಚೆಕ್ ದಾಖಲೆ ಡೌನ್ಲೋಡ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಂಡು, ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಸರ್ನೋಕ್ ನಲ್ಲಿ ಸ್ಟಾರ್ ನಮೂದಿಸಿ ನಂತರ ಹಿಸ್ಸಾ ನಂಬರ್ ಗೊತ್ತಿದ್ದರೆ ನಮೂದಿಸಿ ಇಲ್ಲದಿದ್ದರೆ ಸ್ಟಾರ್ ಹಾಕಿ View Akarband ಮೇಲೆ ಕ್ಲಿಕ್ ಮಾಡಿ. ಆಗ ಆಕಾರ ಬಂದ್ ದಾಖಲೆ ತೆರೆದುಕೊಳ್ಳುತ್ತದೆ.
ಆಕಾರ ಬಂದ್ ದಾಖಲೆಯ ಮೊದಲನೇ ಕಾಲಂನಲ್ಲಿ ಸರ್ವೆ ನಂಬರ್ ಇರುತ್ತದೆ. ನಂತರ ಹಿಸ್ಸಾ ನಂಬರ್ ಇರುತ್ತದೆ. ಎಷ್ಟು ಎಕರೆ ಹಾಗೂ ಗುಂಟೆ ಜಮೀನಿದೆ ಎಂಬ ಮಾಹಿತಿ ಇರುತ್ತದೆ. ಅದೇ ಸರ್ವೆ ನಂಬರ್ ನಲ್ಲಿ ಎ ಷ್ಟು ಎಕರೆ ಗುಂಟೆ ಖರಾಬು ಜಮೀನಿದೆ ಎಂಬ ಮಾಹಿತಿ ಇರುತ್ತದೆ. ಆಕಾರ ಬಂದ್ ನ 28 ನೇ ಕಾಲಂನಲ್ಲಿ ಎಷ್ಟು ಎಕರೆ ಸಾಗುವಳಿ ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode