WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಮನುಷ್ಯ ಇಂದು ಎಷ್ಟೇ ಆಧುನಿಕವಾಗಿದ್ದರು ಕೆಲವ ರೋಗಗಳಿಗೆ ಔಷಧಿ ಕಂಡು ಹಿಡಿಯಲು ಅವನಿಂದ ಸಾಧ್ಯವಾಗಿಲ್ಲ. ಅಂತಹ ರೋಗಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು ಏಡ್ಸ್. ಪ್ರತಿವರ್ಷ ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನ ಎಂದು ಆಚರಿಸಲಾಗುತ್ತದೆ. ಏನಿದು ಏಡ್ಸ್? ಹೇಗೆ ಇದು ಹರಡುತ್ತದೆ ಮತ್ತು ಇದನ್ನು ತಡೆಗಟ್ಟಲು ಸಾಧ್ಯವಿಲ್ಲವೇ? ಎಂಬಂತಹ ಪ್ರಶ್ನೆಗಳಿಗೆ ಇಂದು ಈ ಆರ್ಟಿಕಲ್ ನಲ್ಲಿ ಉತ್ತರ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಏಡ್ಸ್ ಎಂದರೇನು?

ಸ್ನೇಹಿತರೆ ನಾವು ನೀವು ತಿಳಿದುಕೊಂಡಿರುವಂತೆ ಏಡ್ಸ್ ಎಂಬುದು ಇದು ರೋಗದ ಹೆಸರಲ್ಲ, ಬದಲಿಗೆ ಇದು ಹೆಚ್ಐವಿ ರೋಗದ ಕೊನೆಯ ಹಂತವಾಗಿದೆ. ಈ ಹಂತವು ಅತ್ಯಂತ ಭಯಾನಕ ರೋಗದ ಲಕ್ಷಣಗಳಿಂದ ಕೂಡಿದ್ದು ಮನುಷ್ಯನ ಸಾವಿಗೂ ಇದು ಕಾರಣವಾಗುತ್ತದೆ. ಈ ಕಾರಣದಿಂದಾಗಿ ಎಚ್ಐವಿ ರೋಗಕ್ಕೆ ಸಹಜವಾಗಿ ಏಡ್ಸ್ ಎಂದು ಕರೆಯಲಾಗುತ್ತದೆ.

ಹಾಗಾದರೆ ಎಚ್ಐವಿ ಎಂದರೇನು?

ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಸಾಮಾನ್ಯವಾಗಿ ಇದು ರಕ್ತದ ಮೂಲಕ ಹರಡುತ್ತದೆ. ಅಸುರಕ್ಷಿತ ಲೈಂಗಿಕತೆಯು ಈ ರೋಗ ಹರಡಲು ಪ್ರಮುಖ ಕಾರಣವಾಗಿದೆ. ಅಲ್ಲದೆ ಇದು ಸೋಂಕಿತ ತಾಯಿಯಿಂದ ಜನನದ ಸಮಯದಲ್ಲಿ ಮಗುವಿಗೆ ಕೂಡ ಹರಡುತ್ತದೆ. ಇನ್ನು ಸೋಂಕಿತ ವ್ಯಕ್ತಿಗೆ ಬಳಸಲಾದ ಸೂಜಿಯಿಂದ ಆರೋಗ್ಯಕರ ವ್ಯಕ್ತಿಗೆ ಅದೇ ಸೂಜಿಯನ್ನು ಬಳಸಿದಾಗ ಕೂಡ ಈ ರೋಗ ಹರಡುತ್ತದೆ.

ಏಡ್ಸ್ ರೋಗದ ಲಕ್ಷಣಗಳೇನು?

      
                    WhatsApp Group                             Join Now            
   
                    Telegram Group                             Join Now            

ಏಡ್ಸ್ ಸೋಂಕಿತ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಮೊದಮೊದಲು ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಆದರೆ ಈ ರೋಗ ಕೊನೆಯ ಹಂತದಲ್ಲಿ ಇರುವಾಗ ವಿವಿಧ ರೀತಿಯ ರೋಗದ ಲಕ್ಷಣಗಳು ಕಂಡುಬರುತ್ತವೆ. ಉದಾಹರಣೆಗೆ ತೀವ್ರ ತಲೆನೋವು, ಮಂಡಿ ನೋವು, ಅಶಕ್ತಿ ಹಾಗೂ ಹತ್ತು ಹಲವು. ಈ ಸಂದರ್ಭದಲ್ಲಿ ರೋಗವು ಅತ್ಯುನ್ನತ ಸ್ಥಿತಿಯನ್ನು ತಲುಪಿರುತ್ತದೆ. ಈ ಹಂತದಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಇದು ಕುಂಠಿತಗೊಳಿಸುತ್ತದೆ. ಆದ್ದರಿಂದ ಇದು ರೋಗಗಳ ಗುಂಪನ್ನೇ ಹೊತ್ತು ತರುತ್ತದೆ. ಈ ಕಾರಣದಿಂದಾಗಿ ಏಡ್ಸ್ ಸೋಂಕಿತ ವ್ಯಕ್ತಿಗೆ ಕ್ಯಾನ್ಸರ್, ಟಿಬೀ ಆಗುವ ಲಕ್ಷಣಗಳು ಹೆಚ್ಚಿರುತ್ತದೆ.

ಇದಕ್ಕೆ ಪರಿಹಾರವಿಲ್ಲವೇ?

ಪ್ರಸ್ತುತ ವೈದ್ಯಕೀಯ ಅಂಗಳದಲ್ಲಿ ಈ ರೋಗಕ್ಕೆ ಮದ್ದು ಹುಡುಕುವ ಹತ್ತು ಹಲವು ಪರೀಕ್ಷೆಗಳು ನಡೆಯುತ್ತಿದ್ದು, ಅದರಲ್ಲಿ ಕೆಲವು ಪರೀಕ್ಷೆಗಳು ಆಶಾದಾಯಕ ಫಲಿತಾಂಶವನ್ನು ನೀಡುತ್ತಿವೆ ಎಂದು ಅಂತರಾಷ್ಟ್ರೀಯ ಹಲವು ಪತ್ರಿಕೆಗಳು ವರದಿ ಮಾಡಿವೆ. ಅಂತಹ ಪರೀಕ್ಷೆಗಳಲ್ಲಿ ಪ್ರಮುಖವಾದ ಪರೀಕ್ಷೆ ಎಂದರೆ ಅದು Anti Retroviral Therapy. ಈ treatment ಮೂಲಕ HIV ವೈರಾಣು ನಮ್ಮ ದೇಹದಲ್ಲಿರುವ ಬಿಳಿ ರಕ್ತ ಕಣಗಳನ್ನು ನಾಶಮಾಡುವುದನ್ನು ತಡೆಗಟ್ಟುತ್ತದೆ. ಇದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಸಹಜವಾಗಿಯೇ ಹೆಚ್ಚುತ್ತದೆ. ಇದು HIV ವೈರಾಣುವಿನ ವಿರುದ್ಧ ಹೋರಾಡಿ ನಮ್ಮನ್ನ ಏಡ್ಸ್ ಹಂತದಿಂದ ಕಾಪಾಡುತ್ತದೆ.

ಏಡ್ಸ್ ತಡೆಗಟ್ಟಲು ನಾವೇನು ಮಾಡಬೇಕು?

ಸ್ನೇಹಿತರೇ HIV ವೈರಸ್ ಪ್ರಮುಖವಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹರಡುತ್ತದೆ. ಆದ್ದರಿಂದ ಸುರಕ್ಷಿತ ಸಾಧನಗಳನ್ನು (ಉದಾಹರಣೆಗೆ- ಕಾಂಡೊಮ್ಸ್) ಸಹಾಯದಿಂದ ನೀವು ಏಡ್ಸ್ ತಡೆಗಟ್ಟಬಹುದು. ಅಲ್ಲದೆ ಕಟಿಂಗ್ ಸಲೋನ್ ಗಳಲ್ಲಿ ಹೇರ್ ಕಟ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಅಥವಾ ಡಾಕ್ಟರ್ ಇಂಜೆಕ್ಷನ್ ಕೊಡುವಾಗ ಹೊಸ ಸೂಜಿ, ರೇಜರ್ ಬಳಸುತ್ತಿರುವರೆ ಎಂದು ಖಚಿತಪಡಿಸಿಕೊಳ್ಳಬೇಕು.

HIV ಕುರಿತು ಹರಡಿರುವ ಇನ್ನೊಂದು ಸುಳ್ಳು ಸುದ್ದಿ ಏನೆಂದರೆ ಇದು ಸೋಂಕಿತ ವ್ಯಕ್ತಿ ಬಳಸಿದ ವಸ್ತು ನಾವು ಬಳಸುವುದರಿಂದ ಏಡ್ಸ್ ಬರುತ್ತದೆ ಎಂಬುದು. ಇದು ಶುದ್ಧ ಸುಳ್ಳು. ಏಕೆಂದರೆ ಸೋಂಕಿತ ವ್ಯಕ್ತಿಯ ರಕ್ತದಿಂದ ಮಾತ್ರ ಈ ರೋಗ ಹರಡುತ್ತದೆ, ಹಾಗಾಗಿ ಅವರನ್ನು ಅಪ್ಪಿಕೊಳ್ಳುವುದು, ಕಿಸ್ ಮಾಡುವುದರಿಂದ ಅಥವಾ ಅವರು ಬಳಸಿದ ವಸ್ತು ಬಳಸುವುದರಿಂದ ಈ ರೋಗ ಹರಡುವುದಿಲ್ಲ. ಹೀಗಾಗಿ ಸೋಂಕಿತ ವ್ಯಕ್ತಿಯನ್ನು ಕೀಳಾಗಿ ನೋಡದೆ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಹೆಚ್ಚಿನ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿಯು ಏಡ್ಸ್ ನಿಂದ ಸಾಯುವುದಿಲ್ಲ,ಬದಲಿಗೆ ಸಮಾಜ ಅವನನ್ನು ನೋಡುವ ಕೀಳು ದೃಷ್ಟಿಯಿಂದಲೇ ಅವನು ಮಾನಸಿಕವಾಗಿ ಜರ್ಜರಿತಗೊಂಡು ಬಿಡುತ್ತಾನೆ. ಹೀಗಾಗಿ ನಾವು ಪ್ರಬುದ್ಧ ನಾಗರಿಕರಂತೆ ಅವರೊಡನೆ ವರ್ತಿಸಬೇಕು.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *