Rohit Sharma And Bhuvneshwar Kumar- ನಾಲ್ಕು ವರ್ಷಗಳ ಬಳಿಕ ಭಾರತೀಯ ಟಿ20 ತಂಡಕ್ಕೆ ಮರಳಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಕಂಬ್ಯಾಕ್ ಅನ್ನು ಬಾಲಿವುಡ್ ನಟ ಅಕ್ಷಯ್ ಖನ್ನಾ ಅವರ ಮರಳುವಿಕೆಗೆ ರೋಹಿತ್ ಶರ್ಮಾ ಹೋಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ನೀಡಿದ ಅದ್ಭುತ ಪ್ರದರ್ಶನವೇ ಭುವಿ ಪುನರಾಗಮನಕ್ಕೆ ಪ್ರಮುಖ ಕಾರಣವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪ್ರಸ್ತುತ ಸರಣಿಯಲ್ಲಿ ಅವರು ತಂಡದ ಪ್ರಮುಖ ಬೌಲರ್ ಆಗಿ ಕಣಕ್ಕಿಳಿದಿದ್ದು, ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದ್ದಾರೆ.
Thank you for reading this post, don't forget to subscribe!ಅಕ್ಷಯ್ ಖನ್ನಾ- ಭುವನೇಶ್ವರ್ ಕುಮಾರ್ ಕಂಬ್ಯಾಕ್ ಅನ್ನು ಹೋಲಿಸಿ ರೋಹಿತ್ ಶರ್ಮಾ ಮೆಚ್ಚುಗೆ.
ಆರ್‌ಸಿಬಿ ಪರ ತೋರಿದ ಅತ್ಯುತ್ತಮ ಬೌಲಿಂಗ್ ನಿಂದಾಗಿ ಟೀಮ್ ಇಂಡಿಯಾ ಮರುಪ್ರವೇಶಾವಕಾಶ
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸ್ವಿಂಗ್ ಕಿಂಗ್ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆ
ಎಲ್ಲಿನ ಧುರಂದರ್ ನ ಅಕ್ಷಯ್ ಖನ್ನಾ, ಎಲ್ಲಿನ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್? ಇದೀಗ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಅಕ್ಷಯ್ ಖನ್ನಾ ಮತ್ತು ಭುವಿ ಅವರಿಬ್ಬರ ಕಂಬ್ಯಾಕ್ ಅನ್ನು ಹೋಲಿಸಿರುವ ವಿಡಿಯೋ ಇದೀಗ ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ. ಜೊತೆಗೆ ಹಿಟ್ ಮ್ಯಾನ್ ಅವರು ಭುನನೇಶ್ವರ್ ಕುಮಾರ್ ಅವರಿಗೆ ಹೃದಯಸ್ಪರ್ಶಿ ಸಂದೇಶವನ್ನುನೀಡಿದ್ದಾರೆ.
ನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ, ಅವರು ಮೊದಲ ಪಂದ್ಯವನ್ನಾಡಿಯೂ ಆಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಬೆಂಗಳೂರಿನ ಚಿನ್ನಸ್ನಾಮಿ ಕ್ರೀಡಾಂಗಣದಲ್ಲಿ ಐದನೇ ಟಿ20 ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಅವರು ನಿರೀಕ್ಷೆಗಿಂತ ಮೊದಲೇ ತಂಡಕ್ಕೆ ಮರಳಿದ್ದರು. ಆ ಪಂದ್ಯದಲ್ಲಿ ಅವರು ಆಡುವ ಹನ್ನೊಂದರ ಬಳಗದಲ್ಲೂ ಇದ್ದರು. ಆದರೆ ಪಂದ್ಯ ಮಳೆಯ ಕಾರಣದಿಂದ ಪಂದ್ಯ ರದ್ದಾದ್ದರಿಂದ ಅವರಿಗೆ ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ.
ಕ್ರೈಸ್ಟ್‌ಚರ್ಚ್ ನ ಹ್ಯಾಗ್ಲಿ ಓವಲ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅವರು ಬೌಲಿಂಗ್ ನಡೆಸಿದರೂ ಅವರಿಗೆ ವಿಕೆಟ್ ಸಿಗಲಿಲ್ಲ. 4 ಓವರ್ ಗಳನ್ನು ಎಸೆದ ಅವರು 49 ರನ್ ಬಿಟ್ಟುಕೊಟ್ಟರು. ಕ್ರೈಸ್ಟ್ ಚರ್ಚ್ ನಲ್ಲಿ ನಡೆಯುವ ಮುಂದಿನ ಪಂದ್ಯದಲ್ಲಿ ಅವರು ವಿಕೆಟ್ ಪಡೆಯುವ ಭರವಸೆ ಭಾರತೀಯ ಕ್ರಿಕೆಟ್ ಪ್ರೇಮಿಗಳದ್ದು.
ಭುವಿಗೆ ಹಿಟ್ ಮ್ಯಾನ್ ಹೃದಯಸ್ಪರ್ಶಿ ಸಂದೇಶ
ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ನಡೆಯುತ್ತಿರುವ ಹೊತ್ತಲ್ಲೇ ರೋಹಿತ್ ಶರ್ಮಾ ಅವರು ಭುವನೇಶ್ವರ್ ಹೃದಯಸ್ಪರ್ಶಿ ಸಂದೇಶವೊಂದನ್ನು ಕಳುಹಿಸಿದ್ದಾರೆ. ‘ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ನಾಯಕ, “ನಾವು ನ್ಯೂಜಿಲೆಂಡ್‌ಗೆ ಹೋಗುತ್ತಿದ್ದೇವೆ. ಅವರು (ಭುವನೇಶ್ವರ್) ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಹೇಳಿದ್ದಾರೆ. ಜೊತೆಗೆ ಧುರಂದರ್ ಮೂವಿಯಲ್ಲಿ ಅಕ್ಷಯ್ ಖನ್ನಾ ಅವರು ಬಾಲಿವುಡೇ ಗೆ ಕಂಬ್ಯಾಕ್ ಮಾಡಿದ ರೀತಿಯಲ್ಲೇ ಭುವನೇಶ್ವರ್ ಕುಮಾರ್ ಅವರು ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ವೈರಲ್ ಆಗಿದೆ.
ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡದಲ್ಲಿ ಭುವನೇಶ್ವರ್ ಇದ್ದರು. ಭಾರತ ತಂಡವು ಸೆಮಿಫೈನಲ್ ತಲುಪಿದರೂ, ಟೂರ್ನಿಯುದ್ದಕ್ಕೂ ಕಷ್ಟಪಟ್ಟಿತು ಮತ್ತು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿತ್ತು. ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡ್‌ಗೆ ಪ್ರಯಾಣಿಸಿದ್ದ ಭುವನೇಶ್ವರ್, ಆ ಸರಣಿಯ ನಂತರ ತಂಡದಿಂದ ಕೈಬಿಡಲ್ಪಟ್ಟರು.
ಆರ್ ಸಿಬಿಯಲ್ಲಿ ಭುವಿ ಅದ್ಬುತ ಪ್ರದರ್ಶನ
ಐಪಿಎಲ್ (IPL) 2025ರಲ್ಲಿ 17 ವಿಕೆಟ್‌ಗಳು ಮತ್ತು 2026ರಲ್ಲಿ 28 ವಿಕೆಟ್‌ಗಳನ್ನು ಪಡೆಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಭುವನೇಶ್ವರ್ ತೋರಿದ ಅದ್ಭುತ ಪ್ರದರ್ಶನವು, ಅವರಿಗೆ ಮತ್ತೆ ಭಾರತ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿತು. ಅವರು ಇಲ್ಲಿಯವರೆಗೆ ಆಡಿರುವ 88 ಟಿ20 ಪಂದ್ಯಗಳಲ್ಲಿ 90 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
2022ರ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಭುವನೇಶ್ವರ್ ಯಾವುದೇ ಏಕದಿನ (ODI) ಪಂದ್ಯವನ್ನಾಡಿಲ್ಲ. ಆ ಸರಣಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಬೇಕಿತ್ತು, ಆದರೆ ಗಾಯದ ಸಮಸ್ಯೆಯಿಂದಾಗಿ ಅವರು ಆ ಸರಣಿಯಿಂದ ಹೊರಗುಳಿದಿದ್ದರು. ಅವರು ಆಡಿದ ಕೊನೆಯ ಏಕದಿನ ಪಂದ್ಯವು ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ನಡೆದಿತ್ತು. ಇನ್ನು ಟೆಸ್ಟ್ ಕ್ರಿಕೆಟ್ ವಿಷಯಕ್ಕೆ ಬಂದರೆ, 2018ರ ಜನವರಿಯಿಂದ ಭುವನೇಶ್ವರ್ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ. ಅವರು ಆಡಿದ ಕೊನೆಯ ಟೆಸ್ಟ್ ಪಂದ್ಯವು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಡೆದಿತ್ತು.
ಭಾರತ ಟಿ20 ತಂಡ
ಶ್ರೇಯಸ್ ಅಯ್ಯರ್ (ನಾಯಕ), ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ನಮನ್ ಧೀರ್, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಕುಲದೀಪ್ ಯಾದವ್, ಶಿವಂ ದುಬೆ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ
ಓದುಗರಲ್ಲಿ ವಿನಂತಿ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇https://chat.whatsapp.com/FM1qVgdNtJm5m1M9SL0BHc?mod