ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ . ರೈತರು ಈಗ ತಮ್ಮ ಜಮೀನಿನ ಅಳತೆ ಮಾಡಿಸಲು ಸರ್ಕಾರಿ ಕಚೇರಿಗಳಿಗೆ ಹೋಗಬೇಕಿಲ್ಲ. ಹಗ್ಗನೂ ಬೇಕಿಲ್ಲ. ಕೋಲು ಬೇಕಿಲ್ಲ. ತಮ್ಮ ಬಳಿಯಿರುವ ಮೊಬೈಲ್ ನಿಂದಲೇ ಯಾರ ಸಹಾಯವೂ ಇಲ್ಲದೆ ನಿಮ್ಮ ಜಮೀನಿನ ಅಳತೆಯನ್ನು ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ
Thank you for reading this post, don't forget to subscribe!ಮೊಬೈಲ್ ನಲ್ಲಿ ಜಮೀನಿನ ಅಳತೆ ಮಾಡುವುದು ಹೇಗೆ?
ರೈತರು ತಮ್ಮ ಜಮೀನಿನ ಅಳತೆ ಸರ್ವೆ ನಂಬರ್ ಪ್ರಕಾರವಿದೆಯೇ ಅಥವಾ ಒತ್ತುವರಿಯಾಗಿದೆಯೇ ಎಂಬುದನ್ನು ಸಹ ಇಲ್ಲೆ ಚೆಕ್ ಮಾಡಬಹುದು. ನಿಮ್ಮ ಜಮೀನಿನ ಅಳತೆಯನ್ನು ಮಾಡಲು ಈ
https://play.google.com/store/apps/details?id=com.ksrsac.sslr&hl=en_IN&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ದಿಶಾಂಕ್ ಯ್ಯಾಪ್ ಓಪನ್ ಆಗುತ್ತದೆ. ಅಲ್ಲಿ ನೀವು Install ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಿಂತ ಅಲೋ ದಿಶಾಂಕ್ ಟು ಆಕ್ಸೆಸ್ ದಸ್ ಡಿವೈಸ್ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನೀವು ನಿಮ್ಮ ಮೊಬೈಲ್ ನಲ್ಲಿ ಜಿಪಿಎಸ್ ಆನ್ ಮಾಡಿಕೊಳ್ಳಬೇಕಾಗುತ್ತದೆ. ಆಗ ನಿಮಗೆ ನಿಂತಿರುವ ಸ್ಥಳದ ಮಾಹಿತಿ ಕಾಣಿಸುತ್ತದೆ
. ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಸರ್ವೆ ನಂಬರ್ ಸಹ ಕಾಣಿಸುತ್ತದೆ. ಇದಾದ ನಂತರ ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಇನ್ನೊಂದು ಪೇಜ್ ನಿಮಗೆ ಓಪನ್ ಆಗುತ್ತದೆ. ನಂತರ ಅಲ್ಲಿ ಮಾಲಿಕರ ವಿವರಗಳು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಗಮೆ ಆ ಜಮೀನಿನ ಮಾಲಿಕರು ಯಾರು ಇದ್ದಾರೆ ಅವರ ಅಕ್ಕಪಕ್ಕದ ಜಮೀನಿನ ಮಾಲಿಕರು ಯಾರಿದ್ದಾರೆ ಅವರ ಹೆಸರು ಸಹ ನಿಮಗೆ ಕಾಣಿಸುತ್ತದೆ.
ಒಂದು ವೇಳೆ ನಿಮಗೆ ನೀವು ನಿಂತಿರುವ ಪಾಯಿಂಟ್ ಕಾಣಿಸದಿದ್ದರೆ ಸರ್ವೆ ನಂಬರ್ ಹುಡುಕಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು
. ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಸರ್ವೆ ನಂಬರ್ ನಮೂದಿಸಿದ ನೀವು ನಿಂತಿರುವ ಸ್ಥಳದ ಪಾಯಿಂಟ್ ನಿಮಗೆ ಕಾಣಿಸುತ್ತದೆ. ಆಗ ನೀವು ಅಲ್ಲಿ ಕಾಣಿಸುವ ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡಬೇಕು
. ಇದಾದ ನಂತರ ಲೈನ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಸರ್ವೆ ನಂಬರಿನಲ್ಲಿ ನೀವು ಯಾವ ದಿಕ್ಕಿನಿಂದ ಅಳತೆ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ಕ್ಲಿಕ್ ಮಾಡಬೇಕು. ನಂತರ ಜಮೀನು ನಾಲ್ಕು ಮೂಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು
. ಜಮೀನಿನ ಅಳತೆ ಪ್ರಕಾರಗಳು, ಮೀಟರ್, ಫೀಟ್ ಹೀಗೆ ನಿಮಗೆ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಮೀಟರ್ ನಲ್ಲಿ ಅಳತೆ ಮಾಡಿಕೊಳ್ಳುವವರಾಗಿದ್ದರೆ ಮೀಟರ್ ಆಯ್ಕೆ ಮಾಡಿಕೊಳ್ಳಬೇಕು.
ಒಂದು ವೇಳೆ ನೀವು ಫೀಟ್ ಮೂಲಕ ಅಳತೆ ಮಾಡಿಕೊಳ್ಳಲು ಬಯಸಿದ್ದರೆ ಫೀಟ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನಿಮಗೆ ಆಯ್ಕೆಗಳು ಇರುತ್ತದೆ. ಅದರಲ್ಲಿ ನೀವು ಯಾವುದಾದರೊಂದನ್ನು ಆಯ್ಕೆ ಮಾಡಿಕೊಂಡು ಜಮೀನಿನ ಅಳತೆಯನ್ನು ಮೊಬೈಲ್ ನಲ್ಲೇ ಮಾಡಬಹುದು,
ನೀವು ಜಮೀನಿನ ಅಳತೆ ಮಾಡುವುದಕ್ಕಿಂತ ಮುಂಚಿತವಾಗಿ ಮೇಲೆ ತಿಳಿಸಿದ ಮಾಹಿತಿಯನ್ನ ಸರಿಯಾಗಿ ಓದಿಕೊಳ್ಳಬೇಕು. ನಂತರ ನೀವು ಮೇಲೆ ಹೇಳಿದಂತೆ ಒಂದಾದರೊಂದರಂತೆ ಜಮೀನಿನ ಅಳತೆಯನ್ನು ಮೊಬೈಲ್ ನಲ್ಲಿ ಮಾಡಬೇಕಾಗುತ್ತದೆ.ಜಮೀನಿನ ಅಳತೆ ಮಾಡುವಲ್ಲಿ ಏನಾದರೂ ಸಮಸ್ಯೆಯಾಗುತ್ತಿದ್ದರೆ ಅಲ್ಲಿ ನೀಡಲಾದ ಉಚಿತ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ವಿಚಾರಿಸಬಹುದು.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode