ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ 2 ನೇ ಹಾಗೂ ಅಂತಿಮ ಹಂತದ ಮತದಾನ ಇಂದು ಪೂರ್ಣಗೊಂಡಿದ್ದು, ದಾಖಲೆಯ ಶೇ. 67.14ಕ್ಕೂ ಹೆಚ್ಚು ಮತದಾನ ನಡೆದಿದೆ.
ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿದೆ. ಹಲವು ಸಮೀಕ್ಷೆಗಳ ಪೈಕಿ ಈ ಬಾರಿಯೂ ಬಿಜೆಪಿ ನೇತೃತ್ವದ ಎನ್ ಡಿಎ ಗೆ ಸ್ಪಷ್ಟ ಬಹುಮತ ದೊರೆಯುವ ಸಾಧ್ಯತೆಗಳಿವೆ
ಬಿಹಾರದಲ್ಲಿ 243 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚಿಸಲು 122 ಸ್ಥಾನಗಳ ಬಹುಮತ ಅಗತ್ಯವಿದೆ.
ಡಿವಿ ರಿಸರ್ಚ್ ಸಮೀಕ್ಷೆ
ಡಿವಿ ರಿಸರ್ಚ್ ಪ್ರಕಾರ, ಎನ್ಡಿಎ 137-152 ಸ್ಥಾನಗಳೊಂದಿಗೆ ಸರ್ಕಾರ ರಚಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ, ಮಹಾಘಟಬಂಧನ್ 83-98 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಜನ್ ಸುರಾಜ್ 2-4 ಸ್ಥಾನಗಳನ್ನು ಮತ್ತು ಇತರರು 1-8 ಸ್ಥಾನಗಳನ್ನು ಪಡೆಯಬಹುದು ಎನ್ನುತ್ತಿದೆ ಈ ಸಮೀಕ್ಷೆ.
ಜೆವಿಸಿ ಸಮೀಕ್ಷೆ
ಜೆವಿಸಿಯ ಸಮೀಕ್ಷೆಯ ಪ್ರಕಾರ, ಎನ್ಡಿಎ 142 ಸ್ಥಾನಗಳನ್ನು, ಎಂಜಿಬಿ 95 ಮತ್ತು ಜೆಎಸ್ಪಿ 1 ಮತ್ತು ಇತರರು 5 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಊಹಿಸಲಾಗಿದೆ.
ಮ್ಯಾಟ್ರಿಜ್ ಎಕ್ಸಿಟ್ ಪೋಲ್
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಸಮೀಕ್ಷೆಯು ಎನ್ಡಿಎಗೆ 147-167 ಸ್ಥಾನಗಳು ಸಿಗುವ ಸುಳಿವು ನೀಡಿದ್ದು, ಇದು ಆರಾಮದಾಯಕ ಬಹುಮತವಾಗಿದೆ. ಮ್ಯಾಟ್ರಿಜ್ ಪ್ರಕಾರ, ಮಹಾಘಟಬಂಧನ್ ಚುನಾವಣೆಯಲ್ಲಿ 70-90 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಟೈಮ್ಸ್ ನೌ-CVoter:
NDA 116, ಮಹಾಘಟಬಂಧನ್ 120, LJP 1, ಇತರೆ 6
News18-ಟುಡೇಸ್ ಚಾಣಕ್ಯ
ಮಹಾಘಟಬಂಧನ್ 180 (±11), NDA 102 (±11).
ಇದಿಷ್ಟು poll exit ಹೇಳಿದ್ದು idu ನಿಜವೋ ಅಥವಾ ಏನೋ ಎಂಬುವುದನ್ನು ಫಲಿತಾಂಶ ಬರುವತನಕ ಕಾಯಬೇಕು,
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode