ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಕಳೆದೆರಡು ತಿಂಗಳಿನಿಂದ ರಾಜ್ಯ ರಾಜಕೀಯದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದ ರೇಷನ್ ಕಾರ್ಡ್ ರದ್ದು ಮಾಡಿರುವ ಕುರಿತು ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿರುವ ಕುರಿತು ಹಿಂದಿನ ಅಂಕಣದಲ್ಲಿ ತಿಳಿಸಿದ್ದೇವೆ.
Thank you for reading this post, don't forget to subscribe!ಇದೀಗ ರಾಜ್ಯ ಸರ್ಕಾರ ರೇಷನ್ ಕಾರ್ಡ್ (BPL Card) ಹೊಂದಿರುವವರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಏನು ಆ ಸಿಹಿ ಸುದ್ದಿ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ. ಇದೇ ರೀತಿಯ ವಿಶೇಷ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಗ್ರೂಪ್ ಗೆ ಸೇರಿಕೊಳ್ಳಿ
ಇದನ್ನೂ ಓದಿ: ಪಿಎಂ ಕಿಸಾನ್: 19 ನೇ ಕಂತಿನ ಅರ್ಹ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
ಹೌದು ಸ್ನೇಹಿತರೆ ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್ ಕಾರ್ಡ ತಿದ್ದುಪಡಿ ಮಾಡಲು ರಾಜ್ಯ ಸರಕಾರ ಅವಕಾಶ ನೀಡಿದೆ.
ಇಲ್ಲಿಯವರೆಗೂ ಯಾರು ತಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕಾಯುತ್ತಿದ್ದಿರೋ ಅಂತವರು ಇದೀಗ ತಮ್ಮ ಬಿಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಸಬಹುದು.
ಇದನ್ನೂ ಓದಿ: ಒಂದು ವಾರದಲ್ಲಿ ರೈತರಿಗೆ 120 ಕೋಟಿ ರೂಪಾಯಿ ಹಿಂಗಾರು ಬೆಳೆ ಹಾನಿ ಪರಿಹಾರ ಹಣ ಜಮಾ: ಕಂದಾಯ ಸಚಿವ ಕೃಷ್ಣ ಭೈರೇಗೌಡ
ಸದ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಓಪನ್ ಇದ್ದು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬಯಸುವವರು ತಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
ಯಾವ ಯಾವ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ?
ಸದ್ಯ ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ನೀಡಿರುವ ಅವಕಾಶದಲ್ಲಿ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಜಿಲ್ಲೆಯ ಅರ್ಹ ಫಲಾನುಭವಿಗಳು ತಿದ್ದುಪಡಿ ಮಾಡಿಸಲು ಅವಕಾಶ ನೀಡಲಾಗಿದೆ.
ರೇಶನ್ ಕಾರ್ಡ್ ಗೆ ಹೊಸದಾಗಿ ಹೆಸರು ಸೇರಿಸುವುದಿದ್ದರೆ ಅಥವಾ ರೇಷನ್ ಕಾರ್ಡಿನಿಂದ ಯಾರದ್ದಾದರು ಹೆಸರು ತೆಗೆಯುವುದಿದ್ದರೆ ಅಥವಾ ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಿದ್ದರೆ ಅಥವಾ ರೇಷನ್ ಕಾರ್ಡಿನಲ್ಲಿ ಫೋಟೋ ಬದಲಾವಣೆ ಮಾಡುವುದಿದ್ದರೆ ಅಥವಾ ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಅಪ್ಡೇಟ್ ಮಾಡುವುದು ಇದ್ದರೆ ಅಥವಾ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಅವಕಾಶ ನೀಡಲಾಗಿದೆ.
ಎಲ್ಲಿ ಮತ್ತು ಹೇಗೆ ತಿದ್ದುಪಡಿ ಮಾಡಿಸಬಹುದು?
ಇನ್ನೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬಯಸುವ ಎಲ್ಲಾ ಅರ್ಹ ಫಲಾನುಭವಿಗಳು ತಮ್ಮ ಹತ್ತಿರದ ಗ್ರಾಮ್ ಒನ್ ಅಥವಾ ಬೆಂಗಳೂರು ಒನ್ ಅಥವಾ ಗ್ರಾಮ ಪಂಚಾಯತಿ ಕಂಪ್ಯೂಟರ್ ಸೆಂಟರ್ ಗಳಿಗೆ ಹೋಗಿ ತಮ್ಮ ರೇಷನ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ತಿದ್ದುಪಡಿ ಮಾಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಲು ಕೆಳಗೆ ನೀಡಲಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ 👇👇👇
https://ahara.karnataka.gov.in/
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t