ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಈಗಿನ ಕಾಲದಲ್ಲಿ ರೈತರು ತಮ್ಮ ಹೊಲದ ವಿವರಗಳನ್ನು ಪರಿಶೀಲಿಸಿ ಅದರ ಸೂಕ್ತ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಬಹಳ ಅವಶ್ಯಕವಾಗಿದೆ. ಏಕೆಂದರೆ ಸರ್ಕಾರದಿಂದ ಬರುವ ಏನೇ ಸೌಲಭ್ಯಗಳಿದ್ದರೂ ಅವು ಈ ದಾಖಲೆ ನೋಡಿಯೇ ನೀಡಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಸಂಪೂರ್ಣ ದಾಖಲೆ ಮತ್ತು ವಿವರಗಳನ್ನು ಕಡ್ಡಾಯವಾಗಿ ಮಾಡಿಸಿ ಇಡಬೇಕು.
Thank you for reading this post, don't forget to subscribe!ಇದನ್ನೂ ಓದಿ: ಬೆಳೆ ಪರಿಹಾರ: 2ನೇ ಕಂತು ಹಣ ಜಮಾ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!
ಇನ್ನು ಹಲವು ರೈತರಿಗೆ ತಮ್ಮ ಜಮೀನಿನಲ್ಲಿ ಕಾಲುದಾರಿ ಎಲ್ಲಿದೆ, ಜಮೀನು ನಿಖರವಾಗಿ ಎಷ್ಟಿದೆ ಮತ್ತು ಜಮೀನಿನ ನಿರ್ದಿಷ್ಟ ಗಡಿ ಯಾವುದು ಎಂಬುದರ ಬಗ್ಗೆ ತಿಳಿದಿರುವುದಿಲ್ಲ. ಅಂತಹ ರೈತರಿಗೆ ಉಪಯುಕ್ತವಾಗಲಿ ಎಂದೇ ಈ ಅಂಕಣವನ್ನು ನಿಮ್ಮ ಮುಂದೆ ತಂದಿದ್ದೇವೆ. ನಿಮ್ಮ ಜಮೀನಿನ ಬಗ್ಗೆ ಸಂಪೂರ್ಣ ಚಿತ್ರಣ ಮತ್ತು ಅದರ ಮ್ಯಾಪ್ ಅನ್ನು ಮನೆಯಲ್ಲಿಯೇ ಕುಳಿತು ತಿಳಿಯಲು ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.
ಇದನ್ನೂ ಓದಿ: ಬೆಳೆ ಪರಿಹಾರ ಹಣ : ಮೊಬೈಲ್ ನಂಬರ್ ಹಾಕಿ ನಿಮಗೆ ಎಷ್ಟು ಪರಿಹಾರ ಹಣ ಬಂದಿದೆ ಚೆಕ್ ಮಾಡಿ !
ನನ್ನ ಜಮೀನಿನ ಮ್ಯಾಪ್ ನೋಡುವುದು ಹೇಗೆ ?
ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ,ರಾಜ್ಯ ಸರಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
https://www.landrecords.karnataka.gov.in/service3/
ಹಂತ -2) ನಂತರ ನಿಮಗೆ ಕೆಳಗೆ ತೋರಿಸಿದಂತೆ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ, ನಿಮ್ಮ ತಾಲ್ಲೂಕು, ಹೋಬಳಿ ಹೆಸರನ್ನ ಹಾಕಿ.
ಹಂತ -3) ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹೆಸರನ್ನು ಹಾಕಿದ ನಂತರ ಕೆಳಗೆ ತೋರಿಸಿದಂತೆ ಮ್ಯಾಪ್ ಟೈಪ್ ಮೇಲೆ ಕ್ಲಿಕ್ ಮಾಡಿ, cadastral map ಅನ್ನು ಆಯ್ಕೆ ಮಾಡಿ.
ಇದನ್ನೂ ಓದಿ: ಬರ ಪರಿಹಾರ: ಗ್ರಾಮ ಪಂಚಾಯತಿ ಪ್ರಕಟಿಸಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ !
ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ನಿಮ್ಮ ಹೋಬಳಿಯಲ್ಲಿರುವ ಎಲ್ಲಾ ಗ್ರಾಮಗಳ ಹೆಸರು ಕಾಣಿಸುತ್ತವೆ. ಪ್ರತಿ ಗ್ರಾಮದ ಹೆಸರಿನ ಮುಂದೆ ಒಂದು PDF ಪೈಲ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ.
ಹಂತ -5) ಹೀಗೆ ಡೌನ್ಲೋಡ್ ಮಾಡಿಕೊಂಡ pdf ಪೈಲ್ ಓಪನ್ ಮಾಡಿದಾಗ ನಿಮ್ಮ ಮೊಬೈಲ್ನಲ್ಲಿ ಗೂಗಲ್ ಮ್ಯಾಪ್ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ಹಳ್ಳಿಯ ಎಲ್ಲಾ ರೈತರ ಜಮೀನನ್ನು ಕಾಣಬಹುದು. ವಿಶೇಷವಾಗಿ ನಿಮ್ಮ ಜಮೀನಿನ ಗಡಿ ಭಾಗವನ್ನು, ನಿಮ್ಮ ಜಮೀನಿನಲ್ಲಿ ಹಾದು ಹೋಗಿರುವ ಕಾಲುದಾರಿಯನ್ನು ಅಥವಾ ಇತರೆ ವಿಷಯಗಳನ್ನು ನೀವು ಅಲ್ಲಿ ಕಾಣಬಹುದು.
ಇದನ್ನೂ ಓದಿ: ಬೆಳೆ ಪರಿಹಾರ: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ ! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಹಣ ಬರಲ್ಲ!
ಓದುಗರಲ್ಲಿ ವಿನಂತಿ :
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M