ಸ್ನೇಹಿತರೆ ಒಂದು ಪ್ರಸಿದ್ಧ ಮಾತಿದೆ, “ಕೆಲಸ ಮಾಡಿ ಹೆಸರು ಮಾಡಬೇಕು..ಇಲ್ಲದಿದ್ದರೆ ಹೆಸರು ಹೇಳಿದರೆ ಕೆಲಸ ಆಗಬೇಕು..ಆ ರೀತಿ ಬೆಳೆಯಬೇಕು. ಅದು ನಿಜವಾದ ಸಾಧನೆ.”
Thank you for reading this post, don't forget to subscribe!ಹೌದು ಸ್ನೇಹಿತರೇ ಇವತ್ತು ನಾನು ನಿಮಗೆ ಹೇಳ ಹೊರಟಿರುವ ಕಥೆ ಒಬ್ಬ ಬಸ್ ಡ್ರೈವರ್ನ ಮಗನದ್ದು. ಆತ ಕೇವಲ ಕನ್ನಡ ಫಿಲ್ಮ ಇಂಡಸ್ಟ್ರಿ ಅಷ್ಟೇ ಅಲ್ಲದೇ ಬಾಲಿವುಡ್ನಲ್ಲೂ ಧೂಳೆಬ್ಬಿಸಿ ಇಡೀ ಭಾರತೀಯ ಚಿತ್ರರಂಗ ತನ್ನತ್ತ ನೋಡುವಂತೆ ಮಾಡಿದ ಮಹಾನ್ ಸಾಹಸಿಯ ಕಥೆ. ಹೌದು ಸ್ನೇಹಿತರೇ ಆತ ಬೇರಾರೂ ಅಲ್ಲ..ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರಸಿದ್ಧಿ ಹೊಂದಿರುವ ಯಶ್ ಅವರ ಕಥೆ. ಹಠ ಎಂದರೆ ಏನು ಎಂಬುದನ್ನ ಇವರ ಕಥೆ ಕೇಳಿ ಕಲಿಯಬೇಕು. ಚಿತ್ರರಂಗದ ಹಿನ್ನೆಲೆಯಿಲ್ಲದೇ ಯಾವೊಬ್ಬ ಗಾಡ್ಫಾದರ್ ಇಲ್ಲದೆಯೇ ಭಾರತೀಯ ಚಿತ್ರರಂಗದಲ್ಲಿ ಈತ ಗಳಿಸಿದ ಯಶಸ್ಸನ್ನು ಗಾಡ್ಫಾದರ್ಗಳಿದ್ದ ಅನೇಕ ನಟರಿಗೂ ಸಾಧಿಸಲಾಗಿಲ್ಲ.ಈ ವ್ಯಕ್ತಿಯ ಜೀವನ ಚರಿತ್ರೆ ನಿಮ್ಮ ರೋಮಗಳನ್ನು ಸೆಟೆದು ನಿಲ್ಲುವಂತೆ ಮಾಡದಿದ್ದರೆ ಈ ಆರ್ಟಿಕಲ್ಗೆ ಒಂದು ಡಿಸ್ಲೈಕ್ ಮಾಡಿ.
ಸ್ನೇಹಿತರೇ ಹೇಳ್ತಾರಲ್ಲ..ಜೀವನವನ್ನು ಬದಲಿಸಲು ಒಂದು ಒಳ್ಳೆಯ ಸಂದರ್ಭ ಸಾಕು ಅಂತ, ಅಂಥದ್ದೇ ಒಂದು ಸಂದರ್ಭ ಯಶ್ ಅವರ ಜೀವನದಲ್ಲಿ ನಡೆದಿತ್ತು. ಆ ವ್ಯಕ್ತಿಯು ಆಗರ್ಭ ಶ್ರೀಮಂತ ಕುಟುಂಬಕ್ಕೆ ಸೇರಿದವನಾಗಿರಲಿಲ್ಲ. ಅವರ ತಂದೆ ಒಬ್ಬ ಬಸ್ ಡ್ರೈವರ್ ಆಗಿದ್ದರೆ, ಅವರು ತಾಯಿಯೂ ಗೃಹಿಣಿ ಆಗಿದ್ದರು.
ಒಂದು ದಿನ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ನಿಮಿತ್ಯ ನಾಟಕವೊಂದು ನಡೆಯಲಿತ್ತು. ಅದರಲ್ಲಿ ಯಶ್ ಕೂಡಾ ಭಾಗವಹಿಸಿದ್ದರು. ಅದರಲ್ಲಿ ಅವರದ್ದು ಸಹಾಯಕ ಪಾತ್ರ ಎಂದು ನಿರ್ಧರಿಸಲಾಗಿತ್ತು. ಆದರೆ ಕಾರ್ಯಕ್ರಮದ ನಂತರ ಆಗಿದ್ದೇ ಬೇರೆ. ಇವರ ನಾಟಕ ವೀಕ್ಷಿಸಿದ ಪ್ರೇಕ್ಷಕರೆಲ್ಲರೂ ನಾಟಕದ ಹಿರೋ ಪಾತ್ರಕ್ಕಿಂತ ಯಶ್ ಅವರ ಅಭಿನಯವನ್ನು ಮೆಚ್ಚಿ ಕಿವಿ ಗಡಚಿಕ್ಕುವಂತೆ ಕರತಾಡನ ಮಾಡಿದ್ದರು. ಈ ಚಪ್ಪಾಳೆಗಳು ಯಶ್ ಅವರಲ್ಲಿ ಎಷ್ಟು ಸ್ಫೂರ್ತಿಯನ್ನು ತುಂಬಿದ್ದವೆಂದರೆ ಅವತ್ತೇ ಯಶ್ ಅವರು ತಾವು ಜೀವನದಲ್ಲಿ ಏನಾದರೂ ಆಗುವುದಿದ್ದರೆ ಅದು ಕೇವಲ ನಟ ಮಾತ್ರ ಎಂದು ನಿರ್ಧರಿಸಿ ಬಿಟ್ಟಿದ್ದರು.
ಆ ನಾಟಕದಿಂದ ಅವರು ಎಷ್ಟು ಪ್ರಸಿದ್ಧರಾಗಿದ್ದರೆಂದರೆ ಅವರ ಶಾಲೆಯ ಶಿಕ್ಷಕರು ಕೂಡಾ ಅವರಿಗೆ ‘ಹಿರೋ’ ಎಂದು ಕರೆಯಲಾರಂಭಿಸಿದ್ದರು. ಸ್ನೇಹಿತರೆ ಯಶಸ್ಸಿನ ಹಾದಿ ಯಾವಾಗಲೂ ಸುಗಮವಾಗಿರುವುದಿಲ್ಲ ನೋಡಿ…ಯಶ್ ಅವರ ಜೀವನದಲ್ಲೂ ಅದೇ ಆಯ್ತು. ಕಾಲೇಜು ದಿನಗಳಲ್ಲಿ ಅವರು ಕಾಲೇಜಿನಿಂದ ಡ್ರಾಪ್ ಔಟ್ ಆಗಿ ತಮ್ಮ ಪ್ಯಾಶನ್ ಆದ ನಟನೆಯಲ್ಲಿ ಮುಂದುವರಿಯಬೇಕೆಂದು ಬಯಸಿದ್ದರು. ಆದರೆ ನಮ್ಮ ತಂದೆ-ತಾಯಿಗಳು ಹೇಗೋ ಹಾಗೆ ಯಶದ ಅವರ ತಂದೆ ತಾಯಿಗಳು ಕೂಡಾ ಯಶ್ ಅವರಿಗೆ ಡಿಗ್ರಿ ಮುಗಿಸಿ ಯಾವುದಾದರೊಂದು ನೌಕರಿ ಹಿಡಿಯುವಂತೆ ಒತ್ತಾಯಿಸಿದರು. ಆದರೆ ಸ್ನೇಹಿತರೆ ನಿಮಗೆ ಗೊತ್ತಲ್ಲ..ನಾವು ಎಷ್ಟೇ ಹಠ ಮಾಡಿದರೂ ಕೆಲವೊಮ್ಮೆ ತಂದೆ ತಾಯಿಗಳ ಮಾತಿಗೆ ಶರಣಾಗಲೇ ಬೇಕಾಗುತ್ತದೆ. ಯಶ್ ಕೂಡಾ ತಮ್ಮ ತಂದೆ ತಾಯಿ ಮಾತಿನಂತೆ ಡಿಗ್ರಿ ಮುಗಿಸಿದರು. ಆದರೆ ಅವರ ತಂದೆ ತಾಯಿಗೆ ಯಶ್ ಅವರು ನಟನಾಗುವುಸು ಇಷ್ಟವಿರಲಿಲ್ಲ.
ಆದರೆ ಈ ಬಾರಿ ಯಶ್ ತಮ್ಮ ತಂದೆ ತಾಯಿಗಳೊಂದಿಗೆ ಜಗಳ ಮಾಡಿ, ತಾನೊಬ್ಬ ನಟನಾಗಿಯೇ ಮನೆಗೆ ಬರುತ್ತೇನೆಂದು ಇಲ್ಲವಾದರೆ ತಾನು ಮನೆಗೆ ಮರಳಿ ಬರುವಿದಿಲ್ಲವೆಂದು ಶಪಥ ಮಾಡಿದನು. ಅದಕ್ಕೆ ಅವರ ತಂದೆ ಒಂದು ಷರತ್ತನ್ನು ಹಾಕಿದರು. ಅದೇನೆಂದರೆ ‘ನೀನು ಬೆಂಗಳೂರಿಗೆ ಹೋಗುವುದೇ ಆದರೆ ಅಲ್ಲಿ ನೀನು ನಮ್ಮ ಸಂಬಂಧಿಕರ ಮನೆಯಲ್ಲಿ ಉಳಿಯುವಂತಿಲ್ಲ’ ಎಂದಿದ್ದರು. ತಂದೆಯ ಷರತ್ತಿಗೆ ಒಪ್ಪಿ ಜೇಬಿನಲ್ಲಿ ಕೇವಲ 300 ರೂಪಾಯಿಗಳನ್ನು ಇಟ್ಟುಕೊಂಡು ಬೆಂಗಳೂರಿಗೆ ಬಂದ ಯಶ್ಗೆ, ಆರಂಭದಲ್ಲಿ ಯಾವ ಕೆಲಸವೂ ಸಿಗಲಿಲ್ಲ. ಕೆಲವು ದಿನಗಳ ನಂತರ ಯಶ್, ‘ಬೆನಕ ಡ್ರಾಮಾ ಟ್ರೂಪ್’ ಎಂಬ ನಾಟಕ ಕಂಪನಿಗೆ ಸೇರಿದರು. ಅಲ್ಲಿ ಯಶ್ ಬ್ಯಾಕ್ ಸ್ಟೇಜ್ ಕೆಲಸಗಾರನಾಗಿ ಅಂದರೆ ಕಲಾವಿದರಿಗೆ ಚಹಾ ನೀರು ತಂದುಕೊಡುವುದು, ಸ್ಟೇಜ್ ಅನ್ನು ಡೆಕೊರೇಟ್ ಮಾಡುವುದು ಇತ್ಯಾದಿ ಕೆಲಸ ಮಾಡಬೇಕಾಯ್ತು.
ಹೌದು ಸ್ನೇಹಿತರೇ, ನಾನು ಹೇಳುತ್ತಿರುವುದು ಇಂದಿನ ರಾಕಿಂಗ್ ಸ್ಟಾರ್ ಯಶ್ ಅವರ ಕಥೇನೇ. ಸ್ನೇಹಿತರೇ ಕೆಲವೊಮ್ಮೆ ನಾವು ಅಂದುಕೊಂಡಿದ್ದನ್ನ ಸಾಧಿಸಲು ಅಡಿಯಿಂದ ಮುಡಿಯವರೆಗೆ ನಮ್ಮಲ್ಲಿರುವ ಎಲ್ಲ ತಾಕತ್ತನ್ನು ಹಾಕಬೇಕಾಗುತ್ತದೆ. ಅದಕ್ಕೂ ಅದೃಷ್ಟ ಬಲವಿದ್ದರೆ ಮಾತ್ರ ಯಶಸ್ಸು ಸಿಗುತ್ತದೆ. ಇಲ್ಲದಿದ್ದರೆ ಕಥೆ ಮತ್ತೆ ಹೊಸದಾಗಿ ಆರಂಭಿಸಬೇಕಾಗುತ್ತದೆ.
ಯಶ್ ಅವರ ಜೀವನದಲ್ಲೂ ಹೀಗೆ ಆಗಿತ್ತು. ಕೆಲವೊಮ್ಮೆ ಹಣದ ಕೊರತೆಯಿಂದಾಗಿ ಎಷ್ಟೋ ರಾತ್ರಿಗಳನ್ನು ಅವರು ಬಸ್ ಸ್ಟ್ಯಾಂಡಿನಲ್ಲೇ ಮಲಗುತ್ತಿದ್ದರು. ಯಾಕೆಂದರೆ ಅವರು ತಮ್ಮ ತಂದೆಗೆ ಪ್ರಮಾಣ ಮಾಡಿ ಬಂದಿದ್ದರು, ತಾನು ಯಾವುದೇ ಕಾರಣಕ್ಕೂ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿಯುವುದಿಲ್ಲವೆಂದು. ಇಷ್ಟೆಲ್ಲಾ ಕಷ್ಟಗಳು ಎದುರಾದರೂ ಯಶ್ ತಮ್ಮ ಹಠ ಮಾತ್ರ ಬಿಡಲಿಲ್ಲ. ನಿಧಾನವಾಗಿ ಅವರು ಫಿಲ್ಮ್ ಇಂಡಸ್ಟ್ರಿಯಲ್ಲಿ ಯಶ್ ಅವರು ತಮ್ಮ ಛಾಪನ್ನು ಮೂಡಿಸಲು ಶುರು ಮಾಡಿದರು. ಅವರಿಗೆ ಅವಕಾಶಗಳು ಬರಲಾರಂಭಿಸಿದವು. ದಿನೇ ದಿನೇ ಅವರ ಅಭಿನಯವು ಪ್ರೌಢತ್ವ ಪಡೆದುಕೊಳ್ಳಲಾರಂಭಿಸಿತು. ಅದೇ ಸಮಯದಲ್ಲಿ ಯಶ್ ಅವರಿಗೆ ‘ನಂದ ಗೋಕುಲ’ ಎಂಬ ಟಿವಿ ಧಾರಾವಾಹಿಯಲ್ಲಿ ನಟಿಸುವ ಆಫರ್ ಬಂತು. ಈ ಧಾರಾವಾಹಿಯಲ್ಲಿ ಯಶ್ ಬರೋಬ್ಬರಿ 3 ವರ್ಷ ಕೆಲಸ ಮಾಡಿದರು. ಇಲ್ಲಿಂದ ಶುರುವಾಯ್ತು ಅವರ ಯಶಸ್ಸಿನ ಪಯಣ.
ಜನ ಅವರನ್ನು ಗುರುತಿಸಲು ಶುರು ಮಾಡಿದರು. ಅವರಿಗೆ ಫಿಲ್ಮ್ಗಳಲ್ಲಿ ನಟಿಸುವ ಅವಕಾಶ ಬರತೊಡಗಿದವು. ‘ಮೊಗ್ಗಿನ ಮನಸು’ ಚಿತ್ರದಲ್ಲಿ ಸಹಾಯಕ ಪಾತ್ರಕ್ಕಾಗಿ ‘ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್’ ಎಂಬ ಫಿಲ್ಮ್ ಫೇರ್ ಅವಾರ್ಡ್ ಒದಗಿ ಬಂದಿತು. ಇಲ್ಲಿಂದ ಅವರ ಜೀವನವೇ ಬದಲಾಯಿತು. ಈ ನಡುವೇ ಅವರು ಲಕ್ಕಿ, ಜಾನು, ಗೂಗ್ಲಿಯಂತಹ ಹಲವು ಹಿಟ್ ಚಿತ್ರಗಳನ್ನು ನೀಡಿದರು. ಯಶ್ ಅವರು ಇಲ್ಲಿಯವರೆಗೆ ನಟಿಸಿರುವ 20 ಚಿತ್ರಗಳಲ್ಲಿ ಅವರಿಗೆ ಅದ್ದೂರಿ ಯಶಸ್ಸು ತಂದುಕೊಟ್ಟಿದ್ದು ಮಾತ್ರ 2018 ರಲ್ಲಿ ಬಿಡುಗಡೆಗೊಂಡ KGF. ಈ ಚಿತ್ರದ ಯಶಸ್ಸಿನಿಂದ ಇಡೀ ಭಾರತೀಯ ಚಿತ್ರರಂಗವೇ ದಂಗಾಗಿ ಬಿಟ್ಟಿತು. ಇನ್ನು ಅದರ ಮುಂದುವರಿದ ಭಾಗವಾಗಿ ಈ ವರ್ಷ ತೆರೆಕಂಡ KGF-2 ದಾಖಲೆಯ ಗಳಿಕೆಯೊಂದಿಗೆ ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಯಿತು.
ತಮ್ಮ ಈ ಯಶಸ್ಸಿಗೆ ತಮ್ಮ ಅಭಿಮಾನಿಗಳೇ ಕಾರಣ ಎಂದು ಅವರು ವಿನಮ್ರವಾಗಿಯೇ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಬಾಲಿವುಡ್ ನಟರಂತೆ ತಮಗೆ ಬೇಕಾದವರಿಗೆ ಮಾತ್ರ ಮದುವೆಗೆ ಆಮಂತ್ರಿಸಲಿಲ್ಲ. ಬದಲಿಗೆ ಇಡೀ ಕರ್ನಾಟಕಕ್ಕೆ ತೆರೆದ ಹೃದಯದಿಂದ ಆಮಂತ್ರಣ ನೀಡಿದರು. ಇನ್ನು ಇವರ ಮದುವೆಗೆ ಬರೋಬ್ಬರಿ 40,000 ಜನ ಸಾಕ್ಷಿಯಾಗಿದ್ದರು. ಕೇವಲ ನೂರೋ ಇನ್ನೂರೋ ಜನರನ್ನ ಸಂಭಾಳಿಸಲು ಕಷ್ಟವಾಗುವ ಇಂದಿನ ಕಾಲದಲ್ಲಿ ಇವರು 40,000 ಜನರನ್ನು ಹೇಗೆ ಸಂಭಾಳಿಸಿರಬೇಕು ನೀವೇ ಯೋಚಿಸಿ. ಇವರ ಮದುವೆಯ ನಂತರದ ಒಂದು ತಿಂಗಳಿನವರೆಗೂ ಇವರಿಗೆ ತಮ್ಮ ಅಭಿಮಾನಿಗಳಿಂದ ಗಿಫ್ಟ್ಗಳು ಹರಿದು ಬರುತ್ತಲೇ ಇದ್ದವು. ಅದು ಅಂದಿನ ಬ್ರೇಕಿಂಗ್ ನ್ಯೂಸ್ಗಳಲ್ಲಿ ಒಂದಾಗಿತ್ತು.
ಇನ್ನು ತಮ್ಮ ಮಗ ಇಷ್ಟೊಂದು ಯಶಸ್ಸು ಸಾಧಿಸಿದ್ದರೂ ನೀವ್ಯಾಕೆ ಬಸ್ ಡ್ರೈವ್ರ ಕೆಲಸ ಮಾಡುತ್ತೀದ್ದೀರಿ ಎಂದು ಕೇಳಿದಾಗ ಅವರ ತಂದೆ ಹೇಳಿದ್ದೇನೆಂದರೆ, ‘ಯಶ್ ಅವನ ಕೆಲಸ ಅವನು ಮಾಡುತ್ತಿದ್ದಾನೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ’. ಯಶ್ ತಂದೆಯವರ ಈ ಮಾತಿಗೆ ಪ್ರಸಿದ್ಧ ನಿರ್ದೇಶಕ ರಾಜಮೌಳಿಯವರು ಫಿದಾ ಆಗಿದ್ದರು.
ಸ್ನೇಹಿತರೇ ಈ ಸಂಗತಿಗಳನ್ನು ಹೇಳುವ ಉದ್ದೇಶವೇನೆಂದರೆ ಇತ್ತೀಚೆಗೆ ಕೆಲವರು ರಾತ್ರೋರಾತ್ರಿ ಪ್ರಸಿದ್ಧಿಯಾಗುತ್ತಿದ್ದಂತೆ ಇತರರನ್ನೂ ಕೀಳಾಗಿ ಕಾಣಲು ಶುರು ಮಾಡುತ್ತಾರೆ. ಆದರೆ ಕೆಲವರು ಎಷ್ಟೇ ಎತ್ತರಕ್ಕೆ ಬೆಳೆದರೂ ಅವರ ಕಾಲು ಮಾತ್ರ ನೆಲದ ಮೇಲಿರುತ್ತವೆ.
ಸ್ನೇಹಿತರೇ ಆದ್ದರಿಂದ ಪರಿಶ್ರಮ ಎಷ್ಟು ಮಾಡಿ ಎಂದರೆ ಜನ ನಿಮ್ಮಿಂದ ಪ್ರೇರಣೆ ಹೊಂದಬೇಕು & ಯಶಸ್ಸು ಸಿಕ್ಕಮೇಲೆ ನಿಮ್ಮ ಕಾಲು ನೆಲದ ಮೇಲಿರಲಿ.
ಈ ಕಾರನ್ನು ಕೊಂಡುಕೊಳ್ಳಲು ಕೇವಲ ಹಣವಿದ್ದರೆ ಸಾಲದು, ಇದನ್ನು ಮೇಂಟೈನ್ ಮಾಡೋಕೆ ದಮ್ ಕೂಡ ಬೇಕು !
ಸ್ನೇಹಿತರೆ ಬ್ರಾಂಡೆಡ್ ಕಾರ್ ಗಳ ಬಗ್ಗೆ ನೀವು ಹಲವು ಬಾರಿ ಕೇಳಿರುತ್ತೀರಿ. ಉದಾಹರಣೆಗೆ ಲ್ಯಾಂಬೋರ್ಗಿನಿ ಫೆರಾರಿ ಇತ್ಯಾದಿ. ಇವುಗಳಲ್ಲಿ ಕೆಲವು ಕಾರುಗಳು ತಮ್ಮ ಲುಕ್ಕುಗಳಿಂದ ಜನಪ್ರಿಯ ಆಗಿದ್ದರೆ ಇನ್ನೂ ಕೆಲವು ಕಾರುಗಳುತಮ್ಮ ಲಕ್ಷರಿ ಇಂದ ಫೇಮಸ್ ಆಗಿವೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಗ್ಯಾರೇಜ್ ನಲ್ಲಿ ಒಂದು ಲಕ್ಸರಿ ಕಾರ್ ಇಟ್ಟು ಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಇವತ್ತಿನ ಈ ಆರ್ಟಿಕಲ್ ನಲ್ಲಿ ನಾನು ನಿಮಗೆ ಅಂತದ್ದೊಂದು ಲಕ್ಷುರಿ ಟಾಪ್ ಬ್ರಾಂಡ್ ಕಾರ್ ಬಗ್ಗೆ ನೀವು ಹಿಂದೆಂದೂ ಕೇಳಿರದ ವಿಷಯಗಳನ್ನು ತಿಳಿಸಿಕೊಡಲಿದ್ದೇನೆ. ಅದಕ್ಕ ಮುಂಚೆ ನೀವಿನ್ನು ನಮ್ಮ ವೆಬ್ ಸೈಟಿಗೆ ಸಬ್ಸ್ಕ್ರೈಬ್ ಆಗದಿದ್ದರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಮತ್ತು ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.
ಸ್ನೇಹಿತರೆ ಒಂದು ವೇಳೆ ನೀವು ದುಬಾರಿ ಕಾರನ್ನು ಖರೀದಿಸಬೇಕೆಂದಿದ್ದರೆ ಮತ್ತು ನಿಮ್ಮ ಬಳಿ ಅಷ್ಟು ಹಣ ಇದ್ದರೆ ನೀವು ನೇರವಾಗಿ ಶೋ ರೂಮ್ಗೆ ಹೋಗಿ ನಿಮ್ಮ ಇಷ್ಟದ ಕಾರನ್ನು ಖರೀದಿಸಬಹುದು. ಆದರೆ ಇದೊಂದು ಕಾರನ್ನ ಮಾತ್ರ ನಿಮ್ಮ ಬಳಿ ಎಷ್ಟೇ ಹಣವಿದ್ದರೂ ನೀವು ಕೊಂಡುಕೊಳ್ಳಲು ಸಾಧ್ಯವಿಲ್ಲ. ಹೌದು ಸ್ನೇಹಿತರೆ ಆ ಕಾರಿನ ಹೆಸರು ರೋಲ್ಸ್ ರಾಯ್ಸ್ ಅಂತ. ಒಂದು ವೇಳೆ ನೀವು ಈ ಕಾರನ್ನ ಕೊಂಡುಕೊಳ್ಳಲೇ ಬೇಕು ಎಂದು ಬಯಸಿದರೆ ನೀವು ಈ ಕಂಪನಿಯ ಯಾವ ಯಾವ ಷರತುಗಳನ್ನು ಪೂರೈಸಬೇಕು ಎಂಬುದನ್ನ ಪೂರ್ತಿ ಈ ಆರ್ಟಿಕಲ್ ಓದಿದ ಮೇಲೆ ಗೊತ್ತಾಗುತ್ತದೆ. ಹಾಗಾದ್ರೆ ಬನ್ನಿ ಸ್ನೇಹಿತರೆ ಆರ್ಟಿಕಲ್ ಶುರು ಮಾಡೋಣ.
ಸ್ನೇಹಿತರೆ ಈ ಕಾರಿನ ಕುರಿತಂತೆ ನೀವು ಅನೇಕ ಬಾರಿ ಕೇಳಿರುತ್ತೀರಿ ಮತ್ತು ವಿಡಿಯೋಗಳನ್ನು ನೋಡಿರುತ್ತೀರಿ. ಈ ಕಾರನ್ನು ಖರೀದಿಸುವ ಮುನ್ನ ನಿಮ್ಮ ಹಿನ್ನೆಲೆಯನ್ನು ಚೆಕ್ ಮಾಡಲಾಗುತ್ತದೆ ಏಕೆಂದರೆ ರೋಲ್ಸ್ ರಾಯ್ಸ್ ಕಂಪನಿಯು ತನ್ನ ಪ್ರತಿಸ್ಟಿಗೆ ಹೆಚ್ಚು ಮಹತ್ವ ಕೊಡುತ್ತದೆ ಆದ್ದರಿಂದ ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಎಷ್ಟೇ ಶ್ರೀಮಂತರಾದರು ಅವರಿಗೆ ಈ ಕಾರು ಕೊಂಡುಕೊಳ್ಳಲು ಕಂಪನಿಯು ಅವಕಾಶ ಮಾಡಿ ಕೊಡುವುದಿಲ್ಲ. ನೀವು ಈ ಕಾರನ್ನು ಕೊಂಡುಕೊಳ್ಳಬೇಕು ಎಂದಿದ್ರೆ ನೀವು ರಾಜಮನೆತನಕ್ಕೆ ಸೇರಿರಬೇಕು ಮತ್ತು ನೀವು ಇತ್ತೀಚಿಗೆ ಶ್ರೀಮಂತರಾಗಿದ್ದರೆ ಈ ಕಾರಣ ನೀವು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬಂತಹ ವಿಷಯಗಳನ್ನು ನೀವು ಅಲ್ಲಲ್ಲಿ ಕೇಳಿರಬಹುದು. ಆದರೆ ಇದು ಕೇವಲ ಊಹಾಪೋಹ ಅಷ್ಟೇ. ಇದು ಸತ್ಯವಲ್ಲ.. ಏಕೆಂದರೆ ನೀವು ಕೂಡ ರೋಲ್ ರಾಯ್ಸ್ ಕಾರನ್ನು ಖರೀದಿಸಬಹುದು, ಆದರೆ ಅದಕ್ಕೆ ಮುಂಚೆ ನೀವು ಆ ಕಂಪನಿಯು ವಿಧಿಸುವ ಶರತ್ತುಗಳಿಗೆ ಬದ್ಧರಾಗಿರಬೇಕಾಗುತ್ತದೆ ಅಷ್ಟೇ.
ಉದಾಹರಣೆಗೆ ನೀವು ಕಾರಿನ ಆಗಿಲ್ಲ ಬದಲಿಸಬೇಕಾದರೆ ಕಂಪನಿಯ ಗ್ಯಾರೇಜ್ ಗಳಿಗೆ ಬಂದು ಬದಲಿಸಬೇಕಾಗುತ್ತದೆ. ಸ್ನೇಹಿತರೆ ನಿಮಗೆ ಗೊತ್ತಿರಲಿ ಈ ಕಾರಿನ ಆಯಿಲ್ ನ ಬೆಲೆಯೇ 52 ಸಾವಿರ ರೂಪಾಯಿ ಮತ್ತು ನೀವು ಗಾಡಿಯ ಸರ್ವಿಸ್ ಅನ್ನು ಕೂಡ ಕಂಪನಿ ಬಳಿಯೇ ಮಾಡಿಸಬೇಕಾಗುತ್ತದೆ ಮತ್ತು ಇದರ ಒಂದು ಸರ್ವಿಸ್ ನ ಖರ್ಚು ಸುಮಾರು 4 ಲಕ್ಷ ರೂಪಾಯಿ ಆಗುತ್ತದೆ. ಇನ್ನು ವಿಚಿತ್ರ ಸಂಗತಿ ಏನೆಂದರೆ ನೀವು ಈ ಕಾರನ್ನ ಕೊಂಡುಕೊಳ್ಳಲು ಕಂಪನಿಗೆ ಹೋದರೆ ಕಂಪನಿಯವರು ನಿಮಗೆ ಈ ಕಾರಿನ 45,000 ಬಣ್ಣಗಳನ್ನು ತೋರಿಸುತ್ತಾರೆ ಅದರಲ್ಲಿಯೂ ನಿಮಗೆ ಯಾವ ಬಣ್ಣವೂ ಇಷ್ಟವಾಗದೆ ಇದ್ದರೆ ನೀವು ಹೇಳಿದ ಕಲರ್ ನ ಕಾರನ್ನ ತಯಾರಿಸಿ ಕೊಡಲಾಗುತ್ತದೆ. ವಿಸ್ಮಯ ಏನು ಗೊತ್ತಾ? ಈ ಕಾರಿಗೆ ಹೊಳಪು ನೀಡಲು ಹಚ್ಚಲಾಗುವ ಬಣ್ಣವೇ 40ರಿಂದ 45 ಕಿಲೋ ಆಗುತ್ತದೆ.
ಈ ಕಾರಿನ ಮತ್ತೊಂದು ವಿಶೇಷ ಏನೆಂದರೆ ಅದರ ಒಳಭಾಗದ ಡಿಸೈನ್. ಒಂದು ವೇಳೆ ನಿಮಗೆ ಕಾರಿನ ಒಳಗಡೆ ನಿಮಗೆ ಇಷ್ಟವಾದ ವಸ್ತುವನ್ನು ಕೂಡಿಸಬೇಕೆಂದು ಕೊಂಡಿದ್ದರೆ ಅಥವಾ ಡೆಕೋರೇಟಿವ್ ಅನ್ನ ಅಳವಡಿಸಬೇಕೆಂದಿದ್ದರೆ ಸ್ವತಹ ಕಂಪನಿಯೇ ನಿಮಗೆ ಅದನ್ನು ಅಳವಡಿಸಿ ಕೊಡುತ್ತದೆ. ಉದಾಹರಣೆಗೆ ನಿಮಗೆ ರೋಲ್ಸ್ ರೈಸ್ ನಲ್ಲಿ ಹೆಚ್ಚಿನ ಆಸನಗಳು ಬೇಕೆಂದಿದ್ದರೆ ಅಥವಾ ಕಾರಿನ ಒಳಗಡೆ ಬೆಡ್ರೂಮ್ ಬೇಕೆಂದಿದ್ದರೆ ಅಥವಾ ಟಾಯ್ಲೆಟ್ ವ್ಯವಸ್ಥೆ ಬೇಕೆಂದಿದ್ದರೆ ಸ್ವತಹ ಕಂಪನಿಯೇ ಅದನ್ನ ಅಳವಡಿಸಿ ಕೊಡುತ್ತದೆ. ಈ ಕಾರಿನ ಸೀಟ್ಗಳ ಲೆದರನ್ನು ಯುರೋಪಿನ ಕಾಡು ಮೃಗಗಳ ಚರ್ಮಗಳಿಂದ ತಯಾರಿಸಲಾಗುತ್ತದೆ. ಹೀಗೆ ಒಂದು ಕಾರಿಗೆ ಸುಮಾರು ಎಂಟು ಕಾಡುಮೃಗಗಳಿಂದ ಚರ್ಮವನ್ನು ಬಳಸಲಾಗಿರುತ್ತದೆ.
ಸ್ನೇಹಿತರೆ ಕಾರಿನ ಮೇಲಿನ ಬಣ್ಣದ ಪಟ್ಟಿಗಳ ಡಿಸೈನ್ ಅನ್ನು ಪ್ರಪಂಚದಲ್ಲಿಯೇ ಕೇವಲ ವರ್ಕ್ ಕೋರ್ಟ್ ಎನ್ನುವ ವ್ಯಕ್ತಿ ಒಬ್ಬರೇ ನಿರ್ಮಿಸುತ್ತಾರೆ. ಉಳಿದ ಕಂಪನಿಗಳ ಹಾಗೆ ರೋಲ್ಸ್ ರೈಸ್ ಕಂಪನಿಯು ತನ್ನ ಕಾರು ತಯಾರಿಕೆ ಕೆಲಸವನ್ನು ರೋಬೋಟ್ ಗಳಿಂದ ಮಾಡಿಸುವುದಿಲ್ಲ ಬದಲಿಗೆ ಅದನ್ನು ವಿಶೇಷ ತಜ್ಞರಿಂದ ಮತ್ತು ಎಕ್ಸ್ಪರ್ಟ್ಗಳಿಂದ ತಯಾರಿಸಲಾಗುತ್ತದೆ. ಭಾರಿ ಗಾತ್ರದ ಇಂಜಿನ್ ಅನ್ನು ಮಾತ್ರ ಯಂತ್ರಗಳಿಂದ ತಯಾರಿಸಲಾಗುತ್ತದೆ ಹೊರತು ಉಳಿದೆಲ್ಲ ಭಾಗಗಳನ್ನು ಬಹುತೇಕ ಎಕ್ಸ್ಪರ್ಟ್ ಗಳೇ ತಮ್ಮ ಕೈಯಾರೆ ನಿರ್ಮಿಸುತ್ತಾರೆ ಹಾಗಾಗಿ ಒಂದು ರೋಲ್ಸ್ ರಾಯ್ಸ್ ಕಾರು ನಿರ್ಮಾಣ ಆಗಲು ಐದರಿಂದ ಆರು ತಿಂಗಳುಗಳ ಕಾಲ ಸಮಯ ಬೇಕಾಗುತ್ತದೆ. ಅದೇ ರೋಬೋಟ್ ಗಳಿಂದ ಕಾರನ್ನು ತಯಾರಿಸಲು ಕೇವಲ ಎರಡು ದಿನ ಸಾಕು.
ಸ್ನೇಹಿತರೆ ಹಾಗಾದರೆ ಈ ಕಾರಿನ ಬೆಲೆ ಎಷ್ಟು ಇರಬಹುದು ಅಂತ ನಿಮ್ಮಲ್ಲಿ ಕುತೂಹಲ ಮೂಡಿರಬಹುದು ಈ ಕಾರಿನ ಬೆಲೆ ಬರೋಬ್ಬರಿ 12 ಕೋಟಿ ರೂಪಾಯಿ.
ಒಟ್ಟಾರೆಯಾಗಿ ಹೇಳಬೇಕಾದರೆ ಈ ಕಂಪನಿಯು ತನ್ನ ಇಮೇಜ್ ಗೆ ಮತ್ತು ಪ್ರೆಸ್ಟೀಜ್ ಗೆ ಹೆಚ್ಚು ಮಹತ್ವ ಕೊಡುತ್ತದೆ ಆದ್ದರಿಂದ ಕಸ್ಟಮರ್ ಗಳಿಗೆ ಸಂತೃಪ್ತಿಯನ್ನು ಒದಗಿಸುವಲ್ಲಿ ಉಳಿದೆಲ್ಲ ಕಂಪನಿಗಳಿಗಿಂತ ಹೆಚ್ಚಿನ ಕಾಳಜಿಯನ್ನು ವಹಿಸುತ್ತದೆ.
ಸ್ನೇಹಿತರೆ ಇದಾಗಿತ್ತು ಇವತ್ತಿನ ವಿಶೇಷ. ಮತ್ತೊಂದು ವಿಶೇಷ ಆರ್ಟಿಕಲ್ ನೊಂದಿಗೆ ನಾನು ನಿಮ್ಮ ಮುಂದೆ ಬರುತ್ತೇನೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ.
ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ…. ಇಂತಹ ಹೆಚ್ಚಿನ ಆರ್ಟಿಕಲ್ಗಳಿಗಾಗಿ ನೋಟಿಫಿಕೇಶನ್ಗಳನ್ನು ಆನ್ ಮಾಡಿಕೊಳ್ಳಿ..