WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೇ ಏಕದಿನ ವಿಶ್ವಕಪ್ 2023 ರ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಮಣಿಸಿ ಬರೋಬ್ಬರಿ 12 ವರ್ಷಗಳ ಬಳಿಕ ಫೈನಲ್ ಗೆ ಲಗ್ಗೆ ಇಟ್ಟಿದೆ. ಆ ಮೂಲಕ ವಿಶ್ವಕಪ್ ನಲ್ಲಿ ಆಡಿದ 10 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯಾ ನಂತರ ಇಂಥದ್ದೊಂದು ದಾಖಲೆ ಮಾಡಿದ ಎರಡನೆಯ ತಂಡವಾಗಿ ಭಾರತ ಹೊರ ಹೊಮ್ಮಿತು. ಈ ಸೆಮಿಫೈನಲ್ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಹಾಗಾದರೆ ಯಾವುವು ಆ ದಾಖಲೆಗಳು ಮತ್ತು ಇದರಲ್ಲಿ ಭಾರತದ ದಾಖಲೆಗಳೇಷ್ಟು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

2023 ರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಬರೋಬ್ಬರಿ 398 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು. ಭಾರತ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ವಿಶ್ವಕಪ್ ನ 50 ನೇ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡರು. ಈ ಮುಂಚೆ ಕೊಹ್ಲಿ ಈ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಜೊತೆಗೆ 49 ಶತಕ ಸಿಡಿಸುವ ಮೂಲಕ ಹಂಚಿಕೊಂಡಿದ್ದರು. ಇನ್ನು ಭಾರತದ ಮತ್ತೋರ್ವ ಮಾಧ್ಯಮ ಕ್ರಮಾಂಕದ ಬ್ಯಾಟಿಂಗ್ ದೈತ್ಯ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ಕೇವಲ 70 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸತತ ಎರಡು ಶತಕ ಸಿಡಿಸಿದ ಮತ್ತು ಅದೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಪ್ರಥಮ ಆಟಗಾರ ಎನಿಸಿಕೊಂಡರು.

ಇನ್ನು ಬೌಲಿಂಗ್ ವಿಭಾಗದಲ್ಲಿ ಧೂಳೆಬ್ಬಿಸಿದ ಮೊಹಮದ್ ಶಮಿ ಬರೋಬ್ಬರಿ 7 ವಿಕೆಟ್ ಕಿತ್ತು ಏಕದಿನ ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಮತ್ತು ಭಾರತದ ಪ್ರಥಮ ಆಟಗಾರ ಎನಿಸಿಕೊಂಡರು. ಈ ಪಂದ್ಯಕ್ಕೂ ಮುನ್ನ ಅವರು ಈ ವಿಶ್ವಕಪ್ ನಲ್ಲಿ 16 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ 7 ವಿಕೆಟ್ ಪಡೆಯುವ ಮೂಲಕ ಒಟ್ಟು 23 ವಿಕೆಟ್ ಪಡೆಯುವ ಮೂಲಕ ಈ ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು.ಇನ್ನೂ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ ತಮ್ಮ ಶತಕದ ಮೂಲಕ ಈ ವಿಶ್ವಕಪ್ ನಲ್ಲಿ ಒಟ್ಟು 711 ರನ್ ಗಳಿಸುವ ಮೂಲಕ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಯಾವುದೇ ಆಟಗಾರ ಗಳಿಸಿದ ಅತಿ ಹೆಚ್ಚು ರನ್ ಎಂಬ ದಾಖಲೆಗೆ ಪಾತ್ರರಾದರು.

ಇನ್ನೂ ಭಾರತ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡದ ಪರವಾಗಿ ಡೆರಿಲ್ ಮಿಚೆಲ್ ಸತತ ಎರಡನೇ ಬಾರಿ ಭಾರತದ ವಿರುಧ್ದ ಶತಕ ಸಿಡಿಸುವ ಮೂಲಕ ಈ ವಿಶ್ವಕಪ್ ನಲ್ಲಿ ಭಾರತ ತಂಡದ ವಿರುದ್ಧ ಯಾರು ಮಾಡದ ಈ ಸಾಧನೆಯನ್ನು ಅವರು ಮಾಡಿದರು. ಈ ಗೆಲುವಿನ ಮೂಲಕ ಭಾರತ ತಂಡವು 2019 ರ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಇದೇ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೋಲಿಗೆ ಸೇಡು ತೀರಿಸಿಕೊಂಡ ದಾಖಲೆಯನ್ನು ಮಾಡಿತು.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನೀವು ನಮ್ಮ ವೆಬ್ಸೈಟ್ ಗೆ ಹೊಸಬರಾಗಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ಗಳನ್ನು ‘allow ‘ ಮಾಡಿಕೊಳ್ಳಿ. ಹಾಗೆ ಈ ಆರ್ಟಿಕಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

By

Leave a Reply

Your email address will not be published. Required fields are marked *