ಕೃಷಿ ಯಾಂತ್ರೀಕರಣ ಯೋಜನೆಯಡಿ ಉಳುಮೆಯಿಂದ ಹಿಡಿದು ಬೆಳೆ ಕಟಾವುವರೆಗೆ ರೈತರಿಗೆ ಶೇ. 90 ರಷ್ಟು ಸಬ್ಸಿಡಿಯಲ್ಲಿ ವಿವಿಧ ಯಂತ್ರೋಪಕರಣಗಳು ಸಿಗುತ್ತವೆ. ಹಾಗಾದರೆ ಯಾವ ಯಾವ ಯಂತ್ರೋಪಕರಣಗಳು ಸಿಗುತ್ತವೆ? ಅರ್ಜಿ ಎಲ್ಲಿ ಸಲ್ಲಿಸಬೇಕು? ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿ ಸಿಗುತ್ತದೆ.
Thank you for reading this post, don't forget to subscribe!ಈ ಯೋಜನೆಯ ಸೌಲಭ್ಯ ಪಡೆಯಲು ಬೇಕಾಗುವ ಅರ್ಹತೆಗಳು
ರಾಜ್ಯದ ಎಲ್ಲಾ ತಾಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು. ಈ ಯೋಜನೆಯು ವೈಯಕ್ತಿಕ ರೈತರು, ಜಂಟಿ ಕೃಷಿ ಗುಂಪುಗಳು ಮತ್ತು ನೋಂದಾಯಿತ ರೈತ ಸಹಕಾರ ಸಂಘಗಳಿಗೆ ಲಭ್ಯವಿದೆ.
ರೈತರು ಕನಿಷ್ಟ 1 ಎಕರೆ ಅಥವಾ ಅದಕ್ಕಿಂತ ಭೂಮಿ ಹೊಂದಿರಬೇಕು. ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು. ರೈತರ ಹೆಸರಿನಲ್ಲಿ ಜಮೀನು ಇರಬೇಕು, ಹಾಗೂ ರೈತರ ಗುರುತಿನ ಸಂಖ್ಯೆ (ಎಫ್ಐಡಿ) ಪಡೆದಿರಬೇಕು. ಫಲಾನುಭವಿ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು.
ಮಿನಿ ಟ್ರ್ಯಾಕ್ಟರ್ ಖರೀದಿಗೆ ಶೇ. 90 ರಷ್ಟು ಸಬ್ಸಿಡಿ
ಮಿನಿ ಟ್ರ್ಯಾಕ್ಟರ್ – ಮಿನಿ ಟ್ರ್ಯಾಕ್ಟರ್ ಖರೀದಿಗೆ ಎಸ್.ಸಿ, ಎಸ್.ಟಿ ಜನರಿಗೆ 3 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ದೊರೆಯಲಿದೆ. ಸಾಮಾನ್ಯ ವರ್ಗದವರಿಗೆ 75 ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು.
ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರು ಶೇ. 90 ರಷ್ಟು ಸಹಾಯಧನ ಪಡೆಯಲು ಸಾಧ್ಯವಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಸ್ಟ ಪಂಗಡದವರಿಗ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಯಂತ್ರೋಪಕರಣಗಳನ್ನು ನೀಡಲಾಗುವುದು. ಮಿನಿ ಟ್ರ್ಯಾಕ್ಟರ್ , ಪವರ್ ಟಿಲ್ಲರ್, ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಫ್ಲೋ, ರೋಟೋವೇಟರ್, ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುವುದು.
ಕೃಷಿ ಯಂತ್ರೋಪಕರಣ ಯೋಜನೆಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳು
ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ ಪವರ್ ಟಿಲ್ಲರ್, ಭೂಮಿ ಉಳುಮೆ, ಬಿತ್ತನೆ ಮತ್ತು ಅಂತರ ಬೇಸಾಯಕ್ಕೆ ಕೃಷಿ ಯಂತ್ರೋಪಕರಣಗಳು, ಸಣ್ಣ ಟ್ರ್ಯಾಕ್ಟರ್ ( 25 ಹೆಚ್. ಪಿ ಯವರಿಗೆ) ಡೀಸೆಲ್ ಪಂಪ್ ಸೆಟ್ ಗಳು , ಟ್ರ್ಯಾಕ್ಟರ್ ಟಿಲ್ಲರ್, ಎಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು ಹಾಗೂ ಕೃಷಿ ಸಂಸ್ಕರಣೆಗೆ ಉಪಯುಕ್ತವಾಗುವ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ.
ಯಾರು ಯಾರಿಗೆ ಯಂತ್ರೋಪಕರಣಗಳಿಗೆ ಸಬ್ಸಿಡಿ ಸಿಗಲಿದೆ?
ಸಾಮಾನ್ಯ ರೈತರಿಗೆ ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದ ರೈತರಿಗೆ ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು.
ಯಾವ ಯಂತ್ರೋಪಕರಣಕ್ಕೆ ಎಷ್ಟು ಸಹಾಯಧನ ನೀಡಲಾಗುವುದು?
ಮಿನಿ ಟ್ರ್ಯಾಕ್ಟರ್ – ಮಿನಿ ಟ್ರ್ಯಾಕ್ಟರ್ ಖರೀದಿಗೆ ಎಸ್.ಸಿ, ಎಸ್.ಟಿ ಜನರಿಗೆ 3 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ದೊರೆಯಲಿದೆ. ಸಾಮಾನ್ಯ ವರ್ಗದವರಿಗೆ 75 ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರೈತರು ಈ
https://raitamitra.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ರೈತರಿಗೆ ಎಲ್ಲಾ ಮಾಹಿತಿಗಳುಗಳು ಸಿಗುತ್ತವೆ ಪವರ್ ಟಿಲ್ಲರ್ – ಖರೀದಿಗೆ ಸಾಮಾನ್ಯ ವರ್ಗದವರಿಗೆ ಶೇ. 50 ರವರೆಗೆ ಅಂದರೆ 72500 ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಅದೇ ರೀತಿ ಶೇ. ಎಸ್.ಸಿ, ಎಸ್.ಟಿ ಜನರಿಗೆ ಶೇ. 90 ರವರೆಗೆ ಅಂದರೆ 1 ಲಕ್ಷ ರೂಪಾಯಿಯವರೆಗೆ ಸಬ್ಸಡಿ ನೀಡಲಾಗುವುದು.
ಎಂ.ಬಿ ಪ್ಲೋ ಗೆ ಎಷ್ಟು ಸಬ್ಸಿಡಿ ಹಣ ನೀಡಲಾಗುವುದು?
ಸಾಮಾನ್ಯ ವರ್ಗದವರಿಗೆ 14000 ರೂಪಾಯಿಯವರೆಗೆ ರಿವರ್ಸಿಬಲ್ ಎಂ.ಬಿ. ಪ್ಲೋ ಗೆ 25000 ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವದು. ಅದೇ ರೀತಿ ಎಸ್.ಸಿ, ಎಸ್.ಟಿಯವರೆಗೆ 51 ಸಾವಿರ ರೂಪಾಯಿ ಸಬ್ಸಿಡಿ ನೀಡಲಾಗುವುದು.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode