ಸ್ನೇಹಿತರೇ ಪ್ರಪಂಚದಲ್ಲಿ 7 ಅದ್ಭುತಗಳು ಇರುವುದು ನಮಗೆಲ್ಲ ಗೊತ್ತಿದೆ.ಆದರೆ ಪ್ರಸ್ತುತ ಅದರ ಸಂಖ್ಯೆ 8 ಕ್ಕೆ ಏರಿದೆ. ಹೌದು ಸ್ನೇಹಿತರೆ, ವಿಶ್ವ ಸಂಸ್ಥೆಯ ಸಾಂಸ್ಕೃತಿಕ ಅಂಗವಾದ ಯುನೆಸ್ಕೋ ಕಾಂಬೋಡಿಯ ದೇಶದಲ್ಲಿರುವ ಹಿಂದೂ ದೇವಾಲಯವಾದ ಅಂಗಕೊರ್ ವಾಟ್ ದೇವಾಲಯವನ್ನು ಜಗತ್ತಿನ 8ನೇ ಅದ್ಭುತ ಎಂದು ಘೋಷಿಸಿದೆ. ಹಾಗದರೆ ಏನು ಈ ದೇವಾಲಯದ ವಿಶೇಷತೆ? ಯಾರು ಇದನ್ನು ಕಟ್ಟಿಸಿದವರು? ಮುಂತಾದ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ ಬನ್ನಿ..
Thank you for reading this post, don't forget to subscribe!ಪ್ರಸ್ತುತ ಅಂಗಕೋರ್ ವಾಟ್ ದೇವಾಲಯವು ಕಾಂಬೋಡಿಯ ದೇಶದ ದಟ್ಟ ಕಾಡಿನ ನಡುವೆ ಇದೆ.ಇದನ್ನು ಖ್ಮೇರ್ ರಾಜವಂಶದ ರಾಜನಾದ ಸೂರ್ಯವರ್ಮನ್ 2 ಇದನ್ನು ಕಟ್ಟಿಸಿದನೆಂದು ಇತಿಹಾಸ ಹೇಳುತ್ತದೆ. ಈ ಸೂರ್ಯವರ್ಮನಿಗೂ ಭಾರತದ ಚೋಳ ಸಾಮ್ರಾಜ್ಯಕ್ಕೂ ನಿಕಟವಾದ ಸಂಬಂಧವಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಈ ದೇವಾಲಯದ ವಿಷೇಶ ಏನೆಂದರೆ, ಇದು ಪ್ರಪಂಚದಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಈ ಕುರಿತಂತೆ ನಾವು ನಮ್ಮ ಹಿಂದಿನ ಆರ್ಟಿಕಲ್ ನಲ್ಲಿ ಇದರ ಬಗ್ಗೆ ತಿಳಿಸಿದ್ದೇವೆ. ಈ ದೇವಾಲಯವು ಬರೋಬ್ಬರಿ 500 ಎಕರೆಯಲ್ಲಿ ಹರಡಿಕೊಂಡಿದೆ. ಈ ದೇವಾಲಯದ ಸುತ್ತಲೂ 4 ಕಮಲ ಹೂವಿನಂತೆ ಕಾಣುವ ತೊರಣಗಳಿವೆ. ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಕಾಲಾಂತರದಲ್ಲಿ ಇದು ಬೌದ್ಧರ ದೇವಾಲಯವಾಗಿಯೂ ಮಾರ್ಪಡಾಗಿತ್ತು ಎಂದು ಹೇಳಲಾಗುತ್ತದೆ. ದೇವಾಲಯದ ತುಂಬಾ ಸೂಕ್ಷ್ಮ ಕೆತ್ತನೆಗಳಿದ್ದು, ಆ ಕಾಲದ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.