ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತ ಮಿತ್ರರೇ, ಕರ್ನಾಟಕಕ್ಕೆ ಈಗಾಗಲೇ ಈ ಸಾಲಿನ ಮುಂಗಾರು ಮಳೆ ಪ್ರವೇಶವಾಗಿದ್ದು, ಇದೀಗ ಎಲ್ಲೆಡೆ ವರುಣನ ಆರ್ಭಟ ಹೆಚ್ಚಾಗಿದೆ. ಒಂದು ಕಡೆ ಈ ವರುಣ ರೈತರ ಮುಖದಲ್ಲಿ ಮಂದಹಾಸ ಉಂಟು ಮಾಡುತ್ತಿದ್ದರೆ, ಇನ್ನೊಂದು ಕಡೆ ಭಾರತೀಯ ಹವಾಮಾನ ಇಲಾಖೆ ಭಾರಿ ಎಚ್ಚರಿಕೆ ನೀಡಿದೆ.
Thank you for reading this post, don't forget to subscribe!ಹೌದು ರೈತ ಮಿತ್ರರೇ, ಈಗಾಗಲೇ ಜೂನ್ 1 ರಿಂದ ಇಲ್ಲಿಯವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಇದೇ ರೀತಿಯ ವಾತಾವರಣ ಮುಂದುವರೆದರೆ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯ ವಾತಾವರಣ ನಿರ್ಮಾಣವಾಗಲಿದೆ.