Categories: Motivation

ಚಾಣಕ್ಯ ನೀತಿ: ಅಪ್ಪಿ ತಪ್ಪಿಯೂ ಯಾರ ಮುಂದೆ ಹೇಳಬಾರದ 6 ವಿಷಯಗಳು!

Spread the love

ಆತ್ಮೀಯ ಓದುಗರೇ, ನಾವು ಎಂತಹ ಜನರೊಂದಿಗೆ ಸ್ನೇಹ ಮಾಡಬೇಕು ಮತ್ತು ಶತ್ರುಗಳೊಂದಿಗೆ ಹೇಗೆ ವರ್ತಿಸಬೇಕು ಮತ್ತು ಅವರನ್ನು ಹೇಗೆ ಹತೋಟಿಯಲ್ಲಿ ಇಡಬೇಕು ಎಂಬ ಚಾಣಕ್ಯ ನೀತಿಗಳ ಬಗ್ಗೆ ಈಗಾಗಲೇ ನಮ್ಮ ವೆಬ್ಸೈಟ್ ನ ಮುಂಚಿನ ಆರ್ಟಿಕಲ್ ಗಳಲ್ಲಿ ವಿವರವಾಗಿ ಬರೆದಿದ್ದೇವೆ. ಇವತ್ತಿನ ಈ ಆರ್ಟಿಕಲ್ ನಲ್ಲಿ ಆಚಾರ್ಯ ಚಾಣಕ್ಯರು ಹೇಳಿರುವ ನಾವು ನಮ್ಮ ಜೀವಮಾನದಲ್ಲಿ ಯಾರಿಗೂ ಹೇಳಬಾರದ 6 ಸಂಗತಿಗಳು ಯಾವುವು ಮತ್ತು ಒಂದು ವೇಳೆ ಯಾರಿಗಾದರೂ ನಾವು ಇವುಗಳನ್ನು ಹೇಳಿದರೆ ಅದರಿಂದ ನಮಗಾಗುವ ನಷ್ಟಗಳು ಏನು ಎಂಬುದನ್ನು ನೋಡೋಣ ಬನ್ನಿ…

Thank you for reading this post, don't forget to subscribe!

1.ನಿಮ್ಮ ಪ್ಲಾನ್ ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ :
ಹೌದು ಸ್ನೇಹಿತರೇ, ನೀವು ಯಾವುದಾದರೊಂದು ಹೊಸ ಕೆಲಸವನ್ನು ಮಾಡಬೇಕೆಂದು ಅಂದುಕೊಂಡಿದ್ದರೆ ಅದನ್ನು ಯಾರ ಮುಂದೆಯೂ ಹೇಳಬೇಡಿ. ಏಕೆಂದರೆ ಇಂದಿನ ಕಾಲದಲ್ಲಿ ಯಾರೊಂದಿಗಾದರೂ ನೀವು ನಿಮ್ಮ ಪ್ಲಾನ್ ಗಳನ್ನು ಹಂಚಿಕೊಂಡರೆ ಅದಕ್ಕೆ ಅವರು ನಿಮಗೆ ಪ್ರೋತ್ಸಾಹ ಮಾಡುವ ಬದಲು ನಿಮ್ಮನ್ನು ಹಿಂದಕ್ಕೆಳೆಯಲು ಆಲೋಚಿಸುತ್ತಾರೆ ಅಥವಾ ನಿಮ್ಮನ್ನು ನಗೆ-ಪಾಟಲಿಗೆ ಇಡು ಮಾಡುತ್ತಾರೆ. ಅಷ್ಟೇ ಅಲ್ಲದೇ ನಿಮ್ಮನ್ನ ನಿಮ್ಮ ಪ್ಲಾನ್ ಗಳಿಂದ ಹಿಮ್ಮುಖರಾಗುವಂತೆ ಮಾಡಲು ಯತ್ನಿಸುತ್ತಾರೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಪ್ಲಾನ್ ಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಹೋಗಬೇಡಿ.

2. ನಿಮ್ಮ ದೌರ್ಬಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ :
ಸ್ನೇಹಿತರೇ ಇದು ನಮ್ಮಲ್ಲಿ ಹಲವರ ಸಮಸ್ಯೆಗಳು ಆಗಿದೆ. ನಾವು ಜನರನ್ನು ಸುಲಭವಾಗಿ ನಂಬುತ್ತೇವೆ ಮತ್ತು ನಮ್ಮ ಎಲ್ಲಾ ಬಲ-ಹೀನತೆಗಳನ್ನು ಅವರ ಮುಂದೆ ಹೇಳುತ್ತೇವೆ. ಆಚಾರ್ಯ ಚಾಣಕ್ಯರು ಇದರ ಕುರಿತಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಮೋಸ, ವಂಚನೆ, ದ್ರೋಹಗಳು ಇಂದಿನ ಕಾಲದಲ್ಲಿ ಬಹಳ ಸರ್ವೇ ಸಾಮಾನ್ಯವಾಗಿದ್ದು, ಜನ ನಿಮ್ಮ ದುರ್ಬಲತೆಯನ್ನೇ ನಿಮ್ಮ ವಿರುದ್ಧ ಅಷ್ಟ್ರವನ್ನಾಗಿ ಬಳಸುತ್ತಾರೆ. ಅಂದರೆ ನೀವು ಅವರು ಹೇಳಿದ ಹಾಗೆ ಕೇಳುತ್ತಿದ್ದರೆ ನೀವು ಅವರ ಪಾಲಿಗೆ ಒಳ್ಳೆಯ ಸ್ನೇಹಿತ ಅಥವಾ ಸ್ನೇಹಿತೆ ಆಗಿರುತ್ತೀರಿ. ಒಂದು ವೇಳೆ ನಿಮ್ಮ ನಡುವೆ ಮನಸ್ತಾಪ ಉಂಟಾಗಿ ಜಗಳವಾದಾಗ ನೀವು ನಿಮ್ಮ ಬೆಸ್ಟ್ ಫ್ರೆಂಡ್ ಎಂದು ನಂಬಿದ್ದವರೇ ನಿಮ್ಮ ದೌರ್ಬಲ್ಯಗಳನ್ನು ಬಳಸಿಕೊಂಡು ನಿಮ್ಮನ್ನ ಪೇಚಿಗೆ ಸಿಲುಕಿಸುತ್ತಾರೆ. ಹಾಗಾಗಿ ಎಂದಿಗೂ ಯಾರೊಂದಿಗೂ ನಿಮ್ಮ ವೀಕ್ನೆಸ್ಸ್ ಗಳನ್ನು ಹೇಳಬೇಡಿ.

3. ನಿಮ್ಮ ವಿಫಲತೆಗಳನ್ನು (ಫೇಲ್ಯೂರ್ ) ಯಾರೊಂದಿಗೂ ಹಂಚಿಕೊಳ್ಳಲು ಹೋಗಬೇಡಿ :
ಆತ್ಮೀಯ ಓದುಗರೇ ಎಷ್ಟೋ ಸಲ ನಾವು ಮಾಡುವ ಅತಿದೊಡ್ಡ ಮೂರ್ಖತನದ ಕೆಲಸವೆಂದರೆ ನಮ್ಮ ಸೋಲುಗಳನ್ನು ಮತ್ತೊಬ್ಬರಿಗೆ ಹೇಳುವುದು. ಹೀಗೆ ಮಾಡುವುದರಿಂದ ನಮ್ಮ ಮನಸಿಗೆ ಆ ಸಂದರ್ಭದಲ್ಲಿ ನೆಮ್ಮದಿ ಸಿಕ್ಕಿರಬಹುದು ಅಥವಾ ಎದುರಿಗಿದ್ದವರಿಂದ ಅನುಕಂಪ ಪಡೆದುಕೊಂಡಿರಬಹುದು. ಆದರೆ ನೆನಪಿಟ್ಟುಕೊಳ್ಳಿ ಸ್ನೇಹಿತರೇ, ನೀವು ಹೇಳುವ ನಿಮ್ಮ ಸೋಲಿನ ಕಥೆಗಳೇ ನಾಳೆ ನಾಲ್ಕು ಜನರಲ್ಲಿ ನಿಮ್ಮನ್ನು ತಲೆ ಎತ್ತದಂತೆ ಮಾಡುತ್ತವೆ. ಏಕೆಂದರೆ ನೀವು ಯಾರ ಮುಂದೆ ನಿಮ್ಮ ಸೋಲುಗಳನ್ನ ಹೇಳಿರುತ್ತಿರೋ ಆ ವ್ಯಕ್ತಿಯೊಡನೆ ನಿಮ್ಮ ಸಂಬಂಧ ಹಳಸಿದರೆ ಇದೆ ನಿಮ್ಮ ಸೋಲಿನ ಕಥೆಗಳನ್ನಿಟ್ಟುಕೊಂಡೆ ಆ ವ್ಯಕ್ತಿ ನಿಮ್ಮನ್ನ ಹೀಯಾಳಿಸಬಹುದು ಮತ್ತು ಸ್ನೇಹಿತರ ಗುಂಪಿನಲ್ಲಿ ನಿಮಗೆ ಮುಖಭಂಗ ಮಾಡಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಯಾರೊಂದಿಗೂ ನಿಮ್ಮ ಸೋಲುಗಳನ್ನ ಹಂಚಿಕೊಳ್ಳಬೇಡಿ.

4. ನಿಮ್ಮ ಮುಂದಿನ ಹೆಜ್ಜೆಯನ್ನು ಯಾವ ಕಾರಣಕ್ಕೂ ಬೇರೊಬ್ಬರಿಗೆ ಹೇಳಬೇಡಿ : ಇದು ಮೊದಲನೆಯ ಸಂಗತಿಯಂತೆ ಅನಿಸಿದರೂ ಅದಕ್ಕೂ ಇದಕ್ಕೂ ವ್ಯತ್ಯಾಸ ಇದೆ. ಮೊದಲನೇ ಸಂಗತಿ ನಿಮ್ಮ ಮುಂದಿನ ಯೋಜನೆ ಸೂಚಿಸಿದರೆ ಇದು ಆ ನಿಟ್ಟಿನಲ್ಲಿ ನೀವು ತೆಗೆದುಕೊಳ್ಳುವ ಮೊದಲ ಹೆಜ್ಜೆಯನ್ನು ಸೂಚಿಸುತ್ತದೆ. ಹಾಗಾಗಿ ನೀವು ನಿಮ್ಮ ಯಶಸ್ಸನು ಮುಟ್ಟುವ ಹಾದಿಯಲ್ಲಿ ಯಾವ ಹೆಜ್ಜೆಯನ್ನು ತೆಗೆದುಕೊಂಡರೂ ಅದನ್ನು ಯಾರಿಗೂ ಹೇಳಲು ಹೋಗಬೇಡಿ. ನೀವು ಗುಪ್ತರಾಗಿಯೇ ಆ ಹೆಜ್ಜೆಯನ್ನು ತೆಗೆದುಕೊಂಡು ನಿಮ್ಮ ಯಶಸ್ಸಿನ ಮೂಲಕ ಉಳಿದವರನ್ನು ಬೆರಗುಗೊಳಿಸಿ. ನೀವು ಆ ಹೆಜ್ಜೆಯನ್ನು ತೆಗೆದುಕೊಳ್ಳುವ ಮುನ್ನವೇ ಅದನ್ನು ಇತರರಿಗೆ ತಿಳಿಸಿದರೆ ಅವರು ನಿಮ್ಮ ಆ ಹೆಜ್ಜೆಗೆ ಅಡ್ಡಿ ಉಂಟು ಮಾಡಬಹುದು ಮತ್ತು ನಿಮ್ಮನ್ನು ನಿಮ್ಮ ಯಶಸ್ಸಿನಿಂದ ವಂಚಿತರನ್ನಾಗಿಸಬಹುದು.

5. ಯಾರೊಂದಿಗೂ ನಿಮ್ಮ ಬಗ್ಗೆ ರಹಸ್ಯಗಳನ್ನು ಬಿಟ್ಟುಕೊಡಬೇಡಿ :
ಸ್ನೇಹಿತರೆ ಪ್ರತಿಯೊಬ್ಬರಿಗೂ ಅವರದೇ ಆದ ರಹಸ್ಯ ಸಂಗತಿಗಳು ಇರುತ್ತವೆ. ಇವು ಅವರ ವ್ಯಕ್ತಿತ್ವದ ಮೂಲಭೂತ ಅಂಶಗಳಾಗಿವೆ. ಈ ಸಂಗತಿಯು ಎರಡನೆಯ ಸಂಗತಿಗೆ ಹೋಲಿಕೆ ಯಾಗಬಹುದು. ಆದರೆ ಇದಕ್ಕೂ ಅದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ನಮ್ಮ ರಹಸ್ಯಗಳು ಎಂದರೆ ನಮ್ಮ ದೌರ್ಬಲ್ಯ ಆಗಿರಬಹುದು ಅಥವಾ ನಮ್ಮ ಸಾಮರ್ಥ್ಯ ಆಗಿರಬಹುದು. ಎರಡು ವಿಚಾರಗಳನ್ನು ನೀವು ನಿಮ್ಮ ಸ್ನೇಹಿತರೊಂದಿಗೆ ಅಥವಾ ನಿಮ್ಮ ಆಪ್ತರೊಂದಿಗೆ ಹಂಚಿಕೊಂಡರೆ ಕಾಲಾಂತರದಲ್ಲಿ ಅದು ನಿಮಗೆ ಮುಳುವಾಗಿ ಕಾಡಬಹುದು. ಇರುವಾಗ ಎಲ್ಲವೂ ಚೆನ್ನ ಕೆಟ್ಟ ಮೇಲೆ ಎಲ್ಲವೂ ಹಳಸಿ ಹೋಗುತ್ತದೆ. ಹಾಗೆ ಸಂಬಂಧವೂ ಕೂಡ. ಈ ಕಾರಣದಿಂದ ನಿಮ್ಮ ರಹಸ್ಯ ಸಂಗತಿಗಳನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ಬಿಟ್ಟು ಕೊಡಬೇಡಿ.

6. ಯಾರೊಂದಿಗೂ ನಿಮ್ಮ ಆದಾಯ ಮತ್ತು ನಿಮ್ಮ ಆದಾಯದ ಮೂಲ ಏನೆಂಬುದನ್ನ ಯಾವತ್ತಿಗೂ ಹಂಚಿಕೊಳ್ಳಬೇಡಿ :
ಸ್ನೇಹಿತರೆ ಮನುಷ್ಯ ಸ್ವಭಾವತಹವಾಗಿ ಜನರ ಹೊಗಳಿಕೆಗಳನ್ನು ಬಯಸುತ್ತಾನೆ. ಈ ಕಾರಣಕ್ಕಾಗಿ ಆತ ತನ್ನ ಎಲ್ಲಾ ಆದಾಯ ಮತ್ತು ಆದಾಯ ಮೂಲಗಳನ್ನು ಹೇಳಿಕೊಳ್ಳಲು ಬಯಸುತ್ತಾನೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ಈ ನಮ್ಮ ಸಂಗತಿಗಳೇ ನಮಗೆ ಒಮ್ಮೊಮ್ಮೆ ಮುಳುವಾಗಿ ಕಾಡುತ್ತವೆ. ಜನರು ನಮ್ಮ ಆದಾಯ ಮತ್ತು ಆದಾಯ ಮೂಲಗಳ ಸಂಗತಿಗಳನ್ನು ತಿಳಿದುಕೊಂಡ ಮೇಲೆ ಅವರು ಅದರ ಬಗ್ಗೆ ಹೊಗಳುವುದಕ್ಕಿಂತ ಹೆಚ್ಚಾಗಿ ಅದನ್ನು ಹೇಗೆ ಹಾಳು ಮಾಡುವುದೆಂದು ಯೋಚಿಸುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಆದಾಯ ಮತ್ತು ಆದಾಯ ಮೂಲಗಳನ್ನ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಡಿ ಬದಲಾಗಿ ನಿಮ್ಮ ಆದಾಯಗಳಿಂದ ಅವರಿಗೆ ಸರ್ಪ್ರೈಸ್ ನೀಡಿ

ಆತ್ಮೀಯ ಓದುಗ ಮಿತ್ರರೇ…ವೇಗವಾಗಿ ಬೆಳೆಯುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಮಾಹಿತಿಯೇ ಸಂಪತ್ತಾಗಿ ಮಾರ್ಪಾಡಾಗಿದೆ. ಗಲ್ಲಿಯಿಂದ ದಿಲ್ಲಿವರೆಗೆ, ಹಳ್ಳಿಯಿಂದ ಹಿಡಿದು ವಿದೇಶದ ಸುದ್ದಿಯನ್ನು ತ್ವರಿತವಾಗಿ ನಮ್ಮ ಪ್ರಬುದ್ಧ ಓದುಗ ವರ್ಗಕ್ಕೆ ಮಾಹಿತಿಯನ್ನು ಒದಗಿಸುವುದೇ MEDIA CHANAKYA ಉದ್ದೇಶವಾಗಿದೆ. ಆಟ, ಮನರಂಜನೆ ಜೊತೆಗೆ ಅಂತರರಾಷ್ಟ್ರೀಯ ಸುದ್ದಿಗಳ ಕುರಿತು ವಿಶೇಷ ಮಾಹಿತಿಯನ್ನು ನೀಡಲು MEDIA CHANAKYA ಸದಾ ಮುಂಚೂಣಿ ಸ್ಥಾನದಲ್ಲಿದೆ. ಆರೋಗ್ಯ, ಅದ್ಭುತ ಮಾಹಿತಿ, ವಿಶೇಷ ಮಾಹಿತಿ ನಿಮ್ಮ ಬೆರಳ ತುದಿಗೆ ತಂದು ತಲುಪಿಸುವ ಪ್ರಾಮಾಣಿಕ ಕೆಲಸವನ್ನು Media Chanakya ಮನಸಾರೆ ಮಾಡುತ್ತಿದೆ.ಹಾಗಾಗಿ ಉತ್ಕೃಷ್ಟ ಮಾಹಿತಿ ಹಾಗೂ ಸರಳ ಮಾಹಿತಿಗಾಗಿ ನಮ್ಮ ವೆಬ್ಸೈಟ್ಗೆ ಸಬ್ಸ್ಕ್ರೈಬ್ ಮಾಡಿ.

Recent Posts

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

56 years ago