ದಿಲ್ಲಿಯ ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ಈ ಹುಡುಗ ಜಗತ್ತಿನ ನಂಬರ್ ಒನ್ ಕ್ರಿಕೆಟರ್ ಆಗಿ ಹೊರಹೊಮ್ಮುತ್ತಾನೆ. ಯಾವ ಕ್ರಿಕೆಟ್ ಕಂಡರೆ ಇಡೀ ಜಗತ್ತೇ ಹುಚ್ಚೆದ್ದು ಕುಣಿಯುತ್ತೋ ಅಂತಹ ಕ್ರಿಕೆಟ್ ನಲ್ಲಿ ಕಿಂಗ್ ಆಗಿ ಮೆರೆಯುತ್ತಾನೆ. ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದೇವರು ಆಗಿಬಿಡುತ್ತಾನೆ. ಇಂದು ಆತನ ಹೆಸರಲ್ಲಿ 70ಕ್ಕಿಂತಲೂ ಅಧಿಕ ಶತಕಗಳಿವೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳಿವೆ ಆತನ ನೆಟ್ವರ್ತ್ ಕೋಟಿಗಳಲ್ಲಿದೆ ಸಾಲು ಸಾಲು ಸೋಲು ಎದುರಾದಾಗ ನಿಮಗೆ ಏನ್ ಅನ್ನಿಸಿತ್ತು ಹೇಳಿ. ಇನ್ನು ವಾಪಸ್ ಬರುವುದಿಲ್ಲ ಎಂದು ಅನಿಸಿತ್ತು ಅಲ್ಲವೇ… ಪ್ರತಿಯೊಬ್ಬರ ಜೀವನದಲ್ಲೂ ಏರುಪೇರುಗಳು ಬಂದಿರುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ಪಾಸಿಟಿವ್ ನೆಗೆಟಿವ್ ಇದ್ದೇ ಇರುತ್ತದೆ. ಯಾವ ವ್ಯಕ್ತಿ ಅಂತಹ ಪರಿಸ್ಥಿತಿಯಲ್ಲಿ ಅವಡುಗಚ್ಚಿ ನಿಲ್ಲುತ್ತಾನೋ ಅವನೇ ಮುಂದೊಂದು ದಿನ ಜಗತ್ತನ್ನ ಆಳುತ್ತಾನೆ. ಯಾಕೆಂದರೆ ಈ ಜಗತ್ತು ಶರಣಾಗುತ್ತದೆ ಜಗತ್ತಿನ ಜನ ಶರಣಾಗುತ್ತಾರೆ. ಕೇವಲ ಜಗತ್ತನ್ನು ಆಳುವವರು ಬೇಕಾಗಿದ್ದಾರೆ. ಕೆಟ್ಟ ಪರಿಸ್ಥಿತಿಗಳು ಪ್ರತಿಯೊಬ್ಬರ ಜೀವನದಲ್ಲೂ ಬರುತ್ತವೆ. ಆದರೆ ಬದಲಾಯಿಸಬಲ್ಲ ಛಲದಂಕ ಮಲ್ಲ ಗಟ್ಟಿಗನು ಅಂತಹ ಕೆಟ್ಟ ಪರಿಸ್ಥಿತಿಗಳನ್ನೇ ಬದಲಾಯಿಸಿ ಬಿಡುತ್ತಾನೆ. ಯಾಕೆಂದರೆ ಈತ ಅದೇ ಹುಡುಗ ತನ್ನ ತಂದೆಯ ಸಾವಿನ ಸುದ್ದಿ ಕೇಳಿದರು ಅಂದು ಆತ ತನ್ನ ತಂಡದ ಗೆಲುವಿಗಾಗಿ ಹೋರಾಡುತ್ತಾನೆ. ಮನದಲ್ಲಿ ತಂದೆಯನ್ನು ಕಳೆದುಕೊಂಡದ್ದಕ್ಕಾಗಿ ಬೆಟ್ಟದಷ್ಟು ನೋವು ಇದ್ದರೂ ಅದನ್ನ ಅಮುಕಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳದೆ ಅಂದು ಆತ ತನ್ನ ತಂಡವನ್ನ ಸೋಲಿನಿಂದ ಪಾರು ಮಾಡಿದ್ದ. ಕ್ರಿಕೆಟ ಕುರಿತು ಆತನಿಗಿದ್ದ ಈ ನಿಷ್ಠೆಯೇ ಇಂದು ಆತನನ್ನ ಕ್ರಿಕೆಟ್ ಲೋಕದ ದಂತಕಥೆಯನ್ನಾಗಿಸಿದೆ. ಅತಿ ಚಿಕ್ಕ ವಯಸಿನಲ್ಲಿಯೇ ಆತನನ್ನ ಯಶಸ್ಸಿನ ಉತ್ತುಂಗಕ್ಕೆ ತಂದು ನಿಲ್ಲಿಸಿದೆ.
ಫಿಟ್ನೆಸ್ ಕುರಿತು ಮತ್ತು ಅವನ ಲೈಫ್ ಸ್ಟೈಲ್ ಬಗ್ಗೆ ಅನುಮಾನಗಳು ಕೇಳಿ ಬಂದಾಗ ಆತ ಇಷ್ಟು ಪರಿಶ್ರಮ ಪಡುತ್ತಾನೆ, ಇಷ್ಟು ಪರಿಶ್ರಮ ಪಡುತ್ತಾನೆ ಅವನೇ ಭಾರತದ ಫಿಟ್ನೆಸ್ ಐಕಾನ್ ಆಗಿ ಹೊರಹೊಮ್ಮುತ್ತಾನೆ. ಆತನ ಜಾಗದಲ್ಲಿ ಬೇರೆ ಯಾರಾದರೂ ಆಗಿದ್ದರೆ ಜನರ ಕುಹಕ ಮಾತುಗಳಿಗೆ ಹುಚ್ಚರಾಗಿ ಬಿಡುತ್ತಿದ್ದರು, ಆತ್ಮಹತ್ಯೆ ಅಂತಹ ಹೇಯ ಕೃತ್ಯಗಳಿಗೆ ಶರಣಾಗುತ್ತಿದ್ದರು. ಆದರೆ ಈತ ತನ್ನ ಪರಿಶ್ರಮದಿಂದಲೇ ತನ್ನ ಶತ್ರುಗಳನ್ನ ಹುಚ್ಚರನ್ನಾಗಿಸಿದ.
ಸ್ನೇಹಿತರೆ ಕ್ರಿಕೆಟ್ ಆಗಲಿ ಅಥವಾ ಅದು ಜೀವನವೇ ಆಗಲಿ, ಯಾವಾಗಲೂ ಒಂದು ಮಾತನ್ನ ನೆನಪಿಡಿ. ಎಂದಿಗೂ ನೀವು ನಿಮ್ಮ ಶತ್ರುಗಳಿಗೆ ಪ್ರತಿಕ್ರಿಸಬೇಡಿ ಯಾಕೆಂದರೆ sometimes silence is better than unnecessary drama. If you want to be a winner then hustle like a winner, if you want to be a great winner then respect your haters. ಅಂದ್ರೆ ನೀವೊಬ್ಬ ಸಾಧಕರಾಗಬೇಕು ಎಂದಿದ್ದರೆ ಸಾಧಕರಂತೆ ಪರಿಶ್ರಮ ಪಡಿ. ಅದೇ ನೀವು ಒಬ್ಬ ಶ್ರೇಷ್ಠ ಸಾಧಕರು ಆಗಬೇಕೆಂದಿದ್ದರೆ ನಿಮ್ಮ ಶತ್ರುಗಳನ್ನ ಗೌರವಿಸಿ
ಯಾಕೆಂದ್ರೆ ಅವರು ನಿಮ್ಮ ವೀಕ್ನೆಸ್ ಗಳನ್ನ ನಿಮಗೆ ತೋರಿಸುತ್ತಾರೆ ಮತ್ತು ನೀವು ಮತ್ತಷ್ಟು ಬಲಿಷ್ಠರಾಗಲು ಅವಕಾಶ ಮಾಡಿಕೊಡುತ್ತಾರೆ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಹಂತದಲ್ಲಿ ಅಂತಹ ಸಂದರ್ಭ ಬಂದೇ ಬರುತ್ತದೆ. ಅದು ಆತ ಅಂದುಕೊಂಡದ್ದೆಲ್ಲವೂ ಆಗಲಾರದಂತಹ ಸಂದರ್ಭ ಪರಿಸ್ಥಿತಿಗಳು ಅವನ ವಿರುದ್ಧವಾಗಿ ಬಿಡುತ್ತವೆ. ಆದರೆ ಅಂತಹ ಸಂದರ್ಭದಲ್ಲಿ ವ್ಯಕ್ತಿಯು ತಾಳ್ಮೆಯಿಂದ ಇರುವುದನ್ನ ಕಲಿಯಬೇಕು ತನ್ನ ಮೇಲೆ ತಾನು ವಿಶ್ವಾಸ ಇಡಬೇಕು ಮತ್ತು ತಾನು ಮಾಡುವ ಕೆಲಸದ ಮೇಲೆ ವಿಶ್ವಾಸ ಇಡಬೇಕು. ಯಾಕೆಂದರೆ ವಿಶ್ವಾಸ ಎಂಬುದು ಮರುಭೂಮಿಯಲ್ಲೂ ಮಳೆ ತರಬಲ್ಲ ಅಸಿಮ ಶಕ್ತಿಯಾಗಿದೆ. ವಿರಾಟ್ ಮಾಡಿದ್ದೆ ಅದನ್ನ ಇಡೀ ಜಗತ್ತೇ ಅವನನ್ನ ಕುರಿತು ವ್ಯಂಗ್ಯ ಮಾಡುತ್ತಿತ್ತು. ಆದರೆ ವಿರಾಟ್ ಮಾತ್ರ ತನ್ನನ್ನು ತಾನು ಬಲವಾಗಿ ನಂಬಿದ್ದನು. ಯಾಕೆಂದರೆ ಅವನಿಗೆ ಗೊತ್ತಿತ್ತು ಮುಂದೊಂದು ದಿನ ಆಡಿಕೊಂಡವರೇ ನನಗೆ ಚಪ್ಪಾಳೆ ಹೊಡೆಯುತ್ತಾರೆ ಎಂದು.
ಸ್ನೇಹಿತರೆ ಜೀವನದಲ್ಲಿ ಹೆಟರ್ಸ್ಗಳು ಇದ್ದೇ ಇರುತ್ತಾರೆ, ಟ್ರೋಲರ್ಸ್ ಗಳು ಇದ್ದೇ ಇರುತ್ತಾರೆ. ಹಾಗಂತ ಬದುಕುವುದನ್ನ ನಿಲ್ಲಿಸುವುದಕ್ಕೆ ಆಗುತ್ತಾ. ಇಲ್ಲ, ಸಾಧ್ಯವಿಲ್ಲ. ಯಾಕೆಂದರೆ ಇದು ನಿಮ್ಮದೇ ಜೀವನ ಆಗಿರುವಾಗ ನೀವು ಅಂದುಕೊಂಡಂತೆ ಬದುಕಿ, ಉಳಿದವರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಹೊರಡಿ ವಿರಾಟರಂತೆ ನೀವು ಕೂಡ ಸಾಧನೆಯ ಶಿಖರವನ್ನು ತಲುಪಿ. ನಮಸ್ಕಾರ.ಸೂರ್ಯಂನಂತೆ ಬೆಳಗುತ್ತಿರುವ ಇವರ ಕಥೆ ಕೇಳಿದರೆ ನೀವು ಮೂಕರಾಗುತ್ತೀರಿ! ಅಭಿಮಾನಿ ಆಗುತ್ತೀರಿ!
ಹಲವು ವರ್ಷಗಳ ಕಠಿಣ ಪರಿಶ್ರಮದ ನಂತರವೂ ಆ ವ್ಯಕ್ತಿಗೆ ಸಿಕ್ಕಿದ್ದು ಕೇವಲ ನಿರ್ಲಕ್ಷ ತಿರಸ್ಕಾರ ಅವಮಾನ. ಆತನ ಅದ್ಭುತ ಪ್ರದರ್ಶನದ ಹೊರತಾಗಿಯೂ ಆತನಿಗೆ ಭಾರತ ಕ್ರಿಕೆಟ್ ತಂಡದ ಜರ್ಸಿ ಧರಿಸುವ ಅದೃಷ್ಟ ಒದಗಿ ಬರಲಿಲ್ಲ ಅಂತಹ ಕಠಿಣ ಸಂದರ್ಭಗಳಲ್ಲಿ ಆತ ಸೋಲೊಪ್ಪಿಕೊಳ್ಳಲಿಲ್ಲ. ದೇಶಿಯ ಕ್ರಿಕೆಟ್ ಮತ್ತು ಐಪಿಎಲ್ ನಲ್ಲಿ ಸಾಲು ಸಾಲು ಅದ್ಭುತ ಪ್ರದರ್ಶನದೊಂದಿಗೆ ರನ್ ಮಳೆ ಹರಿಸಿದನು. ಆದರೆ ಸ್ನೇಹಿತರೆ ತುಂಬಾ ನೋವಾಗುತ್ತದೆ ಅಲ್ಲವೇ ನೀವು ನಿಮ್ಮ ಗುರಿಯತ್ತ ಬೆಟ್ಟದಷ್ಟು ಅಚಲವಾಗಿದ್ದರೂ ನಿಮ್ಮನ್ನು ಯಾರು ಹುರಿದುಂಬಿಸದಿದ್ದಾಗ ಇಂತಹ ಸಂದರ್ಭಗಳಲ್ಲಿ ಹಲವರು ಸೋಲೊಪ್ಪಿಕೊಂಡು ಡಿಪ್ರೆಶನ್ ಗೆ ಒಳಗಾಗಿ ಬಿಡುತ್ತಾರೆ. ಅವರಿಗೆ ತಮ್ಮದೇ ಟ್ಯಾಲೆಂಟ್ ಮತ್ತು ಹಾರ್ಡ್ವರ್ಕ್ ಮೇಲೆ ಅನುಮಾನ ಶುರುವಾಗುತ್ತದೆ. ತಮ್ಮ ಮೇಲೆ ತಮಗೆ ಅನುಮಾನ ಶುರುವಾಗುತ್ತದೆ ಮತ್ತು ತಮ್ಮ ಅದೃಷ್ಟದ ಮೇಲೆ ಸಂಶಯ ಉಂಟಾಗುತ್ತದೆ. ಸ್ನೇಹಿತರೆ ಇಂತಹ ಸಂದರ್ಭದಲ್ಲಿ ಗೆದ್ದೇ ಗೆಲ್ಲುವೆ ಎಂಬ ನಿಮ್ಮ ಹಟ ಉಳಿದವರೆಲ್ಲರಿಗಿಂತ ನಿಮ್ಮನ್ನ ವಿಭಿನ್ನವಾಗಿಸುತ್ತೆ ಕಷ್ಟದ ಸಮಯದಲ್ಲಿ ಎಲ್ಲರಿಗೂ ಸಮಸ್ಯೆಗಳೇ ಎದ್ದು ಕಾಣುತ್ತದೆ ಆದರೆ ಅಂತಹ ಕಷ್ಟದ ಸಮಯದಲ್ಲೂ ಪರಿಹಾರದ ದಾರಿ ಹುಡುಕುವವನೇ ನಿಜವಾದ ಚತುರ. ಹೌದು ಸ್ನೇಹಿತರೆ ಇಂದಿನ ಈ ಆರ್ಟಿಕಲ್ ನಲ್ಲಿ ನಾನು ನಿಮಗೆ ಹೇಳ ಹೊರಟಿರುವುದು ಇಂಡಿಯನ್ ಕ್ರಿಕೆಟನ್ನ ಮಿಸ್ಟರ್ 360° ಖ್ಯಾತಿಯ ಆಟಗಾರ ಸೂರ್ಯಕುಮಾರ ಯಾದವ್ ಅವರ ಕಥೆ.
ಇಂದಿನ ಯುವ ಪೀಳಿಗೆಯ ಪಾಲಿಗೆ ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತ ಗೊಂಡಿರುವ ಸೂರ್ಯ ಕುಮಾರ್ ಯಾದವ್ ಅವರ ಆಟಕ್ಕೆ ಇಡೀ ಜಗತ್ತೇ ನಿಬ್ಬರದಾಗಿದೆ ಮತ್ತು ಆತನನ್ನು ಇಂಡಿಯನ್ ಮೇಡ್ ಎಬಿ ಡಿವಿಲಿಯರ್ಸ್ ಎನ್ನುವ ಮಟ್ಟಕ್ಕೆ ಆತನ ಖ್ಯಾತಿ ಹೆಚ್ಚಿದೆ. ಆದರೆ ಈ ಮಟ್ಟದ ಯಶಸ್ಸನ್ನ ಗಳಿಸಲು ಆತ ಅನುಭವಿಸಿದಷ್ಟು ನಿರಾಸೆ, ನಿರ್ಲಕ್ಷ ಮತ್ತೊಬ್ಬ ಆಟಗಾರನಿಂದ ಊಹಿಸಲು ಸಾಧ್ಯವಿಲ್ಲ. ಈ ಆರ್ಟಿಕಲ್ ಓದಿದ ಮೇಲೆ ನೀವೇ ಹೇಳುತ್ತೀರಿ, ಈತನಲ್ಲಿ ಒಂದು ದಮ್ ಇದೆ ಆದ್ದರಿಂದ ಈತ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾನೆ ಎಂದು.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುವ ಸೂರ್ಯ ಕುಮಾರ್ ಯಾದವ್ ಮುಂಬೈ ತಂಡದ ಪರವಾಗಿಯೇ 2010ರಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡುವ ಮೂಲಕ ಕ್ರಿಕೆಟಿಗೆ ಪಾದಾರ್ಪಣೆ ಮಾಡುತ್ತಾರೆ. ಆದರೆ ಭಾರತ ತಂಡವನ್ನು ಪ್ರತಿನಿಧಿಸಲು ಅವರಿಗೆ 11 ರಿಂದ 12 ವರ್ಷಗಳಷ್ಟು ದೀರ್ಘ ಸಮಯ ಬೇಕಾಗುತ್ತದೆ. ಈ ನಡುವೆ ಹಲವು ಬಾರಿ ಸೂರ್ಯನಿಗೆ ಮಿಂಚುವ ಅವಕಾಶ ಬಂದಾವೆಂದರೆ ಪ್ರತಿ ಬಾರಿ ಅವಕಾಶ ಬಂದಾಗಲೆಲ್ಲ ಸೆಲೆಕ್ಟರ್ಗಳು ಅವನನ್ನ ರಿಜೆಕ್ಟ್ ಮಾಡಿಬಿಡುತ್ತಿದ್ದರು ಅವನ ಪರಿಶ್ರಮವನ್ನ ಕಡೆಗಣಿಸಿ ಬಿಡುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ಎಂತಹ ಘಟಾನುಘಟಿ ಆಟಗಾರನಿದ್ದರೂ ಆತನ ಆತ್ಮವಿಶ್ವಾಸ ಕುಸಿದುಬಿಡುತ್ತದೆ, ಸೋಲೊಪ್ಪಿಕೊಳ್ಳಬೇಕು ಎನಿಸುತ್ತದೆ. ಆದರೆ ಈತ ಅದ್ಯಾವುದಕ್ಕೂ ಜಗ್ಗಲಿಲ್ಲ. ಆತ ತನ್ನ ಪರಿಶ್ರಮದ ಮೇಲೆ ಭರವಸೆ ಇಟ್ಟು ಮತ್ತಷ್ಟು ಕಠಿಣ ಪರಿಶ್ರಮ ಪಡುತ್ತಾನೆ.
ಐಪಿಎಲ್ 2020ರಲ್ಲಿ ವಿರಾಟ್ ಕೊಹ್ಲಿಯು ಸೂರ್ಯಕುಮಾರ್ ಯಾದವ್ಗೆ ಸ್ಲೆಡ್ಜಿಂಗ್ ಮಾಡುತ್ತಾರೆ. ಆ ಸಂದರ್ಭದಲ್ಲಿ ಬೇರೆ ಯಾರಾದರೂ ಆಗಿದ್ದರೆ ವಿರಾಟರ ಜೊತೆ ಜಗಳ ಮಾಡುತ್ತಿದ್ದರು. ಯಾಕೆಂದರೆ ಆ ಪಂದ್ಯಕೂ ಮುಂಚೆ ಸೆಲೆಕ್ಟರ್ಸ್ ಗಳು ಸೂರ್ಯ ಕುಮಾರ್ ಯಾದವ್ ಅವರನ್ನ ಭಾರತ ತಂಡಕ್ಕೆ ಆಯ್ಕೆ ಮಾಡಲು ರಿಜೆಕ್ಟ್ ಮಾಡಿದ್ದರು. ಈ ಕಾರಣದಿಂದ ಸೂರ್ಯಕುಮಾರ್ ತುಂಬಾ ನಿರಾಸೆಗೆ ಒಳಗಾಗಿದ್ದ ವಿಚಿತ್ರವೆಂದರೆ ಆ ಸೆಲೆಕ್ಟ್ರಸ್ ಟೀಮನ ಕ್ಯಾಪ್ಟನ್ ಕೂಡ ವಿರಾಟ್ ಕೊಹ್ಲಿ ಆಗಿದ್ದರು ಇಂತಹ ಕ್ರಿಟಿಕಲ್ ಸಂದರ್ಭದಲ್ಲಿ ಬೇರೆ ಯಾರಾದರೂ ಹಾಗಿದ್ದರೆ ನೂರಕ್ಕೆ ನೂರರಷ್ಟು ವಿರಾಟ್ ಜೊತೆ ಕದನಕ್ಕೆ ಇಳಿತಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಹಾಗೆ ಮಾಡಲಿಲ್ಲ. ಆತ ತಂಡ ಬೆಟ್ಟದಷ್ಟು ಕೋಪವನ್ನು ಮತ್ತು ನಿರಾಸೆಯನ್ನ ತನ್ನ ಎದೆಯಲ್ಲೇ ಬಚ್ಚಿಟ್ಟುಕೊಂಡು ಶಾಂತ ಚಿತ್ತದಿಂದ ತನ್ನ ಪ್ರದರ್ಶನವನ್ನ ನೀಡುತ್ತಾನೆ. ಪರಿಣಾಮ ಸೋಲಿನ ಸುಲಿಗೆ ಸಿಲುಕಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲ್ಲಿಸಿ ಸೆಲೆಕ್ಟರ್ಸ್ಗಳುವಂತೆ ಕೈ ಕೈ ಹಿಸುಕಿ ಕೊಳ್ಳುವಂತೆ ಮಾಡಿದ್ದನು.
ಈ ಪ್ರದರ್ಶನದ ಮೂಲಕ ಆತ ನೀವು ನನ್ನ ಆಟವನ್ನ ಗಮನಿಸಿ ಅಥವಾ ಗಮನಿಸದೇ ಇರಿ. ನಾನು ನನ್ನ ಆಟವನ್ನ ಆಡುತ್ತೇನೆ ಯಾಕೆಂದರೆ ನನಗೆ ನನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದ.
ಹಿಂದೊಮ್ಮೆ ಸೆಲೆಕ್ಟರ್ಸ್ ಗಳಿಂದ ತಿರಸ್ಕೃತಗೊಂಡು ಹಲವು ವರ್ಷಗಳಷ್ಟು ಕೇವಲ ಬೆಂಚ್ ಕಾದಿದ್ದವ ಈಗ ಸೆಲೆಕ್ಟರ್ಗಳಷ್ಟೇ ಅಲ್ಲದೆ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ಆಟಗಾರನಾಗಿ ಹೊರಹಮ್ಮಿದ್ದಾನೆ. ನಿಮ್ಮ ಮೇಲೆ ನಿಮಗೆ ಭರವಸೆ ಇದ್ದರೆ ನೀವು ಏನನ್ನು ಬೇಕಾದರೂ ಸಾಧಿಸಬಲ್ಲಿರಿ. ನಿಮ್ಮ ಪರಿಶ್ರಮದ ಮೇಲೆ ನಿಮಗೆ ನಂಬಿಕೆ ಇದ್ದರೆ ಜಗತ್ತಿನ ಯಾವ ಸೆಲೆಕ್ಟರ್ಗಳು ಕೂಡ ನಿಮ್ಮನ್ನ ತಂಡಕ್ಕೆ ಆಯ್ಕೆ ಆಗುವುದನ್ನ ತಡೆಯಲು ಆಗುವುದಿಲ್ಲ ಎಂಬುದಕ್ಕೆ ಸೂರ್ಯ ಕುಮಾರ್ ಯಾದವ್ ಅವರೇ ಜ್ವಲಂತ ನಿದರ್ಶನ.
Problems are common but attitude makes difference. ಸ್ನೇಹಿತರೆ ಪ್ರತಿಯೊಬ್ಬರಿಗೂ ಸಮಸ್ಯೆಗಳು ಇರುತ್ತವೆ ಆದರೆ ನಿಮ್ಮ ಆಟಿಟ್ಯೂಡ್ ಮಾತ್ರ ನಿಮ್ಮನ್ನ ಯಶಸ್ಸಿನತ್ತ ಕೊಂಡ್ವಯ್ಯ ಬಲ್ಲದು. ಸೋಲು ಮತ್ತು ಗೆಲುವಿನಲ್ಲಿ ಕೇವಲ ಮೈಂಡ್ ಸೆಟ್ ಅಷ್ಟೇ ವ್ಯತ್ಯಾಸವಿದೆ. ಗೆಲ್ಲುತ್ತೀನಿ ಎಂಬ ಮೈಂಡ್ ಸೆಟ್ ನಿಮ್ಮದಾಗಿದ್ದಲ್ಲಿ ನೀವು ಗೆದ್ದೇ ಗೆಲ್ಲುತ್ತೀರಿ, ಸೋಲುತ್ತೇನೆ ಎಂಬ ಮೈಂಡ್ ಸೆಟ್ ನಿಮ್ಮದಾಗಿದ್ದಲ್ಲಿ ನೀವು ಏನನ್ನ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಗೆಲ್ಲುವ ಮೈಂಡ್ ಸೆಟ್ ನಿಮ್ಮದಾಗಲಿ ಅಂತ ಹೇಳುತ್ತಾ ಈ ಆರ್ಟಿಕಲ್ ಅನ್ನ ಇಲ್ಲಿಗೆ ಮುಗಿಸುತ್ತೇನೆ. ನಮಸ್ಕಾರ.
ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನಮಸ್ಕಾರ.