ಸ್ನೇಹಿತರೆ ಸೆಪ್ಟೆಂಬರ್ 19ರ ಬೆಳಗಿನ ಜಾವ ಎರಡು ಗಂಟೆಗೆ ಇಸ್ರೋ ಮತ್ತೊಂದು ಹೊಸ ದಾಖಲೆಯನ್ನು ಮಾಡಿದೆ ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಯಿಂದ ಲ್ಯಾಗ್ ರೇಂಜ್ ಕಡೆಗೆ ಕಳುಹಿಸಿ ಕೊಟ್ಟಿದೆ. ಇಲ್ಲಿಂದ 110 ದಿನಗಳ ಕಾಲ ಆದಿತ್ಯ L1 ಸೂರ್ಯನಂತೆ ಪ್ರಯಾಣ ಬೆಳೆಸಲಿದ್ದು ಆ ಬಳಿಕ ಅದು L1 ನಲ್ಲಿ ಸ್ಥಾಪನೆಯಾಗಲಿದೆ. ಆನಂತರ ಅದು ಸೂರ್ಯನ ಕುರಿತಾಗಿ ವಿವರವಾಗಿ ಅಧ್ಯಯನ ನಡೆಸಲಿದೆ. ಮತ್ತೊಂದೆಡೆ ಇದೇ ಸಪ್ಟಂಬರ್ ತಿಂಗಳ ನಾಲ್ಕನೇ ತಾರೀಖಿನಂದು ಗಾಢನಿದ್ರೆಗೆ ಜಾರಿದ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ ಗಳು ಚಂದ್ರನ ಅಂಗಳದಲ್ಲಿ ಕತ್ತಲು ಸರಿದು ಸೂರ್ಯೋದಯ ಆಗುತ್ತಿದ್ದಂತೆ ಅವುಗಳನ್ನು ಪುನಃ ಎಚ್ಚರಗೊಳಿಸಲು ಇಸ್ರೋ ಸಕಲ ಸಿದ್ಧತೆಗಳನ್ನ ಕೈಗೊಂಡಿದೆ. ಈ ನಡುವೆ ತಮಿಳುನಾಡಿನ ಹಳ್ಳಿಯಂದು ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ಗಳು ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲು ಮಹತ್ತರ ಪಾತ್ರ ವಹಿಸಿದೆ ಎಂಬ ಸುದ್ದಿಗಳು ವೈರಲ್ ಆಗುತ್ತಿದೆ. ಹಾಗಾದರೆ ಯಾವುದು ತಮಿಳುನಾಡಿನ ಆ ಹಳ್ಳಿ ಹೇಗೆ ಅದು ವಿಕ್ರಮ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ಗಳಿಗೆ ಚಂದ್ರಲೋಕದ ಮೇಲೆ ಸಾಫ್ಟ್ ಲ್ಯಾಂಡ್ ಆಗಲು ಸಹಾಯ ಮಾಡಿತು ಎಂಬುದನ್ನ ಇವತ್ತಿನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ. ತಪ್ಪದೆ ಕೊನೆಯ ತನಕ ಓದಿ.
ಸೆಪ್ಟೆಂಬರ್ 2ನೇ ತಾರೀಖಿನಂದು ಇಸ್ರೋ ತನ್ನ ಸೂರ್ಯನ ಕುರಿತಾದ ಆದಿತ್ಯ L1 ಮಿಷನ್ ಅನ್ನು ಆರಂಭಿಸಿತು. ಇಷ್ಟು ದಿನಗಳ ಕಾಲ ಅದು ಭೂಕಕ್ಷೆಯಲ್ಲಿ ಪರಿಭ್ರಮಿಸುತ್ತಿದ್ದ ಆದಿತ್ಯ L1 ಸಪ್ಟೆಂಬರ್ 19ರ ಬೆಳಗಿನ ಜಾವ ಎರಡು ಗಂಟೆಗೆ ಸೂರ್ಯನತ್ತ ಸಾಗುವ ಲ್ಯಾಗ್ರೇಂಜ್ ಕಡೆಗೆ ಯಶಸ್ವಿಯಾಗಿ ಪಥವನ್ನು ಇಸ್ರೋ ಬದಲಿಸಿದೆ. ಭೂಮಿಯಿಂದ ಸುಮಾರು ಹದಿನೈದು ಲಕ್ಷ ಕಿಲೋಮೀಟರ್ ದೂರದಲ್ಲಿರುವ ಈ L1 ಪಾಯಿಂಟಿಗೆ ಆದಿತ್ಯ L1 ಸೂರ್ಯನ ಹೊರ ಭಾಗವಾದ ಕೋರೋನಾ ( ಸೂರ್ಯನ ಹೊರಪದರ ) ಅನ್ನು ಅಧ್ಯಯನ ಮಾಡುತ್ತದೆ. ಈ ಲ್ಯಾಗ್ ರೆಂಜ್ ಪಾಯಿಂಟ್ ತಲುಪಲು ಆದಿತ್ಯ L1, 110 ದಿನಗಳ ಪ್ರಯಾಣ ಮಾಡಲಿದ್ದು ಅದು L1 ಪಾಯಿಂಟ್ ತಲುಪಿದ ಮೇಲೆಯೇ ತನ್ನ ಕಾರ್ಯವನ್ನು ಆರಂಭಿಸಲಿದೆ. ಈಗಾಗಲೇ ಆದಿತ್ಯ L1 ಬಾಹ್ಯಾಕಾಶ ನೌಕೆಯಲ್ಲಿನ ಸೆನ್ಸರ್ ಗಳು ಸಕ್ರಿಯೆ ಆಗಿದ್ದು, ಅವು ಸಾಕಷ್ಟು ವೈಜ್ಞಾನಿಕ ಮಾಹಿತಿಯನ್ನು ಇಸ್ರೋಗೆ ಕಳುಹಿಸುತ್ತಿವೆ. ಹೀಗಾಗಿ ಈ 110 ದಿನಗಳ ಪ್ರಯಾಣದ ಸಂದರ್ಭದಲ್ಲಿಯೂ ಕೂಡ ಸಾಕಷ್ಟು ಮಾಹಿತಿ ಇಸ್ರೋಗೆ ಲಭ್ಯವಾಗಲಿದೆ. ಆದಿತ್ಯ L1 ನಲ್ಲಿರುವ STEPS ಅಂದರೆ Supra Thermal and Energetic Particle Spectrometer ಭೂಮಿಯಿಂದ 50,000 ಕಿಲೋಮೀಟರ್ ದೂರದಲ್ಲಿರುವ ಅಯನ್ಸ್ ಮತ್ತು ಎಲೆಕ್ಟ್ರಾನ್ ಗಳ ಮಾಹಿತಿಯನ್ನು ಇಸ್ರೋಗೆ ರವಾನೆ ಮಾಡಿದೆ. ಇದು ಮುಂದಿನ ದಿನಗಳಲ್ಲೂ ಕೂಡ ತನ್ನ ಕಾರ್ಯವನ್ನು ಮುಂದುವರಿಸಲಿದೆ. ಇದರ ಜೊತೆಗೆ ASPEX ಅಂದರೆ Aditya Solar Wind Particle Experiment Payload ಕೂಡ ಮಾಹಿತಿಯನ್ನು ಕಲೆ ಹಾಕಿ ಕಳುಹಿಸಬಹುದು ಎಂದು ಇಸ್ರೋ ತಿಳಿಸಿದೆ. ಹೀಗೆ ಆದಿತ್ಯ L1 ನಲ್ಲಿಯೂ ಯಶಸ್ಸು ಸಾಧಿಸಲು ಹೊರಟಿರುವ ಇಸ್ರೋ ಇದೀಗ ಚಂದ್ರನ ಅಂಗಳದಲ್ಲಿ ನಿದ್ರೆಗೆ ಜಾರಿದ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ ಗಳನ್ನು ಎಚ್ಚರಿಸುವ ಸುಪ್ರಭಾತ ಹಾಡುವ ಕೆಲಸವನ್ನು ಮಾಡುತ್ತಿದೆ. ಈಗಾಗಲೇ ಅವು ದೀರ್ಘ ನಿದ್ದೆಗೆ ಸರಿದು ಸುಮಾರು 15 ದಿನಗಳು ಆಗ್ತಾ ಇದ್ದು ಇನ್ನೂ ಅವು ಒಂದೆರಡು ದಿನಗಳಲ್ಲಿ ಅವು ಎಚ್ಚರಗೊಳ್ಳುತ್ತವಾ ಅಥವಾ ಇಲ್ಲವಾ ಎಂಬುದರ ಕುರಿತು ಮಾಹಿತಿ ಹೊರಬೀಳಲಿದ್ದು ಒಂದು ವೇಳೆ ಎಚ್ಚರಗೊಂಡಿದ್ದೇ ಆದಲ್ಲಿ ಇಸ್ರೋಗೆ ಚಂದ್ರನ ಮೇಲ್ಮೈನಲ್ಲಿ ಇನ್ನೂ 14 ದಿನಗಳ ಕಾಲ ಚಂದ್ರನ ಅಂಗಳವನ್ನು ಅಧ್ಯಯನ ಮಾಡಲು ಅವಕಾಶ ದೊರೆಯುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಇಸ್ರೋ ಕಾತುರವಾಗಿದೆ. ನಾವು ಇಸ್ರೋ ತನ್ನ ಮೂರನೇ ಚಂದ್ರಯಾನದ ಮಿಷನ್ ನಿಂದ ಯಶಸ್ಸು ಪಡೆದಿರುವುದನ್ನು ಮತ್ತು ಅದರಿಂದ ವಿಶೇಷ ಮಾಹಿತಿಗಳನ್ನು ಪಡೆದಿರುವುದನ್ನು ನಾವು ನೋಡಿದ್ದೇವೆ ಮತ್ತು ಅದನ್ನು ಖುಷಿಯಿಂದ ಸಂಭ್ರಮಾಚರಣೆಯನ್ನು ಕೂಡ ಮಾಡಿದ್ದೇವೆ. ಆದರೆ ಈ ಚಂದ್ರಯಾನ ಯಶಸ್ವಿ ಆಗುವುದಕ್ಕೆ ಆ ಒಂದು ಹಳ್ಳಿ ಅದೆಷ್ಟು ಮಹತ್ತರ ಪಾತ್ರ ವಹಿಸಿತು ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ.
ಆತ್ಮೀಯ ಉದುರೆ ಇಸ್ರೋಗೆ ತನ್ನ ವಿಕ್ರಂ ಲ್ಯಾಂಡರ್ ಅನ್ನೋ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಮಾಡಲು ಸಹಾಯ ಮಾಡಿದ್ದು ಇದೊಂದು ಹಳ್ಳಿಯ ಮಣ್ಣು. ಇದೊಂದು ವಿಚಿತ್ರ ಅಂತ ನಿಮಗೆ ಅನ್ನಿಸಬಹುದು ಆದರೆ ಇಸ್ರೋ ವಿಜ್ಞಾನಿಗಳು ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಮುನ್ನ ಆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕಿತ್ತು, ಒಂದಷ್ಟು ಪ್ರಯೋಗಗಳನ್ನು ಮಾಡಿ ಅಲ್ಲಿನ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನ ಖಚಿತಪಡಿಸಿಕೊಳ್ಳಬೇಕಿತ್ತು. ಅದಕ್ಕೆ ಚಂದ್ರನ ಮೇಲ್ಮೈನಲ್ಲಿರುವ ಮಣ್ಣು ಬೇಕಿತ್ತು. ಆದರೆ ಅದನ್ನು ಎಲ್ಲಿಂದ ತರುವುದು? ಕನಿಷ್ಠಪಕ್ಷ ಚಂದ್ರನ ಮಣ್ಣಿಗೆ ಹೊಲುವ ಮಣ್ಣಾದರೂ ಇಸ್ರೋ ವಿಜ್ಞಾನಿಗಳಿಗೆ ಬೇಕಾಗಿತ್ತು. ಇಂತಹ ಮಣ್ಣು ನಾಸಾದ ಬಳಿಯಿತ್ತು. ಅವರು ಇಂತಹ ಮಣ್ಣನ್ನು ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಇಸ್ರೋಗೆ ಸಿಕ್ಕಿತು.ಹೀಗಾಗಿ ನಾಸಾ ಜೊತೆ ಮಾತುಕತೆಗಳು ಶುರು ಆದವು. ಸ್ನೇಹಿತರೆ 2017-2018 ರ ಸಮಯದಲ್ಲಿ ನಾಸಾ ಇಸ್ರೋ ಗೆ ಮಣ್ಣು ಕೊಡಲು ಒಪ್ಪಿಕೊಂಡಿತ್ತು, ಆದರೆ ಒಂದು ಕೆಜಿ ಮಣ್ಣಿಗೆ 150 ಡಾಲರ್ ಹಣವನ್ನು ಕೇಳಿತ್ತು. ಅಲ್ಲಿಗೆ ಚಂದ್ರಯಾನದ ಪರೀಕ್ಷೆಗಳಿಗೆ ಬೇಕಾಗುವಷ್ಟು ಮಣ್ಣನ್ನ ನಾಸಾದಿಂದ ತರಿಸಿಕೊಂಡರೆ ಅದಕ್ಕಾಗಿ 40ರಿಂದ 50 ಕೋಟಿ ರೂಪಾಯಿ ಅಷ್ಟು ಹಣ ಖರ್ಚಾಗುತ್ತೆ ಎಂದು ಇಸ್ರೋಗೆ ಗೊತ್ತಾಯಿತು. 50 ಕೋಟಿ ರೂಪಾಯಿ ಎಂದರೆ ನಮ್ಮ ವಿಜ್ಞಾನಿಗಳ ಪಾಲಿಗೆ ಅದೊಂದು ದೊಡ್ಡ ಮೊತ್ತ. ಆ ಹಣದಲ್ಲಿ ಅವರು ಮತ್ತೊಂದು ಪೇಲೋಡ ಅನ್ನು ಅಭಿವೃದ್ಧಿಪಡಿಸಬಹುದು ಎಂದು ಯೋಚಿಸುತ್ತಾರೆ. ಅಂತದ್ರಲ್ಲಿ ಅವರು ಕೇವಲ ಮಣ್ಣಿಗೆ 50 ಕೋಟಿ ಹಣ ಕೊಡುತ್ತಾರೆಯೇ? ಅದರಲ್ಲೂ ಇಸ್ರೋ ನಡೆಸುವ ಮಿಷನ್ ಗಳಿಗೆ ನಮ್ಮ ಸರ್ಕಾರಗಳು ಕೊಡುವ ಬಜೆಟ್ ಕೂಡ ಅಷ್ಟಕ್ಕಷ್ಟೇ. ಹಾಗಾಗಿ ಅದಕ್ಕಾಗಿ ಏನು ಮಾಡಬೇಕು ಎಂದು ಇಸ್ರೋ ಯೋಚಿಸುತ್ತಿದ್ದಾಗಲೇ ಅದು ಭಾರತದ ಪ್ರಸಿದ್ಧ ಐಐಟಿಗಳ ಜೊತೆ ಮಾತುಕತೆ ನಡೆಸಿ ಐಐಟಿಯ ಭೂ ವಿಜ್ಞಾನ ಪ್ರೊಫೆಸರ್ ಗಳಿಗೆ ಅಂತದ್ದೊಂದು ಮಣ್ಣನ್ನು ಹುಡುಕಿ ಕೊಡುವಂತೆ ಹೇಳಲಾಯಿತು. ಸಾಕಷ್ಟು ವಿಫಲ ಪ್ರಯತ್ನಗಳ ನಂತರ ಆ ಒಂದು ಹಳ್ಳಿಯ 3 ಊರು ಕೂಡುವ ಜಾಗ ಇಸ್ರೋ ಗೆ ಬೇಕಾಗಿದ್ದ ಆ ಮಣ್ಣಿನ ಸಮಸ್ಯೆಯನ್ನು ಪರಿಹರಿಸಿತು. ಇಸ್ರೋಗೆ ಬೇಕಾಗಿದ್ದ ಟನ್ ಗಟ್ಟಲೆ ಮಣ್ಣು ಭಾರತದಲ್ಲಿ ಸಿಗುವ ಮೂಲಕ ವಿಜ್ಞಾನಿಗಳ ಸಂಶೋಧನೆಗೆ ಇನ್ನಷ್ಟು ವೇಗ ಸಿಕ್ಕಂತಾಯಿತು.
ಸ್ನೇಹಿತರೆ 2012ರಿಂದ ಈ ಹಳ್ಳಿಯಿಂದ ಮಣ್ಣನ್ನು ತರಿಸಿಕೊಳ್ಳುತ್ತಿರುವ ಇಸ್ರೋ ಅದನ್ನು ತನ್ನ ಕ್ಯಾಂಪಸ್ ನಲ್ಲಿ ಬಾಹ್ಯಾಕಾಶ ಪ್ರಯೋಗಗಳಿಗೆ ಬಳಸುತ್ತಿದೆ. ಈ ಹಿಂದೆ ಚಂದ್ರಯಾನ 2 ರ ವಿಕ್ರಮ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ ಗಳ ಪ್ರಯೋಗದಲ್ಲೂ ಇದೆ ಮಣ್ಣನ್ನ ಬಳಸಿಕೊಳ್ಳಲಾಗಿತ್ತು. ಚಂದ್ರಯಾನ 3ರ ಸಂದರ್ಭದಲ್ಲಿಯೂ ಆ ಮಣ್ಣು ಪರೀಕ್ಷೆಗೆ ಬಳಕೆಯಾಯಿತು. ಆ ಮಣ್ಣಿನ ಮೇಲೆ ವಿಕ್ರಂ ಲ್ಯಾಂಡರ್ ಹೇಗೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಆಗುತ್ತದೆ ಮತ್ತು ಪ್ರಜ್ಞಾನ ರೋವರ್ ಅದರ ಮೇಲೆ ಸಲೀಸಾಗಿ ಓಡಾಡುತ್ತದೆ ಎಂಬುದನ್ನ ಇಸ್ರೋದ ವಿಜ್ಞಾನಿಗಳು ಯಶಸ್ವಿಯಾಗಿ ಪ್ರಯೋಗ ನಡೆಸಿದರು. ಚಂದ್ರಯಾನ 3 ಉಡಾವಣೆ ಆಗಿ ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಆಯ್ತು. ಪ್ರಜ್ಞಾನ ರೋವರ್ ಕೂಡ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಪರೀಕ್ಷೆಗಳನ್ನ ನಡೆಸಿತು. ಇದೆಲ್ಲ ಸಾಧನೆಗೆ ಕಾರಣವಾಗಿದ್ದು ಇದೆ ಮಣ್ಣು.
ಸ್ನೇಹಿತರೆ ಇಸ್ರೋಗೆ ಈ ಮಣ್ಣನ್ನ ಕೊಟ್ಟಿದ್ದು ನಮ್ಮ ದಕ್ಷಿಣ ಭಾರತ. ಅದರಲ್ಲೂ ರಹಸ್ಯಗಳ ತವರು ಎಂದೇ ಕರೆಸಿಕೊಳ್ಳುವ ತಮಿಳುನಾಡಿನಲ್ಲಿ ಚಂದ್ರನ ಮಣ್ಣನ್ನೇ ಹೊಲುವ ಮಣ್ಣು ಪತ್ತೆಯಾಗಿತ್ತು. ಸೇಲಂ ನ ಭೂವಿಜ್ಞಾನ ವಿಶ್ವವಿದ್ಯಾಲಯದ ಪ್ರೊಫೆಸರ್ ಎಸ್ ಅನ್-ಬಳಗನ್ ಈ ಮಣ್ಣನ್ನ ಪತ್ತೆ ಮಾಡಿದರು ಎಂದು ಹೇಳಲಾಗುತ್ತಿದೆ. ಈ ಬಂಡೆಕಲ್ಲು ಭೂಮಿಯ ಮೇಲೆ ಸುಮಾರು 2500 ರಿಂದ 2700 ಮಿಲಿಯನ್ ವರ್ಷಗಳಿಂದ ಇದು ರೂಪುಗೊಂಡಿದ್ದು ಇದು ಚಂದ್ರನ ಮಣ್ಣನ್ನ ಹೋಲುತ್ತದೆ ಎಂದು ಅನ್ ಬಳಗನ್ ಹೇಳಿದ್ದಾರೆ. ಅಂದ ಹಾಗೆ ಈ ಮಣ್ಣನ್ನು ಅನ್ ಬಳಗನ್ ಮತ್ತು ಅವರ ತಂಡ ನಾಮಕ್ಕಲ್ ಜಿಲ್ಲೆಯ ಸೀತಂ ಪುಡಿ, ಹೊನ್ನಮಲೈ ಹಾಗೂ ದಾಸಂಪಾಳ್ಯಂ ಎನ್ನುವ ಊರುಗಳ ಪರಸ್ಪರ ಸಂಧಿಸುವಲ್ಲಿ ಈ ಮಣ್ಣನ್ನು ಪತ್ತೆ ಹಚ್ಚಿದ್ದರು. ಸ್ನೇಹಿತರೆ ಇದೆ ಮಣ್ಣು ಚಂದ್ರಯಾನ 3 ಯಶಸ್ವಿಯಾಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದು.
ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನಮಸ್ಕಾರ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…